ಕವಿ – ಡಿವಿಜಿ -ಅಂತಃಪುರ ಗೀತೆಗಳು
ಗಾಯಕಿ: ಅಶ್ವಿನಿ
ಸಂಗೀತ – ವಿಶ್ವೇಶ್ ಭಟ್
ಆಲ್ಬಮ್ – ಘಮ ಘಮ
ಆವ ರಾಗವ ಪಾಡುವೇ – ಓ ಚೆಲುವೇ
ಎನ್ನೊಲವೇ ಬಾಳ್ಗೆಲವೇ – ನೀನಾವ – ರಾಗವ ಪಾಡುವೇ|| ಪ||
ಆವರಾಗವ ಪಾಡಿ – ಆವ ಮಾಟವ ಮಾಡಿ |
ಆವ ಜೀವವ ಕಾಡಿ – ನೀನಿಂತು ನಲಿಯುವೆ || ಅನು ಪಲ್ಲವಿ||
ಕಲಹಂಸೆ ಲಲಿತಸ್ವರೆ – ಓ ಮನೋಹರೆ|
ವಿಲಸಿತ ವಿವರಾಧರೇ – ಓ ಚದುರೇ ||
ಮನಸಿನ ಗುಹೆಯಲಿ – ಮಲಗಿರ್ಪ ದನಿಗಳ |
ಹೊನಲಾಗಿ ಹರಿಸಿ ಜಾ-ಲಿಸುವೆ ನಮ್ಮಸುಗಳ ||
ಮಧುರ ಗೀತಾಯುಧದೆ ನಮ್ಮಯ |
ಚದುರ ಚೆನ್ನಿಗ ಕೇಶವೇಶನ ||
ಹೃದಯರಾಜ್ಯವ ಸೂರೆಗೊಳ್ಳುವ |
ಮದನಬಲ ಪಟ್ಟಾಧಿಕಾರಿಣಿ ||
***
ಮಧುರ ಗೀತಾಯುಧದಿಂದ ಚದುರ ಚೆನ್ನಿಗ ಕೇಶವೇಶನ ಹೃದಯರಾಜ್ಯವ ಸೂರೆಗೊಳ್ಳುವ ಮದನಬಲ ಪಟ್ಟಾಧಿಕಾರಿಣಿ ! ಏನು ಅಧ್ಬುತ ಕಲ್ಪನೆ ನೋಡಿ ನಮ್ಮ ಡಿ.ವಿ.ಗುಂಡಪ್ಪನವರದು. ಹಾಡು ಕೇಳಿ ಆನಂದವಾಯಿತು.
ಎಷ್ಟೋ ಸಾರಿ ಈ ಹಾಡು ಕೇಳಿದ್ರೂ ಪೂರ್ಣ ಸಾಹಿತ್ಯ ಇಲ್ಲದ ಕೊರತೆ ಇತ್ತು, ಧನ್ಯವಾದ. ನಮ್ಮ ಗುಂಡಪ್ಪನವರ ಬರಹದ ಗತ್ತೇ ಗತ್ತು…ಏನೀ ಮಹಾನಂದವೇ ಹಾಡೂ ಚೆನ್ನಾಗಿದೆ.