ಚಿತ್ರ: ಮಸಣದ ಹೂವು (೧೯೮೫)
ಗಾಯಕ: ಎಸ್.ಪಿ ಬಾಲಸುಬ್ರಹ್ಮಣ್ಯಮ್
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ಸು.ರಂ.ಎಕ್ಕುಂಡಿ
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ|
ಮಲೆನಾಡ ಕಣಿವೆಗಳ ಹಸಿರು ಬನದಿಂದ
ನಿನಗಾಗಿ ಗಿಳಿಯೊಂದ ನಾ ತರಲಾರೆ
ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ
ಹಂಸ ನಾವೆಯ ನಾ ತರಲಾರೆ|
ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ
ಮಂದಾನಿಲದ ವೀಣೆಯ ತರಲಾರೆ
ನಂದನ ವನದ ಮಂದಾರ ಪುಷ್ಪವ
ನಾ ನಿನಗೆ ತರಲಾರೆ|
ಹಲವು ಅರಸಿಯರ ಹೊತ್ತು ಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ
ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ
ಸೂರ್ಯ ಚಂದ್ರರ ನಾ ತರಲಾರೆ|
* * * * * * * * * * * * *
ಅಲ್ರೀ ಮ್ಯಾಡಂ… Valentine’s Day ಹಾಕೋ ಹಾಡೇ ಇದು ? ತಾವು ಶಿವ ಸೈನಿಕರೋ ಹೇಗೆ ? 😀
ತ್ರಿವೇಣಿಯವರೇ,
ನಾನು ಅದೇ ಅಂತೀನಿ…
ಏನೂ ತರೋಕೆ ಆಗೋಲ್ಲ ಅಂತಾ ಹಾಡು ಹಾಡೋದಾ 🙂
ಚಿತ್ರದ ಹೆಸರು ಮಸಣದ ಹೂವು ಅಂತಾ ಬೇರೆ 🙂
ಅಲ್ಲಿ ಆಣೆ-ಪ್ರಮಾಣ ಮಾಡಬೇಡಿ ಅಂತಾ ಹೇಳಿದೀರಾ !!
ಪ್ರೇಮಿಗಳ ದಿನದ ಶುಭಾಶಯಗಳು !
ಶ್ರೀನಿ ಮತ್ತು ಶಿವು,
ನಿಮ್ಮಿಬ್ಬರಿಗೂ ಈ ಹಾಡು ಪ್ರೇಮಿಗಳ ದಿನಕ್ಕೆ ಸೂಕ್ತವಲ್ಲ ಎನ್ನುವ ಭಾವನೆ ಯಾಕೆ ಬಂದಿತೋ ನನಗೆ ತಿಳಿಯಲಿಲ್ಲ.
ಪ್ರೇಯಸಿಗೆ ಯಾವ ಕಾಣಿಕೆಯನ್ನೂ ಕೊಡಬಾರದು ಅನ್ನುವ ನೆಗೆಟಿವ್ ಸಂದೇಶದ ಬದಲು, ಉಡುಗೊರೆ ಕೊಟ್ಟರೆ ಅಸಾಧಾರಣವಾದುದನ್ನೇ ಕೊಡಬೇಕು ಎಂದು ಅರ್ಥ ಮಾಡಿಕೊಳ್ಳಬಹುದಿತ್ತು ಅಲ್ಲವೇ? 🙂
ಈ ಕವನದ ಪ್ರೇಮಿಗೆ ಅಂತಹ ಹಂಬಲವಿದೆ. ಅದು ತನ್ನಿಂದ ಸಾಧ್ಯವಾಗುತ್ತಿಲ್ಲವೆನ್ನುವ ಅಸಹಾಯಕತೆಯೂ ವ್ಯಕ್ತವಾಗುತ್ತಿದೆ. ಅವನಿಂದ ಸಾಧ್ಯವಾಗದ್ದು ನಿಮಗೂ ಸಾಧ್ಯವಾಗಬಾರದೆಂದಿದೆಯೇ? ಕಲ್ಪನೆ,ಕನಸಿಗೂ ಬರ ಬಂದಿದೆಯೇ? 🙂
ಶಿವು, ರಂಗನಾಥ ಎಕ್ಕುಂಡಿಯವರು ಎಂದೋ ಬರೆದ ಈ ಕವನವನ್ನು ‘ಮಸಣದ ಹೂವು’ ಚಿತ್ರದಲ್ಲಿ ಬಳಸಿಕೊಂಡಿದ್ದಾರೆಯೇ ಹೊರತು ,ಕವನಕ್ಕೂ, ಮಸಣಕ್ಕೂ ಏನೇನೂ ಸಂಬಂಧವಿಲ್ಲ. 🙂
ಅಲ್ಲಿ,ಇಲ್ಲಿ ,ಎಲ್ಲಾ ಕಡೆ ಓದಿ, ಪ್ರತಿಕ್ರಿಯಿಸಿ,ಉತ್ತೇಜನ ನೀಡುತ್ತಿರುವುದಕ್ಕೆ ಧನ್ಯವಾದಗಳು.
