ಚಿತ್ರ : ಪರಸಂಗದ ಗೆಂಡೆತಿಮ್ಮ(೧೯೭೮)
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ರಾಜನ್-ನಾಗೇಂದ್ರ
ಗಾಯಕಿ: ಎಸ್.ಜಾನಕಿ
ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ
ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ
ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ
ಹೃದಯದ ಕುಲುಮೆಯಾಗೆ ನೂರು ಬಯಕೆ ಸಿಡಿದೈತೆ
ನಿನ್ನ ಕಾಣುವ ಬಾವ ಬೆಳೆದು ನನ್ನ ಕನಸು ಕಡೆದೈತೆ
ತೆರೆಯದ ಬಯಕೆ ಬಾನು ದೂರ ದೂರ ಸರಿದೈತೆ
ಹರೆಯದ ಹಂಬಲ ಗಂಗೆ ಬಾಗಿ ಬಳುಕಿ ಹರಿದೈತೆ
ನಿನ್ನ ಸ್ನೇಹಕೆ ಬಾಳು ನಲಿದು ಆಸೆ ಗಂಧ ಹರಡೈತೆ
ಮರೆಯದ ಮೋಹ ಉಕ್ಕಿ ತೇಲಿ ತೇಲಿ ಮೊರೆದೈತೆ
ಇಂಗದ ದಾಹ ಬೇಗೆ ಕಾದೂ ಕಾದೂ ಕರೆದೈತೆ
ನಿನ್ನ ಸೇರುವ ರಾಗ ರಂಗಿಗೆ ನನ್ನ ಮನಸು ತೆರೆದೈತೆ
* * * * *
ಈ ಹಾಡು ನನ್ನ ಅತ್ಯಂತ ಪ್ರಿಯವಾದ್ದು. ದೊಡ್ಡರಂಗೇಗೌಡರು ಹಳ್ಳೀ ಭಾಷೆಯ ಸೊಗಡಲ್ಲಿ ಈ ವಿರಹ ಗೀತೆಯನ್ನು ಬರೆದಿದ್ದಾರೆ . ಇದಕ್ಕೆ ಅತ್ಯಂತ ಸುಂದರ ರಾಗ ಸಂಯೋಜನೆಯಲ್ಲಿ ಭಾವಪೂರ್ಣವಾಗಿ ಹಾಡಿದ್ದಾರೆ ನನ್ನ ನೆಚ್ಚಿನ ಗಾಯಕಿ ಎಸ್.ಜಾನಕಿ. ಅದರಲ್ಲೂ ಮನಸಿನಾ ಚಿಲುಮೆ ಮತ್ತು ಹೃದಯದಾ ಕುಲುಮೆ ಅನ್ನೋ ಕಲ್ಪನೆ ನನಗೆ ತುಂಬಾ ಹಿಡಿಸಿದೆ.(ಒಂದೇ ನನಗೆ ಅರ್ಥವಾಗದ್ದು ಏನೆಂದರೆ ಈ ಚಿತ್ರದಲ್ಲಿ ನಾಯಕಿ ಪಟ್ಟಣದಿಂದ ಬಂದು ಹಳ್ಳಿಯ ಮುಕ್ಕನನ್ನು ಮದುವೆಯಾಗಿರುತ್ತಾಳೆ, ಓದು ಬರಹ ತಿಳಿದ ಈ ನಾಯಕಿ ಐತೆ ಪೈತೆ ಅಂತ ಯಾಕೆ ಹಾಡ್ತಾಳೆ ಅನ್ನೋದು ) ಏನಾದರಾಗಲಿ ಹಾಡು ಮಾತ್ರ ತುಂಬಾನೇ ಚೆನ್ನಾಗಿದೆ. ಈ ಗೀತೆಯನ್ನು ಇಲ್ಲಿ ಇಳಿಸಿದ್ದಕ್ಕಾಗಿ ವೇಣಿಗೆ ಧನ್ಯವಾದಗಳು.
(ಒಂದೇ ನನಗೆ ಅರ್ಥವಾಗದ್ದು ಏನೆಂದರೆ ಈ ಚಿತ್ರದಲ್ಲಿ ನಾಯಕಿ ಪಟ್ಟಣದಿಂದ ಬಂದು ಹಳ್ಳಿಯ ಮುಕ್ಕನನ್ನು ಮದುವೆಯಾಗಿರುತ್ತಾಳೆ, ಓದು ಬರಹ ತಿಳಿದ ಈ ನಾಯಕಿ ಐತೆ ಪೈತೆ ಅಂತ ಯಾಕೆ ಹಾಡ್ತಾಳೆ ಅನ್ನೋದು).
– ಬಹುಶ: ನಿರ್ದೇಶಕರು ಹಾಡಿನ ಸಂದರ್ಭ ಸರಿಯಾಗಿ ವಿವರಿಸಿರಲಿಲ್ಲ ಅನ್ನಿಸುತ್ತದೆ. ನಾಯಕಿ ಹಳ್ಳಿಮುಕ್ಕನನ್ನು ಮದುವೆಯಾದರೂ ಈ ಹಾಡು ಶಿವಣ್ಣ ಮಾಸ್ಟ್ರು (ಮಾನು) ಜೊತೆಗೆ ಹಾಡುವುದು. ಗೆಂಡೆತಿಮ್ಮನಿಗೆ ಎಂದು ತಿಳಿದು ಬರೆದಿರಬಹುದು 🙂
“ಭೂಲೋಕದಲ್ಲಿ ಯಮರಾಜ” ದಲ್ಲಿಯೂ ಇದೇ ತರ ಒಂದು ಹಾಡಿದೆ. (ಎಂದೂ ಕಾಣದ ನಗೆಯ ಕಂಡೆ) – ಆದರೆ, ಅದರಲ್ಲಿ ಲೋಕೇಶ್(spb) ಹಾಡುವ ಭಾಗ ಮಾತ್ರ ಹಳ್ಳಿ ಭಾಷೆಯಲ್ಲಿದೆ. ನಾಯಕಿಯದಲ್ಲ.