ಹೊಸ ಕಥೆ ಬರೆಯೋಣವೇ? ಎಂದು ಅನೇಕರು ಉತ್ಸಾಹದಿಂದ ಕೇಳಿಕೊಂಡಿದ್ದಕ್ಕಾಗಿ ಇನ್ನೊಂದು ಹೊಸ ಕಥೆಯನ್ನು ಪ್ರಾರಂಭಿಸಿದ್ದೇನೆ. ಅರ್ಧಕ್ಕೆ ಕೈಕೊಟ್ಟು ಓಡಿ ಹೋಗುವುದಿಲ್ಲವೆಂದು ಕೆಲವರು ಭರವಸೆಯನ್ನೂ ನೀಡಿದ್ದಾರೆ. 🙂 ಈ ಬಾರಿ ಕಥೆ ತ್ರಿಕೋನ ಪ್ರೇಮದ ಜಾಡು ಹಿಡಿದು ಹೋಗದಂತೆ, ಹೊಸ ದಾರಿಯಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸೋಣ. ಎಂದಿನಂತೆ ಕತೆ ಬರೆಯಲು ಒಂದು ದಾರ. ಕಥೆಯ ಬಗ್ಗೆ ಚರ್ಚಿಸಲು ಇನ್ನೊಂದು ದಾರ. ಕಥೆ ಚಿಕ್ಕದಾಗಿರಲಿ, ಚೊಕ್ಕದಾಗಿರಲಿ. ಈ ಕಥೆಯನ್ನು ಸದ್ಯದಲ್ಲಿಯೇ ಬೇರೊಂದು ಬ್ಲಾಗಿಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿವರೆಗೆ ಇಲ್ಲೇ ಬರೆಯಿರಿ.

ಕಥೆ ಬರೆಯುವವರಿಗೆಲ್ಲಾ ಸ್ವಾಗತ!

1. sritri
2. ಮಾಲಾ ಎಂಬ ಅಮ್ಮುವಿನಮ್ಮ
3. shiv
4. ಜಗಲಿ ಬಾಗವತ
5. ಸುನಾಥ

40 thoughts on “ಕಥೆ ಬಗ್ಗೆ ಮಾತಾಡಲು ಈ ಎಳೆ”

  1. ಅದ್ಯಾರು ಮಾತು ಕೊಟ್ಟಿದ್ದು. ಈ ಶತಮಾನದಲ್ಲೂ ಮಾತು ಕೊಡೋರು, ಅದನ್ನ ಉಳಿಸಿಕೊಳ್ಳೋರು ಇದಾರ? ಮಸ್ತು ಒಳ್ಳೆ ಜನ ಇರ್ಬೇಕು ಅಲ್ವಾ?ಃ-)

  2. ಕಥೆ ಆಧುನಿಕ ವಾತಾವರಣದಲ್ಲಿ ಪ್ರಾರಂಭವಾಗಿದೆ. That’s good. ಇದು cyber ಯುಗದ ಕತೆಯಾಗಬಹುದು. cyber crime, ಸ್ವಲ್ಪ ಪತ್ತೆದಾರಿ ಬಂದರೂ ತಪ್ಪಿಲ್ಲ. ಹೊಸ ಹಾದಿಯನು ಹಿಡಿದು ನಡೆಯಣ್ಣ ಮುಂದೆ ಎಂದು ಹೇಳೋಣವೆ?

  3. ಮೇಡಂ,ಕಥೆ ಜೊತೆ ಪುಟ್ಟ ಪುಟ್ಟ ಚೇತೋಹಾರಿ ಬರಹಗಳೂ ಬರುತ್ತಿರಲಿ.

  4. “ಪುಟ್ಟ ಪುಟ್ಟ ಚೇತೋಹಾರಿ ಬರಹಗಳೂ ಬರುತ್ತಿರಲಿ.”

