ಲೋಕದ ಕಣ್ಣು – ಎಚ್. ಎಸ್. ವೆಂಕಟೇಶಮೂರ್ತಿ

ಕವಿ : ಎಚ್. ಎಸ್. ವೆಂಕಟೇಶಮೂರ್ತಿ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು

ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ

ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ

ಮಹಾ ಪ್ರವಾಹ ಪೊರೆಯುವರಿಲ್ಲ  ಪಾತ್ರವಿರದ ತೊರೆ ಪ್ರೀತಿ
ತೊರೆಯದೇ ತನ್ನ ತೊರೆಯದು ಪ್ರಿಯನ  ರಾಧೆಯ ಪ್ರೀತಿಯ ರೀತಿ

                             ***

5 thoughts on “ಲೋಕದ ಕಣ್ಣು – ಎಚ್. ಎಸ್. ವೆಂಕಟೇಶಮೂರ್ತಿ”

  1. sritri says:

    ಪ್ರತಾಪ್, ನಿಮ್ಮ “ರಾಧೇ” ಬಂದಿದ್ದಾಳೆ ನೋಡಿ. ಟಿವಿಯಲ್ಲಿ ಗಾಯಕಿಯೊಬ್ಬಳು ಹಾಡಿದ್ದನ್ನು ಕೇಳಿ ಬರೆದಿದ್ದೇನೆ. ಈ ಕವಿತೆ ಇಷ್ಟೆಯೋ, ಇನ್ನೂ ಸಾಲುಗಳಿವೆಯೋ ಗೊತ್ತಿಲ್ಲ. ಸುಂದರ ಗೀತೆಯೊಂದರ ನೆನಪು ತಂದಿದ್ದಕ್ಕೆ ಧನ್ಯವಾದಗಳು.

  2. ಕಾರಿ ಹೆಗ್ಗಡೆ ಮಗಳು ಇನ್ನೂ ಯಾಕೆ ಬಂದಿಲ್ಲ?ಃ-)

  3. sritri says:

    ಭಾಗವತರೇ,ಕಾರಿ ಹೆಗ್ಗಡೆಯ ಮಗಳು ನನಗೂ ಸಿಕ್ಕಿಲ್ಲ. ಕಾಯುವುದೊಂದೇ ಗತಿ ನಿಮಗೆ.

  4. ಸುನಾಥ says:

    ಈ ಗೀತೆಯ ಹೆಸರು “ಲೋಕದ ಕಣ್ಣು.” ತ್ರಿವೇಣಿಯವರೆ, ನೀವು ಎಲ್ಲ ನಾಲ್ಕು stanza ಗಳನ್ನು ಬರೆದಿದ್ದೀರಿ. ಆದರೆ ಮೂರನೆಯ stanzaದ ನಾಲ್ಕನೆಯ ಸಾಲಿನಲ್ಲಿ ಸಣ್ಣ spelling mistake ಇದೆ. ಸರಿಯಾದ ಪದ ಹೀಗಿದೆಃ
    “ರಾಧೆ ತೋರುವಳು ದಾರಿ”.

  5. sritri says:

    ಸುನಾಥರೇ, ಸರಿ ದಾರಿ ತೋರಿದ್ದಕ್ಕೆ ಧನ್ಯವಾದಗಳು.

Leave a Reply to ಸುನಾಥ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ವಸಂತ – ಬಿ.ಎಂ.ಶ್ರೀವಸಂತ – ಬಿ.ಎಂ.ಶ್ರೀ

ಕವಿ – ಬಿ.ಎಂ.ಶ್ರೀ (ಇಂಗ್ಲೀಷ್ ಗೀತಗಳು) ವಸಂತ ಬಂದ ಋತುಗಳ ರಾಜ ತಾ ಬಂದ ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ ಚಳಿಯನು ಕೊಂದ ಹಕ್ಕಿಗಳುಲಿಗಳೆ ಚಂದ ಕೂಹೂ ಜಗ್ ಜಗ್ ಪುವ್ವೀ! ಟೂವಿಟ್ಟಾವೂ ! ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ

ಹಿಂದುಗಳ ಭಾಗ್ಯವಿನ್ನೆಂದು ನೀ ತೆರೆವೆ ?ಹಿಂದುಗಳ ಭಾಗ್ಯವಿನ್ನೆಂದು ನೀ ತೆರೆವೆ ?

ಕವಿ : ಮಂಜೇಶ್ವರ ಗೋವಿಂದ ಪೈ (೧೮೮೩-೧೯೬೩) ಪ್ರಥಮ ಪ್ರಭಾತದಿಂದೆನಿತೊ ವರಮಿರದೆ ನೀನೊಡೆಯ ನಮ್ಮ ಭಾರತವ ಕಾದಿರುವೆ ! ಬಳಿಕೆಮ್ಮನೇಂ ಪರಾಧೀನತೆಗೆ ತೊರೆದೆ ? ಮರಳಿ ಹಿಂದುಗಳ ಭಾಗ್ಯವನೆಂದು ತೆರೆವೆ ? ವರುಷ ಹಲನೂರಾಯ್ತು, ನಮಗಿಲ್ಲ ನೋಡ ಸ್ವಾತಂತ್ರ್ಯ ! ನಮ್ಮ

ಹೇ ಆತ್ಮ ತಮೋಹಾರಿ !ಹೇ ಆತ್ಮ ತಮೋಹಾರಿ !

ಕವಿ – ಕುವೆಂಪು ಗಾಯಕಿ – ರತ್ನಮಾಲಾ ಪ್ರಕಾಶ್ ಹಾಡು ಕೇಳಿ:- ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ ಜಟಿಲ ಕುಟಿಲ ತಮ ಅಂತರಂಗ ಬಹು ಭಾವ ವಿಪಿನ ಸಂಚಾರಿ ಜನುಮ ಜನುಮ ಶತ ಕೋಟಿ ಸಂಸ್ಕಾರ ಪರಮ ಚರಮ