ಅಂದ ಹಾಗೆ, ಈ ವೇಳೆಗೆ ನಿಮ್ಮಪ್ರೇಮದ ಕಾಣಿಕೆ ಹೋಗಿ ತಲುಪಿರಬಹುದಲ್ಲವೇ? 🙂
ಎಸ್.ಪಿ ಹಾಡಿರುವ ಮಧುರವಾದ ಹಾಡು ಎಕ್ಕುಂಡಿಯವರ `ಬಕುಲದ ಹೂಗಳು’ ಸಂಕಲನದಲ್ಲಿದೆ.
ಪ್ರೇಮಿಗಳ ದಿನಕ್ಕೆ ನಿಮ್ಮ ಆಯ್ಕೆ ಸಮಂಜಸವಾಗಿದೆ.
ಆದರೆ ನಮ್ಮ` ಹೀರೊ’ ಮಹಾಶಯರುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಕವನವನ್ನು ಅರ್ಥ ಮಾಡಿಕೊಳ್ಳುವುದು ಏಕೋ… ಗೊತ್ತಾಗಲಿಲ್ಲ!
ಅಂದ ಹಾಗೆ ನೆನ್ನೆ ನನಗೆ ಒಂದು ಹೂ ಸಹ ಸಿಗಲಿಲ್ಲ ಮುತ್ತಿನ ನಾವೆ ಹಾಗಿರಲೀ…
ತ್ರಿವೇಣಿಯವರೇ ಮತ್ತು ಮಾಲಾ ಅವರೇ,
ಸುಮ್ಮನೆ ತಮಾಷೆಗೆ ಹೇಳಿದ್ದು ರೀ ಹಾಗೆ ಅಂತಾ..
ನಿಜಕ್ಕೂ ಹಾಡು ಸೊಗಸಾಗಿದೆ..
ಅಯ್ಯೋ ನಾವು ಯಾವ ಊರ ಹೀರೋ ರೀ..ಯಾವಾಗಲೋ ‘ಹೀರೋ ಸೈಕಲ್’ ಹೊಡೆದೆದ್ದು ಅಷ್ಟೇ…ಆಮೇಲೆ ಹೀರೋಕ್ಕೂ ನಮಗೂ ಏನು ಸಂಬಂಧವಿಲ್ಲ ರೀ 🙂
“ಅಂದ ಹಾಗೆ ನೆನ್ನೆ ನನಗೆ ಒಂದು ಹೂ ಸಹ ಸಿಗಲಿಲ್ಲ ಮುತ್ತಿನ ನಾವೆ ಹಾಗಿರಲೀ…”
– ಮಾಲಾ,ನೀವೇ ಥರಾವರಿ ಹೂವುಗಳನ್ನು ಬೆಳೆಸುವಾಗ ಬೇರೆ ಹೂವು ಯಾಕೆಂದು ತಂದಿರಲಿಕ್ಕಿಲ್ಲ ಅಷ್ಟೆ. ಅಷ್ಟಕ್ಕೂ, ಬೇಂದ್ರೆಯವರ ಕವಿತೆಯ – ವಸ್ತು,ಒಡವೆಗಳಿಂತ, ಬೇರೆ ಉಡುಗೊರೆಗಳು ಇನ್ನೇನಿದೆ? 🙂
“ಬಕುಲದ ಹೂಗಳು” – ಸಂಕಲನದಲ್ಲಿ ಈ ಕವಿತೆಯ ಹೆಸರು ಏನಿದೆ? ತಿಳಿದಿದೆಯೇ?
