ಏಳು ಸುತ್ತಿನ ಕೋಟೆ – ಏನೋ ಮಾಡಲು ಹೋಗಿ

ಏಳು ಸುತ್ತಿನ ಕೋಟೆ(೧೯೮೮)
ಸಾಹಿತ್ಯ:ರುದ್ರಮೂರ್ತಿ ಶಾಸ್ತ್ರಿ
ಸಂಗೀತ: ಎಲ್.ವೈದ್ಯನಾಥನ್
ಗಾಯಕ :ಎಸ್.ಪಿ.ಬಾಲಸುಬ್ರಹ್ಮಣ್ಯಂ

ಹಾಡು ಕೇಳಿ

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು
ನೀತಿ ಹೇಳುವ ನೀನೇ ನೀತಿಯನು ಮುರಿದೆ
ಬಾಯಿದ್ದರೂ ನೀ ಮೂಕನಾದೆ |ಪ||

ಮುಳ್ಳಲ್ಲಿ ನಡೆವುದಕೆ ಎಚ್ಚರಿಕೆ ಬೇಕು
ಜಗದೆಲ್ಲಾ ಕತ್ತಲೆಗೆ ನೀನಲ್ಲ ಬೆಳಕು
ಕೊಂದು ರೋಗದ ರೆಂಬೆ
ಕಡಿದೂ ಗೆಲ್ಲುವೆನೆಂದೆ
ಕೋಟಿ ಬೇರುಗಳಿಂದ ನರಳುತಿದೆ ಬದುಕು||೧||

ವಿಷದ ಬಳ್ಳಿಯ ಜೊತೆಗೆ ಹೂಗಿಡವ ಕಡಿದೆ
ಒಂದು ಕೋಪಕೆ ಎರಡು ಪಾಪಗಳ ಬೆಳೆದೆ
ಎಲ್ಲಾ ಬದಲಿಸ ಬಲ್ಲ
ವಿಧಿಯು ನೀನೇನಲ್ಲ
ಇದ್ದಂತೆ ಜಗವಿಹುದು ನೀನು ಬದಲಾದೆ||೨||

ಹೆತ್ತೊಡಲು ತುಡಿಯುತಿದೆ
ತಳಮಳಿಸಿ ನೊಂದು
ಅಕ್ಕರೆಯ ಸೋದರಿಗೆ ಕಣ್ಣೀರ ಬಿಂದು
ನಿನ್ನಿಂದ ಸುಖವಿಲ್ಲ
ನಿನ್ನೊಳಗೂ ಸುಖವಿಲ್ಲ
ಏಳು ಸುತ್ತಿನ ಕೋಟೆ…. ಸೆರೆಯಾದೆ ಇಂದು..
ಏಳು ಸುತ್ತಿನ ಕೋಟೆಯಲಿ ಸೆರೆಯಾದೆ…..||೩||
*     *        *         *       *

7 thoughts on “ಏಳು ಸುತ್ತಿನ ಕೋಟೆ – ಏನೋ ಮಾಡಲು ಹೋಗಿ”

  1. ಭೂತ says:

    ರುದ್ರಮೂರ್ತಿ ಶಾಸ್ತ್ರಿ ಯವರ ಸಾಹಿತ್ಯ ಸೊಗಸಾಗಿದೆ.
    ಬಾಲು, ಚೆನ್ನಾಗಿ ಹಾಡಿದ್ದಾರೆ.

    ಆದ್ರೆ ಪುನಹ ಭೂತಕ್ಕೆ ಗೊಂದಲ.

    ಕಡಿದೂ ಗೆಲ್ಲುವೆನೆಂಬೆ

    ಕಡಿದು ಗೆಲ್ಲುವೆನೆಂದೆ ಆಗಬೇಕು!

    ಇಂತಿ
    ಭೂತ

  2. sritri says:

    ಭೂತಾತ್ಮವೇ, ಅದು ಎಸ್.ಪಿ.ಬಿ ಧ್ವನಿಯಲ್ಲಿ ಕಡಿದೂ,  ಎಂದು ಕೇಳಿಸತ್ತೆ . ಇನ್ನೊಮ್ಮೆ ಕೇಳಿ ನೋಡಿ. ತಪ್ಪಿದ್ದರೆ ತಿಳಿಸಿ. ತಿದ್ದುತ್ತೇನೆ.  ನನಗೆ “ಕಡಿದೂ “ಸರಿ ಅನ್ನಿಸಿತು.

  3. ಭೂತ says:

    ಅಯ್ಯೊ,

    ಕಡಿದೂ ಸರಿ ಇದೆ,

    ಆದ್ರೆ, ಗೆಲ್ಲುವೆನೆಂಬೆ ಅನ್ನೊದು ಸರಿ ಇಲ್ಲ.

