ಕತೆಗಾರರು:- sritri, ಶ್ರೀನಿಧಿ.ಡಿ.ಎಸ್ , ಸುನಾಥ, ಮನಸ್ವಿನಿಜಗಲಿ ಭಾಗವತ, ಸುಶ್ರುತ ದೊಡ್ಡೇರಿ, shiv, ಜ್ಯೋತಿ,

——————————————————————————————————————————————————————-

     ’ಈ ಬೆಂಗಳೂರಿನ ಹೊಗೆ, ಧೂಳು ಕುಡಿದು ಸಾಕಾಗಿದೆ ಕಣ್ರೊ. ಒಂದು ಹದಿನೈದು ದಿನಗಳಾದರೂ ಊರಿನಲ್ಲಿ ನೆಮ್ಮದಿಯಾಗಿದ್ದು ಬರುತ್ತೀನಿ’- ಎಂದು ಗೆಳೆಯರಿಗೆಲ್ಲಾ ಹೇಳಿ ಬಂದಿದ್ದ ಸುದೀಪನಿಗೆ ಎರಡನೆಯ ದಿನಕ್ಕೇ ಬೆಂಗಳೂರು ನೆನಪಾಗತೊಡಗಿತ್ತು.  ’ಈ ಬೆಂಗಳೂರಿನ ಗುಣವೇ ಹಾಗೆ. ಒಮ್ಮೆ ಈ ಮಾಯಾನಗರಿ ಹೊಕ್ಕವರಾರು ಹೊರಗೆ ಹೋಗಲು ಬಯಸುವುದಿಲ್ಲ. ಈ ಊರನ್ನು ಮೇಲೆ ದೂರುತ್ತಲೇ ಒಳಗೇ ಪ್ರೀತಿಸತೊಡಗುತ್ತಾರೆ’-  ಬೆಂಗಳೂರಿನ ಮಲ್ಲೇಶ್ವರದಲ್ಲಿ ಹುಟ್ಟಿ ಬೆಳೆದು, ಅದನ್ನೇ ಜಗತ್ತೆಂದು ಭಾವಿಸಿಕೊಂಡಿರುವ ಗೆಳೆಯ ಕಿಟ್ಟಿ ಹೇಳುತ್ತಿದ್ದ ಮಾತು ನಿಜವೆನ್ನಿಸಿತು.  

 ಅಲ್ಲಿದ್ದಾಗ ಪೇಪರ್ ಓದಲೂ ಪುರುಸೊತ್ತಾಗದಂತಹ ವೇಗದ ಬದುಕು. ಇಲ್ಲಿ ಗಡಿಯಾರದ ಮುಳ್ಳು ಕಾಲು ಮುರಿದುಕೊಂಡಂತೆ ಕುಂಟುತ್ತಾ ಸಾಗುತ್ತಿದೆ. ಹೊರಗಾದರೂ ಸುತ್ತಾಡಿಬಂದರೆ ಮನಸ್ಸಿಗೆ ಕವಿದಿದ್ದ ದುಗುಡ ದೂರಾಗಬಹುದೆಂದುಕೊಂಡು-

 ’ಅಮ್ಮಾ… ನಾನು ಹಾಗೇ ತೋಟಕ್ಕೆ ಹೋಗಿ ಸುತ್ತಾಡಿಕೊಂಡು ಬರ್ತೀನಿ. ಊಟಕ್ಕೆ ಕಾಯಬೇಡಿ’ ಎಂದು ಒಳಗೆಲ್ಲೋ ಇದ್ದ ತಾಯಿಗೆ ಕೇಳುವಂತೆ ಜೋರಾಗಿ ಕೂಗಿ ಹೇಳಿ ಚಪ್ಪಲಿ ಮೆಟ್ಟಿ ಹೊರನಡೆದ. 

 ಸುಡು ಬಿಸಿಲಿನಲ್ಲಿ ನಡೆದು ಬಂದ ಅವನಿಗೆ ಒತ್ತಾಗಿ ಹರಡಿದ್ದ ಮಾವಿನ ಮರದ ನೆರಳು ಹಿತ ತಂದಿತು. ಅಲ್ಲೇ ಇದ್ದ ಕಲ್ಲು ಬಂಡೆಯೊಂದರ ಮೇಲೆ ಕುಳಿತ.

ಯಾಕೆ ಈ ಬಾರಿ ತನಗೆ ಊರು ಬೇಸರವಾಗುತ್ತಿದೆ? ಈ ತಳಮಳಗಳಿಗೆಲ್ಲಾ ಸುನಯನ ಕಾರಣಳೇ?  ಸುನಿ, ನೈನಾ, ನಯನ, ನಯ್ನಿ ಎಂದೆಲ್ಲಾ ಕರೆಯಲ್ಪಡುವ ’ಸುನಯನ’ ಎಂಬ ಚೆಲುವೆಯ ನೆನಪಾದೊಡನೆ ಅವನೆದೆಯಲ್ಲಿ ಮೋಹದೊಂದು ಮೋಹನ ರಾಗ ಮೆಲುವಾಗಿ ಮಿಡಿಯತೊಡಗಿತು.

ಮರುಕ್ಷಣವೇ ಸುದೀಪ ವಿಷಾದದಾಳದಲ್ಲಿ ಹೂತು ಹೋದ.  ಇನ್ನೆಲ್ಲಿಯ ಸುನಯನ? ಅಷ್ಟಕ್ಕೂ ಅವಳು ತನಗೇನಾಗಬೇಕು?

ಅವಳನ್ನು ಮರೆಯಲೆಂದೇ ಇದ್ದ ಕೆಲಸಗಳನ್ನೆಲ್ಲಾ ಬಿಟ್ಟು ವಿಶ್ರಾಂತಿಯ ನೆಪದಲ್ಲಿ ತಾನು ಇಲ್ಲಿಗೆ ಬಂದಿದ್ದಲ್ಲವೇ?  ಇಲ್ಲಿಯೂ ಬೆನ್ನತ್ತಿ ಬಂದಿರುವ ಅವಳ ನೆನಪು!   ಏನೇನೋ ಯೋಚನೆಗಳು,ಯಾವುದೋ ನೆನಪುಗಳ ಅಲೆಯಲ್ಲಿ ತೇಲುತ್ತಾ ಅದೆಷ್ಟೋ ಹೊತ್ತು ಮಂಕನಂತೆ ಕುಳಿತೇ ಇದ್ದ.  ಮಧ್ಯಾಹ್ನ  ಸಂಜೆಯಾಗಿದ್ದೂ ಅವನಿಗೆ ಅರಿವಾಗಿರಲಿಲ್ಲ.  ಇನ್ನೂ ಎಷ್ಟು ಹೊತ್ತು ಹಾಗೆಯೇ ಕುಳಿತಿರುತ್ತಿದ್ದನೋ. ಆದರೆ ಅಷ್ಟರಲ್ಲಿ-

  “ಸುದೀಪಾ.. ಸುದೀಪಾ.. ಎಲ್ಲಿದೀಯೋ? ಎಲ್ಲಾ ಕಡೆ ಹುಡುಕಿ ಸಾಕಾಯ್ತು. ಬೇಗ ಬಾರೊ” –  ಗಾಬರಿ ತುಂಬಿದ್ದ ದನಿಯೊಂದು ಕೇಳಿಸಿ ಬೆಚ್ಚಿ ತಿರುಗಿ ನೋಡಿದ. 

     ಅಲ್ಲಿ ಅವಳು ನಿಂತಿದ್ದಳು, ಕನ್ನಿಕಾ. ಪಕ್ಕದ ಮನೆ ನಾರ್ಣಣ್ಣನ ಮಗಳು. “ಥೋ ಮಾರಾಯಾ , ನಿನ್ನ ಎಲ್ಲಿ ಅಂತ ಹುಡ್ಕೋದು, ಪಾಪ ನಿಮ್ಮಮ್ಮ ಗಾಭರಿ ಮಾಡ್ಕೊಂಡಿದ್ರು. ತಡೀರಿ ನಾನು ಹುಡ್ಕಿ ಕರ್ಕೊಂಡ್ ಬರ್ತೀನಿ ಅಂದೆ, ಬೆಳಗ್ಗೆ ನಂತ್ರ ಏನೂ ತಿಂದೂ ಇಲ್ವಂತೆ ನೀನು, ಬೇಗ್ ಬಾ” ಸುದೀಪ ಮೆಲ್ಲನೆ ಕುಳಿತಲ್ಲಿಂದೆದ್ದು ಅವಳ ಕಡೆ ಹೊರಟ.

     “ಬಂದೆ ತಡ್ಕಳೇ ಕುನ್ನಿಕಾ, ನಮ್ ಅಮ್ಮಂಗಿಂತಾ ನಿಂಗೇ ಹೆದ್ರಿಕೆ” ಅಂದು ಮುಗಿಸುವಷ್ಟರಲ್ಲಿ ಅರ್ಧ ತಿಂದ ಮಾವಿನಕಾಯಿ ಫಡ್ ಅಂತ ಅವನ ಎದೆಗೆ ಹೊಡೆಯಿತು. “ಕುನ್ನಿಕಾ” ಅಂದಿದ್ದಕ್ಕೆ ಶಿಕ್ಷೆ ಇದು ಅಂತಂದು ಓಡಿದಳು ಕನ್ನಿಕಾ ಅಲ್ಲಿಂದ .ಸುದೀಪನಿಗೆ ಅವಳನ್ನ ಹಾಗೆ ಛೇಡಿಸಿಯೇ ಅಭ್ಯಾಸ , ಅವನಿಗಿಂತ ನಾಲ್ಕೈದು ವರ್ಷ ಸಣ್ಣವಳು ಅವಳು.   ಮನೆಗೆ ಬರುವಷ್ಟರಲ್ಲಿ ಅಮ್ಮನ ಮುಖ ಕೆಂಪು. 

