ಸಿ.ಬಿ.ಐ.ಶಂಕರ್ – ಗೀತಾಂಜಲಿ

ಚಿತ್ರ: ಸಿ.ಬಿ.ಐ.ಶಂಕರ್ (೧೯೮೯)
ಸಾಹಿತ್ಯ,ಸಂಗೀತ: ಹಂಸಲೇಖ
ಗಾಯಕರು :  ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ

ಹಾಡು ಕೇಳಿ

ಗೀತಾಂಜಲಿ…
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ

ಪುಷ್ಪಾಂಜಲಿ…
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ

ಓ ಕನಕಾಂಬರಿ ನೀನು ಬಾರದೆ
ಪೂಜೆಗೆ  ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ|

ನೀರಾಗಲೇನೆ ನಾ?
ಮೈಯ ಮೇಲೆ ಜಾರಿ ಹೋಗಲು
ಗಾಜಾಗಲೇನೇ ನಾ?
ನಿನ್ನ ಅಂದ ಚಂದ ತೋರಲು

ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ?
ನಿನ್ನ ಹೊತ್ತು ಕೊಂಡು ಹೋಗಲು|

ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸು ಕೊಡಳು

ಓ ಕನಕಾಂಬರಿ ನೀನು ಬಾರದೆ
ಪೂಜೆಗೆ  ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ|

ಕೈಲಾಸ ಕೈಯಲ್ಲಿ
ನೀನು ನನ್ನ ಸಂಗ ಇದ್ದರೆ
ಆಕಾಶ ಜೇಬಲಿ
ನಿನ್ನ ನಗು ಹೀಗೇ ಇದ್ದರೆ

ಕೋಲ್ಮಿಂಚು ಹೂಮಳೆ
ನಿನ್ನ ಮಾತು ಕೇಳುತ್ತಿದ್ದರೆ
ಸೀನೀರೆ ಸಾಗರ
ನಿನ್ನ ಭಾವ ಹೀಗೇ ಇದ್ದರೆ|
ಓಡದೆ ನೀನು ಜಿಂಕೆಯಾದೆ
ಹಾರದೆ ನಾನು ಹಕ್ಕಿಯಾದೆ

ಓ ಕನಕಾಂಬರಿ ನೀನು ಬಾರದೆ
ಪೂಜೆಗೆ  ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ|

*  *  *   *  *   *

6 thoughts on “ಸಿ.ಬಿ.ಐ.ಶಂಕರ್ – ಗೀತಾಂಜಲಿ”

  1. ‘ಕೋಲ್ಮಿಂಚು ಹೂಗಳೇ ಆದಮೇಲೆ ಬರುವ ಸಾಲುಗಳು ‘ನಿನ್ನ ಮಾತು ಕೇಳುತ್ತಿದ್ದರೆ’ ಈ ಸಾಲುಗಳು ಬರೆಯಲು ಮರೆತಿದ್ದೀಯ ಅನ್ಸತ್ತೆ. (ನಂಗೆ ಹಾಡಲ್ಲಿ ‘ಕೋಲ್ಮಿಂಚು ಹೂಗಳೇ’ ಅಂತಾನೇ ಕೇಳತ್ತೆ.

  2. sritri says:

    ಹೌದು ಮೀರಾ. ಆ ಸಾಲು C&V ನಡುವೆ ಎಲ್ಲೋ ತಪ್ಪಿಸಿಕೊಂಡಿತ್ತು. 🙂

  3. Shiv says:

    >ಓಡದೆ ನೀನು ಜಿಂಕೆಯಾದೆ
    ಹಾರದೆ ನಾನು ಹಕ್ಕಿಯಾದೆ
    ಹೇ ಎನ್ರೀ ಇದು..ಇಡೀ zoology ಓದಿದ್ದು ತಪ್ಪು ಅಂತಿದಾರೆ ಹಂಸ್..
    ಹಾರದೆ ಹೆಂಗೆ ಹಕ್ಕಿ ಆಗುತ್ತೆ..ಬಹುಷಃ ಕೀವಿ ಹಕ್ಕಿ ಇರಬಹುದಾ 🙂

    ಶಂಕರ್ ನಾಗ್ ಈ ಹಾಡಲಿ ಇರೋದು ಅನಿಸುತ್ತೆ..ಭವ್ಯನಾ ಆ ಗೀತಾಂಜಲಿ?
    >ಮಂಜಾಗಲೇನೆ ನಾ?
    ನಿನ್ನ ಕೋಪ ತಂಪು ಮಾಡಲು
    ತೇರಾಗಲೇನೆ ನಾ?
    ನಿನ್ನ ಹೊತ್ತು ಕೊಂಡು ಹೋಗಲು|

    ವಾಹ್ ಹಂಸ್ !

