ಕನ್ನಡ ಆಡಿಯೋ ಸಮುದಾಯದಲ್ಲಿ ಹೀಗೊಂದು ಆಟವಿದೆ. ಅದು ಕತೆ ಬರೆಯುವ ಆಟ. ಕತೆಯನ್ನು ಸಾಲಿನಿಂದ ಸಾಲಿಗೆ ಮುಂದುವರೆಸುವ ಆಟ. ಒಂದೇ ಕತೆಯನ್ನು ಹೆಣೆಯುವ ಹಲವಾರು ಕತೆಗಾರರು. ನನಗೆ ತುಂಬಾ ಇಷ್ಟದ ಆಟವಿದು. ಅದೇ ರೀತಿ ನಾವೂ ಇಲ್ಲೊಂದು ಕತೆ ಬರೆಯೋಣವೇ? ನೀವು ಕಾಮೆಂಟುಗಳ ರೂಪದಲ್ಲಿ ಮುಂದುವರೆಸುವ ಭಾಗವನ್ನು ನಾನು ಕತೆಗೆ ಜೋಡಿಸುತ್ತಾ ಹೋಗುತ್ತೇನೆ.
ಕತೆ ಸುಗಮವಾಗಿ ಸಾಗಲು ಕೆಲವು ನಿಯಮಗಳನ್ನು ತಿಳಿಸುತ್ತೇನೆ. ಆದರೆ ಯಾವುದೂ ಕಡ್ಡಾಯವಲ್ಲ!
* ಕತೆಯ ಗಾತ್ರ – ೪-೫ ಪುಟಗಳು(ಅಗತ್ಯವಿದ್ದರೆ ಇನ್ನೂ ಹೆಚ್ಚಾಗಬಹುದು)
* ಕತೆ ಮುಂದುವರೆಸಿಕೊಂಡು ಹೋಗುವವರು ಕನಿಷ್ಟ ೩-೪ ವಾಕ್ಯ ಬರೆದರೆ ಒಳ್ಳೆಯದು.
* ಕತೆಯ ಪಾತ್ರಗಳು ಗರಿಷ್ಟ ೪ (ಬೇಕಿದ್ದರೆ ಇನ್ನೊಂದು)
* ಕತೆ ಕರ್ನಾಟಕ/ ಭಾರತದಲ್ಲೇ ನಡೆಯಬೇಕು. (ಕತೆಗೆ ಕಾಲಿಲ್ಲದಿದ್ದರೂ)
* ಅಲ್ಲಲ್ಲಿ, ಸಾಂದರ್ಭಿಕವಾಗಿ ಇಂಗ್ಲಿಷ್ ಓಕೆ. ಮಾರುದ್ದದ ಆಂಗ್ಲ ಸಂಭಾಷಣೆಗಳು NO NO
ಜ್ಯೋತಿ, ಮಾಲಾ, ಸುಶೃತ, ಭಾಗವತರು, ಶ್ರೀನಿಧಿ, ಕಾಳಣ್ಣ, ಪ್ರದೀಪ್, ಮನಸ್ವಿನಿ, ಸಿಂಧು, ಪೂರ್ಣಿಮಾ, ಜಾಗೃತಿ, ಶಿವು, ಮೀರಾ, ತವಿಶ್ರೀ, ಸುನಾಥ್, ಶ್ರೀ …ಎಲ್ಲಾ ಬನ್ನಿ. ಅನ್ವೇಶಿ, ಜೋಶಿಯವರೇ, ಕತೆಗೆ ಕಾಮಿಡಿ ಟಚ್ ಕೊಡಲು ನೀವೂ ಬೇಕು. 🙂
ಇಲ್ಲಿ ಹೆಸರಿರುವರು ಮಾತ್ರ ಬರೆಯಬೇಕೆಂದು ಯಾರೂ ಅಪಾ(ರ)ರ್ಥ ಮಾಡಿಕೊಳ್ಳಬೇಡಿ. ಈ ಕಥಾ ಮಂದಿರ ನಿರ್ಮಾಣಕ್ಕೆ ಎಷ್ಟು ಕರಸೇವಕರಿದ್ದರೂ ನಮಗೆ ಬೇಕು.:)
ನೀವು ಕತೆ ಪೋಣಿಸಿದಂತೆ ನಿಮ್ಮ ಹೆಸರು ಇಲ್ಲಿ ಸೇರ್ಪಡೆಯಾಗುತ್ತಾ ಹೋಗುತ್ತದೆ.
ಮೊದಲು ಕೂಸು ಹುಟ್ಟಲಿ, ಆಮೇಲೆ ಕುಲಾವಿ ತರೋಣ. ನಾಮಕರಣವನ್ನೂ ಮಾಡೋಣ..
ಸರಿ, ನಾನೊಂದು ಕತೆ ಪ್ರಾರಂಭಿಸುತ್ತೇನೆ. ಇಲ್ಲಲ್ಲ. ಬೇರೊಂದು ಹೊಸ ಪೋಸ್ಟಿನಲ್ಲಿ. ನೀವೇನಾದರೂ ಹೇಳುವುದಿದ್ದರೆ ಇಲ್ಲಿ ಹೇಳಿ.