ಸಾಹಿತ್ಯ: ಎಸ್.ವಿ.ಪರಮೇಶ್ವರ ಭಟ್ಟ
ಸಂಗೀತ: ಸಿ. ಅಶ್ವಥ್
ಗಾಯಕ: ಡಾ. ರಾಜ್‍ಕುಮಾರ್

ಹಾಡು ಕೇಳಿ

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತಿತ್ತು |

ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು|

ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ
ಜೇನುಗನಸಿನ ಹಾಡು ಕೇಳುತಿತ್ತು |

ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹೇಳುತಿತ್ತು |

ಬರುವ ಮುಂದಿನ ದಿನದ ನವ ನವೋದಯಕ್ಕಾಗಿ
ಪ್ರಕೃತಿ ತಪವಿರುವಂತೆ ತೋರುತಿತ್ತು |

ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತಿತ್ತು |

2 thoughts on “ತಿಳಿಮುಗಿಲ ತೊಟ್ಟಿಲಲಿ – ಎಸ್.ವಿ.ಪರಮೇಶ್ವರ ಭಟ್ಟ”

  1. ನಾನು ತುಂಬ ಚಿಕ್ಕವಳಿದ್ದಾಗ, ನನ್ನ ತಾಯಿ ನನಗೆ ಕಲಿಸಿದ ಮೊದಲನೆಯ ಹಾಡು ಇದು
    ನೋಡಿ ಬಹಳ ಸಂತೋಷವಾಯಿತು.

  2. ಪಾರಿಜಾತ, ಹೌದು. ಚಿಕ್ಕಂದಿನಲ್ಲಿ ಕೇಳಿದ,ಕಲಿತ ಹಾಡುಗಳು ಬಹಳ ಕಾಲ ನೆನಪಲ್ಲುಳಿಯುತ್ತವೆ. ಆ ಹಾಡುಗಳನ್ನು ಮತ್ತೆ ಕೇಳಿದಾಗ ಸಂತೋಷವಾಗುತ್ತದೆ. ನನಗೂ ಈ ಅನುಭವವಾಗಿದೆ. 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.