    ಗಿರಿ, ಪುಟ್ಟ ಪುಟ್ಟ ಬರಹಗಳನ್ನು ಬರೆಯಬಹುದು. ಅವು ಚೇತೋಹಾರಿ ಹೌದೋ,ಅಲ್ಲವೋ ಎಂದು ಹೇಗೆ ಗೊತ್ತಾಗುತ್ತದೆ? 🙂

  5. ಮಾಲಾ, ನೀವು ಬರೆಯುತ್ತಿರುವ ಕಥೆಯನ್ನು ಓದುತ್ತಾ ಇಲ್ಲೇ ಇದ್ದೇವೆ. ನೀವೇ ಕಥೆ ಬರೆದು ಮುಗಿಸಿದರೂ ಸಂತೋಷವೇ 🙂

  6. ಶಿವ್, sept,11 ಹೊತ್ತಿಗೆ ಸರಿಯಾಗಿ ಕಥೆಯನ್ನು ಅದರತ್ತ ತಿರುಗಿಸಿ ಕಥೆಯನ್ನು “ಸಕಾಲಿಕ”ವಾಗಿಸಿದ್ದೀರಿ. ಧನ್ಯವಾದಗಳು. ಮಡಿದವರ ನೆನಪಿಗೆ ಕಂಬನಿ, ಈ ಮೂಲಕ ಕಥಾಂಜಲಿ.

  7. ಅರೆರೆ!! ಹೊಸ ಕಥೆ .

    ಕಥೆ ಚೆನ್ನಾಗಿ ಬರ್ತಾ ಇದೆ. ನನ್ನ ಮನೆಯಲ್ಲಿ ನೆಟ್ ಬರೋವರೆಗೆ ಓದೋದಷ್ಟೆ ಕೆಲ್ಸ. ಕಥೆ ಬರೆಯೋಕೆ ಶುರು ಮಾಡಿದ್ರೆ ನನ್ನ ಕಥೆ ಮುಕ್ತಾಯ ಆಗುತ್ತೆ ಇಲ್ಲಿ 😉

  8. ಇವತ್ತು ಈರುಳ್ಳಿ ಹೆಚ್ಚಿದ್ದು ಹೆಚ್ಚಾಯ್ತು ಅನ್ಸತ್ತೆ….ಕಣ್ಣಲ್ಲಿ ಇನ್ನೂ ಬಳ ಬಳ….ಃ-))

    ಹೊಸ ಗಾದೆ ಃ-
    “ಭಾಗವತ, ತಾನೂ ಕೆಡೋದಲ್ದೆ, (ತುಳಸಿ) ವನಾನೂ ಕೆಡಿಸಿದ್ನಂತೆ..”ಃ-))

  9. ‘ಇವತ್ತು ಈರುಳ್ಳಿ ಹೆಚ್ಚಿದ್ದು ಹೆಚ್ಚಾಯ್ತು ಅನ್ಸತ್ತೆ….ಕಣ್ಣಲ್ಲಿ ಇನ್ನೂ ಬಳ ಬಳ..”

    ಹೌದು, ಪ್ರತಾಪನ ಜೊತೆಗೆ ಶಾಸ್ತ್ರಿಗಳನ್ನೂ ಮೇಲೆ ಕಳಿಸಲು ಭಾಗವತರು ಸ್ಕೆಚ್ ಹಾಕಿರೋಹಾಗಿದೆ!

  10. ಹ್ಯಾಟಾಫ್ ಭಾಗವತರೇ…ಇಳಿವಯಸಲ್ಲಿ ಮಗನನ್ನು ಕಳೆದುಕೊಳ್ಳುವ ಅಪ್ಪ ಅಮ್ಮನ ದುರಂತವನ್ನು ಮನಮುಟ್ಟುವಂತೆ ಬರೆದಿರುವಿರಿ…ಓದಿ ತಲೆ ಕೆಟ್ಟು ಹೋಯ್ತು…ಕಣ್ಣು ಮಂಜಾಯಿತು…

  11. ಮಾಲಾ, ಕಥೆಯಲ್ಲಿ ಹೊಸ ತಿರುವು ಚೆನ್ನಾಗಿ ಬಂದಿದೆ.. ಭಯೋತ್ಪಾದನೆಯ ಜೊತೆ ಭೂಮಾಫಿಯಾ ಸೇರಿಕೊಂಡು 100% crime story ತಯಾರಾಗ್ತಾ ಇದೆ 🙂

  12. ಕತೆ ಹೊಸ ಹೊಸ (criminal) ಆಯಾಮಗಳನ್ನು ಪಡೆದುಕೊಳ್ಳುತ್ತಿರುವದನ್ನು ನೋಡಿದಾಗ(ಓದಿದಾಗ), ಬಹಳಾ thrill ಆಗುತ್ತಿದೆ. ನಮ್ಮ ಕತೆಗಾರ/ತಿಯರ potential ತುಂಬಾ ಮೆಚ್ಚುವಂತಹದು.
    ನಿಮಗೆಲ್ಲರಿಗೂ ನನ್ನ ಅಭಿನಂದನೆಗಳು.

