ಪ್ರವಲ್ಲಿಕ ಮತ್ತಿತರರು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ರಾಜೀವನ ಪೋನ್ ಬಂತು `ಧಾರಿಣಿಯ ವಿಶಯ ಏನಾದ್ರೂ ಗೊತ್ತಾಯಿತಾ ಅಂತ ಕೇಳಿದಾಗ ಅವರು ಧಾರಿಣಿಯಿಂದ ಹೀಗೊಂದು ವಿಚಿತ್ರ ಕರೆ ಬಂದಿತ್ತು ಎಂದು ವಿಶಯ ತಿಳಿಸಿದರು ರಾಜೀವನಿಗೂ ಧಾರಿಣಿಯ ಕರೆಯ ಮರ್ಮ ತಿಳಿಯಲಿಲ್ಲ…ಅದಕ್ಕೆ ರಾಜೀವ `ಹೌದಾ…ಸರಿ ಧಾರಿಣಿ ಗೆ ಒಲೀವಿಯಾ ಅನ್ನುವವಳು ಈಗ ಕಾಲ್ ಮಾಡಿದ್ದಳು ಅವಳಿಗೆ ಧಾರಿಣಿ ಕೆಲವು ಮುಖ್ಯಪತ್ರಗಳನ್ನು ಪೋಸ್ಟ್ ಮಾಡುವುದಾಗಿ ಹೇಳಿದ್ದಳಂತೆ ನಿಮಗೇನಾದರೂ ಆ ವಿಶಯ ಗೊತ್ತಾ? ಅಂತ ಕೇಳಿದ ಅದಕ್ಕೆ ಕಾಂತಿ `ಹೌದು ಪ್ರವಲ್ಲಿಕಾ ಗೆ ಧಾರಿಣಿ ಪೋಸ್ಟ್ ಮಾಡಲು ಕೊಟ್ಟಿದ್ದಳು ಅದೇನೆಂದು ತೆಗೆದು ನೋಡಿದೆವು ವರ್ಜೀನಿಯಾದ ಅಲೆಕ್ಸಾಂಡ್ರಿಯಾ ದಲ್ಲಿರುವ United States Patent and Trademark Office (USPTO) ಗೆ ತಲುಪಿಸುವಂತೆ ಪೇಟೆಂಟ್ ಲೈಸನ್ಸ್ ಕಂಪನಿಯೊಂದಕ್ಕೆ ಧಾರಿಣಿ ಕಳಿಸಿದ ಅವಳು ಸಹಿ ಮಾಡಿದ Oath Declaration ಅದು ಆದರೆ ನನಗ್ಯಾಕೋ ಅದು ಇನ್ಕಂಪ್ಲೀಟ್ ಅನ್ನಿಸಿತು ಹೇಗಾದರೂ ಆಗ್ಲೀ ಅಂತ…ಇವತ್ತು ಪೋಸ್ಟ್ ಮಾಡಲು ಇನ್ನೂ ಕೆಲವು ಪತ್ರಗಳಿತ್ತು ಅವುಗಳೊಂದಿಗೆ ಪೋಸ್ಟ್ ಮಾಡಿಬಿಟ್ಟೆವು ಅದಾದರೂ ಇದ್ದಿದ್ದರೆ ಈಗ ಪ್ರವಲ್ಲಿಕಾ ಅದನ್ನೇ ಅಶೋಕಾ ಗೆ ತಗೊಂದು ಹೋಗಬಹುದಿತ್ತು ಅಂದಳು ಅವನು ಚಿಂತೆಯಿಂದಲೇ ಪೋನಿಟ್ಟದ್ದು ಇಲ್ಲಿವರಿಗೆ ವೇದ್ಯವಾಯಿತು.