     ಸುದೀಪನನ್ನು ಅಂಗೈಯಲ್ಲಿಟ್ಟುಕೊಂಡು ಬೆಳೆಸಿದ್ದರು ಸೀತಾಬಾಯಿ. ಸುದೀಪನ ತಂದೆ ತೀರಿದಾಗ ಅವನಿಗೆ ಹತ್ತು ವರ್ಷ.ಆತ ಬೆಳೆದು,ಶಿಕ್ಷಣ ಪೂರೈಸಿ, ಉದ್ಯೋಗಕ್ಕಾಗಿ ಬೆಂಗಳೂರು ಸೇರುವವರೆಗೆ ಸೀತಾಬಾಯಿ ಇನ್ನಿಲ್ಲದ ಕಷ್ಟಪಟ್ಟಿದ್ದರು. ಈ ಅವಧಿಯಲ್ಲಿ ಸೀತಾಬಾಯಿಗೆ ನೆರವಾಗಿ ನಿಂತವರು ಪಕ್ಕದ ಮನೆ ನಾರ್ಣಪ್ಪ ಹಾಗು ಅವರ ಹೆಂಡತಿ ಲಕ್ಷ್ಮಿ. ಮಗಳು ಕನ್ನಿಕೆಯಂತೂ ಸೀತಾಬಾಯಿಯವರ ಮನೆಯಲ್ಲಿಯೆ ಇರುತ್ತಿದ್ದಳು.ಅವಳಿಗೂ ಸುದೀಪನಿಗೂ ಬಾಲ್ಯದಿಂದಲೂ ಒಡನಾಟ. ಕನ್ನಿಕೆಯನ್ನು ಸೊಸೆಯಾಗಿ ಮನೆ ತುಂಬಿಸಿಕೊಳ್ಳುವ ಕನಸು ಸೀತಾಬಾಯಿಯದು. ಆದರೆ ಸುದೀಪನಿಗೆ ಕನ್ನಿಕೆಯ ಮೇಲೆ ಇದ್ದದ್ದು ತಂಗಿಯ ಮೇಲಿನ ಪ್ರೀತಿ.  

     ಕನ್ನಿಕೆ ಚೆಲುವೆ,ಜಾಣೆ. ಅವಳಲ್ಲಿ ಸುದೀಪನೊಂದಿಗಿನ ಬಾಲ್ಯದ ಸ್ನೇಹ,ಈಗ ಒಲವಾಗಿ ಅರಳಿತ್ತು. ಸುದೀಪನಲ್ಲಿ ತನ್ನ ಜೀವನವನ್ನೇ ಕಂಡಿದ್ದಳು,ಅವನಿಗಾಗಿ ಕನಸನ್ನ ಹೆಣೆದಿದ್ದಳು.ದೂರದ ಬೆಂಗಳೂರಿನಿಂದ ಆತ ಬರುವ ಸುದ್ದಿ ಸಿಕ್ಕರಾಯಿತು, ಸುಗ್ಗಿಯ ಹಿಗ್ಗು ಕನ್ನಿಕೆಗೆ.ಸೀತಾದೇವಿ ಸೊಸೆಯೆಂದು ಕರೆದಾಗ ನಾಚಿ ನೀರಾಗುತ್ತಿದ್ದಳು.ಎಂದೂ ಸಂಭ್ರಮ,ಸಂತೋಷದಲ್ಲಿರುವ ಸುದೀಪನ ಮುಖ ಈ ಬಾರಿ ಬಾಡಿ ಹೋಗಿರುವುದ ಕಂಡು ದಿಗಿಲಾಗಿದ್ದಳು .ಏನಾಯಿತು ಎಂದು ಅವನನ್ನ ಕೇಳುವ ಧೈರ್ಯ ಅವಳಲ್ಲಿರಲಿಲ್ಲ.

ಏಲ್ಲಿ ಹೋಗಿದ್ಯೊ? ಹುಡ್ಕಿ ಹುಡ್ಕಿ ಸಾಕಾಯ್ತು’ ಅಂತ ಸೀತಾಬಾಯಿ ಸಿಡಿಮಿಡಿಗುಟ್ಟಿದರು. ಸುದೀಪ ಉತ್ತರಿಸದೆ ಒಳಮನೆ ಹೊಕ್ಕ.ಮಗ ಅನ್ಯಮನಸ್ಕನಾಗಿದ್ದು ಸೀತಾಬಾಯಿಗೆ ದಿಗಿಲು ಹುಟ್ಟಿಸಿತ್ತು.

                                                               ******************************
     ನೀಲಿಕೇರಿ ಹೊನ್ನಾವರದಿಂದ ೨೫ ಕಿ.ಮಿ. ರಾತ್ರಿ ೮ ಗಂಟೆಗೆ ಕೊನೆಯ ಟೆಂಪೋ. ಸ್ನೇಹಿತನ ಮನೆಗೆ ಹೊರಟಿದ್ದ ಸುದೀಪ ಸರಿಯಾದ ಸಮಯಕ್ಕೆ ಹೊರಡದೆ ಕೊನೆಯ ಟೆಂಪೋದಲ್ಲಿ ಸಿಕ್ಕಿಹಾಕಿಕೊಂಡಿದ್ದ. ಅವನ ದುರದೃಷ್ಟಕ್ಕೆ ಅವತ್ತು ಜಡಿಮಳೆ.

     ನೀಲಿಕೇರಿಯಲ್ಲಿ ಸುದೀಪ ಇಳಿದಾಗ ರಾತ್ರಿ ೯ ಗಂಟೆ. ಅದೇ ಮೊದಲ ಬಾರಿ ಉತ್ತರಕನ್ನಡಕ್ಕೆ ಬಂದಿದ್ದ ಸುದೀಪನಿಗೆ ದಿಕ್ಕುತೋಚದಾಗಿತ್ತು. ಗೆಳೆಯನಿಗೆ ಬರುತ್ತೇನೆಂದು ಹೇಳದೆ ಹೊರಟಿದ್ದ. ಹೊರಗೆ ಕಾರ್ಗತ್ತಲು, ಅದಕ್ಕೆ ಸಾಥಿಯಾದ ಜಡಿಮಳೆ….ಈಗೆಲ್ಲಿ ಹೋಗುವುದು?…

“ಎಲ್ಲಿ ಹೋಗವ್ವು?” ಹಿಂದುಗಡೆಯಿಂದ ಹುಡುಗಿಯ ಧ್ವನಿ.
“ಗಣಪ ಭಟ್ಟರ ಮನೆಗೆ ಹೋಗ್ಬೇಕಾಗಿತ್ತು. ಆದ್ರೆ ನಾನು ಇದೇ ಮೊದ್ಲ ಬಾರಿ ಬರ್ತಾ ಇರೋದು. ದಾರಿ ಗೊತ್ತಿಲ್ಲ. ಮಂಗ್ಳೂರಿಂದ ಬಂದಿದೀನಿ”
“ಓಹ್. ಮತ್ತೆ ಈಗ ಏನು ಮಾಡ್ತೀರಾ? ನೀವು ಬರೋದು ಅವ್ರಿಗೆ ಗೊತ್ತ? ಅವ್ರು ಬರ್ತಾರಾ?”
“ಇಲ್ಲ. ಹೇಳಿಲ್ಲ. ಫೋನು ಹೋಗ್ತಿಲ್ಲ”.
“ಹಾಗಾದ್ರೆ, ನಮ್ಮನೆಲಿ ಉಳ್ಕೊಳ್ಳಿ. ಬನ್ನಿ”
“ನಿಮ್ಮನೇಲಿ…….” ಸುದೀಪ ಉಗುಳು ನುಂಗಿದ.
“ಆಡ್ಡಿಲ್ಲ. ದಾಕ್ಷಿಣ್ಯ ಮಾಡ್ಬೇಡಿ ಬೆಳಿಗ್ಗೆ ಅವ್ರ ಮನೆಗೆ ಕರ್ಕೊಂಡು ಹೋಗ್ತೆನೆ”

     ಸುದೀಪನಿಗೆ ಇದ್ದದ್ದು ಎರಡೇ ಆಯ್ಕೆ. ಮಳೆಯಲ್ಲಿ ನೆನೆದು ಥರಗುಡುವುದು, ಇಲ್ಲಾ ಅಪರಿಚಿತರ ಮನೆಯಲ್ಲುಳಿಯುವುದು.
“ಆಯ್ತು.” ಅರೆಮನಸ್ಸಿನ ಉತ್ತರ.ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿತ್ತು.
ಕತ್ತಲಲ್ಲಿ ಆಕೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಕೊಡೆ ಬಿಡಿಸಿದವಳೆ “ಬನ್ನಿ” ಅಂತ ಕರೆದಳು. ಕೊಡೆ ತಾರದೆ ತೋಯ್ದು ತೊಪ್ಪೆಯಾಗಿದ್ದ ಸುದೀಪ, ಮೊದಲು ಹಿಂದೇಟು ಹಾಕಿದರೂ, ವಿಧಿ ಇಲ್ಲದೆ ಒಪ್ಪಿಕೊಂಡ. ಸುದೀಪನಲ್ಲಿ ಏನೋ ವಿಚಿತ್ರ ಅನುಭವ..ಕಾರ್ಗತ್ತಲು. ಜೊತೆಯಲ್ಲೊಬ್ಬಳು ಅಪರಿಚಿತ ಹುಡುಗಿ..ಅದೂ ಒಂದೇ ಕೊಡೆಯಡಿಯಲ್ಲಿ…
ಏನು ಮಾತನಾಡುವುದು ಗೊತ್ತಾಗಲಿಲ್ಲ…ಅನುಮಾನ, ಕಾತರ, ಕುತೂಹಲ, ಪುಳಕ..ಎಲ್ಲ ಏಕಕಾಲದಲ್ಲಿ…
ದಾರಿಯುದ್ದಕ್ಕೂ ಅವರು ಮೂವರೇ. ಸುದೀಪ, ಆಕೆ… ಮತ್ತು ಮೌನ… ಸುಮಾರು ೫ ನಿಮಿಷ ನಡೆದಿರಬಹುದು ಆ ಮೌನ ಅಸಹನೀಯವೆನ್ನಿಸತೋಡಗಿತು… ಸಣ್ಣಗೆ ಕೆಮ್ಮಿದ.,,

“ಯಾಕೆ ಈ ಹೊತ್ತಲ್ಲಿ ಬಂದ್ರಿ?” ಆಕೆ ಆರಂಭಿಸಿದಳು.
“ಸ್ವಲ್ಪ ಕೆಲ್ಸ ಇತ್ತು ಮುಗ್ಸಿ ಹೊರಡೋವಾಗ ತಡ ಆಯ್ತು”
“ಗಣಪ ಭಟ್ಟರು ನಿಮಗೆ ಏನಾಗ್ಬೇಕು?”
“ಅವ್ರ ಮಗ ನನ್ನ ಇಂಜಿನಿಯರಿಂಗ ಸಹಪಾಠಿ”
“ಓಹ್. ಹಾಗಾದ್ರೆ ನೀವು ಮೈಸೂರಲ್ಲಿ ಓದಿದ್ದಾ?”
“ಹೌದು. ನಿಮಗೆ ಅವ್ರ ಮಗ ಗೊತ್ತಾ?”
“ಒಂದೆ ಊರಲ್ವಾ? ಊರಲ್ಲಿ ಎಲ್ಲರ ವಿಷ್ಯ ಎಲ್ಲರಿಗೂ ಗೊತ್ತಿರತ್ತೆ”.
“ಅದೂ ಹೌದು”
“ನಿಮ್ಮ ಹೆಸ್ರು?”
“ಸುದೀಪ. ನಿಮ್ದು?”
“ಸುನಯನ”…
“ಸುನಯನ.. ಹೆಸರು ತುಂಬಾ ಚೆನ್ನಾಗಿದೆ..”
“ಥ್ಯಾಂಕ್ಸ್”