    ಗೆಲ್ಲುವೆನೆಂದೆ ಆಗ್ಬೇಕು 🙂

    ಇಂತಿ
    ಭೂತಪ್ಪ

  4. Anveshi says:

    ಏನೋಪ್ಪ ನಿಮ್ಮ ಜಗಳ…
    ನಂಗಂತೂ ಏನೋ ಮಾಡಲು ಹೋಗಿ…
    ಕಡಿದು ಅನ್ನೋದು….
    ಕುಡಿದು ಅಂತಾನೇ ಕೇಳಿಸುತ್ತೆ 🙂

  5. sritri says:

    ಹೌದು, ಅದು ಎಂದೆ ಅಂತಾನೆ ಇರೋದು. ನಾನು “ರೆಂಬೆ”ಗೆ match ಮಾಡಕ್ಕೆ “ಎಂಬೆ” ಮಾಡಿದ್ದೆ. ಭೂತದ ಕೈಲಿ ಸಿಕ್ಕಿ ಬಿದ್ದೆ 🙂

    ಅನ್ವೇಷಿಗಳೇ, ಬನ್ನಿ, ಬನ್ನಿ…. ಈ ಭೂತದ ಗೊಂದಲ ಪರಿಹಾರಕ್ಕೆ ನೀವೇ ಸರಿ 🙂

  6. kaloo says:

    ನಾನು ದೂರವೇ ಉಳಿಯುತ್ತೇನೆ, ಏನೋ ಮಾಡಲೋ ಹೋಗಿ, ಭೂತಾನ್ವೇಷಿಗಳ ಕೈಗೆ ಸಿಕ್ಕು ಅನುಭವಿಸೋರು ಯಾರು?

    ‘ಸಂತಸ ಅರಳುವ ಸಮಯದಲ್ಲಿ…’ ಕಡಿದು-ಕುಡಿಯುವವರನ್ನು ಕಟ್ಟಿಕೊಂಡು ತಲೆಕೆಡಿಸಿಕೊಳ್ಳಲು ನನಗಂತೂ ಟೈಮಿಲ್ಲ 🙂

  7. sritri says:

    ಕಾಳು, ನಿಮ್ಮ ಸಂತಸ ಸಮಯ ನಿರಂತರವಾಗಿರಲಿ. 🙂

    ಕಡಿದು,ಕುಡಿಯುವವರೆಲ್ಲ ಸದ್ಯಕ್ಕೆ c/o ಭೂತ.

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಬಲಗಾಲಿಟ್ಟು ಒಳಗೆ ಬಾ – ಹಾಡೆಂದರೆ….ಬಲಗಾಲಿಟ್ಟು ಒಳಗೆ ಬಾ – ಹಾಡೆಂದರೆ….

   ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಂಸಲೇಖ ಅವರಿಗೆ ಅಭಿನಂದನೆಗಳು!  ಚಿತ್ರ – ಬಲಗಾಲಿಟ್ಟು ಒಳಗೆ ಬಾ(೨೦೦೨) ಸಾಹಿತ್ಯ,ಸಂಗೀತ – ಹಂಸಲೇಖ ಗಾಯಕ – ಕೆ.ಜೆ.ಯೇಸುದಾಸ್ ಹಾಡು ಕೇಳಿ ಸ.. ನಿನಿಸಸ ರಿರಿಸಸ ನಿನಿಸಸ ರಿರಿಸಸ…. ನಿನಿಸಸ ರಿರಿಸಸ ನಿನಿಸಸ ರಿರಿಸಸ….

ಚಂದ್ರೋದಯ -ಓಹೋ ಚಂದ್ರಮಚಂದ್ರೋದಯ -ಓಹೋ ಚಂದ್ರಮ

ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯಕ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡು ಕೇಳಿ     ಓಹೋ ಚಂದ್ರಮ, ಕೇಳಯ್ಯಾ ಚಂದ್ರಮ ಒಲವಿನ ಕತೆಯ ಒಲ್ಲದ ಒಲವಿನಲಿ ಬಾಳುವ ಈ ಜೊತೆಯ ||ಪ|| ಗುಲಾಬಿ ಹೂವಿನಲ್ಲಿ ಅದೇಕೋ ನಗುವೇ ಇಲ್ಲ ಮುಳ್ಳಿಂದ ಮುತ್ತಿನೆಡೆಗೆ ಅದೇಕೋ

ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ

ಚಿತ್ರ : ಅವನೇ ನನ್ನ ಗಂಡ ಸಾಹಿತ್ಯ, ಸಂಗೀತ : ಹಂಸಲೇಖ ಗಾಯಕಿ : ಲತಾ ಹಂಸಲೇಖ ಹಸಿರು ಗಾಜಿನ ಬಳೆಗಳೇ ಸ್ತ್ರೀ ಕುಲದ ಶುಭ ಸ್ವರಗಳೇ ಈ ಕೈಗಳಿಗೆ ಶೃಂಗಾರವೇ ನೀವ್ ಘಲ್ಲೆಂದರೆ ಸಂಗೀತವೇ ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ||