ಹಕ್ಕಿಯ ಹಾಡಿಗೆ – Hakkiya hadige taledooguva – ಕೆ. ಎಸ್. ನರಸಿಂಹ ಸ್ವಾಮಿ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.

2 thoughts on “ಹಕ್ಕಿಯ ಹಾಡಿಗೆ – Hakkiya hadige taledooguva – ಕೆ. ಎಸ್. ನರಸಿಂಹ ಸ್ವಾಮಿ”

  1. ಇಂತಹ ಒಳ್ಳೊಳ್ಳೆಯ ವಿಡಿಯೋಗಳನ್ನು ನೀವು ಕೊಡುತ್ತಿರಬೇಕು ಹಾಗು ನಾವು ವೀಕ್ಷಿಸುತ್ತಿರಬೇಕು ಎನ್ನುವುದೇ ನನ್ನ ಆಸೆ!

    1. sritri says:

      ಧನ್ಯವಾದಗಳು ಕಾಕಾ!

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ನಿರಂತರ – ಬಿ. ಆರ್. ಲಕ್ಷ್ಮಣರಾವ್ನಿರಂತರ – ಬಿ. ಆರ್. ಲಕ್ಷ್ಮಣರಾವ್

ಕವಿ: ಬಿ. ಆರ್. ಲಕ್ಷ್ಮಣರಾವ್ ಕವನ ಸಂಕಲನ : ಸುಬ್ಬಾಭಟ್ಟರ ಮಗಳು ಪ್ರೇಮಕಥೆಗಳಿಗೆ ಕೊನೆಯುಂಟೆ ರಾಧಾ ಮಾಧವರಿರೊ ತನಕ? ಪ್ರೇಮ ಪ್ರವಾಹಕೆ ಯಾವ ತಡೆ ಜಾತಿ ಅಂತಸ್ತು ಧನ ಕನಕ? ಪ್ರಕೃತಿಯಂತೆಯೇ ಪ್ರೇಮ ಸಹ ನಿತ್ಯ ವಿನೂತನ; ಹೊಸ ಹೊಸ ಬಣ್ಣ,

ತೂಗು ಮಂಚ – ಎಚ್.ಎಸ್.ವೆಂಕಟೇಶ್ ಮೂರ್ತಿತೂಗು ಮಂಚ – ಎಚ್.ಎಸ್.ವೆಂಕಟೇಶ್ ಮೂರ್ತಿ

ಕವಿ – ಎಚ್.ಎಸ್.ವೆಂಕಟೇಶ್ ಮೂರ್ತಿ ಸಂಗೀತ – ಸಿ. ಅಶ್ವಥ್ ಗಾಯಕಿ – ರತ್ನಮಾಲಾ ಪ್ರಕಾಶ್ ಆಲ್ಬಂ – “ತೂಗು ಮಂಚ”  ಹಾಡು ಕೇಳಿ  ತೂಗು ಮಂಚದಲ್ಲಿ ಕೂತು ಮೇಘಶಾಮ ರಾಧೆಗಾತು ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು ಸೆರಗ ಬೆರಳಿನಲ್ಲಿ

ಹೇಮಂತಹೇಮಂತ

ಕವಿ – ಎಸ್.ವಿ. ಪರಮೇಶ್ವರ ಭಟ್ಟ ೧ ಹೇಮಂತ ಋತುರಾಜನಿಳೆಗೆ ಬಂದಿಳಿವಂದು ಹೂವಿಲ್ಲ ಹಸಿರಿಲ್ಲ ಚಿಗುರೆಲೆಗಳಿಲ್ಲ. ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ ಕುಸುಮಗಂಧ ತರುವ ಮರುತನಿಲ್ಲ. ೨ ಚೆಂಗುಡಿಯ ಸಿಂಗರದ ವರವರೂಥಗಳೆನಿಸಿ ಮೆರೆವ ಮರಗಿಡಬಳ್ಳಿ ಬರಿದೆ ಮೊಗವಿಳುಹಿ ಮೌನದಲಿ ಮನದೆಗೆದು ಮನಮುರಿದು