  4. sritri says:

    ಶಿವು, ಭವ್ಯ ಅಲ್ಲ, ಈ ಚಿತ್ರದ ನಾಯಕಿ ಸುಮನ್ ರಂಗನಾಥ್.

    ಹಂಸ್ ಇಂತಹ ಅತಾರ್ಕಿಕ ಸಾಲುಗಳ ಸೃಷ್ಟಿಯಲ್ಲಿ ಸಿದ್ಧಹಸ್ತರು. 🙂

    ಹಕ್ಕಿ ಹಾರೋದಿರಲಿ ಒಂದು ಹಾಡಿನಲ್ಲಿ “ರೆಕ್ಕೆ ಇರದ ಹುಲಿಗಳು” ಎಂದು ಬರೆದು ಪೇಚಿಗೆ ಸಿಕ್ಕಿದ್ದರು.

    ಪತ್ರಿಕೆಯವರು “ಹುಲಿಗೆ ರೆಕ್ಕೆ ಎಲ್ಲಿರತ್ರೀ? ಎಂದು ಹಂಸ್ ಜನ್ಮ ಜಾಲಾಡಿದ್ದರು 🙂

  5. ಇಂತಹ ಹಲವಾರು ಅರ್ಥವಾಗದ ಪದಸಾಲುಗಳನ್ನು ಬರೆದು ಕೇಳುಗರನ್ನ ಪೇಚಿಗೆ ಸಿಲುಕಿಸೋದ್ರಲ್ಲೂ ಅವರು ಸಿದ್ದ ಹಸ್ತರು.

  6. sritri says:

    “ಇಂತಹ ಹಲವಾರು ಅರ್ಥವಾಗದ ಪದಸಾಲುಗಳನ್ನು ಬರೆದು….”

    – ಎಲ್ಲಿ? ಯಾವ ಹಾಡು? ಎಂದು ತಿಳಿಸಿದ್ದರೆ ಚೆನ್ನಾಗಿತ್ತು.

Leave a Reply to ಮೀರಾಕೃಷ್ಣಮೂರ್ತಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಬಾ ಮಳೆಯೇ ಬಾ – ಬಿ. ಆರ್. ಲಕ್ಷ್ಮಣರಾವ್ಬಾ ಮಳೆಯೇ ಬಾ – ಬಿ. ಆರ್. ಲಕ್ಷ್ಮಣರಾವ್

ಕವಿ : ಬಿ. ಆರ್. ಲಕ್ಷ್ಮಣರಾವ್ ಚಿತ್ರ: ಆಕ್ಸಿಡೆಂಟ್ ಸಂಗೀತ : ರಿಕಿ ಕೆಜ್ ಗಾಯಕ : ಸೋನು ನಿಗಮ್ ಹಾಡು ಕೇಳಿ ಬಾ ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ

ಮಣ್ಣಿನ ದೋಣಿ – ಮಳೆ ಮಳೆಮಣ್ಣಿನ ದೋಣಿ – ಮಳೆ ಮಳೆ

ಚಿತ್ರ – ಮಣ್ಣಿನದೋಣಿ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ ಹಾಡು ಕೇಳಿ ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ

ಪೋಲಿ ಹುಡುಗ – ಹಂಸಲೇಖಪೋಲಿ ಹುಡುಗ – ಹಂಸಲೇಖ

 ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು! ಚಿತ್ರ – ಪೋಲಿ ಹುಡುಗ (೧೯೮೯) ಸಾಹಿತ್ಯ ಮತ್ತು ಸಂಗೀತ – ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು ಚಿತ್ರಕೃಪೆ : ಮೀರಾ ಕೃಷ್ಣ ಜನನ ಮರಣಗಳೆರಡು ಕುರುಡು ಮುಂದೆ ಹೋಗದು