ಮುಂದಿನ ಹೆಜ್ಜೆ ಯೋಚಿಸಲು ನೆಲೆಸಿದ್ದ ಗಂಭೀರ ವಾತಾವರಣವನ್ನು ತಿಳಿ ಮಾಡುವುದು ಅವಶ್ಯವೆಂದರಿತ ಪ್ರವಲ್ಲಿಕಾ ಕಾಂತಿಯನ್ನು ತಮಾಶೆ ಮಾಡಿದಳು`ಇವತ್ತು ಪೋಸ್ಟ್ ಮಾಡಕ್ಕೆ ಇನ್ನೂ ಕೆಲವು ಪತ್ರಗಳಿತ್ತಾ ಕಾಂತಿ…ಯಾಕಮ್ಮಾ ನಾಚ್ಕೋತೀಯಾ ನಿಮ್ಮಪ್ಪ ಮೈಲ್ ಮಾಡಿದ್ದ ನಿನ್ ಜಾತಕನ ಪ್ರಿಂಟ್ ಔಟ್ ತೆಗೆದು ಶಾಸ್ತ್ರಿ ಅಂಕಲ್ ಗೆ ಕಳಿಸಿದೆವು ಅಂತ ಹೇಳ ಬಾರದೇ….’ಎಂದಳು ಕಾಂತಿ ಅರೆ ಗಳಿಗೆ ಕೆಂಪಾದವಳು ಸುಧಾರಿಸಿಕೊಂಡು `ಈಗ ಮುಂದಿನ ದಾರಿ ಏನು…?’ಅಂದಳು ಅದಕ್ಕೆ ಆಕಾಶ್ `ಧಾರಿಣಿಯ ಆವಿಶ್ಕಾರದ ಬಗ್ಗೆ ಅಲ್ಪ ಸ್ವಲ್ಪ ನನಗೆ ಗೊತ್ತು ನಾನೊಂದು ನಕಲಿ ಪತ್ರ ತಯಾರು ಮಾಡುತ್ತೇನೆ ಪ್ರವಲ್ಲಿಕಾ ಅದನ್ನು ತೊಗೊಂಡು ಅಶೋಕ ಹೋಟೆಲ್ ಗೆ ಹೋಗಲಿ ಅಟ್ ಲೀಸ್ಟ್ ವಿ ಕ್ಯಾನ್ ಬೈ ಸಂ ಟೈಂ …’ಅಂದ.

