ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।।
ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।।೨।।
ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ ಬಿಡಿಸು ಮಾಧವಾ ।।೩।।
ಹಿಂದನೇಕ ಯೋನಿಗಳಲಿ । ಬಂದು ಬಂದು ನೊಂದೆನಯ್ಯ । ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ ।।೪।।
ಭ್ರಷ್ಟನೆನಿಸಬೇಡ ಕೃಷ್ಣ । ಇಷ್ಟು ಮಾತ್ರ ಬೇಡಿಕೊಂಬೆ । ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ।।೫।।
ಮದನನಯ್ಯ ನಿನ್ನ ಮಹಿಮೆ । ವದನದಲ್ಲಿ ನುಡಿಯುವಂತೆ । ಹೃದಯದೊಳಗೆ ಹುದುಗಿಸಯ್ಯ ಮಧುಸೂದನ ।।೬।।
ಕವಿದುಕೊಂಡು ಇರುವ ಪಾಪ । ಸವೆದು ಪೋಗುವಂತೆ ಮಾಡಿ । ಜವನ ಬಾಧೆಯನ್ನು ಬಿಡಿಸೋ । ಶ್ರೀ ತ್ರಿವಿಕ್ರಮ ।।೭।।
ಕಾಮಜನಕ ನಿನ್ನ ನಾಮ । ಪ್ರೇಮದಿಂದ ಪಾಡುವಂಥ । ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ।।೮।।
ಮೊದಲು ನಿನ್ನ ಪಾದಪೂಜೆ । ಒದಗುವಂತೆ ಮಾಡೊ ಎನ್ನ । ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ।।೯।।
ಹುಸಿಯನಾಡಿ ಹೊಟ್ಟೆ ಹೊರೆವ । ವಿಷಯದಲ್ಲಿ ರಸಿಕನೆಂದು । ಹುಸಿಗೆ ಹಾಕದಿರೊ ಎನ್ನ ಹೃಷಿಕೇಶನೆ ।।೧೦।।
ಬಿದ್ದು ಭವದನೇಕ ಜನುಮ । ಬದ್ಧನಾಗಿ ಕಲುಷದಿಂದ । ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ ।।೧೧।।
ಕಾಮಕ್ರೋಧ ಬಿಡಿಸಿ ನಿನ್ನ । ನಾಮ ಜಿಹ್ವೆಯಾಳಗೆ ನುಡಿಸೊ । ಶ್ರೀಮಹಾನುಭಾವನಾದ ದಾಮೋದರ ।।೧೨।।
ಪಂಕಜಾಕ್ಷ ನೀನು ಎನ್ನ । ಮಂಕುಬುದ್ಧಿಯನ್ನು ಬಿಡಿಸಿ । ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ।।೧೩।।
ಏಸು ಜನ್ಮ ಬಂದರೇನು । ದಾಸನಲ್ಲವೇನು ನಾನು । ಘಾಸಿ ಮಾಡದಿರು ಇನ್ನು ವಾಸುದೇವನೆ ।।೧೪।।
ಬುದ್ಧಿಶೂನ್ಯನಾಗಿ ಎನ್ನ । ಬದ್ಧಕಾಯ ಕುಹಕಮನವ । ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮ್ನನೆ ।।೧೫।।
ಜನನಿ ಜನಕ ನೀನೆ ಎಂದು । ನೆನೆವೆನಯ್ಯ ದೀನಬಂಧು । ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ।।೧೬।।
ಹರುಷದಿಂದ ನಿನ್ನ ನಾಮ । ಸ್ಮರಿಸುವಂತೆ ಮಾಡು ನೇಮ । ಇರಿಸು ಚರಣದಲಿ ಪ್ರೇಮ ಪುರುಷೋತ್ತಮ ।।೧೭।।
ಸಾಧುಸಂಗ ಕೊಟ್ಟು ನಿನ್ನ । ಪಾದಭಜನೆ ಇತ್ತು ಎನ್ನ । ಭೇದ ಮಾಡಿ ನೋಡದಿರು ಹೇ ಅಧೋಕ್ಷಜ ।।೧೭।।
ಚಾರು ಚರಣ ತೋರಿ ಎನಗೆ । ಪಾರುಗಾಣಿಸಯ್ಯ ಕೊನೆಗೆ । ಭಾರ ಹಾಕಿರುವೆ ನಿನಗೆ ನರಸಿಂಹನೆ ।।೧೯।।
ಸಂಚಿತಾದಿ ಪಾಪಗಳು । ಕಿಂಚಿತಾದಿ ಪೀಡೆಗಳು । ಮುಂಚಿತಾಗೆ ಕಳೆಯಬೇಕೊ ಸ್ವಾಮಿ ಅಚ್ಯುತ ।।೨೦।।
