ಕವಿ – ಬಿ.ಆರ್. ಲಕ್ಷ್ಮಣರಾವ್
ಸುಬ್ಬಾ ಭಟ್ಟರ ಮಗಳೇ
ಇದೆಲ್ಲಾ ನಂದೇ ತಗೊಳ್ಳೇ
ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ
ಆಕಾಶದ ಸೀರೆ
ದಿಗಂತಗಳೇ ಮೇರೆ
ಮುಂಜಾವಿನ ಬಂಗಾರದ ಬೆಟ್ಟ
ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕೆ ಎಣೆಯೆಲ್ಲಿ?
ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿಜಿಗಿ ಒಡವೆ ದುಕಾನು
ಆರಿಸಿಕೊ ಬೇಕೇನು?
ಚಿಕ್ಕೆ ಮೂಗುತಿ ಚಂದ್ರ ಪದಕಕ್ಕೆ
ನೀಹಾರಿಕೆ ಹಾರ
ನನ್ನ ಸಂಪತ್ತೆಷ್ಟು ಅಪಾರ!
ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು
ಇನ್ನು ನಿನ್ನ ಸೊತ್ತು
ಸುಗಂಧ ಬೀರುವ ವಸಂತ ಪವನ
ಸಪ್ತವರ್ಣದ ಕಮಾನು
ನಿನಗೇ ಹೌದು !
ಪಾತರಗಿತ್ತಿಯ ಪಕ್ಕವನೇರಿ
ಧೂಪಡಕಾನಿಗೆ (?) ಹಾರಿ
ಪ್ರಾಯದ ಮಧು ಹೀರಿ
ಜುಳುಜುಳು ಹರಿಯುವ ಕಾಲದ ಹೊಳೆಯಲಿ
ತೇಲುವ ಮುಳು ಮುಳುಗಿ
ದಿನ ಹೊಸತನದಲಿ ಬೆಳಗಿ
* * * * * *
ಭಟ್ಟರ ಮಗಳನ್ನು ನೋಡಿ, ಖುಶಿಯಲ್ಲಿ ಮಾತು ಹೊರಡುತ್ತಿಲ್ಲ. ಸ್ವಲ್ಪ ಸಮಯ ಕೊಡಿಃ-))
ತ್ರಿವೇಣಿಯವರೇ,
ಭಟ್ಟರ ಮಗಳನ್ನು ಬೇಗ ಕರೆತಂದು ಒಳ್ಳೆಯ ಕೆಲಸ ಮಾಡಿದೀರಿ.ನಮ್ಮ ಭಾಗವತರ ಮನಕ್ಕೆ ಸಂತಸವಾಗಿರಬಹುದು.
ಭಾಗವತರೇ,
ಶುಭವಾಗಲಿ 😉
>>>ಧೂಪಡಕಾನಿಗೆ
ಧೂಪದ ಕಾನನವೇ?
ಎನಾದರೂ ಇರಲಿ ಅಲ್ಲಿಗೆ ಹೋಗಲು ಪಾತರಗಿತ್ತಿ ಪಕ್ಕ ಬೇಕಂತೆ 🙂
ಭಾಗವತರೇ, ನೀವು ನಮ್ಮ ಕವಿಗಳ ಚಂದಚಂದದ ಕವನಗಳನ್ನು ನೆನಪು ಮಾಡಿಕೊಡುತ್ತಿದ್ದೀರಿ. ನಿಮ್ಮಿಂದಾಗಿ ನಮಗೂ ನಿತ್ಯ ಹಾಡು ಹಬ್ಬ! 🙂
ಶಿವು, ಹೌದು, ಧೂಪದ ಕಾನು ಇರಬಹುದು, ಕವಿತೆಯನ್ನು ನೋಡಿ ಸರಿಪಡಿಸುತ್ತೇನೆ. ಅಲ್ಲಿಗೆ ಹೋಗಬಯಸುವವರು ಪಾತರಗಿತ್ತಿ ಪಕ್ಕವನ್ನು ನಿಮ್ಮಿಂದ ಎರವಲು ಪಡೆಯಬೇಕಾಗಬಹುದು. 🙂