  13. ಎಷ್ಟೆಲ್ಲಾ ಕ್ರಿಮಿನಲ್ ideaಗಳು ನಮ್ಮ ತಲೆಯಲ್ಲಿ ಇವೆ ಅಲ್ಲವೆ? ಇದೇ ನಮ್ಮ
    ಆತ್ಮದರ್ಶನ! Anyway, ಕತೆ ಸಾಗುತ್ತಿರುವ ವೇಗವನ್ನು ಹಾಗು thickening plot ನೋಡಿ ನಾನು ರೋಮಾಂಚಿತನಾಗುತ್ತಿದ್ದೇನೆ. ಕತೆಯನ್ನು ಈ ರೀತಿಯಾಗಿ ಹೆಣೆಯುತ್ತಿರುವ ನಿಮಗೆಲ್ಲರಿಗೂ ಅಭಿನಂದನೆಗಳು.

  14. ಸುನಾಥರೇ, – ಕತೆಯನ್ನು ಈ ರೀತಿಯಾಗಿ ಹೆಣೆಯುತ್ತಿರುವ ನಿಮಗೆಲ್ಲರಿಗೂ ಅಭಿನಂದನೆಗಳು – ಎಂದು ತಪ್ಪಿಸಿಕೊಳ್ಳಲು ನೋಡ್ತಿದ್ದೀರಲ್ಲಾ? 🙂

  15. ಶ್ರೀತ್ರೀ…ಆತುರವು ಏಕೆ?
    ಕಥೆಯನು ಮುಗಿಸದೆ
    ಮಜವನು ಕೆಡಿಸದೆ
    ಇದ್ದರೆ ನೀವು….
    ಹಯಗ್ರೀವ ಮಾಡಿ
    ಕೊಡುವೆವು ನಾವು…
    (ಯಾವ ಸಿನಿಮಾ ಹಾಡಿನ ಟ್ಯೂನ್ ಗೊತ್ತಾಯಿತೇ?)

  16. ಕಥೆ ತುಂಬಾ ಸಿಕ್ಕುಸಿಕ್ಕಾದಂತೆ ಅನಿಸಿ ಸ್ವಲ್ಪ ಸರಳಗೊಳಿಸಿದೆ. ಹಯಗ್ರೀವ ಮಾಡಿಕೊಡುವುದಾದರೆ ಧಾರಾಳವಾಗಿ ಮುಂದುವರೆಸಿ.

    “(ಯಾವ ಸಿನಿಮಾ ಹಾಡಿನ ಟ್ಯೂನ್ ಗೊತ್ತಾಯಿತೇ?)”

    ನನಗೇ ಸವಾಲ್ ಹಾಕ್ತೀರಾ ನೀವು? 🙂 ಹೇಳಿದ ಮಾತನು ಕೇಳಿದೆಯಾದರೆ ಬಾಳು ಸೊಗಸು ಕನಸು ನನಸು. (ಏಕೆ ಅವಸರವು ಹೇಳು/ಸೊಸೆ ತಂದ ಸೌಭಾಗ್ಯ)”

  17. ಅಯ್ಯಯ್ಯೋ ನಿಮಗೇ ಸವಾಲು ಹಾಕುವಷ್ಟು ಸಿನಿಮಾ ಪರಿಣಿತಳಲ್ಲ ನಾನು…
    ಅಣಕ ಹಾಡಿನ ಕೊನೆಯ ಸಾಲುಗಳು ಒರಿಜಿನಲ್ ನೊಂದಿಗೆ ಸರಿಯಾಗಿ ಸೇರುವುದಿಲ್ಲ (ಕೃಪೆ-ಸದಾ ಅಳುವ ಅಮ್ಮು) ಅದಕ್ಕೇನಿಮಗೆ ಅದು ಯಾವ ಹಾಡು ಅಂತ ಗೊತ್ತಾಗುತ್ತೋ ಇಲ್ವೋ ಅಂತ ಸಲ್ಪ ಡೌಟ್ ಬಂತು ಅಷ್ಟೇ…ಅದಕ್ಕೇ ಹಾಗೆ ಬರೆದಿದ್ದು ನಾನು…