ಶಿವ್, ನಾನು ಹಾಗೂ ಹೀಗೂ ೪ ಗಂಟೆಯವರಿಗೆ ಕಾಲತಳ್ಳಿದೆ ಅವತ್ತು, ನನ್ನ “teen” ಮಗಳನ್ನ ಯಾಹೂ ಮೆಸ್ಸೆಂಜರ್.ನಲ್ಲಿ ಕೇಳಿದೆ – ಅಮ್ಮನಿಗೆ ಏನುತಂದರೆ ಸರಿ – ಅಂತ…. ಅದಕ್ಕವಳು ನನ್ನ ತೀರಾ ತರಾಟೆಗೆ ತೆಗೊಂಡಳು ” Dad u shud have done all these 10 yrs back…u were a cheapo then like all men I think :O get over it ” 😀
“Penny feels better in the wallet than the store” ಅನ್ನೋ ಜಾಯಮಾನದವನಾದ್ದರಿಂದ ಬರಿಗಯ್ಯಲ್ಲಿ ಮನೆಗೆ ಬಂದು ಸದ್ದಿಲ್ಲದೆ Vista ಅಪ್ ಡೇಟ್ಸ್ ಮಾಡ್ತಾ ಕೂತೆ 😀
ಮಾಲಾರವರೆ – ಈ ಸೀಸನ್ನಲ್ಲಿ ಹೂಗಳಿಂದ allerygy ಆಗೊಲ್ವೇ ?
ಹ್ವಾಯ್ ಇದೆಂಥಾ ಪದ್ಯ ಮರ್ರೆ? ಅದು ತರಲಾರೆ, ಇದು ತರಲಾರೆ ಅಂತ. ನಾನಾಗಿದ್ರೆ, ‘ಇಂದ್ರ ಬೇಕಾ? ಚಂದ್ರ ಬೇಕಾ? ಹೀರೊ ಸೈಕಲ್ಲು ಬೇಕಾ?’ ಅಂತ ಕೇಂತಿದ್ದೆಃ-))
ಶ್ರೀನಿ ಯವರೇ,
ಅದು ಹಾಗೇ ಅಲ್ವಾ..
Experience is like a comb, you get it only after u become bald 😀
Vista ದಲ್ಲಿ ಭಾಳ ತಿಗಣೆಗಳು ಇವೆ ಅಂತಾ ನನ್ನ ಮಿತ್ರರ ಅಂಬೋಣ..ನಿಮಗೆ ಎನಾದ್ರೂ ಅನಿಸ್ತಾ?
Terrible 🙁 SATA work agalla, SLI work agalla NForce chipset problem…list goes on..
ಆದ್ರೆ ಕನ್ನಡ out-of-the-box ಕೆಲಸ ಮಾಡುತ್ತೆ 😀
ಎಕ್ಕುಂಡಿಯವರ ಕವನ ಸಂಕಲನವೊಂದನ್ನ ಓದಿದ್ದೆ. ಯಾವುದು ಅಂತ ನೆನಪಿಲ್ಲ. ಲೈಕಿತ್ತ್
ಅಂದಹಾಗೆ ಎಕ್ಕುಂಡಿಯವರು ಹವ್ಯಕರ?
“ಅಂದಹಾಗೆ ಎಕ್ಕುಂಡಿಯವರು ಹವ್ಯಕರ? “
ಭಾಗವತರೇ, ನಿಮಗೆ ಈ ಅನುಮಾನ ಬಂದಿದ್ದು ಯಾಕೆ ಅಂತ ಮೊದಲು ಹೇಳಿ. ಆಮೇಲೆ ನಿಮಗೆ ಉತ್ತರ ಕೊಡುವೆ 🙂
ಅದು ಸುಬ್ರಾಯ ಚೊಕ್ಕಾಡಿಯವರಿರಬೇಕು. ಹವ್ಯಕ ಸಮ್ಮೇಳನವೊಂದರಲ್ಲಿ ಅವರು ಭಾಗವಹಿಸಿ ‘ಪ್ರಗತಿಪರ(??)’ರಿಂದ ಯಕ್ಕಾಮಕ್ಕ ಬಯ್ಯಿಸಿಕೊಂಡಿದ್ದರು ಅದಿಕ್ಕೆ ಕೇಳ್ದೆ. ಅದು ಚೊಕ್ಕಾಡಿಯವರೊ,ಎಕ್ಕುಂಡಿಯವರೊ…ಇತ್ತೀಚೆಗೆ ೬೦ ತುಂಬಿದ್ದು ಯಾರಿಗೆ?
