ಸೀತೆಯ ಭೂಮಿಜಾತೆಯ – Seeteya Bhoomi Jaateya

ವಿಜಯದಾಸರ ರಚನೆ

ಸೀತೆಯ ಭೂಮಿಜಾತೆಯ ಜಗ-|
ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಪಲ್ಲವಿ||

ಕ್ಷೀರ ವಾರಿಧಿಯ ಕುಮಾರಿಯ ತನ್ನ |
ಸೇರಿದವರ ಭಯಹಾರಿಯ ||
ತೋರುವಳು ಮುಕ್ತಿದಾರಿಯ ಸರ್ವ |
ಸಾರ ಸುಂದರ ಶ್ರೀನಾರಿಯ ||1||

ಈಶಕೋಟಿಯೊಳು ಗಣನೆಯ ಸ್ವಪ್ರ-|
ಕಾಶವಾದ ಗುಣಶ್ರೇಣಿಯ ||
ಈಶಾದ್ಯರ ಪೆತ್ತ ಕರುಣಿಯ ನಿ-|
ರ್ದೋಷ ವಾರಿಧಿಕಲ್ಯಾಣಿಯ||2||

ವಿಜಯವಿಠ್ಠಲನ್ನ ರಾಣಿಯ ಪಂ-|
ಕಜಮಾಲೆ ಪಿಡಿದ ಪಾಣಿಯ ||
ವಿಜಯಲಕ್ಷ್ಮಿ ಗಜಗಮನೆಯ ನಿತ್ಯ |
ಸುಜನವಂದಿತೆ ಅಹಿವೇಣಿಯ ||3||