     ಬಸ್ಸಿಳಿದಾಗಕ್ಷಣ ಉಧ್ಭವಿಸಿದ್ದ ಕಗ್ಗತ್ತಲೆಯಲ್ಲಿ ಮೊದಲು ಕಂಡ ಬೆಳಕೆಂದರೆ ಅದು ಅವಳ ಕಣ್ಣಿನದ್ದು. ‘ಸುನಯನ.. ಹೌದೌದು..!’ -ಮನಸಿನಲ್ಲೇ ಅಂದುಕೊಂಡ ಸುದೀಪ. ಕೊಡೆಯಡಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದ ಸುದೀಪನಿಗೆ ಹರಿವ ಮಳೆನೀರಲೆಗಳ ನಡುವೆ ಹೆಜ್ಜೆಯಿಡುತ್ತಿದ್ದ ಅವಳ ಪಾದ ಈಜುವ ಬಿಳಿಮೀನಿನಂತೆ ಕಾಣುತ್ತಿತ್ತು. ಅವಳ ಕಣ್ಣನ್ನು ಮತ್ತೊಮ್ಮೆ ನೋಡಬೇಕೆಂಬ ಬಯಕೆಯಾಯಿತು. ಆದರೆ ಹಾಗೆ ಫಕ್ಕನೆ ತಲೆ ಎತ್ತಿ ಪಕ್ಕಕ್ಕೆ ನೋಡಲು ಮುಜುಗರವಾಯಿತು. ಆದರೂ ಧೈರ್ಯ ಮಾಡಿ ಆಕಡೆ ಏನನ್ನೋ ನೋಡುವವನಂತೆ ಕತ್ತು ಪಕ್ಕಕ್ಕೆ ತಿರುಗಿಸಿ ಅವಳ ಮುಖವನ್ನೊಮ್ಮೆ ನೋಡಿದ. ಅದೆಷ್ಟೇ ಚಾಣಾಕ್ಷತೆಯಿಂದ ನೋಡಿದ್ದರೂ ಅವಳಿಗೆ ಇವನ ಕುತೂಹಲ ಅರ್ಥವಾಗಿಹೋಯಿತು. ಹೂಬಿರಿದಂತೆ ನಕ್ಕಳು. ಸೇವಂತಿಗೆಯ ಎಸಳುಗಳಂತಹ ಜೋಡಣೆಯ ಪುಟ್ಟಪುಟ್ಟ ಬಿಳಿ ಹಲ್ಲುಗಳ ಬೆಳಕು ಅವರ ಮನೆವರಿಗಿನ ದಾರಿಗೆ ಬೆಳಕಾಯಿತು.

“ಹುಷಾರಿ” ದಣಪೆ ತೆಗೆದು ಅವನು ದಾಟುವಾಗ ಉಲಿದಳು ಸುನಯನ. ಲಾಟೀನು ಹಿಡಿದ ಬಿಳಿಪಂಚೆಯ ವ್ಯಕ್ತಿಯೊಂದು ಮನೆಯ ಮುಂಬಾಗಿಲಿನಲ್ಲಿ ಕಾಣಿಸಿಕೊಂಡಿತು. ಅದು ಇವಳ ತಂದೆಯಿರಬೇಕೆಂದು ಭಾವಿಸಿದ ಸುದೀಪ..  
     ಆ ಬಿಳಿಪಂಚೆ ವ್ಯಕ್ತಿ ಆ ಲಾಟೀನು ಸುದೀಪನ ಮುಖದ ಮುಂದೆ ಹಿಡಿದು ‘ಯಾವ ಊರಿನವ್ರು?’ ಅಂತಾ ಕೇಳೋವಷ್ಟರಲ್ಲೇ, ಸುನಯನ ‘ಇಲ್ಲಾ ಅಪ್ಪಾ, ಇವ್ರು ಬೆಂಗಳೂರಿನವರು, ಗಣಪ ಭಟ್ಟರ ಮನೆಗೆ ಹೋಗುತ್ತಿದ್ದರಂತೆ, ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು, ಕರಕೊಂಡು ಬಂದೆ’ ಅಂದಳು.

ಆಗ ಆ ವ್ಯಕ್ತಿ ‘ಗಣಪ ಭಟ್ಟರ ಮನೆಗೆ?’ ಎಂದು ಒಂದು ವಿಚಿತ್ರ ನೋಟ ಬೀರಿತ್ತು. ಒಳಗೆ ಹೋದ ಸುನಯನ, ತಲೆ ಒರಸಿಕೊಳ್ಳಲು ಟವೆಲ್ ಒಂದು ತಂದು ಸುದೀಪನ ಕೈಗಿತ್ತಳು. ಸುದೀಪಾ ತಲೆ ಒರಸಿಕೊಂಡು ಆ ಪಂಚೆಯ ವ್ಯಕ್ತಿ ಜೊತೆ ಮಾತಿಗೆ ಕುಳಿತ. ಯಾಕೋ ಎನು ಕೇಳಿದರೂ ಆ ವ್ಯಕ್ತಿ ಜಾಸ್ತಿ ಬಾಯಿ ಬಿಡ್ತಾ ಇಲ್ಲ ಅನಿಸ್ತು ಸುದೀಪನಿಗೆ. ಸ್ಪಲ್ಪೇ ಸಮಯದಲ್ಲಿ ಸುನಯನ ‘ಬನ್ನಿ ಊಟಕ್ಕೆ’ ಅಂತಾ ಕರೆದಾಗ, ಸುದೀಪನಿಗೆ ಆಶ್ಚರ್ಯ.’ಎಲಾ, ಇಷ್ಟು ಬೇಗ ಅಡುಗೆ ಹೇಗೆ ಮಾಡಿದಳು?’ ಅಂತಾ ಮನಸಿನಲ್ಲಿದ್ದ ಲೆಕ್ಕಾಚಾರ ಹೊಟ್ಟೆ ತಾಳದ ಮುಂದೆ ಮೂಲೆಗುಂಪಾಗಿ ಊಟದ ತಟ್ಟೆ ಮುಂದೆ ಕುಳಿತ.

ಹೊಟ್ಟೆ ಹಸಿದಿದ್ದ ಸುದೀಪ ಜಾಸ್ತಿ ಮಾತಾಡದೆ, ಊಟ ಮಾಡೆದ್ದ. ‘ಆಯಾಸವಾಗಿದೆ ನೀವು ಮಲಗಿ’ ಸುನಯನ ಅಂದಾಗ, ಸುದೀಪನಿಗೆ ಅಗಲೇ ನಿದ್ದೆಯ ಮಂಪರು.ಅದ್ಯಾವಾಗಲೋ ಸುದೀಪ ನಿದ್ದೆಗೆ ಜಾರಿದ್ದ.

     ಸುದೀಪ ಎದ್ದಾಗ ಸೂರ್ಯ ಮಾರು ಮೇಲೇರಿದ್ದ. ಸುನಯನಾಳ ಸೂಚನೆಯ ಮೇರೆಗೆ ಸ್ನಾನಾದಿಗಳನ್ನು ಮುಗಿಸಿ ನಾಷ್ಟಾ ಮಾಡಲು ಬಂದ ಸುದೀಪ. ಸುನಯನಳ ತಂದೆ ದೇವರ ಮನೆಯಲ್ಲಿ ಪೂಜೆಗೆ ಕುಳಿತು ಬಿಟ್ಟಿದ್ದರು. ಸುದೀಪನೊಬ್ಬನೆ ಉತ್ತರ ಕನ್ನಡದ ವಿಶಿಷ್ಟ ಭಕ್ಷವಾದ ಹಲಸಿನ ಎಲೆಯ ಮೇಲೆ ಬೇಯಿಸಿದ ಇಡ್ಲಿ ತಿನ್ನಲು ಸುರು ಮಾಡಿದ. ಉತ್ತರ ಕನ್ನಡದ ಜನ ಅತಿಥಿಸತ್ಕಾರದಲ್ಲಿ ಮೇಲುಗೈ. ಸುನಯನಾ ಹಾಗು ಅವಳ ತಾಯಿಯ ಎದುರು ಸುದೀಪನಿಗೆ ತಾನು ಅಪರಿಚಿತ ಎನ್ನುವ ಭಾವನೆ ಬರಲೆ ಇಲ್ಲ.ಇಡ್ಲಿ ಹಾಗು ಕಷಾಯ ಮುಗಿಸಿದ ಬಳಿಕ ಸುದೀಪನನ್ನು ಸುನಯನಾ ಅವನ ಗೆಳೆಯನ ಮನೆಗೆ ಕರೆದೊಯ್ದಳು. ಆದರೆ ಅಲ್ಲಿ ಸುದೀಪನಿಗೆ ನಿರಾಶೆ ಕಾದಿತ್ತು. ರಮೇಶನ ತಂದೆ ಗಣಪ ಭಟ್ಟರು, “ರಮೇಶ ಮುಂಬಯಿಗೆ ಹೋಗಿ ಒಂದ್ವಾರ ಆಯ್ತಲ್ಲ. ಇವತ್ ಸಂಜೀಗ್ ಬರ್ತೀನಂತ ಹೇಳಿದ್ದಾನಪ್ಪ! ನೀವ್ ಎಂತಾ ಮಾಡ್ತೀರಿ?” ಎಂದು ಕೇಳಿದರು. ಸುದೀಪನ ಈ ಸಮಸ್ಯೆಗೂ ಸುನಯನಾಳೆ ಪರಿಹಾರ ತೋರಿಸಬೇಕಾಯಿತು. “ರಮೇಶಣ್ಣ ಬರೂವರ್ಗೂ ನೀವ್ ನಮ್ಮೂರು ನೋಡೀರಂತೆ, ಬನ್ನಿ” ಏಂದು ಹೇಳಿ ಸುದೀಪನಿಗೆ ನೀಲೀಕೇರಿ ತೋರಿಸಲು ಕರೆದೊಯ್ದಳು.
     ಮುಂಗಾರು ಮಳೆಯ ಕೊನೆಯ ದಿನಗಳು ಅವು. ನೀಲೀಕೇರಿಯ ಸುತ್ತಲೂ ಇರುವ ಪರ್ವತರಾಶಿ ಹಸುರುಡುಗೆ ಉಟ್ಟಂತೆ ಶೋಭಿಸುತ್ತಿದೆ. ಸುದೀಪ ಎಂದೂ ನೋಡಿರದ ಬಣ್ಣ ಬಣ್ಣದ ಹೂವುಗಳು, ಹತ್ತು ಹೆಜ್ಜೆಗೊಂದರಂತಿಕ್ಕ ಚಿಕ್ಕ ಚಿಕ್ಕ ಜಲಪಾತಗಳು. ಈ ಮನೋಹರ ಪ್ರಕೃತಿಯ ನಡುವೆ ಸುನಯನಾ ವನದೇವತೆಯಂತೆ ಕಂಗೊಳಿಸುತ್ತಿದ್ದಾಳೆ. ಬೆಂಗಳೂರಿನಲ್ಲಿ ಕಾಂಕ್ರೀಟ್ ಕಾಡುಗಳು ಹಾಗು ಬಣ್ಣದ ಬೀಸಣಿಗೆಗಳನ್ನು ಮಾತ್ರ ನೋಡಿದ ಸುದೀಪನಿಗೆ ತಾನು ಗಂಧರ್ವಲೋಕದಲ್ಲಿ ಬಂದಿರುವೆನೇ ಎನ್ನುವ ಭ್ರಮೆಯಾಯಿತು.
ರಮೇಶ ಆ ದಿನ ಬರಲೇ ಇಲ್ಲ. ಸುದೀಪನಿಗೆ ಅನಿವಾರ್ಯವಾಗಿ ಮತ್ತೊಂದು ದಿನ ಅಲ್ಲಿ ತಂಗಬೇಕಾಗಿದ್ದು ಒಳಗೊಳಗೆ ಖುಶಿಯನ್ನೆ ಕೊಟ್ಟಿತು. ಮರುದಿನ ಸುನಯನಾ ಸುದೀಪನಿಗೆ ಹೊನ್ನಾವರದಿಂದ ಸ್ವಲ್ಪ ದೂರದಲ್ಲಿ ನಿರ್ಜನವಾದ ಕಾಡಿನಲ್ಲಿರುವ ಕಾನಕಾನೇಶ್ವರಿ ದೇವಸ್ಥಾನಕ್ಕೆ ಕರೆದೊಯ್ದಳು.
ಕಾಡಿನಲ್ಲಿ ಹೋಗುತ್ತಿರುವಾಗ ನಿಷ್ಕಳಂಕವಾದ ಹಾಗು ನಿಸ್ಸಂಕೋಚವಾದ ಸುನಯನಾಳ ಮಾತುಗಳಿಗೆ ಸುದೀಪ ಮಾರು ಹೋದ. ದೇವಿಗೆ ಹಣ್ಣು ನೈವೇದ್ಯ ಮಾಡಿ ತಾವೂ ಆ ಪ್ರಸಾದವನ್ನೆ ತಿಂದರು.
     ಏಕಾಏಕಿ ಮಳೆ ಪ್ರಾರಂಭವಾಯಿತು. ಸುನಯನಾಳ ಕೊಡೆಯೇ ಮತ್ತೆ ಇಬ್ಬರಿಗೂ ಆಸರೆ. ಬೀಸುಗಾಳಿಗೆ ಮಳೆ ಮುಖಕ್ಕೆ ರಾಚುತ್ತಿದೆ. ಒಮ್ಮೆಲೆ ಮಿಂಚಿದ ಮಿಂಚು ಸುನಯನಾಳ ಕಣ್ಣಲ್ಲಿ ಪ್ರತಿಫಲಿಸಿತು. ಸುದೀಪನ ಮನಸ್ಸಿನಲ್ಲಿ ಪ್ರೇಮದ ಕೋಲ್ಮಿಂಚು ಮಿಂಚಿತು. ತಟ್ಟನೆ ಅವಳ ಕೈಹಿಡಿದ ಸುದೀಪ, “ಸುನಯನಾ, ಐ ಲವ್ ಯೂ!” ಎಂದ.

