ಸಂಕ್ರಾಂತಿ – ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ

ಕವಿ – ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ
ಗಾಯಕಿಯರು :ರತ್ನಮಾಲಾ ಪ್ರಕಾಶ್,ಮಾಲತಿ ಶರ್ಮ

ಹಾಡು ಕೇಳಿ

ಹೊಸ ಬಗೆಯಲಿ ಬರಲಿ
ಸುಖ ಸಾವಿರ ತರಲಿ
ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ

ತುಳಿದು ಆಳಲಾಗದಂಥ ಬಾಳಿಗೆ
ಹೊನ್ನಿನ ತೋರಣವ ಬಿಗಿದ ನಾಳೆಗೆ
ಹೊಂಬಿಸಿಲಿನ ಹಾದಿಗೆ
ಕೇದಗೆ ಹೂ ಬೀದಿಗೆ
ಮಾತೆಲ್ಲವೂ ಕೃತಿಯಾಗುವ ಜಾಡಿಗೆ|

ಹೊಸ ಬಗೆಯಲಿ ಬರಲಿ
ಸುಖ ಸಾವಿರ ತರಲಿ

ಕಣ್ಣೆರಡೂ ಉರಿವ ದೀಪಸ್ತಂಭ
ಮೇಲೆತ್ತಿದ ತೋಳುಗಳೇ ಕಂಬ
ದೇಹವೇ ಗುಡಿಯಾಗಿ
ನಾಡೇ ಇಡಿಯಾಗಿ
ಸ್ವಾಗತಿಸಲಿ ಸಂಕ್ರಾಂತಿಯ ಕೂಗಿ|

“ಎಲ್ಲರಿಗೂ ಹುಗ್ಗಿ ಹಬ್ಬದ ಹಾರ್ದಿಕ ಶುಭಾಶಯಗಳು!”

8 thoughts on “ಸಂಕ್ರಾಂತಿ – ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ”

 1. ಸಂಕ್ರಾಂತಿ ಹೊಸ ಬಗೆಯಲಿ ಬರಲಿ ಎಂದಿದ್ದು ಈ ಬಾರಿ ನಿಮ್ಮ ತಾಣದ ಮಟ್ಟಿಗೆ ನಿಜವಾಗಿಬಿಟ್ಟಿದೆ. 🙂
  ಚೆನ್ನಾಗಿ ಬದಲಾವಣೆಯಾಗಿದೆ.

  ಸುಖ ಸಾವಿರ ತರಲಿ ಎಂಬುದು ಪ್ರತಿವರ್ಷದ ಹಾರೈಕೆ.
  ನಿಮಗೂ ನಮಗೂ, ಓದುಗರೆಲ್ಲರಿಗೂ ಸಂಕ್ರಾಂತಿಯು ಸಾವಿರ ಸುಖ ತರಲಿ.

 2. Shiv says:

  ಸಂಕ್ರಾಂತಿ ಶುಭಾಶಯಗಳು !

  ಭಟ್ಟರು ಕೊನೆ ಪ್ಯಾರದಲ್ಲಿ ಬಸವಣ್ಣನವರ ‘ದೇಹವೇ ದೇಗುಲ..’ ದಿಂದ ಪ್ರಭಾವಿತರಾದಂತೆ ಅನಿಸಿತು.

 3. sritri says:

  ಅನ್ವೇಷಿಗಳೇ,

  ಧನ್ಯವಾದಗಳು. ತುಳಸಿವನದ ಬದಲಾವಣೆಯನ್ನು ಗುರುತಿಸಿದ್ದಕ್ಕೆ, ಮತ್ತು ಚೆನ್ನಾಗಿದೆ ಎಂದಿದ್ದಕ್ಕೆ 🙂

 4. sritri says:

  ಶಿವು, ನಿಮ್ಮ ಅನಿಸಿಕೆ ಸರಿ.
  ಭಟ್ಟರ ಆ ಸಾಲುಗಳಿಗೆ ಬಸವಣ್ಣನವರ –

  “ನನ್ನ ಕಾಲೇ ಕಂಬ
  ದೇಹವೇ ದೇಗುಲ
  ಶಿರ ಹೊನ್ನ ಕಳಶವಯ್ಯಾ” ಈ ಸಾಲು ಸ್ಪೂರ್ತಿ ನೀಡಿರಬಹುದು .

 5. ಭೂತ says:

  ಮೊದಲನೆ ಸರ್ತಿ ಕೆಳಿದ್ದು.
  ಒಂದು ಹಿತಾನುಭವ.

  ರಾಗ ಸಂಯೋಜನೆ ಅದ್ಭುತ
  🙂

  ಇಂತಿ
  ಭೂತ

 6. ಭೂತ says:

  ಅಯ್ಯೋ,

  ಈ ಕಿಲೀಮಣೇ ಬಹಳ ತ್ರಾಸ ಕೋಡ್ತೈತಿ ನೋಡ್ರಿ.

  ಕಿತ್ ಹಾಕ್ರಿ ಯವ್ವ.

