ಚಿತ್ರ – ಬೆಳ್ಳಿ ಕಾಲುಂಗುರ (೧೯೯೨)
ಸಾಹಿತ್ಯ – ಹಂಸಲೇಖ
ಸಂಗೀತ – ಹಂಸಲೇಖ
ಗಾಯಕರು – ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಮತ್ತು ಚಿತ್ರ
ಮಾಮ ಮಾಮ ಚಂದಮಾಮಾ
ಚಂದವಳ್ಳಿ ಹೆಣ್ಣು ನಾನು
ಚಂದವೇನು ನಿನಗೆ ನಾನು?
ರಾಮಾ ರಾಮಾ ಗೊಂಬೆ ರಾಮಾ
ಕೋಡಿ ಬೀಳೋ ಕೆರೆಯ ಹಾಗೆ
ಬಂದು ಸೇರೋ ಕಣಿವೆಯಾಗೆ
ಮೋಟುದ್ದ ಜಡೆಯನು
ನಾ ಈಟುದ್ದ ಹೆಣೆದೆನು
ಸ್ಯಾವಂತಿ ಮುಡಿದೆನು ಚಿನ್ನಾ
ಹಾಲ್ಗೆನ್ನೆಗರಿಸಿನ
ಕೈ ಗೋರಂಟಿ ಬರಿಸಿ ನಾ
ಹಾಲ್ ಕಾಸಿ ಕಾದೆನು ನಿನ್ನಾ
ರಾತ್ರಿ ಪೂರಾ ಕಾದು ಕಾದು
ಯವ್ವಿ ಯವ್ವಿಯೋ
ಕಾಣ್ತಾವಲ್ಲೋ ನಾಕು ಐದು
ಯವ್ವಿ ಯವ್ವಿಯೋ
ಯಾಕೆ ಕುಂತೆ ಏನು ಚಿಂತೆ
ಪ್ರೀತಿಸೋ ನನ್ನಾ..
ಮಾಮ..ಮಾಮ ಚಂದಮಾಮಾ
ಬಂದ ನೋಡು ಗೊಂಬೆ ರಾಮಾ
ತಂದ ನೋಡು ಪ್ರೀತಿ ಪ್ರೇಮಾ..||
ಮೈಯಾಗೆ ಕಚಗುಳಿ
ಇದೇನಪ್ಪಾ ಚಳುವಳಿ
ನಿಂದೇನಾ ಬಳುವಳಿ ಗೆಳೆಯಾ?
ಕಾಲಿಂದ ಬಿರ ಬಿರ
ತಲೆಗೇರೈತಿ ಹರಾ ಹರಾ
ಈ ಮತ್ತು ನರ ನರ ಗೆಳತಿ..
ಮಿಂಚು ಮಿಂಚು ಕಣ್ಣಿನಂಚು
ಯವ್ವಿ ಯವ್ವಿಯೋ
ಮೈಯ ಸೋಕಿ ಕಾದ ಹೆಂಚು
ಯವ್ವಿ ಯವ್ವಿಯೋ
ಸೂತ್ರವಲ್ಲ, ತಂತ್ರವಲ್ಲ
ಪ್ರೇಮದ ಮಂತ್ರ ||
ಕಾಡೆಲ್ಲ ಜಗಮಗ
ಸಿಂಗಾರ ನಮ್ ಮದುವೆಗಾ
ಮೈಯೆಲ್ಲ ವಾಲಗ… ಊದು
ಇದೇನಯ್ಯಾ ಗಗಮಗ
ಇವೆಲ್ಲಾನೂ ಒಸಗೆಗಾ
ಏನೇನು ಸೋಜಿಗ… ಜಾದೂ
ಈಟು ಹೊತ್ತು ಎಲ್ಲಿ ಇತ್ತು
ಯವ್ವಿ ಯವ್ವಿಯೋ
ಒತ್ತು ಒತ್ತು ಜೋಡಿ ಮುತ್ತು
ಹಾಲಿನಂತ ಹುಣ್ಣಿಮೇಲಿ ಮೀಯುವ ಬಾರಾ…
ಮಾಮ..ಮಾಮ..ಚಂದ ಮಾಮಾ
ಬಂದ ನೋಡು ಗೊಂಬೆ ರಾಮಾ
ತಂದ ನೋಡು ಪ್ರೀತಿ ಪ್ರೇಮಾ..
ಮಾಮ ಮಾಮ ಚಂದಮಾಮಾ
ಚಂದವಳ್ಳಿ ಹೆಣ್ಣು ನಾನು
ಚಂದವೇನು ನಿನಗೆ ನಾನು?
* * * * *