     ಮತ್ತೊಂದು ಮಿಂಚಿನ ಜೊತೆಗೇ ಇವನತ್ತ ತಿರುಗಿದವಳ ಕಣ್ಣಲ್ಲಿಯೂ ಒಂದು ಮಿಂಚು. “ಹಾಗಂದ್ರೇನು?” ಬೆಳದಿಂಗಳಂಥ ನಗೆಯೊಂದಿಗೆ ಕತ್ತು ಓರೆಯಾಗಿಸಿ ಯಾವುದೋ ಮರದಲ್ಲಿ ಹಕ್ಕಿಯೊಂದು ಮಧ್ಯಮದಲ್ಲಿ ರಾಗವೆಳೆದಂತೆ ಕೇಳಿತ್ತು ಸುದೀಪನಿಗೆ. ಆದರೆ ಉತ್ತರಿಸದಾದ. ಹೌದು, ಹಾಗಂದರೇನು? “ನಾನು ನಿನ್ನನ್ನು ಪ್ರೀತಿಸುತ್ತೇನೆ” ಅಂದರೆ ಅದಕ್ಕೆ ಇದೇ ಅರ್ಥ ಬರೋದೇ ಇಲ್ಲ. ನನಗೆ ನಿನ್ನಲ್ಲಿ ಅನುರಕ್ತಿಯಿದೆ ಅಂದರೆ ಅದೂ ಇವಳಿಗೆ ಅರ್ಥವಾಗದಿದ್ದರೆ? ಅಲ್ಲದೆ, ಇವಳು ಕೇಳುವ ರೀತಿ ನೋಡಿದ್ರೆ ಇವಳಿಗೆ ಅದೇನು ನಿಜವಾಗಲೂ ಅರ್ಥವಾಗಿಲ್ಲವೋ ಅಥವಾ ತನ್ನನ್ನು ಛೇಡಿಸುತ್ತಿದ್ದಾಳೋ, ಒಂದೂ ತಿಳಿಯುತ್ತಿಲ್ಲ… ಸುದೀಪನ ಯೋಚನೆಗಳ ಜೊತೆಗೇ ಅವರು ಕಾಡಿನ ನಡುವೆ ಸಾಗಿ ಬಂದಿದ್ದರು. ಕೊಚ್ಚಿಕೊಳ್ಳಲು ತರಗೆಲೆಗಳು ಉಳಿದಿಲ್ಲವಾಗಿ ನೆಲದ ಮೇಲ್ಮಣ್ಣನ್ನೇ ತನ್ನೊಂದಿಗೆ ಸೆಳೆದೊಯ್ಯುತ್ತಿದ್ದ ಮಳೆನೀರಿನ ಹರಿವನ್ನೇ ನೋಡುತ್ತಾ, ಬೇರುಗಳನ್ನು ಎಡವದಂತೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಸುನಯನ ಈಗ ಅವನ ಕೈ ಹಿಡಿದು, “ಸಾರಿ ಸುದೀಪ್, ಅಯಾಮ್ ಎಂಗೇಜ್ಡ್” ಅಂದಳು. ಮಿಂಚು ಮರೆಯಾಗಿತ್ತು, ಸಿಡಿಲು ಎರಗಿತ್ತು, ಸುದೀಪನಿಗೆ. ಎಷ್ಟು ಹೊತ್ತು ಮೌನ ಅವರ ನಡುವೆ ಕಾವಲು ಕುಳಿತಿತ್ತೋ ಅವನ ಅರಿವಿಗೆ ಬರಲಿಲ್ಲ. “ಅಯಾಮ್ ಎಂಗೇಜ್ಡ್ ಟು ಯೂ” ಅಂದು ಬಿಟ್ಟಳೇ ಅವಳು? ಅಂದರೆ ಇಷ್ಟು ಹೊತ್ತು ತನ್ನನ್ನು ಛೇಡಿಸಲೇ ಹಾಗೆ ಆಟ ಆಡಿಸಿದಳೇ? ಮೋಟು ಜಡೆಯನ್ನು ಎಳೆಯಲು ಹೋದರೆ ಸುದೀಪನ ಕೈತಪ್ಪಿಸಿ, ಕೊಡೆಯನ್ನು ಗಾಳಿಗೆ ತೂರಿ, ಮಳೆಯಲ್ಲಿ ಮರಗಳನ್ನೂ ದಾಟಿ ಓಡಿಹೋದ ಸುನಯನ ಇವನ ನಯನಗಳ ಪರಿಧಿಯನ್ನು ಮೀರಿದ್ದಳು.

ಮನೆಯ ಮುಂದಿನ ತೋಟದಲ್ಲಿ ಓಡಿ ಬರುತ್ತಿದ್ದ ಸುನಯನ ಅಲ್ಲೆ ನಿಂತು, ಸುದೀಪನಿಗೆ ಕಾಯತೊಡಗಿದಳು.

ಏನ್ರಿ ಇಲ್ಲೆ ನಿಂತಿದ್ದೀರಾ? ಊರಿಗೆ ಹೊಸಬ,ಹಾಗೆ ಮಧ್ಯದಲ್ಲಿ ಕೈಕೊಟ್ಟು ಓಡಿ ಹೋಗ್ಬಿಟ್ರಿ

ಸುನಯನ ಸುಮ್ಮನೆ ನಕ್ಕಳು..ಬನ್ನಿ ಮನೆಗೆ ಹೋಗೋಣ..ಮಳೆ ಬೇರೆ ಜೊರಾಗೊ ಹಾಗೆ ಕಾಣ್ತಾ ಇದೆ.

ಇರಲಿ ಬಿಡ್ರಿ..ಇಲ್ಲೆ ಚೆನ್ನಾಗಿದೆ..ಇಲ್ಲಿಯ ಮಳೆ, ಹಸಿರು, ಊಟ, ಆಮೇಲೆ ನೀವು ಎಲ್ಲಾ ಬಹಳ ಚೆನ್ನಾಗಿದೆ. ಅಂದ ಹಾಗೆ ನನ್ನ ಪ್ರಶ್ನೆಗೆ ಉತ್ತರ ಸರಿಯಾಗಿ ಹೇಳೆ ಇಲ್ಲ ನೀವು

ಓಹ್, ಭಾರಿ ಜೋರಿ ನೀವು ಎಂದು ಮನೆ ಕಡೆಗೆ ಓಡಿದ ಸುನಯನಳನ್ನೆ ನೋಡುತ್ತ ನಿಂತ ಸುದೀಪ ತನ್ನಷ್ಟಕ್ಕೇ ನಗುತ್ತಾ,ಅವಳ ಹೆಜ್ಜೆ ಹಿಂಬಾಲಿಸಿದ

ಸುನಯಳ ಮನೆಯಲ್ಲಿ –

ಸುನಯನ, ಸುನಯನ …
ಅದು ಮನೆಲಿಲ್ಲೆ..ರಮೇಶನ ಫ್ರೆಂಡ್ನ ಕರ್ಕಂಡು, ಊರು ತೋರ್ಸುಲೆ ಹೋಜು.

ಮಳೆ ಬರ್ತಾ ಇದ್ದು..ಅದನ್ನೆಂತಕೆ ಕಳ್ಸಿದ್ಯೆ..ಆ ಮಾಣಿ ಹೇಂಗಿದ್ನೋ ಎಂತನೊ!