ಜ್ಞಾನ ಭಕುತಿ ಕೊಟ್ಟು ನಿನ್ನ । ಧ್ಯಾನದಲ್ಲಿ ಇಟ್ಟು ಸದಾ । ಹೀನಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ದನ ।।೨೧।।
ಜಪತಪಾನುಷ್ಠಾನವಿಲ್ಲ । ಕುಪಥಗಾಮಿಯಾದ ಎನ್ನ । ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೆ ।।೨೨।।
ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ । ಇರಿಸೋ ಭಕ್ತರೊಳು ಪರಮ ಪುರುಷ ಶ್ರೀಹರೇ ।।೨೩।।
ಪುಟ್ಟಿಸಲೇ ಬೇಡ ಇನ್ನು । ಪುಟ್ಟಿಸಿದಕೆ ಪಾಲಿಸಿನ್ನು । ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೇ ।।೨೪।।
ಸತ್ಯವಾದ ನಾಮಗಳನು । ನಿತ್ಯದಲ್ಲಿ ಭಜಿಸುವರಿಗೆ । ಅರ್ತಿಯಿಂದ ಸಲಹುತಿರುವ ಕರ್ತೃ ಕೇಶವ ।।೨೫।।
ಮರೆಯದಲೆ ಹರಿಯ ನಾಮ । ಬರೆದು ಓದಿ ಪೇಳುವರಿಗೆ । ಕರೆದು ಮುಕ್ತಿ ಕೊಡುವನೆಲೆಯಾದಿಕೇಶವ ।।೨೬।।
Month: April 2020
ಕೋತಿ ಬಂದದ ರಾವಣ ನೀ ಕೇಳು- ಕನಕದಾಸರು
ಕೋತಿ ಬಂದದ ರಾವಣ ನೀ ಕೇಳು
ಸೀತೆಯ ವನದಲ್ಲಿ || ಪಲ್ಲವಿ||
ಗಿಡದಿಂದ ಗಿಡಕೆ ಹಾರತದ ಕೋತಿ
ಬಲು ಗಡಿಬಿಡಿ ಮಾಡತದ
ಹಿಡದೇನಂದರೆ ತಡಿ ತಡಿ ಅನುತದ
ಬಿಡದೆ ರಾಮರ ಸ್ಮರಣೆ ಮಾಡುತದ
ರಾಮನ ದೂತನು ಅನುತಾದ ||೧||
ಮಾತನಾಡುತಾದ ಬಂದಂಥ ಕೋತಿ
ಸೀತಾ- ಅಂಥಾದ ಸೇತುವೆಗಟ್ಟಿ ಬರತಾನಂತದ
ರಘುಪತಿ ದಶರಥ ಸುತ ಬರತಾನಂತ
ವಾಯುಕುಮಾರನು ಅನ್ನುತಾದ ||೨||
ವ್ಯರ್ಥವಾಗಿ ಕೆಡಬೇಡಿ ಅನುತಾದ
ನಮ್ಮಮ್ಮನ ಬಿಡಿರೆಂಥದ..
ಮೃತ್ಯುಕಾಲ ನಿಮಗೆ ಬಂದಿತು ಎನುತಾದ
ಹರಿಬ್ರಹ್ಮನಾಣೆ ಸುಳ್ಳಲ್ಲ ಅನ್ನುತಾದ
ಆದಿಕೇಶವನ ಪಾದ ಹಿಡಿ ಹಿಡಿರಂಥದ ||೩||
ಎನ್ನಂಥ ಭಕ್ತರು ಆನಂತ ನಿನಗಿಹರು
ರಚನೆ : ಜಗನ್ನಾಥ ದಾಸರು
ಎನ್ನಂಥ
ಭಕ್ತರು ಆನಂತ ನಿನಗಿಹರು
ನಿನ್ನಂಥ
ಸ್ವಾಮಿ ಎನಗಿಲ್ಲ||
ನಿನ್ನಂಥ
ಸ್ವಾಮಿ ಎನಗಿಲ್ಲ ಅದರಿಂದ
ಭಿನೈಪೆ
ಎನ್ನಾ ಸಲಹೆಂದು || ಪಲ್ಲವಿ||
ಪತಿತ
ನಾನಾದರೂ ಪತಿತಪಾವನ ನೀನು
ರತಿನಾಥ
ಜನಕ ನಗಪಾಣಿ ||
ರತಿನಾಥ
ಜನಕ ನಗಪಾಣಿ ನೀನಿರಲು
ಇತರ
ಚಿಂತ್ಯಾಕೋ ಎನಗಿನ್ನು || ೧||
ಮನದೊಳಗೆ
ನೀನಿದ್ದು ಮನವೆಂದೆನಿಸಿಕೊಂಡು
ಮನದಾ
ವೃತ್ತಿಗಳನ್ನು ಸೃಜಿಸುವಿ
ಮನದಾ
ವೃತ್ತಿಗಳ ಸೃಜಿಸೊ
ಸಂಕರ್ಷಣನೆ
ನಿನ್ನ ಕರುಣಕ್ಕೆ ಎಣೆಗಾಣೆ ||೨||
ನಾನಾ
ಪದಾರ್ಥದೊಳು ನಾನಾ ಪ್ರಕಾರದಲಿ
ನೀನಿದ್ದು
ಜಗವಾ ನಡೆಸುವೀ
ನೀನಿದ್ದು
ಜಗವಾ ನಡೆಸುವೀ ಹರಿ ನೀನೆ
ನಾನೆಂಬೋ
ನರಗೆ ಗತಿ ಉಂಟೆ |||೩||
ಎನ್ನಪ್ಪ
,ಎನ್ನಮ್ಮ
,ಎನ್ನಯ್ಯ,ಎನ್ನಣ್ಣಾ
ಎನ್ನರಸ
ಎನ್ನ ಕುಲದೈವಾ
ಎನ್ನರಸ
ಎನ್ನಾ ಕುಲದೈವಾ ಇಹಪರದಿ
ಎನ್ನಾ
ಬಿಟ್ಟಗಲದೇ ಇರು ಕಂಡ್ಯಾ ||೪||
ಅನಾಥ
ಬಂಧು ಜಗನ್ನಾಥ ವಿಠ್ಠಲ
ಪ್ರಪನ್ನ
ಪರಿಪಾಲ ಮಾಲೋಲ
ಪ್ರಪನ್ನ
ಪರಿಪಾಲ ಮಾಲೋಲ ಹರಿ
ಪಾಂಚಜನ್ಯ
ಧೃತಪಾಣಿ ಸಲಹಯ್ಯ ||೫||