  18. ಅದ್ಯಾರು ಮಾತು ಕೊಟ್ಟಿದ್ದು. ಈ ಶತಮಾನದಲ್ಲೂ ಮಾತು ಕೊಡೋರು, ಅದನ್ನ ಉಳಿಸಿಕೊಳ್ಳೋರು ಇದಾರ? ಮಸ್ತು ಒಳ್ಳೆ ಜನ ಇರ್ಬೇಕು ಅಲ್ವಾ?ಃ-)

    ಅಂತೂ ಇವರು ಮಸ್ತು ಒಳ್ಳೇ ಜನ…!
    ಮಾತು ಉಳಿಸಿಕೊಳ್ಳುತ್ತಿದ್ದಾರೆ…!!

  19. ಕತೆಗೆ ಒಳ್ಳೆಯ international ಹಾಗು domestic canvas ಕೊಡುತ್ತಿರುವ ಅಮ್ಮುವಿನಮ್ಮನವರಿಗೆ ಅಭಿನಂದನೆಗಳು. ಅಮ್ಮುವಿನಮ್ಮ ಹಾಗು ತ್ರಿವೇಣಿಯವರು ಹಾಡುಗಳ ಜುಗಲಬಂದಿ ಮಾಡತೊಡಗಿದರೆ ನಾವು ಬೆರಗಾಗಿ ನೋಡುತ್ತ ಕೂಡಬೇಕಷ್ಟೆ! ಅದೇ ಮಾತು ಕತೆಗೂ ಅನ್ವಯಿಸುತ್ತಿದೆ.
    ಆದರೆ, ಜಗಲಿ ಭಾಗವತರನ್ನು ಹಗುರಾಗಿ ತೆಗೆದುಕೊಳ್ಳಬೇಡಿ. ಯಾವ ಹೊತ್ತಿನಲ್ಲಿ ಅವರು ಕತೆಯಲ್ಲಿ ಏನು ಮಾಡುತ್ತಾರೆನ್ನುವದನ್ನು ರಜತಪರದೆಯ ಮೇಲೆ ನೋಡಿ ಆನಂದಿಸಿರಿ.

  20. ಅಬ್ಬಬ್ಬಾ, ಕಥೆಯ ಓಟ ನೋಡಿದ್ರೆ ಸದ್ಯದಲ್ಲಿ ನಿಲ್ಲುವ ಹಾಗೆ ಕಾಣಲ್ಲ. ಅಂತರ್ರಾಷ್ಟ್ರೀಯ, ಅಂತಾರಾಷ್ಟ್ರೀಯ ನೆಲೆಗಳಲ್ಲಿ ಬೆಳೆಯುತ್ತಿರುವ ಈ ಕಥೆಗೆ ಒಳ್ಳೆಯ ಟಿ.ವಿ.ಸೀರಿಯಲ್ ಆಗುವ ಲಕ್ಷಣ, ಸಾಧ್ಯತೆ- ಎರಡೂ ಇವೆ.
    ಏನಂತೀರಿ?

  21. ಟಿ.ವಿ.ಸೀರಿಯಲ್ ಆಗುವ ಸಾಧ್ಯತೆಃ
    >>
    ಮೆಗಾ ಸೀರಿಯಲ್ ಆಗುವ ಸಾಧ್ಯತೆ ಇದೆ, ಜ್ಯೊತಿಯವರೆ!

  22. ಜ್ಯೋತಿಯವರೆ,
    ನಿಮ್ಮ ಹೆಸರನ್ನು ತಪ್ಪಾಗಿ ಬರೆದಿದ್ದಕ್ಕೆ ಕ್ಷಮೆ ಇರಲಿ. BRH Kannadaಕ್ಕೆ ಅಭ್ಯಾಸವಾಗಿರುವದರಿಂದ ಇಂತಹ ತಪ್ಪುಗಳು ಘಟಿಸುತ್ತವೆ.

  23. ಅಭಿನಂದನೆಗಾಗಿ ವಂದನೆಗಳು ಸುನಾಥರೇ
    ಅಂದ ಹಾಗೆ ನೀವೂ ಜ್ಯೋತಿಯೂ ರೆಫರ್ ಮಾಡುತ್ತಿರುವುದು
    ಈಹಿಂದೆ ತ್ರಿವೇಣೀ ಯವರು ಬರೆದ ಹಾಗೆ ತಲೆ ಕೆಡಿಸುವ ಉದಯ
    ಟಿ.ವಿ ಸೀರಿಯಲ್ ಅಲ್ಲಾ ಎಂದು ಭಾವಿಸುವೆ….

