ಲೋಕದ ಕಣ್ಣು – ಎಚ್. ಎಸ್. ವೆಂಕಟೇಶಮೂರ್ತಿ

ಕವಿ : ಎಚ್. ಎಸ್. ವೆಂಕಟೇಶಮೂರ್ತಿ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು

ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ

ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ

ಮಹಾ ಪ್ರವಾಹ ಪೊರೆಯುವರಿಲ್ಲ  ಪಾತ್ರವಿರದ ತೊರೆ ಪ್ರೀತಿ
ತೊರೆಯದೇ ತನ್ನ ತೊರೆಯದು ಪ್ರಿಯನ  ರಾಧೆಯ ಪ್ರೀತಿಯ ರೀತಿ

                             ***

5 thoughts on “ಲೋಕದ ಕಣ್ಣು – ಎಚ್. ಎಸ್. ವೆಂಕಟೇಶಮೂರ್ತಿ”

  1. sritri says:

    ಪ್ರತಾಪ್, ನಿಮ್ಮ “ರಾಧೇ” ಬಂದಿದ್ದಾಳೆ ನೋಡಿ. ಟಿವಿಯಲ್ಲಿ ಗಾಯಕಿಯೊಬ್ಬಳು ಹಾಡಿದ್ದನ್ನು ಕೇಳಿ ಬರೆದಿದ್ದೇನೆ. ಈ ಕವಿತೆ ಇಷ್ಟೆಯೋ, ಇನ್ನೂ ಸಾಲುಗಳಿವೆಯೋ ಗೊತ್ತಿಲ್ಲ. ಸುಂದರ ಗೀತೆಯೊಂದರ ನೆನಪು ತಂದಿದ್ದಕ್ಕೆ ಧನ್ಯವಾದಗಳು.

  2. ಕಾರಿ ಹೆಗ್ಗಡೆ ಮಗಳು ಇನ್ನೂ ಯಾಕೆ ಬಂದಿಲ್ಲ?ಃ-)

  3. sritri says:

    ಭಾಗವತರೇ,ಕಾರಿ ಹೆಗ್ಗಡೆಯ ಮಗಳು ನನಗೂ ಸಿಕ್ಕಿಲ್ಲ. ಕಾಯುವುದೊಂದೇ ಗತಿ ನಿಮಗೆ.

  4. ಸುನಾಥ says:

    ಈ ಗೀತೆಯ ಹೆಸರು “ಲೋಕದ ಕಣ್ಣು.” ತ್ರಿವೇಣಿಯವರೆ, ನೀವು ಎಲ್ಲ ನಾಲ್ಕು stanza ಗಳನ್ನು ಬರೆದಿದ್ದೀರಿ. ಆದರೆ ಮೂರನೆಯ stanzaದ ನಾಲ್ಕನೆಯ ಸಾಲಿನಲ್ಲಿ ಸಣ್ಣ spelling mistake ಇದೆ. ಸರಿಯಾದ ಪದ ಹೀಗಿದೆಃ
    “ರಾಧೆ ತೋರುವಳು ದಾರಿ”.

  5. sritri says:

    ಸುನಾಥರೇ, ಸರಿ ದಾರಿ ತೋರಿದ್ದಕ್ಕೆ ಧನ್ಯವಾದಗಳು.

Leave a Reply to ಜಗಲಿ ಭಾಗವತ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಸಂಜೆಗೆನ್ನ ಪಯಣ – ಕೆ.ಎಸ್.ನರಸಿಂಹಸ್ವಾಮಿಸಂಜೆಗೆನ್ನ ಪಯಣ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕ – ಡಾ.ರಾಜ್‍ಕುಮಾರ್ ಸಂಗೀತ – ಸಿ.ಅಶ್ವಥ್ ಹಾಡು ಕೇಳಿ ಸಂಜೆಗೆನ್ನ ಪಯಣವೆಂದು ತಿಳಿದಳೆನ್ನ ಸುಂದರಿ ನನ್ನ ಮುಂದೆ ಬಂದು ನಿಂದು ತಡೆದಳಿಂತು ವಿನಯದಿ | ಕೆಂಪು ತುಟಿಗಳಿಂದ ಹರಸಿ ನುಡಿಯಲಿಲ್ಲ ನಿಜವನು ತೆರೆದ ಕಂಗಳುದಕ ಸುರಿಸಿ

ಬಾ ಮಲ್ಲಿಗೆ – ಚೆನ್ನವೀರ ಕಣವಿಬಾ ಮಲ್ಲಿಗೆ – ಚೆನ್ನವೀರ ಕಣವಿ

ಸಾಹಿತ್ಯ – ಚೆನ್ನವೀರ ಕಣವಿ ಸಂಗೀತ – ಸಿ.ಅಶ್ವಥ್ ಗಾಯಕರು – ಶ್ರೀನಿವಾಸ ಉಡುಪ, ಇಂದು ವಿಶ್ವನಾಥ್ ಹಾಡು ಕೇಳಿ ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳಿಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು ಉಸಿರುಸಿರಿಗೂ

ಸುಪ್ತದೀಪ್ತಿಯವರ ಎರಡು ಕವನಗಳುಸುಪ್ತದೀಪ್ತಿಯವರ ಎರಡು ಕವನಗಳು

ವಾಯುವಿಹಾರ – ಸುಪ್ತದೀಪ್ತಿ  ಬರಹೇಳಿದ್ದ ದುಷ್ಯಂತ. ಮರದ ಕೆಳಗೆ ಕಾದಳು, ಕಾದೇ ಕಾದಳು ಇವಳು. ಬೆರಳಲ್ಲಿ ಉಂಗುರ, ಬಾನಲ್ಲಿ ಚಂದಿರ. ರಥವಿಲ್ಲದ ಕುದುರೆಯಲ್ಲಿ ಟಕಟಕಿಸುತ್ತ ಬಂದ ನಲ್ಲ ಹತ್ತು – ಎಂದ. ಹಿಂದೆ-ಮುಂದೆ ನೋಡದೆ, ಕಣ್ವ-ಗೌತಮಿಯರ ನೆನೆಯದೆ, ಬೆನ್ನಿಗಂಟಿದಳು, ಕಣ್ಣು ಮುಚ್ಚಿದಳು.