ಚಿತ್ರ : ಬೆಳ್ಳಿ ಕಾಲುಂಗುರ (೧೯೯೨)
ಸಾಹಿತ್ಯ : ದೊಡ್ಡರಂಗೇಗೌಡ
ಸಂಗೀತ : ಹಂಸಲೇಖ

ಹಾಡು ಕೇಳಿ 

ಎಸ್.ಪಿ.ಬಾಲಸುಬ್ರಹ್ಮಣ್ಯಂ 

*  ಚಿತ್ರ

ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು….

ಭೂರಮೆಯೇ ಆಧಾರ
ಈ ಕಲೆಯೇ ಸಿಂಗಾರ
ಬಂಗಾರ ತೇರೇರಿ
ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ

ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ
ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕರೆ ನೀಡಿದೆ

ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು |

ಗಾಳಿಯೇ ಆವೇಶ
ಮೇಘವೇ ಸಂದೇಶ
ಪ್ರೇಮಕೆ ಸಂಕೇತ
ಹೊಂಬಣ್ಣದಾಕಾಶ
ಋತು ಋತುಗಳು ನಿನ್ನ ಕಾದಿವೆ

ನೀನಿರೆ ರಂಗೋಲಿ
ಸಂಗಾತಿ ಸುವ್ವಾಲಿ
ನವರಸವು ಮೈತಾಳಿ
ಜೀವನದ ಜೋಕಾಲಿ
ಯುಗ ಯುಗಗಳು ನಿನ್ನ ಕಾಯುವೆ

ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು |

ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು….

*       *      *      *      *       *

8 thoughts on “ಬೆಳ್ಳಿ ಕಾಲುಂಗುರ – ಕೇಳಿಸದೆ ಕಲ್ಲು ಕಲ್ಲಿನಲಿ”

  1. ತುಳಸಿಯಮ್ಮ,

    ನಿಮ್ಮ ಹತ್ರ ಗೋಪಾಲಕೃಷ್ಣ ಅಡಿಗಳ – ‘ಕಟ್ಟುವೆವು ನಾವು ಹೊಸ ನಾಡೊಂದನು’ ಪದ್ಯ ಇತ್ತಾ?

    ಜಗಲಿ ಭಾಗವತ

  2. ಶಶಿ, ನೀವು ಕೇಳಿರುವ ಹಾಡು – “ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ”, ಆದರೆ ಇದನ್ನು ಹಾಡಿರುವುದು SPB ಮತ್ತು SJ. ಚಿತ್ರ ಅಲ್ಲ. 🙂

  3. ಜಗಲಿ ಭಾಗವತರೇ, ಜಗಲಿ ಮೇಲೇ ನಿಂತಿದ್ದೀರಲ್ಲಾ, ಒಳಗೆ ಬನ್ನಿ 🙂
    “‘ಕಟ್ಟುವೆವು ನಾವು ಹೊಸ ನಾಡೊಂದನು” ಕವನ ಇದೆಯೋ ಇಲ್ಲವೋ ಗೊತ್ತಿಲ್ಲ. ಹುಡುಕಿ, ಇದ್ದರೆ… ಕೊಡ್ತೀನಿ.

    ನಿಮ್ಮದು ಎಲ್ಲಾಯ್ತು ಮಾರಾಯ್ರೆ? ಭಾಷೆ ನೋಡಿದ್ರೆ ಸಿದ್ಧಾಪುರ ಬದಿಗಿನ ಭಾಷೆ ಇದ್ದಂಗೆ ಇದ್ದು 🙂

  4. ನಮ್ದು ಕುಂದಾಪ್ರ ಬದಿ ಮರ್ರೆ. ಕುಂದಾಪ್ರದ ಹತ್ರನೊ ಒಂದು ಸಿದ್ಧಾಪುರ ಇತ್ತ್. ಉತ್ತರಕನ್ನಡದಲ್ಲೊ ಒಂದು ಸಿದ್ಧಾಪುರ ಇತ್ತ್.

    ಆದ್ರೆ – ಇದ್ದಂಗೆ ಇದ್ದು – ಇದ್ರಲ್ಲಿ ಹವ್ಯಗನ್ನಡದ ಛಾಪಿದೆಃ-)) ಇದು ಕುಂದಾಪ್ರ ಕನ್ನಡ ಅಲ್ಲ ಕಾಣಿಃ-)

    ಕುಂದಗನ್ನಡದಲ್ಲಾದರೆ – ಇದ್ದಾಂಗ್ ಇತ್ತ್-)

  5. ಜಗಲಿ ಭಾಗವತರೇ, ನಾನು ಬರೆದಿದ್ದು ಯಾವುದೋ ಒಂದು ಊರ ಬದಿಗೆ ಸೇರಿತಲ್ಲಾ ಅದೇ ಸಂತೋಷ ನನಗೆ 🙂

    ನಿಮ್ಮ ಕುಂದಾಪ್ರ ಭಾಷೆ ತುಂಬಾ ಚೆನ್ನಾಗಿದೆ. ಇಲ್ಲಿ ಬಂದಾಗ ನಿಮ್ಮೂರ ಭಾಷೆಯಲ್ಲೇ ಮಾತಾಡಿ.

  6. ಇಂಥಾ ಒಂದು ಸಾಹಿತ್ಯ ಬರೆದ ನಮ್ಮ ಕನ್ನಡದ ಕವಿ ಶ್ರೀ ದೊಡ್ಡರಂಗೇಗೌಡರಿಗೆ ನನ್ನ ಸಾಷ್ಟಾಂಗ ನಮನ ‘ ಇಂದಿಗೂ ಜೀವಂತ, ಶಿಲೆಯೊಳಗೆ ಸಂಗೀತ, ಸ್ವರಸ್ವರದ ಏರಿಳಿತ, ತುಂಗೆಯಲಿ ಶ್ರೀಮಂತ , ಕಣ ಕಣ ಕಣ ಕರೆ ನೀಡಿದೇ’ ಎಷ್ಟು ಸುಂದರ ಈ ಪದಸಾಲುಗಳು. ಈ ಹಾಡು ಕೇಳುತ್ತಿದ್ದರೆ ಇಡೀ ಹಂಪೆಯೇ ಕಣ್ಣ ಮುಂದೆ ಒಡ್ಡಿದಂತಾಗುತ್ತದೆ. ಸುಂದರ ಸಾಹಿತ್ಯಕ್ಕೆ ದೈವೀಕ ಸಂಗೀತ ನೀಡಿದ ಹಂಸಲೇಖಾ ಅವರನ್ನು ಎಷ್ಟು ಹೊಗಳಿದರೂ ಕಡಿಮೆ ಎನಿಸುತ್ತದೆ. ಆದರೂ ಆ ಸರಸ್ವತಿ ಪುತ್ರನಿಗೆ ನನ್ನ ಅನಂತ ನಮಸ್ಕಾರಗಳು.

  7. ಮೀರಾ, ಈ ಹಾಡು ಇಷ್ಟು ದಿನ ನಾನು ಹಂಸಲೇಖ ಬರೆದಿರುವುದು ಎಂದು ತಿಳಿದಿದ್ದೆ. ಕಳೆದ ಭಾನುವಾರ ಉದಯ ಟಿವಿಯ “ನಕ್ಷತ್ರ” ಕಾರ್ಯಕ್ರಮಕ್ಕೆ ದೊಡ್ಡರಂಗೇಗೌಡರು ಬಂದಿದ್ದರು. ಆಗಲೇ ಗೊತ್ತಾಗಿದ್ದು ಈ ಹಾಡು ಅವರದು ಎಂದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.