  ಕೋಟಿ ಪುಣ್ಯ ಬತ್ತೈತಿ.

  ಇಂತಿ
  ಭೂತ

 7. sritri says:

  ಭೂತಪ್ಪ, ಈ ಕೀಲಿಮಣೆ ನಿನಗೆ ಬೇಡವಾದರೆ ಇಂಗ್ಲೀಷಿಗೆ ಬದಲಾಯಿಸಿ, (f12) ನೀನು ಯಾವಾಗಲೂ ಟೈಪ್ ಮಾಡುವಂತೆ ಮಾಡು. ಇದು unicode ಇಲ್ಲದವರು ಕೂಡ ಕನ್ನಡದಲ್ಲಿ ಬರೆಯಲು ಅನುಕೂಲವಾಗಲಿ ಅಂತ ಹಾಕಿರೋದು.

  e,E,O,o ಉಪಯೋಗ ಮಾತ್ರ ಸ್ವಲ್ಪ ಬೇರೆಯಾಗಿದೆ ಇದರಲ್ಲಿ. ಅಷ್ಟಕ್ಕೆ ಕೀಲಿಮಣೆಯನ್ನೇ ಕಿತ್ತಾಕಿ ಅನ್ನೋದೇ ಈ ಭೂತ!

 8. sunaath says:

  ತುಳಸಿವನವಿಹಾರಿಗಳೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು. ತುಳಸಿವನವಿಹಾರ ಹರ್ಷ ನೀಡುತ್ತಿರುವದು ಮುಂದುವರೆಯಲೆಂದು ಹಾರೈಸುವೆ.
  By the way, ‘ತೋಳುಗಳನ್ನು ಮೇಲೆತ್ತಿ, ಕೂಗಿ ಸ್ವಾಗತಿಸಿರಿ ಸಂಕ್ರಾಂತಿಯನ್ನು’ ಎಂದು ಲಕ್ಷ್ಮೀನಾರಾಯಣ ಭಟ್ಟರು ಹುರುಪಿನಿಂದ ಹೇಳುವದೇನೊ ಸರಿಯೆ, ಆದರೆ ವ್ಯಾಸಮಹರ್ಷಿಗಳು ಹೇಳುವದನ್ನು ಕೊಂಚ ಜ್ಞಾಪಿಸಿಕೊಳ್ಳುವದು ಒಳ್ಳೆಯದಾದೀತುಃ “ಊರ್ಧ್ವಬಾಹುರ್ವಿರೋಶ್ಯಾಮಿ, ನ ಕಶ್ಚನ ಶೃಣೋತಿ ಮಾಮ್! ” (ಕೈ ಎತ್ತಿ ಕೂಗುತಿಹೆ, ಕೇಳುವರೆ ಇಲ್ಲ!)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಸುಲಿದ ಬಾಳೆಯ ಹಣ್ಣಿನಂದದಿ – ಮಹಾಲಿಂಗಕವಿಸುಲಿದ ಬಾಳೆಯ ಹಣ್ಣಿನಂದದಿ – ಮಹಾಲಿಂಗಕವಿ

ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರುವ ಈ ಲಲಿತವಹ ಕನ್ನಡ ನುಡಿಯಲಿ ತಿಳಿದು ತನ್ನಲಿ ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?   *            *         *

ಜಗವೆಲ್ಲ ಮಲಗಿರಲು – ದ.ರಾ.ಬೇಂದ್ರೆಜಗವೆಲ್ಲ ಮಲಗಿರಲು – ದ.ರಾ.ಬೇಂದ್ರೆ

ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ; ಮಡದಿ ಮಗು ಮನೆ – ಮಾರು ರಾಜ್ಯ – ಗೀಜ್ಯ ಹೊತ್ತಿರುವ ಉರಿಯಲಿ ಆಯಿತಾಜ್ಯ ಹಿಂದೆ ಬಿದ್ದವು ಎಲ್ಲೋ ಕುದುರೆ ಕಾಲಾಳು ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು ಹೊರಟ ಹೊರಟೇ ಹೊರಟ, ಹೊರಟನೆತ್ತೋ ಸಾಹಸಿಯ

ಸಂನ್ಯಾಸಿ ಗೀತೆ – ಕುವೆಂಪುಸಂನ್ಯಾಸಿ ಗೀತೆ – ಕುವೆಂಪು

ಸಂನ್ಯಾಸಿ ಗೀತೆ ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು! ದೂರದಡವಿಯೊಳೆಲ್ಲಿ ಲೌಕಿಕವಿಷಯವಾಸನೆ ಮುಟ್ಟದೊ, ಎಲ್ಲಿ ಗಿರಿಗುಹೆಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ, ಎಲ್ಲಿ ಕಾಮವು ಸುಳಿಯದೊ,-ಮೇಣ್ ಎಲ್ಲಿ ಜೀವವು ತಿಳಿಯದೊ ಕೀರ್ತಿ ಕಾಂಚನವೆಂಬುವಾಸೆಗಳಿಂದ