ಸಿರ್ಸಿ ಸೀತಾರಾಮ್ ಹೆಗಡೆ ಮಾಣಿ ಈ ವಾರ ಬರ್ತ್ನಡ..ಸುನು ಜಾತಕ ಕೊಟ್ಟಿದಿದ್ದೆ. ಮ್ಯಾಚ್ ಆಗ್ತು, ಕೂಸು ಹಿಡಿಸಿದ್ದು ಅವಕ್ಕೆ.
ಮುಂದಿನವಾರ ನೋಡುಲೆ ಬರ್ತ್ವಡ .  ಅದು ಹೀಂಗೆಲ್ಲಾ ಓಡಾದದು ನಂಗೆ ಸರಿ ಕಾಣ್ಸ್ತಿಲ್ಲೆ…ಹುಷಾರು…ಅದ್ಕೂ ಹೇಳ್ಬಿಡು…ಎಂದು ಸುನಯನಳ ಅಪ್ಪ, ಅವಳಮ್ಮನ್ನನ್ನ ಗದರಿಸಿದರು.

*******************************

10 thoughts on “ನೀಲಿ ಕೇರಿಯ ನೀಲಿ ಕಂಗಳ ನೀರೆ – 1”

 1. ಅಲ್ಲಿ ಅವಳು ನಿಂತಿದ್ದಳು, ಕನ್ನಿಕಾ. ಪಕ್ಕದ ಮನೆ ನಾರ್ಣಣ್ಣನ ಮಗಳು. “ಥೋ ಮಾರಾಯಾ , ನಿನ್ನ ಎಲ್ಲಿ ಅಂತ ಹುಡ್ಕೋದು, ಪಾಪ ನಿಮ್ಮಮ್ಮ ಗಾಭರಿ ಮಾಡ್ಕೊಂಡಿದ್ರು. ತಡೀರಿ ನಾನು ಹುಡ್ಕಿ ಕರ್ಕೊಂಡ್ ಬರ್ತೀನಿ ಅಂದೆ, ಬೆಳಗ್ಗೆ ನಂತ್ರ ಏನೂ ತಿಂದೂ ಇಲ್ವಂತೆ ನೀನು, ಬೇಗ್ ಬಾ”
  ಸುದೀಪ ಮೆಲ್ಲನೆ ಕುಳಿತಲ್ಲಿಂದೆದ್ದು ಅವಳ ಕಡೆ ಹೊರಟ. “ಬಂದೆ ತಡ್ಕಳೇ ಕುನ್ನಿಕಾ, ನಮ್ ಅಮ್ಮಂಗಿಂತಾ ನಿಂಗೇ ಹೆದ್ರಿಕೆ” ಅಂದು ಮುಗಿಸುವಷ್ಟರಲ್ಲಿ ಅರ್ಧ ತಿಂದ ಮಾವಿನಕಾಯಿ ಫಡ್ ಅಂತ ಅವನ ಎದೆಗೆ ಹೊಡೆಯಿತು. “ಕುನ್ನಿಕಾ” ಅಂದಿದ್ದಕ್ಕೆ ಶಿಕ್ಷೆ ಇದು ಅಂತಂದು ಓಡಿದಳು ಕನ್ನಿಕಾ ಅಲ್ಲಿಂದ .ಸುದೀಪನಿಗೆ ಅವಳನ್ನ ಹಾಗೆ ಛೇಡಿಸಿಯೇ ಅಭ್ಯಾಸ , ಅವನಿಗಿಂತ ನಾಲ್ಕೈದು ವರ್ಷ ಸಣ್ಣವಳು ಅವಳು.

  ಮನೆಗೆ ಬರುವಷ್ಟರಲ್ಲಿ ಅಮ್ಮನ ಮುಖ ಕೆಂಪು .

  .

 2. ಸುದೀಪನನ್ನು ಅಂಗೈಯಲ್ಲಿಟ್ಟುಕೊಂಡು ಬೆಳೆಸಿದ್ದರು ಸೀತಾಬಾಯಿ. ಸುದೀಪನ ತಂದೆ ತೀರಿದಾಗ ಅವನಿಗೆ ಹತ್ತು ವರ್ಷ.ಆತ ಬೆಳೆದು,ಶಿಕ್ಷಣ ಪೂರೈಸಿ, ಉದ್ಯೋಗಕ್ಕಾಗಿ ಬೆಂಗಳೂರು ಸೇರುವವರೆಗೆ ಸೀತಾಬಾಯಿ ಇನ್ನಿಲ್ಲದ ಕಷ್ಟಪಟ್ಟಿದ್ದರು. ಈ ಅವಧಿಯಲ್ಲಿ ಸೀತಾಬಾಯಿಗೆ ನೆರವಾಗಿ ನಿಂತವರು ಪಕ್ಕದ ಮನೆ ನಾರ್ಣಪ್ಪ ಹಾಗು ಅವರ ಹೆಂಡತಿ ಲಕ್ಷ್ಮಿ. ಮಗಳು ಕನ್ನಿಕೆಯಂತೂ ಸೀತಾಬಾಯಿಯವರ ಮನೆಯಲ್ಲಿಯೆ ಇರುತ್ತಿದ್ದಳು.ಅವಳಿಗೂ ಸುದೀಪನಿಗೂ ಬಾಲ್ಯದಿಂದಲೂ ಒಡನಾಟ. ಕನ್ನಿಕೆಯನ್ನು ಸೊಸೆಯಾಗಿ ಮನೆ ತುಂಬಿಸಿಕೊಳ್ಳುವ ಕನಸು ಸೀತಾಬಾಯಿಯದು. ಆದರೆ ಸುದೀಪನಿಗೆ ಕನ್ನಿಕೆಯ ಮೇಲೆ ಇದ್ದದ್ದು ತಂಗಿಯ ಮೇಲಿನ ಪ್ರೀತಿ.

 3. ಕನ್ನಿಕೆ ಚೆಲುವೆ,ಜಾಣೆ. ಅವಳಲ್ಲಿ ಸುದೀಪನೊಂದಿಗಿನ ಬಾಲ್ಯದ ಸ್ನೇಹ,ಈಗ ಒಲವಾಗಿ ಅರಳಿತ್ತು. ಸುದೀಪನಲ್ಲಿ ತನ್ನ ಜೀವನವನ್ನೆ ಕಂಡಿದ್ದಳು,ಅವನಿಗಾಗಿ ಕನಸನ್ನ ಹೆಣೆದಿದ್ದಳು.ದೂರದ ಬೆಂಗಳೂರಿನಿಂದ ಆತ ಬರುವ ಸುದ್ದಿ ಸಿಕ್ಕರಾಯಿತು, ಸುಗ್ಗಿಯ ಹಿಗ್ಗು ಕನ್ನಿಕೆಗೆ.ಸೀತಾದೇವಿ ಸೊಸೆಯೆಂದು ಕರೆದಾಗ ನಾಚಿ ನೀರಾಗುತ್ತಿದ್ದಳು.ಎಂದೂ ಸಂಭ್ರಮ,ಸಂತೋಷದಲ್ಲಿರುವ ಸುದೀಪನ ಮುಖ ಈ ಬಾರಿ ಬಾಡಿ ಹೋಗಿರುವುದ ಕಂಡು ದಿಗಿಲಾಗಿದ್ದಳು .ಏನಾಯಿತು ಎಂದು ಅವನನ್ನ ಕೇಳುವ ಧೈರ್ಯ ಅವಳಲ್ಲಿರಲಿಲ್ಲ.

 4. ‘ಏಲ್ಲಿ ಹೋಗಿದ್ಯೊ? ಹುಡ್ಕಿ ಹುಡ್ಕಿ ಸಾಕಾಯ್ತು’ ಅಂತ ಸೀತಾಬಾಯಿ ಸಿಡಿಮಿಡಿಗುಟ್ಟಿದರು. ಸುದೀಪ ಉತ್ತರಿಸದೆ ಒಳಮನೆ ಹೊಕ್ಕ.ಮಗ ಅನ್ಯಮನಸ್ಕನಾಗಿದ್ದು ಸೀತಾಬಾಯಿಗೆ ದಿಗಿಲು ಹುಟ್ಟಿಸಿತ್ತು.

  ******************************
  ನೀಲಿಕೇರಿ ಹೊನ್ನಾವರದಿಂದ ೨೫ ಕಿ.ಮಿ. ರಾತ್ರಿ ೮ ಗಂಟೆಗೆ ಕೊನೆಯ ಟೆಂಪೋ. ಸ್ನೇಹಿತನ ಮನೆಗೆ ಹೊರಟಿದ್ದ ಸುದೀಪ ಸರಿಯಾದ ಸಮಯಕ್ಕೆ ಹೊರಡದೇ ಕೊನೆಯ ಟೆಂಪೋದಲ್ಲಿ ಸಿಕ್ಕಿಹಾಕಿಕೊಂಡಿದ್ದ. ಅವನ ದುರದೃಷ್ಟಕ್ಕೆ ಅವತ್ತು ಜಡಿಮಳೆ.

  ನೀಲಿಕೇರಿಯಲ್ಲಿ ಸುದೀಪ ಇಳಿದಾಗ ರಾತ್ರಿ ೯ ಗಂಟೆ. ಅದೇ ಮೊದಲ ಬಾರಿ ಉತ್ತರಕನ್ನಡಕ್ಕೆ ಬಂದಿದ್ದ ಸುದೀಪನಿಗೆ ದಿಕ್ಕುತೋಚದಾಗಿತ್ತು. ಗೆಳೆಯನಿಗೆ ಬರುತ್ತೇನೆಂದು ಹೇಳದೆ ಹೊರಟಿದ್ದ. ಹೊರಗೆ ಕಾರ್ಗತ್ತಲು, ಅದಕ್ಕೆ ಸಾಥಿಯಾದ ಜಡಿಮಳೆ….ಈಗೆಲ್ಲಿ ಹೋಗುವುದು?…

  “ಎಲ್ಲಿ ಹೋಗವ್ವು?” ಹಿಂದುಗಡೆಯಿಂದ ಹುಡುಗಿಯ ಧ್ವನಿ.
  “ಗಣಪ ಭಟ್ಟರ ಮನೆಗೆ ಹೋಗ್ಬೇಕಾಗಿತ್ತು. ಆದ್ರೆ ನಾನು ಇದೇ ಮೊದ್ಲ ಬಾರಿ ಬರ್ತಾ ಇರೋದು. ದಾರಿ ಗೊತ್ತಿಲ್ಲ. ಮಂಗ್ಳೂರಿಂದ ಬಂದಿದೀನಿ”
  “ಓಹ್. ಮತ್ತೆ ಈಗ ಏನು ಮಾಡ್ತೀರಾ? ನೀವು ಬರೋದು ಅವ್ರಿಗೆ ಗೊತ್ತ? ಅವ್ರು ಬರ್ತಾರಾ?”
  “ಇಲ್ಲ. ಹೇಳಿಲ್ಲ. ಫೋನು ಹೋಗ್ತಿಲ್ಲ”.
  “ಹಾಗಾದ್ರೆ, ನಮ್ಮನೆಲಿ ಉಳ್ಕೊಳ್ಳಿ. ಬನ್ನಿ”
  “ನಿಮ್ಮನೇಲಿ…….” ಸುದೀಪ ಉಗುಳು ನುಂಗಿದ.
  “ಆಡ್ಡಿಲ್ಲ. ದಾಕ್ಷಿಣ್ಯ ಮಾಡ್ಬೇಡಿ ಬೆಳಿಗ್ಗೆ ಅವ್ರ ಮನೆಗೆ ಕರ್ಕೊಂಡು ಹೋಗ್ತೆನೆ”

  ಸುದೀಪನಿಗೆ ಇದ್ದದ್ದು ಏರಡೇ ಆಯ್ಕೆ. ಮಳೆಯಲ್ಲಿ ನೆನೆದು ಥರಗುಡುವುದು, ಇಲ್ಲಾ ಅಪರಿಚಿತರ ಮನೆಯಲ್ಲುಳಿಯುವುದು.

