ಬೆಳ್ಳಿ,ಬಂಗಾರವಾಯಿತು, ಗ್ಯಾಸ್ ಆಯಿತು, ಈಗ ಬೇಳೆಗಳ ಸರದಿಯೇ??
ಇವತ್ತು ದಿನಸಿ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋಗಿದ್ದೆ. ಎಲ್ಲಾ ಬೇಳೆಗಳ ಬೆಲೆ ಮಾಮೂಲಿಗಿಂತ ಬಹಳ ಹೆಚ್ಚಾಗಿರುವುದು ಕಂಡು ಬಂದಿತು. ತೊಗರಿಬೇಳೆಯ ಬೆಲೆಯಂತೂ ಇನ್ನೂ ಹೆಚ್ಚು. ಇದ್ದಕ್ಕಿದ್ದಂತೆ ಬೇಳೆಗಳ ಬೆಲೆ ಮೇಲೇರಲು ಏನಾದರೂ ಕಾರಣವಿದೆಯೇ? ಅಥವಾ ವ್ಯಾಪಾರಿಗಳು ಕೃತಕ ಅಭಾವವನ್ನು ಸೃಷ್ಟಿಸುತ್ತಿದ್ದಾರೆಯೇ? ಗೊತ್ತಿಲ್ಲ.
ನಿಮ್ಮೂರಿನಲ್ಲೂ ಇದೇ ಪರಿಸ್ಥಿತಿ ಇದೆಯೇ? ಭಾರತದಲ್ಲಿಯೂ ಹೀಗೆ ಇದೆಯೇ? ಅಲ್ಲಿಯವರು ಯಾರಾದರೂ ಬೆಳಕು ಚೆಲ್ಲಿ. ನಾನಂತೂ ಯಾವ ಬೇಳೆಯನ್ನೂ ಖರೀದಿಸಲಿಲ್ಲ. ಮನೆಗೆ ಬಂದು ನೋಡಿದಾಗ ಹಿಂದೆ ತಂದಿದ್ದ ಒಂದೆರಡು ಪ್ಯಾಕೆಟ್ಗಳು ಕಾಣಿಸಿದವು. ಅದನ್ನೇ ಮಿತವಾಗಿ ಬಳಸುವುದೆಂದು ನಿರ್ಧರಿಸಿದೆ. ಬೇಳೆಗಳ ಬೆಲೆ ಇಳಿಯುವವರೆಗೆ ನಮ್ಮನೆಯಲ್ಲಿ ಬಿಸಿಬೇಳೆಯೂ ಇಲ್ಲ. 🙂