  24. “ಒಳ್ಳೆಯ” ಅನ್ನುವ ಪದ ಇದ್ದ ಮೇಲೂ “ತಲೆ ಕೆಡಿಸುವ” ಅನ್ನುವ ಅರ್ಥ ಬರ್ತಿದೆಯೆ?

  25. ಪರವಾಗಿಲ್ಲ ಸುನಾಥರೇ, ಒಂದಿಷ್ಟು ತಪ್ಪಾಗಿ ಬರೆದರೂ ನಾನು ನಾನೇ! ಅದೇನೂ ಬದಲಾಗಲ್ಲ, ಬಿಡಿ.

  26. ಮಾಲಾ,
    ಮಾತು ಉಳಿಸಿಕೊಂಡಿದ್ದೇನೆ. ಪ್ರೇಮಿಗಳನ್ನು ಒಂದುಗೂಡಿಸುವುದು ನಿಮ್ಮ ಜವಾಬ್ದಾರಿ. ಕಥೆಯ ರಮ್ಯತೆಯನ್ನು ಉಳಿಸಿಕೊಳ್ಳಬೇಕುಃ-) ಹಿಂದಿನ ಕಥೆಯಲ್ಲಿ ನೀವು ಮಾಡಿದ ಘೋರ ಅಪರಾಧಕ್ಕೆ (ಸುದೀಪ – ಸುನಯನ) ಪ್ರಾಯಶ್ಚಿತ್ತ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದೇನೆ.

    ತುಳಸಿಯಮ್ಮ,
    ನಿಮ್ಮಿಚ್ಛೆಯಂತೆ ಕಥೆಗೆ ತಿರುವು ಕೊಟ್ಟಿದ್ದೇನೆ. “ಈ ಸರ್ತಿ ಕಥೆಯನ್ನ ನೀಲಿಕೇರಿಗೆ ಕೊಂಡೊಯ್ಯದ ಹಾಗೆ ಕಥೆಯನ್ನ ಆರಂಭಿಸಿದ್ದೇನೆ” ಅಂತ ಅಂದಿದ್ರಲ್ವಾಃ-))

    ಸುಪ್ತದೀಪ್ತಿ,
    ನೀವು ಕೊಟ್ಟ ಬಿರುದನ್ನು ಉಳಿಸಿಕೊಂಡಿದ್ದೇನೆಃ-))

  27. ಕೋತಿ ಬಂದಿತಮ್ಮಾ, (ತುಳಸಿ)ವನದಲಿ
    ಕೋತಿ ಬಂದಿತಮ್ಮಾ!
    ನೀಲಿಕೇರಿಯ ನೆಚ್ಚಿನ ಕೋತಿ,
    ಖಾಲಿ ಬುರುಡೆಯ ಹುಚ್ಚಿನ ಕೋತಿ,
    ನಮ್ಮೆಲ್ಲರಿಗೂ ಮೆಚ್ಚಿನ ಕೋತಿ!
    ಕೋತಿ ಬಂದಿತಮ್ಮಾ, ತುಳಸಮ್ಮಾ,
    ಕೋತಿ ಬಂದಿತಮ್ಮಾ!

  28. ಮತ್ತೆ ಸುದೀಪನ entry-ನಾ? ಅದು ನೀಲಿಕೇರಿಯಿಂದಾನೆ ಆಗಬೇಕಾ?
    ಅಂದ ಹಾಗೆ, ಓರ್ಕುಟ್, ಪ್ರೊಫೈಲ್, ಕಮ್ಯುನಿಟಿ, ಭಾವಚಿತ್ರ…ಭಾಗವತ್ರು ಏನೇನೋ ಬರ್ದಿದ್ದಾರೆ…ಭಾಗವತ್ರೇ ನಿಮ್ಮ ಪ್ರೊಫೈಲ್ ಜಾಲಾಡಿಸಿದ್ರೆ ಆ ಹುಡುಗಿ ವಿವರ ಸಿಗುತ್ತಾ? all the best :))

  29. ಸುನಾಥರೇ, ಸೂಪರ್ ಕವಿತೆ. ಸರಿಯಾಗಿ ಹೇಳಿದ್ರಿ… ನಾನು `ಭಾಗವತ’ನಿಗೆ ಕೊಟ್ಟ ಬಿರುದನ್ನು ಪದ್ಯವಾಗಿಸಿದ್ದೀರಿ. ಧನ್ಯವಾದಗಳು.