  “ಆಯ್ತು.” ಅರೆಮನಸ್ಸಿನ ಉತ್ತರ.ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿತ್ತು.

  ಕತ್ತಲಲ್ಲಿ ಆಕೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಕೊಡೆ ಬಿಡಿಸಿದವಳೆ “ಬನ್ನಿ” ಅಂತ ಕರೆದಳು. ಕೊಡೆ ತಾರದೆ ತೋಯ್ದು ತೊಪ್ಪೆಯಾಗಿದ್ದ ಸುದೀಪ, ಮೊದಲು ಹಿಂದೇಟು ಹಾಕಿದರೂ, ವಿಧಿ ಇಲ್ಲದೆ ಒಪ್ಪಿಕೊಂಡ.

  ಸುದೀಪನಲ್ಲಿ ಏನೋ ವಿಚಿತ್ರ ಅನುಭವ…ಜಡಿಮಳೆ..ಕಾರ್ಗತ್ತಲು….ಗೊತ್ತಿಲ್ಲದೂರು….ಜೊತೆಯಲ್ಲೊಬ್ಬಳು ಅಪರಿಚಿತ ಹುಡುಗಿ..ಅದೂ ಒಂದೆ ಕೊಡೆಯಡಿಯಲ್ಲಿ…..

  ಏನು ಮಾತನಾಡುವುದು ಗೊತ್ತಾಗಲಿಲ್ಲ…ಅನುಮಾನ, ಕಾತರ, ಕುತೂಹಲ, ಪುಳಕ..ಎಲ್ಲ ಏಕಕಾಲದಲ್ಲಿ…..

  ದಾರಿಯುದ್ದಕ್ಕೂ ಅವರು ಮೂವರೆ ಸುದೀಪ, ಆಕೆ…ಮತ್ತು ಮೌನ…

  ಸುಮಾರು ೫ ನಿಮಿಷ ನಡೆದಿರಬಹುದು ಆ ಮೌನ ಅಸಹನೀಯವೆನ್ನಿಸತೋಡಗಿತು..ಸಣ್ಣಗೆ ಕೆಮ್ಮಿದ…
  “ಯಾಕೆ ಈ ಹೊತ್ತಲ್ಲಿ ಬಂದ್ರಿ?” ಆಕೆ ಆರಂಭಿಸಿದಳು.
  “ಸ್ವಲ್ಪ ಕೆಲ್ಸ ಇತ್ತು ಮುಗ್ಸಿ ಹೊರಡೋವಾಗ ತಡ ಆಯ್ತು”
  “ಗಣಪ ಭಟ್ಟರು ನಿಮಗೆ ಏನಾಗ್ಬೇಕು?”
  “ಅವ್ರ ಮಗ ನನ್ನ ಇಂಜಿನಿಯರಿಂಗ ಸಹಪಾಠಿ”
  “ಓಹ್. ಹಾಗಾದ್ರೆ ನೀವು ಮೈಸೂರಲ್ಲಿ ಓದಿದ್ದಾ?”
  “ಹೌದು. ನಿಮಗೆ ಅವ್ರ ಮಗ ಗೊತ್ತಾ?”
  “ಒಂದೆ ಊರಲ್ವಾ? ಊರಲ್ಲಿ ಎಲ್ಲರ ವಿಷ್ಯ ಎಲ್ಲರಿಗೂ ಗೊತ್ತಿರತ್ತೆ”.
  “ಅದೂ ಹೌದು”
  “ನಿಮ್ಮ ಹೆಸ್ರು?”
  “ಸುದೀಪ. ನಿಮ್ದು?”
  “ಸುನಯನ”…

 5. “ಸುನಯನ.. ಹೆಸರು ತುಂಬಾ ಚೆನ್ನಾಗಿದೆ..”
  “ಥ್ಯಾಂಕ್ಸ್”

  ಬಸ್ಸಿಳಿದಾಗಕ್ಷಣ ಉಧ್ಭವಿಸಿದ್ದ ಕಗ್ಗತ್ತಲೆಯಲ್ಲಿ ಮೊದಲು ಕಂಡ ಬೆಳಕೆಂದರೆ ಅದು ಅವಳ ಕಣ್ಣಿನದ್ದು. ‘ಸುನಯನ.. ಹೌದೌದು..!’ -ಮನಸಿನಲ್ಲೇ ಅಂದುಕೊಂಡ ಸುದೀಪ. ಕೊಡೆಯಡಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದ ಸುದೀಪನಿಗೆ ಹರಿವ ಮಳೆನೀರಲೆಗಳ ನಡುವೆ ಹೆಜ್ಜೆಯಿಡುತ್ತಿದ್ದ ಅವಳ ಪಾದ ಈಜುವ ಬಿಳಿಮೀನಿನಂತೆ ಕಾಣುತ್ತಿತ್ತು. ಅವಳ ಕಣ್ಣನ್ನು ಮತ್ತೊಮ್ಮೆ ನೋಡಬೇಕೆಂಬ ಬಯಕೆಯಾಯಿತು. ಆದರೆ ಹಾಗೆ ಫಕ್ಕನೆ ತಲೆ ಎತ್ತಿ ಪಕ್ಕಕ್ಕೆ ನೋಡಲು ಮುಜುಗರವಾಯಿತು. ಆದರೂ ಧೈರ್ಯ ಮಾಡಿ ಆಕಡೆ ಏನನ್ನೋ ನೋಡುವವನಂತೆ ಕತ್ತು ಪಕ್ಕಕ್ಕೆ ತಿರುಗಿಸಿ ಅವಳ ಮುಖವನ್ನೊಮ್ಮೆ ನೋಡಿದ. ಅದೆಷ್ಟೇ ಚಾಣಾಕ್ಷತೆಯಿಂದ ನೋಡಿದ್ದರೂ ಅವಳಿಗೆ ಇವನ ಕುತೂಹಲ ಅರ್ಥವಾಗಿಹೋಯಿತು. ಹೂಬಿರಿದಂತೆ ನಕ್ಕಳು. ಸೇವಂತಿಗೆಯ ಎಸಳುಗಳಂತಹ ಜೋಡಣೆಯ ಪುಟ್ಟಪುಟ್ಟ ಬಿಳಿ ಹಲ್ಲುಗಳ ಬೆಳಕು ಅವರ ಮನೆವರಿಗಿನ ದಾರಿಗೆ ಬೆಳಕಾಯಿತು.

  “ಹುಷಾರಿ” ದಣಪೆ ತೆಗೆದು ಅವನು ದಾಟುವಾಗ ಉಲಿದಳು ಸುನಯನ. ಲಾಟೀನು ಹಿಡಿದ ಬಿಳಿಪಂಚೆಯ ವ್ಯಕ್ತಿಯೊಂದು ಮನೆಯ ಮುಂಬಾಗಿಲಿನಲ್ಲಿ ಕಾಣಿಸಿಕೊಂಡಿತು. ಅದು ಇವಳ ತಂದೆಯಿರಬೇಕೆಂದು ಭಾವಿಸಿದ ಸುದೀಪ..

 6. ಇಲ್ಲಿಯವರೆಗೆ…
  “ಹುಷಾರಿ” ದಣಪೆ ತೆಗೆದು ಅವನು ದಾಟುವಾಗ ಉಲಿದಳು ಸುನಯನ. ಲಾಟೀನು ಹಿಡಿದ ಬಿಳಿಪಂಚೆಯ ವ್ಯಕ್ತಿಯೊಂದು ಮನೆಯ ಮುಂಬಾಗಿಲಿನಲ್ಲಿ ಕಾಣಿಸಿಕೊಂಡಿತು. ಅದು ಇವಳ ತಂದೆಯಿರಬೇಕೆಂದು ಭಾವಿಸಿದ ಸುದೀಪ..

  ಮುಂದೆ..
  ಆ ಬಿಳಿಪಂಚೆ ವ್ಯಕ್ತಿ ಆ ಲಾಟೀನು ಸುದೀಪನ ಮುಖದ ಮುಂದೆ ಹಿಡಿದು ‘ಯಾವ ಊರಿನವ್ರು?’ ಅಂತಾ ಕೇಳೋವಷ್ಟರಲ್ಲೇ, ಸುನಯನ ‘ಇಲ್ಲಾ ಅಪ್ಪಾ, ಇವ್ರು ಬೆಂಗಳೂರಿನವರು, ಗಣಪ ಭಟ್ಟರ ಮನೆಗೆ ಹೋಗುತ್ತಿದ್ದರಂತೆ, ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು, ಕರಕೊಂಡು ಬಂದೆ’ ಅಂದಳು.

  ಆಗ ಆ ವ್ಯಕ್ತಿ ‘ಗಣಪ ಭಟ್ಟರ ಮನೆಗೆ?’ ಎಂದು ಒಂದು ವಿಚಿತ್ರ ನೋಟ ಬೀರಿತ್ತು. ಒಳಗೆ ಹೋದ ಸುನಯನ, ತಲೆ ಒರಸಿಕೊಳ್ಳಲು ಟವೆಲ್ ಒಂದು ತಂದು ಸುದೀಪನ ಕೈಗಿತ್ತಳು. ಸುದೀಪಾ ತಲೆ ಒರಸಿಕೊಂಡು ಆ ಪಂಚೆಯ ವ್ಯಕ್ತಿ ಜೊತೆ ಮಾತಿಗೆ ಕುಳಿತ. ಯಾಕೋ ಎನು ಕೇಳಿದರೂ ಆ ವ್ಯಕ್ತಿ ಜಾಸ್ತಿ ಬಾಯಿ ಬಿಡ್ತಾ ಇಲ್ಲ ಅನಿಸ್ತು ಸುದೀಪನಿಗೆ. ಸ್ಪಲ್ಪೇ ಸಮಯದಲ್ಲಿ ಸುನಯನ ‘ಬನ್ನಿ ಊಟಕ್ಕೆ’ ಅಂತಾ ಕರೆದಾಗ, ಸುದೀಪನಿಗೆ ಆಶ್ಚರ್ಯ.’ಎಲಾ, ಇಷ್ಟು ಬೇಗ ಅಡುಗೆ ಹೇಗೆ ಮಾಡಿದಳು?’ ಅಂತಾ ಮನಸಿನಲ್ಲಿದ್ದ ಲೆಕ್ಕಾಚಾರ ಹೊಟ್ಟೆ ತಾಳದ ಮುಂದೆ ಮೂಲೆಗುಂಪಾಗಿ ಊಟದ ತಟ್ಟೆ ಮುಂದೆ ಕುಳಿತ.

