ಆಕಸ್ಮಿಕ – ೧೯೯೩
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಡಾ.ರಾಜ್‍ಕುಮಾರ್

ಹೇ ಹೇ ಬಾಜೂ.. ಲಾಲ ತಗಡಗ ಲಾಲ ತಗಗಡ ಹೇ ಹೇ …
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕ ಬಂಡಿ,
ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕ ಬಂಡಿ
ಬದುಕಿದು ಜಟಕ ಬಂಡಿ
ವಿಧಿ ಅಲೆದಾಡಿಸುವ ಬಂಡಿ…
|| ಹುಟ್ಟಿದರೇ ಕನ್ನಡ ನಾಡಲ್ಲಿ….||
ಕಾಶಿಲಿ ಸ್ನಾನ ಮಾಡು
ಕಾಶ್ಮೀರ ಸುತ್ತಿ ನೋಡು
ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತ ಎಲ್ಲೋರವ ಬಾಳಲ್ಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚೆಂದಾನ ತೂಕಮಾಡು
ಕಲಿಯೋಕೆ ಕೋಟಿ ಭಾಷೆ ಆಡೋಕ್ಕೆ ಒಂದೇ ಭಾಷೆ
….ಕನ್ನಡಾ..ಕನ್ನಡಾ..ಕಸ್ತೂರಿ ಕನ್ನಡಾ
|| ಹುಟ್ಟಿದರೇ ಕನ್ನಡ ನಾಡಲ್ಲಿ….||
ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು ,ಜ್ಞಾನಕ್ಕೆ ಪೀಠ ಇದು
ಕಾವ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು, ನಾದಾಂತರಂಗವಿದು
ಕುವೆಂಪು ಬೇಂದ್ರೆಯಿಂದ ಕಾರಂತ ಮಾಸ್ತಿಯಿಂದ
ಧನ್ಯವೀ ಕನ್ನಡ ….ಗೋಕಾಕಿನ ಕನ್ನಡಾ..
|| ಹುಟ್ಟಿದರೇ ಕನ್ನಡ ನಾಡಲ್ಲಿ….||
ಬಾಳಿನ ಬೆನ್ನು ಹತ್ತಿ
ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೂ
ನಮ್ಮೂರೇ ನಮಗೆ ಮೇಲು
ಕೈಲಾಸಂ ಕಂಡ ನಮಗೆ ಕೈಲಾಸಂ ಯಾಕೆ ಬೇಕು?
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು?
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ….ಇಲ್ಲಿಯೇ…. ಈ ಮಣ್ಣಿನಲ್ಲಿಯೇ
ಎಂದಿಗೂ ನಾನಿಲ್ಲಿಯೇ…..
|| ಹುಟ್ಟಿದರೇ ಕನ್ನಡ ನಾಡಲ್ಲಿ…||
***

 

7 thoughts on “ಆಕಸ್ಮಿಕ – ಹುಟ್ಟಿದರೆ ಕನ್ನಡನಾಡಲ್ಲಿ”

  1. ಈ ತುಳಸೀವನದಲ್ಲಿ ಬೆಳೆದಿರುವ ಸಸಿಗಳೆಲ್ಲಾ ಆರೋಗ್ಯವಾಗಿ, ಹುಲುಸಾಗಿ ಬೆಳೆದಿವೆ. ಬೆಳೆಯುತ್ತಿವೆ.
    ಬೆಳೆಯುತ್ತವೆ ಎಂಬ ನಂಬಿಕೆಯೂ ಇದೆ.
    ಇನ್ನೂ ಹೆಚ್ಚು ಹೆಚ್ಚು ತರಹಾವರಿ ಗಿಡಗಳನ್ನು ನೆಟ್ಟು, ಬೆಳೆಸಿ. ಇಲ್ಲಿರುವ ಎಲ್ಲ ಕೃತಿಗಳಿಗೂ ಸೇರಿಸಿ ಇಲ್ಲಿ ಪ್ರತಿಕ್ರಿಯಿಸುತ್ತಿರುವೆ.
    ಪ್ರತ್ಯೇಕವಾಗಿ ಬರೆದು ನನ್ನ ಕೆಟ್ಟ ದೃಷ್ಟಿ ತಗುಲದಿರಲಿ.
    (ಹಾಗಲ್ಲ, ಇನ್ಮೇಲೆ ದಿನನಿತ್ಯ ನೋಡಿ ಪ್ರತ್ಯೇಕ ಪ್ರತಿಕ್ರಿಯೆ ತಿಳಿಸುವೆ).
    ಇದನ್ನು ಸಾರ್ವಜನಿಕರಿಗೆ ಎಂದು ತೆರೆದಿದ್ದು. ನಾನು ನೋಡ್ತಿರೋದು ಇವತ್ತೇ. ಅದುವೇಕನ್ನಡಕ್ಕೆ ಸಡ್ಡು ಹೊಡೆಯುತ್ತಿದ್ದೀರಾ?
    (ಸುಮ್ನೆ ಕಾಲೆಳೆಯೋಕ್ಕೆ).
    ಒಂದು ಸಣ್ಣ ಸಲಹೆ. ನನ್ನಂತಹ ಅರೆ ಕುರುಡರಿಗೆ ಸುಲಭದಲ್ಲಿ ಕಾಣಲು, ಅಕ್ಷರಗಳನ್ನು ಬೋಲ್ಡ್ ಮಾಡಲಾಗುವುದಾ ಎಂದು ನೋಡಿ.