  30. “ಕೋತಿ ಬಂದಿತಮ್ಮಾ, ತುಳಸಮ್ಮಾ,
    ಕೋತಿ ಬಂದಿತಮ್ಮಾ! –

    ಸುನಾಥರೇ, ಪಲ್ಲವಿ ಚೆನ್ನಾಗಿದೆ. ಇದಕ್ಕೆ ನೀವು ಒಂದೆರಡು ಚರಣಗಳನ್ನೂ ಸೇರಿಸಿ ಬರೆದುಕೊಟ್ಟರೆ ಸಂಬಂಧಪಟ್ಟವರಿಗೆ(ಲ್ಲಾ) ಉಡುಗೊರೆ ಕೊಡಬಹುದು. ಅಂದಹಾಗೆ ಇದನ್ನು “ಅನೆ ಬಂದಿತಮ್ಮಾ , ಮರಿಯಾನೆ ಬಂದಿತಮ್ಮಾ” ಧಾಟಿಯಲ್ಲಿ ಹಾಡಬಹುದೆನ್ನಿಸುತ್ತದೆ ಅಲ್ಲವೇ?

  31. ಜ್ಯೋತಿಯವರೆ, “ಕೋತಿ” ಅಂತಾ ನೀವು ಪ್ರೀತಿಯಿಂದ ಕರೆದಿರಿ; ನಾನೂ ಪ್ರೀತಿಯಿಂದಲೇ ಪದ್ಯ ಬರೆದೆ; ತ್ರಿವೇಣಿಯವರು ಪೂರ್ಣ ಪ್ರಮಾಣದ ಕೀರ್ತನೆ ಬರೆಯಿರಿ ಅಂತ ಹೇಳುತ್ತಿದ್ದಾರೆ. ನನಗೆ ಧೈರ್ಯ ಬರಲೊಲ್ಲದು. ಎಲ್ಲಾದರೂ ಕೋತಿ ಕೈಯಲ್ಲಿ ನಾನು ಸಿಕ್ಕಿ ಹಾಕಿಕೊಂಡರೆ ಅಂತ. ಆದರೂ ನಿಮ್ಮಗಳ ಹಿಂದೆ ನಿಂತು, ತಪ್ಪಿಸಿಕೊಂಡೇನು ಎಂದುಕೊಂಡು, ಇನ್ನೂ ಒಂದು ಚರಣ ಹೇಳಿ ಮಂಗಳಾರತಿ ಮಾಡುತ್ತಿದ್ದೇನೆಃ

    “ಅಕ್ಕಂದಿರಿಗೇ ಅಕ್ಕರೆ ಕೋತಿ,
    ಮಿಕ್ಕವರಿಗೇ ಸಕ್ಕರೆ ಕೋತಿ,
    ಚೊಕ್ಕ ಪುರಂದರ ವಿಠಲನ ಕೋತಿ,
    ತುಳಸಿವನದಲಿ ಸಿಕ್ಕಿದೆ ಕೋತಿ.
    ಕೋತಿ ಬಂದಿತಮ್ಮಾ, ತುಳಸಮ್ಮಾ, ಕೋತಿ ಬಂದಿತಮ್ಮಾ!”

    ತ್ರಿವೇಣೀಯವರೆ, ಇದನ್ನು ಯಾವ ರಾಗದಲ್ಲಿ ಹಾಡಿದರೂ ನನ್ನ ಅಭ್ಯಂತರವಿಲ್ಲ. ಪುರಂದರದಾಸರನ್ನು ಒಂದು ಮಾತು ಕೇಳಿ.

    ಭಾಗವತಾ, ನಾನೂ ನೀನೂ ಒಂದೇ ಕುಲಕ್ಕೆ ಸೇರಿದ ಬಾಂಧವರು.
    ಸಿಟ್ಟಾಗಬೇಡಪ್ಪಾ!