ನಂಗೆ ಈಗ ಪೂರಾ confusion. ಈಗ ಮನಿಕಂತೆ. ನಿದ್ರೆ ಮಾಡಿದ್ರೆ ಸರಿಯಾತ್ತ್. 🙂
ಅಂದಹಾಗೆ ಉತ್ತರ ಏನು?
“ಚೊಕ್ಕಾಡಿಯವರೊ,ಎಕ್ಕುಂಡಿಯವರೊ…ಇತ್ತೀಚೆಗೆ ೬೦ ತುಂಬಿದ್ದು ಯಾರಿಗೆ?”
– ಭಾಗವತರೇ, ನಾ ಬಲ್ಲ ಹಾಗೆ ಇವರಿಬ್ಬರಿಗೂ ೬೦ ತುಂಬಿ ಬಹಳ ವರ್ಷಗಳಾಗಿವೆ. ಸು.ರಂ.ಎಕ್ಕುಂಡಿಯವರು (೧೯೨೩ ಜನವರಿ ೨೦) ಈಗಿಲ್ಲ. ಸುಬ್ರಾಯ ಚೊಕ್ಕಾಡಿ – (೧೯೪೦ ಜೂನ್ ೨೯).
“ಈಗ ಮನಿಕಂತೆ. ನಿದ್ರೆ ಮಾಡಿದ್ರೆ ಸರಿಯಾತ್ತ್.” –
ಅಷ್ಟು ಮಾಡಿ 🙂
ನೀವುಗಳೆಲ್ಲರೂ `ಮೂಡಲಮನೆ’ ಧಾರಾವಾಹಿ ಬಗ್ಗೆ ಕೇಳಿರಬಹುದು, ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಮತಿ ವಿಜಯಾ ಎಕ್ಕುಂಡಿ ಅವರ ಬಗ್ಗೆಯೂ ಕೇಳಿರಬಹುದು. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಶ್ರೀ ನಚಿಕೇತ್ ಶರ್ಮ ಮತ್ತವರ ತಂಗಿ ಶ್ರೀಮತಿ ಗಾರ್ಗಿ ಪಂಚಾಂಗಂ ಅವರ ಅಮ್ಮ, ಶ್ರೀಮತಿ ವಿಜಯಾ, ಅಪ್ಪ ಶ್ರೀ ಸುರೇಶ್ ಎಕ್ಕುಂಡಿ. ಸುರೇಶರ ದೊಡ್ಡಣ್ಣ ಸು.ರಂ.ಎಕ್ಕುಂಡಿ. ಗೋಕರ್ಣದ ಹತ್ತಿರದ ಹಳ್ಳಿಯೊಂದರಲ್ಲಿ ಶಾಲಾ ಮಾಸ್ತರರಾಗಿ ಜೀವನ ಸಾಗಿಸಿದವರು. ಬಕುಲದ ಹೂವು ಅಲ್ಲದೆ ಹಲವಾರು ಕವನ ಸಂಕಲನಗಳನ್ನೂ ಇವರು ಬರೆದಿದ್ದಾರೆ. ಹಿರಿಯ ಚಿತ್ತಾಲರ, ಗೋಕಾಕರ, ಗೌರೀಶ್ ಕಾಯ್ಕಿಣಿಯವರ ಸಮಕಾಲೀನರು, ಪ್ರೀತಿಪಾತ್ರರು.
ಇವಿಷ್ಟು ಸಧ್ಯಕ್ಕೆ ನನಗೆ ಗೊತ್ತಿರುವ, ನೆನಪಿಗೆ ಬರುವ ವಿವರಗಳು. ಜನವರಿ ೬-ರಂದು, ಸಾಹಿತ್ಯಗೋಷ್ಟಿಯಲ್ಲಿ, ಶ್ರೀ ಸುರೇಶ್ ಮತ್ತು ಶ್ರೀಮತಿ ವಿಜಯಾ ಅವರು ತಮ್ಮ ಹಿರಿಯರನ್ನು ಆತ್ಮೀಯವಾಗಿ ಸ್ಮರಿಸಿಕೊಂಡು ಅವರ ಬಗ್ಗೆ ಒಂದು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.
