ಸಾಹಿತ್ಯ: ಎಸ್.ವಿ.ಪರಮೇಶ್ವರ ಭಟ್ಟ
ಸಂಗೀತ: ಸಿ. ಅಶ್ವಥ್
ಗಾಯಕ: ಡಾ. ರಾಜ್ಕುಮಾರ್
ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತಿತ್ತು |
ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು|
ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ
ಜೇನುಗನಸಿನ ಹಾಡು ಕೇಳುತಿತ್ತು |
ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹೇಳುತಿತ್ತು |
ಬರುವ ಮುಂದಿನ ದಿನದ ನವ ನವೋದಯಕ್ಕಾಗಿ
ಪ್ರಕೃತಿ ತಪವಿರುವಂತೆ ತೋರುತಿತ್ತು |
ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತಿತ್ತು |
ನಾನು ತುಂಬ ಚಿಕ್ಕವಳಿದ್ದಾಗ, ನನ್ನ ತಾಯಿ ನನಗೆ ಕಲಿಸಿದ ಮೊದಲನೆಯ ಹಾಡು ಇದು
ನೋಡಿ ಬಹಳ ಸಂತೋಷವಾಯಿತು.
ಪಾರಿಜಾತ, ಹೌದು. ಚಿಕ್ಕಂದಿನಲ್ಲಿ ಕೇಳಿದ,ಕಲಿತ ಹಾಡುಗಳು ಬಹಳ ಕಾಲ ನೆನಪಲ್ಲುಳಿಯುತ್ತವೆ. ಆ ಹಾಡುಗಳನ್ನು ಮತ್ತೆ ಕೇಳಿದಾಗ ಸಂತೋಷವಾಗುತ್ತದೆ. ನನಗೂ ಈ ಅನುಭವವಾಗಿದೆ. 🙂