  32. ಸುನಾಥರೇ, ಇದೀಗ ಇನ್ನೂ ಚೆನ್ನಾಯ್ತು. ದಾಸರು (ಮತ್ತವರ ದೇವರು) ನಿಮ್ಮನ್ನು ಹರಸಲಿ.
    ಮತ್ತೊಂದು ಗುಟ್ಟು, ಇಷ್ಟೆಲ್ಲ ಜನರ ಪ್ರೀತಿಗೆ ಪಾತ್ರನಾಗಿರುವ ಈ ಕೋತಿಗೆ ಸಿಟ್ಟು ಬರೋದೇ ಇಲ್ಲ, ಗಾಬರಿಯಾಗಬೇಡಿ!

    Relax please.

  33. ಮೊನ್ನೆಯಿಂದ ತುಳಸಿವನದಲ್ಲಿ ಸಿಕ್ಕಾಪಟ್ಟೆ ಕಾಮೆಂಟುಗಳು. ನನ್ನ ಕಾಲು ಎಳೆಯುವುದೆಂದರೆ ಎಲ್ಲರೂ ರೆಡಿ. ಮಾಲಾ ಒಬ್ರೇ ತುಂಬ ಸಜ್ಜನರು ಅನ್ಸತ್ತೆ ಃ-)

    ನೋಡಿ ಮಾಲಾ, ಈ ಬಡಪಾಯಿ ತಮ್ಮನಿಗೆ ನೀವಾದ್ರೂ ಬೆಂಬಲ ಕೊಡಿ ಃ-)

  34. ತಮ್ಮಣ್ಣಾ …ನಾನು ನೀವು ತಿಳಿದಿರುವಷ್ಟು ಸಜ್ಜನಳೇನಲ್ಲಾ… ನಿಮ್ಮ ಅಳಿಯನಿಗೆ (ಅಕ್ಕನ ಮಗ ಅಳಿಯ ತಾನೇ…?)ಜ್ವರ ಬಂದಿದೆ ಸೋ ಬಿಸಿ ಇದ್ದೆ ಅಷ್ಟೇ…. ಅಕ್ಕಂದ್ರು ಅಂತಾ ನಮ್ಮನ್ನೆಲ್ಲಾ ಜಗಲಿಯ ಬೋನಿನಲ್ಲಿ ಹಾಕಿಟ್ಟಿದ್ದೀರಲ್ಲಾ… ನಾನೊಬ್ಳೇ ಅಕ್ಕಂದಿರ ಪಾರ್ಟಿ ಬಿಟ್ಟು ಹೇಗೆ ಬರಲೀ…?
    ಅಕ್ಕಂದ್ರಿಗೇ ಜೈ….

  35. “ನನ್ನ ಕಾಲು ಎಳೆಯುವದೆಂದರೆ ಎಲ್ಲರೂ ರೆಡಿ”
    ))-
    “ಕಾಲನ್ನಲ್ಲ, ಬಾಲವನ್ನು!”

  36. “ನನಗೆ ಧೈರ್ಯ ಬರಲೊಲ್ಲದು. ಎಲ್ಲಾದರೂ ಕೋತಿ ಕೈಯಲ್ಲಿ ನಾನು ಸಿಕ್ಕಿ ಹಾಕಿಕೊಂಡರೆ ಅಂತ.”

    – ಸುನಾಥರೇ ಹೆದರಬೇಡಿ. ಇದು ತುಳಸಿವನದಲ್ಲಿ ಸಿಕ್ಕಿದ ಕೋತಿಯಾದ್ದರಿಂದ ಅಶೋಕವನದ ಕೋತಿಯಂತೆ ಅಂಕೆ ಮೀರಿ ಲಂಕೆ ಸುಡುವ ಭಯವಿಲ್ಲ. 🙂

  37. “ನೋಡಿ ಮಾಲಾ, ಈ ಬಡಪಾಯಿ ತಮ್ಮನಿಗೆ ನೀವಾದ್ರೂ ಬೆಂಬಲ ಕೊಡಿ.”

    “ನಾನೊಬ್ಳೇ ಅಕ್ಕಂದಿರ ಪಾರ್ಟಿ ಬಿಟ್ಟು ಹೇಗೆ ಬರಲೀ…?
    ಅಕ್ಕಂದ್ರಿಗೇ ಜೈ….”

    – (ಬೆಂಬಲ)ಯಾಚಿಸುವ ಮುನ್ನ ಯೋಚಿಸಬೇಕು!

    ಕಥೆ ಬಗ್ಗೆ ಮಾತಾಡಲು ಹೊಸ ಎಳೆ ಇಲ್ಲಿದೆ.

Comments are closed.