ಕವಿ – ಬಿ.ಆರ್.ಲಕ್ಷ್ಮಣರಾವ್
ಸಂಗೀತ – ಸಿ.ಅಶ್ವಥ್
ಗಾಯಕ – ಸಿ.ಅಶ್ವಥ್
ಮನಸೇ ನನ್ನ ಮನಸೇ
ಏನಾಗಿದೆ ನಿನಗೆ?
ಏಕೆ ಅವಳ ಕಹಿ ನೆನಪೇ
ಜೇನಾಗಿದೆ ನಿನಗೆ?
ಬೇಡವೆಂದರೂ ಏಕೆ ತರುವೆ
ಕಣ್ಮುಂದೆ ಅವಳ ಚಿತ್ರ?
ಬೂಟಾಟಿಕೆ ಆ ನಾಟಕ
ಅವಳ ವಿವಿಧ ಪಾತ್ರ !
ಪದೆಪದೇ ಮತ್ತದೇ ಜಾಗಕ್ಕೆ
ನನ್ನ ಸೆಳೆವೆ ಏಕೆ?
ಕಂಡು ಮರುಗಲು ಕುಸಿದ ಅರಮನೆ
ಉರುಳಿದ ಪ್ರೇಮ ಪತಾಕೆ
ಮಣ್ಣಾಗಿದೆ ನನ್ನ ಪ್ರೀತಿ
ಹೃದಯದ ಗೋರಿಯಲ್ಲಿ
ಗೋರಿಯನೇಕೆ ಬಗೆಯುವೆ?
ಮೋಹದ ಹಾರೆಯಲ್ಲಿ
* * * * *
“ಪ್ರೀತಿಯನ್ನೇಕೆ ಬಗೆಯುವೆ
ಮೋಹದ ಹಾರೆಯಲ್ಲಿ ”
ಇದು ಅದ್ಭುತವಾದ ಸಾಲು. ಅಶ್ವಥ್ ಕಂಠ ಈ ಹಾಡಿಗೆ ಯಾಕೊ ಹೊಂದೊಲ್ಲ ಅನ್ನಿಸ್ತು. ಸಂಗೀತ ಚೆನ್ನಾಗಿದೆ.
ಇದನ್ನು ಇಲ್ಲಿ ಹಾಕಿದಕ್ಕೆ ಧ.ವಾ.ಗಳು
ಇಂತಿ
ಭೂತ
ಬಹುಷಃ ಭಗ್ನ ಗೀತೆಗಳಲ್ಲಿ ಹೃದಯವನ್ನು ಹೆಚ್ಚು ಹೋಲಿಸುವುದು ಗೋರಿಗೆ ಅನಿಸುತ್ತೆ.ಅದು ಬಿಟ್ಟರೇ ಕನ್ನಡಿ, ಹಾಲು..?
“ಬಹುಷಃ ಭಗ್ನ ಗೀತೆಗಳಲ್ಲಿ ಹೃದಯವನ್ನು ಹೆಚ್ಚು ಹೋಲಿಸುವುದು ಗೋರಿಗೆ ಅನಿಸುತ್ತೆ.ಅದು ಬಿಟ್ಟರೇ ಕನ್ನಡಿ, ಹಾಲು..? “
ಶಿವು, ಅದೇನಾದರೂ ಆಗಿರಲಿ, ಆ ಬಗ್ಗೆ ಈಗ ನೀವು ತಲೆ ಕೆಡಿಸಿಕೊಳ್ಳಬೇಡಿ 🙂