ಟಿಮ್ ಅಶೋಕ ದಿಂದ ಧುಮುಗುಟ್ಟುತ್ತಾ ವಾಪಸ್ಸು ಬಂದ ಅಶೋಕಾದಲ್ಲಿ Indian Industries Association (IIA)ದವರು ಅಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಪಾಲ್ಗೊಂಡಿದ್ದರಿಂದ ಅವನಿಗೆ ಅಶೋಕಾದೊಳಗೆ ಹೋಗಲು ಸೆಕ್ಯೂರಿಟಿ ಸಿಬ್ಬಂದಿ ಬಿಡಲಿಲ್ಲ ಜೊತೆಗೆ ಬೆಂಗಳೂರಿನ ತಲೆ ಚಿಟ್ಟು ಹಿಡಿಸುವ ಟ್ರ್ಯಾಫಿಕ್ ಬೇರೆ …ತಲೆ ಓಡದೇ ಒಂದು ಚಿಲ್ಲ್ಡ್ ಬಿಯರ್ ಕುಡಿಯುವಾ ಅಂತ ಸೀದಾ ತನ್ನ ರೂಮಿಗೆ ಹೋರಟವನಿಗೆ ಶಶ್ ಯಾನೇ ಶಶಾಂಕ ಎದುರಾದ ಶಶ್ ನ ಕೈಲಿ ಪ್ಲ್ಯಾಸ್ಟಿಕ್ ಬ್ಯಾಗ್ ಒಂದಿತ್ತು.`ಹೌ ಈಸ್ ಶೀ…?’ ಧಾರಿಣಿ ಬಗ್ಗೆ ವಿಚಾರಿಸಿದ ಟಿಮ್ `ನಾಟ್ ಗುಡ್ ಟಿಮ್ ಅವಳು ಮಧ್ಯಾನ ಲಂಚ್ ಮುಟ್ಟಲಿಲ್ಲ…’ಅಂದ ಶಶ್ ` ಏಕೆ?’ಟಿಮ್ ಪ್ರಶ್ಣಿಸಿದ ಹಿಂದೂ ಗಳ ಆಚಾರ ವಿಚಾರಗಳು ನಿನಗೆ ಅಲ್ಪ ಸಲ್ಪ ಗೊತ್ತಿರಬೇಕು ಟಿಮ್ ನಾವೆಶ್ಟೇ ಮುಂದುವರೆದರೂ ಕೆಲವು ವಿಶಯಗಳಲ್ಲಿ ಸಂಪ್ರದಾಯ ಬಿಟ್ಟುಕೊಡುವವರಲ್ಲ ಇವತ್ತು ಶುಕ್ರವಾರವಲ್ಲವೇ…ಅವಳು ಲಲಿತಾ ಸಹಸ್ರ ನಾಮ ಹೇಳಿಕೊಳ್ಳದೇ ಏನೂ ತಿನ್ನುವುದಿಲ್ಲವಂತೆ ನಿಮ್ಮಗಳಿಗೆ ಭಾನುವಾರ ಚರ್ಚಿಗೆ ಹೋಗದಿದ್ದರೆ ಹೇಗೆ ಮನಸ್ಸು ತಡೆಯುವುದಿಲ್ಲವೋ ಹಾಗೆ… ಅದಕ್ಕೆ ಅವಳು ಸ್ವಲ್ಪ ಏನಾದರೂ ತಿನ್ನಲೀ ಅಂತ ಇವನ್ನು ಒಯ್ಯುತ್ತಿದ್ದೇನೆ ಅಂದು ತನ್ನ ಕೈಲಿದ್ದ ಸಾಮಾನು ತೋರಿಸಿದ ಟಿಮ್ ಯಾರನ್ನೂ ನಂಬುವವನಲ್ಲ ಶಶ್ ನ ಕೈನಿಂದ ಬ್ಯಾಗ್ ತೆರೆದು ಅದರಲ್ಲಿದ್ದ ಸಾಮಾನು ಪರೀಕ್ಷಿಸಿದ ಅದರಲ್ಲಿದ್ದದು ಒಂದು ಆರಿಂಚು ಉದ್ದದ ದೇವಿಯ ಶ್ರೀಗಂದದ ಪ್ರತಿಮೆ ಒಂದಿಷ್ಟು ಕುಂಕುಮದ ಪೊಟ್ಟಣ ಮತ್ತು ಶಶ್ ತನ್ನ ಪ್ರಿಂಟರ್ ನಲ್ಲಿ ತೆಗೆದಿದ್ದ ಇಂಗ್ಲಿಶ್ ಲಿಪಿಯಲ್ಲಿದ್ದ ಲಲಿತಾ ಸಹಸ್ರನಾಮದ ಪ್ರಿಂಟ್ ಔಟ್ ಟಿ ಮ್ ಅದರಲ್ಲಿದುದು ಓದಲು ಯತ್ನಿಸಿದ.

Om shrimata shrimaharagyi shrimatsimha saneshvari
Chidagni kundasambhuta devakarya samudyata …..

Shrimata: Salutations to the Divine Mother, who is the Mother of all.
Shri-mahararagni: Great Empress of the whole Universe.
Shrimat-simhasaneshvari: Great Sovereign, enthroned on the lion’s back.
Chidagni kundasambhuta: Who came out of the fire of Pure Consciousness.
Devakarya samudyata: Who promotes the cause of Divine forces….

ಟಿಮ್ ನಿಗೆ ಮೊದಲಿಗೆ ನಾಲಿಗೆ ತಿರುಗಲಿಲ್ಲ ನಂತರ ಇಂಗ್ಲಿಶ್ ನಲ್ಲಿದ್ದ ಅರ್ಥ ಓದಿದಾಗ ಅದರಲ್ಲೇನೂ ವಿಶೇಶ ಕಾಣಲಿಲ್ಲವಾದ್ದರಿಂದ ಏನೋ ಹೇಳಿಕೊಳ್ಳಲಿ ಬಿಡು ಅಂದು ಕೊಂಡು ಶಶ್ ನಿಗೆ ಸಹಸ್ರನಾಮವಿದ್ದ ಕಾಗದಗಳನ್ನು ವಾಪಸು ಮಾಡಿದ ದೇವಿಯ ವಿಗ್ರಹ ವನ್ನು ಮೂಗಿನ ಬಳಿ ಇಟ್ಟುಕೊಂಡು ವಾಸನೆ ನೋಡಿ ತುಂಬಾ ಚೆನ್ನಾ ಗಿದೆ ವಾಸನೆ…ನಾನು ಅಮೇರಿಕಾ ಗೆ ವಾಪಸು ಹೋಗುವಾಗ ನನಗೂ ಏನಾದರೂ ಸ್ಯಾಂಡಲ್ ವುಡ್ ನ ಸಾಮಾನು ಕೊಡಿಸು ಅಂದ.