ಸು.ರಂ.ಎಕ್ಕುಂಡಿಯವರ ಕುರಿತ ಮತ್ತಷ್ಟು ವಿವರಗಳನ್ನು ಕಲೆ ಹಾಕುವುದಾದರೆ – ಎಕ್ಕುಂಡಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ವೃತ್ತಿಜೀವನ – ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ,ಬಂಕಿಕೊಡ್ಲದಲ್ಲಿ. ನಿವೃತ್ತ ಜೀವನ ಬೆಂಗಳೂರು -ಮೈಸೂರು.
ಭಾಗವತರ ಪ್ರಶ್ನೆಗೆ ಉತ್ತರ ಕೊಡುವುದಾದರೆ – ಕವಿಯೊಬ್ಬನನ್ನು ಒಂದು ಜಾತಿ/ಉಪ ಜಾತಿ/ ಕೋಮಿಗೆ ಕಟ್ಟಿ ಹಾಕುವುದು ಸಣ್ಣತನವಾಗುತ್ತದೆ. ಆದರೂ ನಿಮ್ಮ ಕುತೂಹಲಕ್ಕೆ ಹೇಳುತ್ತಿದ್ದೇನೆ. ಎಕ್ಕುಂಡಿಯವರು ನೀವು ಅನುಮಾನಿಸಿದಂತೆ ಹವ್ಯಕರಲ್ಲ. ಸಂಪ್ರದಾಯಸ್ಥ ಮಾಧ್ವ ಬ್ರಾಹ್ಮಣರು. ನಾನು ಎಲ್ಲೋ ಓದಿದ್ದ ಈ ಮಾಹಿತಿ ತಪ್ಪಾಗಿದ್ದರೆ ನನ್ನನ್ನು ಯಕ್ಕಾಮಕ್ಕ ಬೈಯಬೇಡಿ ಆಮೇಲೆ 🙂
ಎಕ್ಕುಂಡಿಯವರ ನಿಧನದ ವರ್ಷ ನನಗೆ ತಿಳಿದಿಲ್ಲ. ಗೊತ್ತಿದ್ದವರು ತಿಳಿಸಿ.
ಎಕ್ಕುಂಡಿ – http://www.kamat.com/kalranga/kar/writers/6110.htm
ಸುಬ್ರಾಯ ಚೊಕ್ಕಾಡಿ – http://thatskannada.oneindia.in/sahitya/kavana1/190105chokkadi.html
ವೇಣಿ ಬರೆದಿರುವುದು ಸರಿ ಇದೆ. ಸು.ರಂ.ಎಕ್ಕುಂಡಿಯವರು ಸಂಪ್ರದಾಯಸ್ಥ ಮಾಧ್ವ ಬ್ರಾಹ್ಮಣರು. ಹೋದ ಮಧ್ವ ನವಮಿ ದಿನ ವಿಜಯ ಯಕ್ಕುಂಡಿ ಅವರ ಇಡೀ ಸಂಸಾರ ಲಿವರ್ ಮೋರ್ ದೇವಸ್ಥಾನಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಾಗೃತಿಯವರೆ, ಎಕ್ಕುಂಡಿ ಮತ್ತು ಚೊಕ್ಕಾಡಿಯವರ ಭಾವಚಿತ್ರಗಳಿರುವ ಲಿಂಕುಗಳನ್ನು ಒದಗಿಸಿದ್ದಕ್ಕೆ ಧನ್ಯವಾದಗಳು.
ಮೊದಲಬಾರಿ ತುಳಸಿವನಕ್ಕೆ ಆಗಮಿಸಿರುವ ನಿಮಗೆ ಭವ್ಯ ಸ್ವಾಗತ 🙂 “ಜಾಗೃತಿ” ಎನ್ನುವ ನಿಮ್ಮ ಹೆಸರು ತುಂಬಾ ಇಷ್ಟವಾಯಿತು.
ತ್ರಿವೇಣಿ, ನಂಗೆ ನಿಮ್ಮ ತುಳಸಿವನದ ಕಂಪು ತುಂಬ ಮುದ ನೀಡ್ತು. ಆಗಾಗ ಪ್ರದಕ್ಷಿಣೆ ಹಾಕ್ಲಿಕ್ಕೆ ಬರ್ತಿರ್ತೀನಿ.