  ಹೊಟ್ಟೆ ಹಸಿದಿದ್ದ ಸುದೀಪ ಜಾಸ್ತಿ ಮಾತಾಡದೆ, ಊಟ ಮಾಡೆದ್ದ. ‘ಆಯಾಸವಾಗಿದೆ ನೀವು ಮಲಗಿ’ ಸುನಯನ ಅಂದಾಗ, ಸುದೀಪನಿಗೆ ಅಗಲೇ ನಿದ್ದೆಯ ಮಂಪರು.ಅದ್ಯಾವಾಗಲೋ ಸುದೀಪ ನಿದ್ದೆಗೆ ಜಾರಿದ್ದ.

 7. ಸುದೀಪ ಎದ್ದಾಗ ಸೂರ್ಯ ಮಾರು ಮೇಲೇರಿದ್ದ. ಸುನಯನಾಳ ಸೂಚನೆಯ ಮೇರೆಗೆ ಸ್ನಾನಾದಿಗಳನ್ನು ಮುಗಿಸಿ ನಾಷ್ಟಾ ಮಾಡಲು ಬಂದ ಸುದೀಪ. ಸುನಯನಳ ತಂದೆ ದೇವರ ಮನೆಯಲ್ಲಿ ಪೂಜೆಗೆ ಕುಳಿತು ಬಿಟ್ಟಿದ್ದರು. ಸುದೀಪನೊಬ್ಬನೆ ಉತ್ತರ ಕನ್ನಡದ ವಿಶಿಷ್ಟ ಭಕ್ಷವಾದ ಹಲಸಿನ ಎಲೆಯ ಮೇಲೆ ಬೇಯಿಸಿದ ಇಡ್ಲಿ ತಿನ್ನಲು ಸುರು ಮಾಡಿದ. ಉತ್ತರ ಕನ್ನಡದ ಜನ ಅತಿಥಿಸತ್ಕಾರದಲ್ಲಿ ಮೇಲುಗೈ. ಸುನಯನಾ ಹಾಗು ಅವಳ ತಾಯಿಯ ಎದುರು ಸುದೀಪನಿಗೆ ತಾನು ಅಪರಿಚಿತ ಎನ್ನುವ ಭಾವನೆ ಬರಲೆ ಇಲ್ಲ.ಇಡ್ಲಿ ಹಾಗು ಕಷಾಯ ಮುಗಿಸಿದ ಬಳಿಕ ಸುದೀಪನನ್ನು ಸುನಯನಾ ಅವನ ಗೆಳೆಯನ ಮನೆಗೆ ಕರೆದೊಯ್ದಳು. ಆದರೆ ಅಲ್ಲಿ ಸುದೀಪನಿಗೆ ನಿರಾಶೆ ಕಾದಿತ್ತು. ರಮೇಶನ ತಂದೆ ಗಣಪ ಭಟ್ಟರು, “ರಮೇಶ ಮುಂಬಯಿಗೆ ಹೋಗಿ ಒಂದ್ವಾರ ಆಯ್ತಲ್ಲ. ಇವತ್ ಸಂಜೀಗ್ ಬರ್ತೀನಂತ ಹೇಳಿದ್ದಾನಪ್ಪ! ನೀವ್
  ಎಂತಾ ಮಾಡ್ತೀರಿ?” ಎಂದು ಕೇಳಿದರು. ಸುದೀಪನ ಈ ಸಮಸ್ಯೆಗೂ ಸುನಯನಾಳೆ ಪರಿಹಾರ ತೋರಿಸಬೇಕಾಯಿತು. “ರಮೇಶಣ್ಣ ಬರೂವರ್ಗೂ ನೀವ್ ನಮ್ಮೂರು ನೋಡೀರಂತೆ, ಬನ್ನಿ” ಏಂದು ಹೇಳಿ ಸುದೀಪನಿಗೆ ನೀಲೀಕೇರಿ ತೋರಿಸಲು ಕರೆದೊಯ್ದಳು.
  ಮುಂಗಾರು ಮಳೆಯ ಕೊನೆಯ ದಿನಗಳು ಅವು. ನೀಲೀಕೇರಿಯ ಸುತ್ತಲೂ ಇರುವ ಪರ್ವತರಾಶಿ ಹಸುರುಡುಗೆ ಉಟ್ಟಂತೆ ಶೋಭಿಸುತ್ತಿದೆ. ಸುದೀಪ ಎಂದೂ ನೋಡಿರದ ಬಣ್ಣ ಬಣ್ಣದ ಹೂವುಗಳು, ಹತ್ತು ಹೆಜ್ಜೆಗೊಂದರಂತಿಕ್ಕ ಚಿಕ್ಕ ಚಿಕ್ಕ ಜಲಪಾತಗಳು. ಈ ಮನೋಹರ ಪ್ರಕೃತಿಯ ನಡುವೆ ಸುನಯನಾ ವನದೇವತೆಯಂತೆ ಕಂಗೊಳಿಸುತ್ತಿದ್ದಾಳೆ. ಬೆಂಗಳೂರಿನಲ್ಲಿ ಕಾಂಕ್ರೀಟ್ ಕಾಡುಗಳು ಹಾಗು ಬಣ್ಣದ ಬೀಸಣಿಗೆಗಳನ್ನು ಮಾತ್ರ ನೋಡಿದ ಸುದೀಪನಿಗೆ ತಾನು ಗಂಧರ್ವಲೋಕದಲ್ಲಿ ಬಂದಿರುವೆನೇ ಎನ್ನುವ ಭ್ರಮೆಯಾಯಿತು.
  ರಮೇಶ ಆ ದಿನ ಬರಲೇ ಇಲ್ಲ. ಸುದೀಪನಿಗೆ ಅನಿವಾರ್ಯವಾಗಿ ಮತ್ತೊಂದು ದಿನ ಅಲ್ಲಿ ತಂಗಬೇಕಾಗಿದ್ದು ಒಳಗೊಳಗೆ ಖುಶಿಯನ್ನೆ ಕೊಟ್ಟಿತು. ಮರುದಿನ ಸುನಯನಾ ಸುದೀಪನಿಗೆ ಹೊನ್ನಾವರದಿಂದ ಸ್ವಲ್ಪ ದೂರದಲ್ಲಿ ನಿರ್ಜನವಾದ ಕಾಡಿನಲ್ಲಿರುವ ಕಾನಕಾನೇಶ್ವರಿ ದೇವಸ್ಥಾನಕ್ಕೆ ಕರೆದೊಯ್ದಳು.
  ಕಾಡಿನಲ್ಲಿ ಹೋಗುತ್ತಿರುವಾಗ ನಿಷ್ಕಳಂಕವಾದ ಹಾಗು ನಿಸ್ಸಂಕೋಚವಾದ ಸುನಯನಾಳ ಮಾತುಗಳಿಗೆ ಸುದೀಪ ಮಾರು ಹೋದ. ದೇವಿಗೆ ಹಣ್ಣು ನೈವೇದ್ಯ ಮಾಡಿ ತಾವೂ ಆ ಪ್ರಸಾದವನ್ನೆ ತಿಂದರು.
  ಏಕಾಏಕಿ ಮಳೆ ಪ್ರಾರಂಭವಾಯಿತು. ಸುನಯನಾಳ ಕೊಡೆಯೇ ಮತ್ತೆ ಇಬ್ಬರಿಗೂ ಆಸರೆ. ಬೀಸುಗಾಳಿಗೆ ಮಳೆ ಮುಖಕ್ಕೆ ರಾಚುತ್ತಿದೆ. ಒಮ್ಮೆಲೆ ಮಿಂಚಿದ ಮಿಂಚು ಸುನಯನಾಳ ಕಣ್ಣಲ್ಲಿ ಪ್ರತಿಫಲಿಸಿತು. ಸುದೀಪನ ಮನಸ್ಸಿನಲ್ಲಿ ಪ್ರೇಮದ ಕೋಲ್ಮಿಂಚು ಮಿಂಚಿತು. ತಟ್ಟನೆ ಅವಳ ಕೈಹಿಡಿದ ಸುದೀಪ, “ಸುನಯನಾ, ಐ ಲವ್ ಯೂ!” ಎಂದ.