    ಇನ್ನೊಂದು ಪ್ರಶ್ನೆ – ಧಾತ್ರಿ ಅಂದರೇನು?

    ಇದಕ್ಕೆ ನಾನು ಸದಸ್ಯನಾಗಬಹುದೇ?

  2. ಓ! ಈಗ ಗೊತ್ತಾಯ್ತು. ಪುಟ್ಟ ವೆಬ್ ಮಾಸ್ಟರ್ ಮಾಡ್ತಿರೋ ಕೆಲಸಾನಾ? ಮನೆಮಂದಿಯೆಲ್ಲಾ ಈ ಜಾಲದಲ್ಲಿ ನಿರರ್ಗಳವಾಗಿ ಬರೆದು, ಬೆಳೆದು ಹೆಮ್ಮರಗಳಾಗಿ ಬೆಳೆಯಿರೆಂದು ಹಾರೈಸುವೆ.

    ಸುವೃತ ಮತ್ತು ಸುರಭಿಯರ ಸೂಪರ್ ಕೆಲಸಕ್ಕೆ ಹ್ಯಾಟ್ಸ್ ಆಫ್ – ಬೆಕ್ಕಿನ ಮರಿಗಳಲ್ಲ ಹುಲಿಯ ಮರಿಗಳೆಂಬುದನ್ನು ಇಡೀ ಜಗತ್ತಿಗೇ ತೋರಿಸಿ ಕೊಡಿ.

  3. ತುಳಸಿವನಕ್ಕೆ ಬಂದು ಹೃದಯ ಹಗುರಾಯ್ತು. ನನ್ನ ನೆಚ್ಚಿನ ತಾಣವಾಗಿಬಿಡ್ತು ಇದು.

    ಇದಕ್ಕಾಗಿ, ನಿಮ್ಮ ತಾಣಕ್ಕೆ ನನ್ನ ಬೊಗಳೆಯಲ್ಲಿ (ಬ್ಲಾಗ್ ನ ಕನ್ನಡೀಕರಣ ಎನ್ನಬಹುದೇ) ಒಂದು ಲಿಂಕ್ ಕೊಡಲಿಚ್ಛಿಸುವೆ.

    ಓಕೆ ತಾನೆ?

  4. ಇದೂ ಕೂಡ ಬೊಗಳೆಯಲ್ಲವೆಂಬುದನ್ನು ನಿಮ್ಮ ತಾಣಕ್ಕೆ ಬಂದು ನೋಡಿ ಖಚಿತ ಪಡಿಸಿಕೊಂಡೆ.

  5. ತವಿಶ್ರೀಯವರೆ, ಅಕ್ಷರಗಳ ಗಾತ್ರ ಹೆಚ್ಚಿಸಿದ್ದೇನೆ. ಈಗ ಓದಲು ಸುಲಭವಾಗಿದೆಯೇ? ತಿಳಿಸಿ.

    ಧಾತ್ರಿ ಎಂದರೆ ಸಂಸ್ಕೃತದಲ್ಲಿ “ಭೂಮಿ” ಎಂದು ಅರ್ಥ. ಅದು ನಮ್ಮ ಸುರಭಿಯ ಇನ್ನೊಂದು ಹೆಸರು. sritri ಬೇರೊಬ್ಬರ ಪಾಲಾಗಿದ್ದುದರಿಂದ , ನಾವು ಧಾತ್ರಿಯ ಮೊರೆ ಹೋಗಬೇಕಾಯಿತು 🙂

  6. ಈಗ ಸರಿಯಾಗಿ ಕಾಣಿಸ್ತಿದೆ. ಧರಿತ್ರಿ ಎನ್ನುವುದೇ ಧಾತ್ರಿಯಾ – ಸರಿ. ತಾಣ ಬಹಳ ಚೆನ್ನಾಗಿದೆ.
    ಲೇಖನಗಳೊಂದಿಗೆ ಚಿತ್ರಗಳನ್ನೂ ಸೇರಿಸಿದರೆ (ರಾಯರ ಕರುಣೆಯಿಂದ) ಇನ್ನೂ ಬಹಳ ಚೆನ್ನಾಗಿರುತ್ತದೆ, ಎನ್ನುವುದು ನನ್ನ ಅನಿಸಿಕೆ.

  7. ಧನ್ಯವಾದಗಳು. ನಾನು ಕೋರಿದ ಹಾಗೆ ರಾಯರು ತೆಗೆದ ಛಾಯಾಚಿತ್ರಗಳ ಬ್ಲಾಗ್ ಕೂಡಾ ಸೇರಿದೆ. ಎಲ್ಲವೂ ಚೆನ್ನಾಗಿದೆ.
    ಅಲ್ಲಿ ನನ್ನ ಪ್ರತಿಕ್ರಿಯೆ ಹಾಕಲಾಗಲಿಲ್ಲ. ಮುಖಪುಟದಲ್ಲಿ ಗುರುರಾಯರ ಚಿತ್ರವೊಂದನ್ನು ಸೇರಿಸಿಬಿಡಿ.
    ಕೆಟ್ಟ ದೃಷ್ಟಿಗಳ ಪರಿಣಾಮ ಈ ಸುಂದರ ಅಂತರ್ಜಾಲ ತಾಣದ ಮೇಲೆ ಬೀಳುವುದು ಬೇಡ.
    ಶ್ರೀರಕ್ಷೆ ಇರುವುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.