ಚಿತ್ರ: ಸಿ.ಬಿ.ಐ.ಶಂಕರ್ (೧೯೮೯)
ಸಾಹಿತ್ಯ,ಸಂಗೀತ: ಹಂಸಲೇಖ
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ
ಗೀತಾಂಜಲಿ…
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ…
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ|
ನೀರಾಗಲೇನೆ ನಾ?
ಮೈಯ ಮೇಲೆ ಜಾರಿ ಹೋಗಲು
ಗಾಜಾಗಲೇನೇ ನಾ?
ನಿನ್ನ ಅಂದ ಚಂದ ತೋರಲು
ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ?
ನಿನ್ನ ಹೊತ್ತು ಕೊಂಡು ಹೋಗಲು|
ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸು ಕೊಡಳು
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ|
ಕೈಲಾಸ ಕೈಯಲ್ಲಿ
ನೀನು ನನ್ನ ಸಂಗ ಇದ್ದರೆ
ಆಕಾಶ ಜೇಬಲಿ
ನಿನ್ನ ನಗು ಹೀಗೇ ಇದ್ದರೆ
ಕೋಲ್ಮಿಂಚು ಹೂಮಳೆ
ನಿನ್ನ ಮಾತು ಕೇಳುತ್ತಿದ್ದರೆ
ಸೀನೀರೆ ಸಾಗರ
ನಿನ್ನ ಭಾವ ಹೀಗೇ ಇದ್ದರೆ|
ಓಡದೆ ನೀನು ಜಿಂಕೆಯಾದೆ
ಹಾರದೆ ನಾನು ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ|
* * * * * *
‘ಕೋಲ್ಮಿಂಚು ಹೂಗಳೇ ಆದಮೇಲೆ ಬರುವ ಸಾಲುಗಳು ‘ನಿನ್ನ ಮಾತು ಕೇಳುತ್ತಿದ್ದರೆ’ ಈ ಸಾಲುಗಳು ಬರೆಯಲು ಮರೆತಿದ್ದೀಯ ಅನ್ಸತ್ತೆ. (ನಂಗೆ ಹಾಡಲ್ಲಿ ‘ಕೋಲ್ಮಿಂಚು ಹೂಗಳೇ’ ಅಂತಾನೇ ಕೇಳತ್ತೆ.
ಹೌದು ಮೀರಾ. ಆ ಸಾಲು C&V ನಡುವೆ ಎಲ್ಲೋ ತಪ್ಪಿಸಿಕೊಂಡಿತ್ತು. 🙂
>ಓಡದೆ ನೀನು ಜಿಂಕೆಯಾದೆ
ಹಾರದೆ ನಾನು ಹಕ್ಕಿಯಾದೆ
ಹೇ ಎನ್ರೀ ಇದು..ಇಡೀ zoology ಓದಿದ್ದು ತಪ್ಪು ಅಂತಿದಾರೆ ಹಂಸ್..
ಹಾರದೆ ಹೆಂಗೆ ಹಕ್ಕಿ ಆಗುತ್ತೆ..ಬಹುಷಃ ಕೀವಿ ಹಕ್ಕಿ ಇರಬಹುದಾ 🙂
ಶಂಕರ್ ನಾಗ್ ಈ ಹಾಡಲಿ ಇರೋದು ಅನಿಸುತ್ತೆ..ಭವ್ಯನಾ ಆ ಗೀತಾಂಜಲಿ?
>ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ?
ನಿನ್ನ ಹೊತ್ತು ಕೊಂಡು ಹೋಗಲು|
ವಾಹ್ ಹಂಸ್ !
ಶಿವು, ಭವ್ಯ ಅಲ್ಲ, ಈ ಚಿತ್ರದ ನಾಯಕಿ ಸುಮನ್ ರಂಗನಾಥ್.
ಹಂಸ್ ಇಂತಹ ಅತಾರ್ಕಿಕ ಸಾಲುಗಳ ಸೃಷ್ಟಿಯಲ್ಲಿ ಸಿದ್ಧಹಸ್ತರು. 🙂
ಹಕ್ಕಿ ಹಾರೋದಿರಲಿ ಒಂದು ಹಾಡಿನಲ್ಲಿ “ರೆಕ್ಕೆ ಇರದ ಹುಲಿಗಳು” ಎಂದು ಬರೆದು ಪೇಚಿಗೆ ಸಿಕ್ಕಿದ್ದರು.
ಪತ್ರಿಕೆಯವರು “ಹುಲಿಗೆ ರೆಕ್ಕೆ ಎಲ್ಲಿರತ್ರೀ? ಎಂದು ಹಂಸ್ ಜನ್ಮ ಜಾಲಾಡಿದ್ದರು 🙂
ಇಂತಹ ಹಲವಾರು ಅರ್ಥವಾಗದ ಪದಸಾಲುಗಳನ್ನು ಬರೆದು ಕೇಳುಗರನ್ನ ಪೇಚಿಗೆ ಸಿಲುಕಿಸೋದ್ರಲ್ಲೂ ಅವರು ಸಿದ್ದ ಹಸ್ತರು.
“ಇಂತಹ ಹಲವಾರು ಅರ್ಥವಾಗದ ಪದಸಾಲುಗಳನ್ನು ಬರೆದು….”
– ಎಲ್ಲಿ? ಯಾವ ಹಾಡು? ಎಂದು ತಿಳಿಸಿದ್ದರೆ ಚೆನ್ನಾಗಿತ್ತು.