 8. ಮತ್ತೊಂದು ಮಿಂಚಿನ ಜೊತೆಗೇ ಇವನತ್ತ ತಿರುಗಿದವಳ ಕಣ್ಣಲ್ಲಿಯೂ ಒಂದು ಮಿಂಚು. “ಹಾಗಂದ್ರೇನು?” ಬೆಳದಿಂಗಳಂಥ ನಗೆಯೊಂದಿಗೆ ಕತ್ತು ಓರೆಯಾಗಿಸಿ ಯಾವುದೋ ಮರದಲ್ಲಿ ಹಕ್ಕಿಯೊಂದು ಮಧ್ಯಮದಲ್ಲಿ ರಾಗವೆಳೆದಂತೆ ಕೇಳಿತ್ತು ಸುದೀಪನಿಗೆ. ಆದರೆ ಉತ್ತರಿಸದಾದ. ಹೌದು, ಹಾಗಂದರೇನು? “ನಾನು ನಿನ್ನನ್ನು ಪ್ರೀತಿಸುತ್ತೇನೆ” ಅಂದರೆ ಅದಕ್ಕೆ ಇದೇ ಅರ್ಥ ಬರೋದೇ ಇಲ್ಲ. ನನಗೆ ನಿನ್ನಲ್ಲಿ ಅನುರಕ್ತಿಯಿದೆ ಅಂದರೆ ಅದೂ ಇವಳಿಗೆ ಅರ್ಥವಾಗದಿದ್ದರೆ? ಅಲ್ಲದೆ, ಇವಳು ಕೇಳುವ ರೀತಿ ನೋಡಿದ್ರೆ ಇವಳಿಗೆ ಅದೇನು ನಿಜವಾಗಲೂ ಅರ್ಥವಾಗಿಲ್ಲವೋ ಅಥವಾ ತನ್ನನ್ನು ಛೇಡಿಸುತ್ತಿದ್ದಾಳೋ, ಒಂದೂ ತಿಳಿಯುತ್ತಿಲ್ಲ… ಸುದೀಪನ ಯೋಚನೆಗಳ ಜೊತೆಗೇ ಅವರು ಕಾಡಿನ ನಡುವೆ ಸಾಗಿ ಬಂದಿದ್ದರು. ಕೊಚ್ಚಿಕೊಳ್ಳಲು ತರಗೆಲೆಗಳು ಉಳಿದಿಲ್ಲವಾಗಿ ನೆಲದ ಮೇಲ್ಮಣ್ಣನ್ನೇ ತನ್ನೊಂದಿಗೆ ಸೆಳೆದೊಯ್ಯುತ್ತಿದ್ದ ಮಳೆನೀರಿನ ಹರಿವನ್ನೇ ನೋಡುತ್ತಾ, ಬೇರುಗಳನ್ನು ಎಡವದಂತೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಸುನಯನ ಈಗ ಅವನ ಕೈ ಹಿಡಿದು, “ಸಾರಿ ಸುದೀಪ್, ಅಯಾಮ್ ಎಂಗೇಜ್ಡ್” ಅಂದಳು. ಮಿಂಚು ಮರೆಯಾಗಿತ್ತು, ಸಿಡಿಲು ಎರಗಿತ್ತು, ಸುದೀಪನಿಗೆ. ಎಷ್ಟು ಹೊತ್ತು ಮೌನ ಅವರ ನಡುವೆ ಕಾವಲು ಕುಳಿತಿತ್ತೋ ಅವನ ಅರಿವಿಗೆ ಬರಲಿಲ್ಲ. “ಅಯಾಮ್ ಎಂಗೇಜ್ಡ್ ಟು ಯೂ” ಅಂದು ಬಿಟ್ಟಳೇ ಅವಳು? ಅಂದರೆ ಇಷ್ಟು ಹೊತ್ತು ತನ್ನನ್ನು ಛೇಡಿಸಲೇ ಹಾಗೆ ಆಟ ಆಡಿಸಿದಳೇ? ಮೋಟು ಜಡೆಯನ್ನು ಎಳೆಯಲು ಹೋದರೆ ಸುದೀಪನ ಕೈತಪ್ಪಿಸಿ, ಕೊಡೆಯನ್ನು ಗಾಳಿಗೆ ತೂರಿ, ಮಳೆಯಲ್ಲಿ ಮರಗಳನ್ನೂ ದಾಟಿ ಓಡಿಹೋದ ಸುನಯನ ಇವನ ನಯನಗಳ ಪರಿಧಿಯನ್ನು ಮೀರಿದ್ದಳು.

 9. ಮನೆಯ ಮುಂದಿನ ತೋಟದಲ್ಲಿ ಓಡಿ ಬರುತ್ತಿದ್ದ ಸುನಯನ ಅಲ್ಲೆ ನಿಂತು, ಸುದೀಪನಿಗೆ ಕಾಯತೊಡಗಿದಳು

  ಏನ್ರಿ ಇಲ್ಲೆ ನಿಂತಿದ್ದೀರಾ? ಊರಿಗೆ ಹೊಸಬ,ಹಾಗೆ ಮಧ್ಯದಲ್ಲಿ ಕೈಕೊಟ್ಟು ಓಡಿ ಹೋಗ್ಬಿಟ್ರಿ

  ಸುನಯನ ಸುಮ್ಮನೆ ನಕ್ಕಳು..ಬನ್ನಿ ಮನೆಗೆ ಹೋಗೋಣ..ಮಳೆ ಬೇರೆ ಜೊರಾಗೊ ಹಾಗೆ ಕಾಣ್ತಾ ಇದೆ.

  ಇರಲಿ ಬಿಡ್ರಿ..ಇಲ್ಲೆ ಚೆನ್ನಾಗಿದೆ..ಇಲ್ಲಿಯ ಮಳೆ, ಹಸಿರು, ಊಟ, ಆಮೇಲೆ ನೀವು ಎಲ್ಲಾ ಬಹಳ ಚೆನ್ನಾಗಿದೆ. ಅಂದ ಹಾಗೆ ನನ್ನ ಪ್ರಶ್ನೆಗೆ ಉತ್ತರ ಸರಿಯಾಗಿ ಹೇಳೆ ಇಲ್ಲ ನೀವು

  ಓಹ್, ಭಾರಿ ಜೋರಿ ನೀವು ಎಂದು ಮನೆ ಕಡೆಗೆ ಓಡಿದ ಸುನಯನಳನ್ನೆ ನೋಡುತ್ತ ನಿಂತ ಸುದೀಪ ತನ್ನಷ್ಟಕ್ಕೇ ನಗುತ್ತಾ,ಅವಳ ಹೆಜ್ಜೆ ಹಿಂಬಾಲಿಸಿದ

  ಸುನಯಳ ಮನೆಯಲ್ಲಿ

  ಸುನಯನ, ಸುನಯನ
  ಅದು ಮನೆಲಿಲ್ಲೆ..ರಮೇಶನ ಫ್ರೆಂಡ್ನ ಕರ್ಕಂಡು, ಊರು ತೋರ್ಸುಲೆ ಹೋಜು

  ಮಳೆ ಬರ್ತಾ ಇದ್ದು..ಅದನ್ನೆಂತಕೆ ಕಳ್ಸಿದ್ಯೆ..ಆ ಮಾಣಿ ಹೇಂಗಿದ್ನೋ ಎಂತನೊ!

  ಸಿರ್ಸಿ ಸೀತಾರಾಮ್ ಹೆಗಡೆ ಮಾಣಿ ಈ ವಾರ ಬರ್ತ್ನಡ..ಸುನು ಜಾತಕ ಕೊಟ್ಟಿದಿದ್ದೆ. ಮ್ಯಾಚ್ ಆಗ್ತು, ಕೂಸು ಹಿಡಿಸಿದ್ದು ಅವಕ್ಕೆ.
  ಮುಂದಿನವಾರ ನೋಡುಲೆ ಬರ್ತ್ವಡ

  ಅದು ಹೀಂಗೆಲ್ಲಾ ಓಡಾದದು ನಂಗೆ ಸರಿ ಕಾಣ್ಸ್ತಿಲ್ಲೆ…ಹುಷಾರು…ಅದ್ಕೂ ಹೇಳ್ಬಿಡು…ಎಂದು ಸುನಯನಳ ಅಪ್ಪ, ಅವಳಮ್ಮನ್ನನ್ನ ಗದರಿಸಿದರು.

 10. ಸುದೀಪ ಬೆಂಗಳೂರಿಗೆ ವಾಪಸ್ಸಾಗಿ ವಾರವಾಗಿದೆ.ಈ ಬಾರಿಯೂ ಕನ್ನಿಕೆಯನ್ನು ಸೊಸೆ ಮಾಡಿಕೊಳ್ಳುವ ವಿಷಯದಲ್ಲಿ ಬಗ್ಗೆ ಯಾವ ಪ್ರಗತಿಯೂ ಕಾಣಬರದದ್ದಕ್ಕೆ ಸೀತಾಬಾಯಿಗೆ ನಿರಾಸೆ
  ನಾರ್ಣಪ್ಪನವರಿಗೂ…ಆದರೆ ಅದನ್ನೆಲ್ಲಾ ರಂಪ ಮಾಡುವಷ್ಟು ಪೆದ್ದರಲ್ಲ ಸೀತಾಬಾಯಿ ಜೊತೆಗೆ ಮಗನ ಸುಕೋಮಲ ಮನಸ್ಸನ್ನು ನೋಯಿಸ ಬಾರದೆಂಬ ಎಚ್ಚರವೂ ಇದೆ

  ಅಂದು ಆಫೀಸಿಗೆ ಬಂದಾಗ ಕಂಡ ಹೊಸಮುಖ!
  `ತುಂಬಾ ಎಫಿಶಿಯಂಟಂತೆ ಕಣಪ್ಪಾ.. ಬಾಸ್ ಹೊಗಳಿ ಅಟ್ಟಕ್ಕೇರಿಸಿದ್ದರು ಇವರು ಬರುವ ಮುಂಚೆನೇ…ನೀನು ಇರಲಿಲ್ಲವಲ್ಲಾ
  ನಿಂಗೆ ವಿಶ್ಯ ಗೊತ್ತಿಲ್ಲಾ ಅಂತ ಹೇಳ್ತಿದೀನಿ ಹುಷಾರು…ಆಗಲೇ ಒಂದಿಬ್ಬರಿಗೆ ಚುರುಕು ಮುಟ್ಟಿಸಿದ್ದಾರೆ’ ಗೆಳೆಯ ಹೇಳಿದ

  ಓಹೋ…ಯಾರಪ್ಪಾ ಅದು ಮೀಟ್ ಮಾಡೇ ಬಿಡೋಣಾ ಅಂತ ಒಂದಿಷ್ಟು ಕುತೂಹಲ ,ಚಿಟಿಕೆಯಷ್ಟು ಚಿಂತೆ,ಅರ್ಧ ಚಮಚ ನಗು,ನನ್ ಕೆಲ್ಸ ನಾನ್ ಸರಿಯಾಗಿ ಮಾಡ್ತಿರೋವಾಗ
  ಅನಗತ್ಯ ಟೆನ್ಶನ್ ಯಾಕೆ ಎಂದು ಬೊಗಸೆಯಷ್ಟು ಕಾನ್ಫಿಡೆನ್ಸ್ ಗಳ ಮನದಲ್ಲೇ ಬೆರೆಸುತ್ತಾ ಬಾಗಿಲು ಬಡಿದು `ಮೇ ಐ ಕಮಿನ್’ ಎನ್ನುತ್ತಾ ಒಳಹೋದವನಿಗೆ ಕಂಡ ಆ ಮುಖ!

  ಯಾಮಿನೀ ತಲೆ ಎತ್ತಿ ನೋಡಿದಳು

  ಸುನಯನಳ ಆಗಸ ನೆನಪಿಸುವ ವಿಶಾಲಕಣ್ಣುಗಳಂತೆ ಇವುಗಳಿಲ್ಲ…ಕನ್ನಿಕಾಳಂತೆ ಮುಗ್ಧ ಒಲವು ಸೂಸುವ ಕಣ್ಣುಗಳೂ ಇವಲ್ಲ…
  ಸಾಣೆ ಹಿಡಿದ ಜೋಡಿವಜ್ರಗಳಂತೆ ಅಪ್ರತಿಮ ಕಾಂತಿಯಿಂದ ಬೆಳಗುವ ಚುರುಕು ಪುಟ್ಟ ಕಣ್ಣುಗಳು…

  ಸುದೀಪನಿಗೆ ಮಾತೇ ಹೊರಡದೆ ಕಣ್ಣು ಕತ್ತಲಿಟ್ಟಿತು….

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.