ಹಕ್ಕಿಯ ಹಾಡಿಗೆ – Hakkiya hadige taledooguva – ಕೆ. ಎಸ್. ನರಸಿಂಹ ಸ್ವಾಮಿ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.

2 thoughts on “ಹಕ್ಕಿಯ ಹಾಡಿಗೆ – Hakkiya hadige taledooguva – ಕೆ. ಎಸ್. ನರಸಿಂಹ ಸ್ವಾಮಿ”

  1. ಇಂತಹ ಒಳ್ಳೊಳ್ಳೆಯ ವಿಡಿಯೋಗಳನ್ನು ನೀವು ಕೊಡುತ್ತಿರಬೇಕು ಹಾಗು ನಾವು ವೀಕ್ಷಿಸುತ್ತಿರಬೇಕು ಎನ್ನುವುದೇ ನನ್ನ ಆಸೆ!

    1. sritri says:

      ಧನ್ಯವಾದಗಳು ಕಾಕಾ!

Leave a Reply to Sudhindra Deshpande Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮೌರಜಮೋದೆ – ಡಿವಿಜಿಮೌರಜಮೋದೆ – ಡಿವಿಜಿ

ಕವಿ – ಡಿವಿಜಿ -ಅಂತಃಪುರ ಗೀತೆಗಳು ಗಾಯಕಿ: ರತ್ನಮಾಲಾ ಪ್ರಕಾಶ್ ಹಾಡು ಕೇಳಿ ಏನೀ ಮಹಾನಂದವೇ – ಓ ಭಾಮಿನೀ | ಏನೀ ಸಂಭ್ರಮದಂದವೇ – ಬಲ್ಚಂದವೇ ||ಪ|| ಏನೀ ನೃತ್ತಾಮೋದ – ಏನೀ ಮೌರಜನಾದ | ಏನೀ ಜೀವೋನ್ಮಾದ-ವೇನೀ ವಿನೋದ

ಹೃದಯ ಹೃದಯ ಮಿಲನದೊಳಗೆ – ಪುತಿನಹೃದಯ ಹೃದಯ ಮಿಲನದೊಳಗೆ – ಪುತಿನ

ಸಾಹಿತ್ಯ : ಪು ತಿ ನರಸಿಂಹಾಚಾರ್ ಸಂಗೀತ : ಎನ್ ಎಸ್ ಪ್ರಸಾದ್ ಗಾಯನ : ರತ್ನಮಾಲ ಪ್ರಕಾಶ್ ಹೃದಯ ಹೃದಯ ಮಿಲನದೊಳಗೆ ಮಧುರವಹುದು ಧಾತ್ರಿ ಮಧುರ ನಯನ ಮಧುರ ವಚನ ಮಧುರ ಹಸನ ಮೈತ್ರಿ ಇರವಿರವಿನ ನಡುವಣಿರುಳ ಪರಿಹರಿಸುವ ಸಲುವಳಿ||

ನಿನ್ನ ಕರುಣೆಗೆ – ಚೆನ್ನವೀರ ಕಣವಿನಿನ್ನ ಕರುಣೆಗೆ – ಚೆನ್ನವೀರ ಕಣವಿ

ನಿನ್ನ ಕರುಣೆಗೆ ನಾನು ಕೇಂದ್ರವಾಗಿ ನಿಂದಿರುವೆ ಮೌನದಲಿ ತಲೆಯ ಬಾಗಿ ಮುಗಿಲಿಂದ, ಹಗಲಿಂದ, ಇರುಳಿಂದ ಬಂದು ಮುಗಿಯದಾವುದೊ ಮಹಾದ್ಭುತವ ತಂದು, ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು. ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ ಮಂಜು ಮುಗಿಬೀಳುವುದು