ಶಶ್ ಧಾರಿಣಿ ರೂಮಿಗೆ ಬಂದು ತನ್ನ ಕೈಲಿದ್ದ ಸಾಮಾನು ಕೊಡುತ್ತಾ ` ಟೇಕ್ ದೀಸ್…ಫಿನಿಶ್ ಯುವರ್ ಚಾಂಟಿಂಗ್ ಅಂಡ್ ಹ್ಯಾವ್ ಸಂ ಪುಡ್…’ ಅಂದ ಧಾರಿಣಿ ಸ್ವಲ್ಪ ಅಚ್ಚರಿ ಪಡುತ್ತಾ ಅವನ ಕೈಲಿದ್ದ ಸಾಮಾನು ತೆಗೆದು ಕೊಂಡಳು. ಏಕೆಂದರೆ ಮೊದಲಿಗೆ ಅವಳು ದೇವರನ್ನು ನಂಬುವುದು ಬಿಟ್ತು ಹಲವು ವರ್ಷಗಳಾಗಿತ್ತು ನಿಖರವಾಗಿ ಹೇಳ ಬೇಕೆಂದರೆ ಆರು ವರ್ಶ ಒಂದು ಇರುವೆಯನ್ನೂ ನೋಯಿಸದ ತನ್ನಣ್ಣ ಪ್ರತಾಪ ಎಂದು ಬೂದಿಯಾದನೋ ಅಂದಿಗೆ ಅವಳಿಗೆ ದೇವರ ಮೇಲಿದ್ದ ಭಕ್ತಿ ಕೊನೆಯಾಗಿತ್ತು ಎರಡನೆಯದಾಗಿ ಅವಳು ಆ ಸಾಮಾನುಗಳಿಗಾಗಿ ಅವನನ್ನು ಕೇಳಿರಲೇ ಇಲ್ಲ!

ಟಿಮ್ ತನ್ನ ಸಹಾಯಕ ಗಿರಿಯ ಮೂಲಕ ಪ್ರವಲ್ಲಿಕಾ ಳ ಹಾಸ್ಟೆಲ್ ನಲ್ಲಿ ವಿಚಾರಿಸಿ ಧಾರಿಣಿ ಹೇಳಿದ್ದು ನಿಜವೆಂದು ಖಾತ್ರಿ ಮಾಡಿಕೊಂಡ ಧಾರಿಣಿಗೆ ಪ್ರವಲ್ಲಿಕಾ ಎಂಬ ತಂಗಿ ಇದ್ದಾಳೆಂಬುದು ನಿಜ …ಹಾಗಾದರೇನು ಮಾಡುವುದು ಈಗ ಎಂದು ಕೊಳ್ಳುತ್ತಾ ಪ್ರವಲ್ಲಿಕಾ ಹಾಸ್ಟೆಲ್ ನಲ್ಲಿ ಲೋಕಲ್ ಗಾರ್ಡಿಯನ್ ಎಂದು ಕೊಟ್ಟಿದ್ದ ಕೇಶವನ ಮನೆ ಅಡ್ರೆಸ್ ತೆಗೆಸಿಕೊಂಡ ಕೇಶವನ ಮನೆಗೆ ನುಗ್ಗಿ ಧಾರಿಣಿಯನ್ನು ಎಳೆತರುವುದೇನು ದೊಡ್ಡ ಕೆಲಸವಲ್ಲ ಈಗಾಗಲೇ ಬಿಳಿಯನಾದ ನನ್ನ ಮೇಲೆ ಒಬ್ಬಳನ್ನು ಕರೆತಂದಾಗಲೇ ಯಾರಿಗಾದರೂ ಸಂದೇಹ ಬಂದಿರಬಹುದು ತನ್ನನ್ನು ಯಾರಾದರೂ ಗುರುತು ಹಿಡಿದರೆ ಕಷ್ಟ ಎಂದು ಕೊಳ್ಳುತ್ತಾ ಗಿರಿಯನ್ನು ಕಳಿಸೋಣವೇ ಅಂದುಕೊಂಡ ನಂತರ ಬೇಡವೆಂದು ಗಿರಿಗೆ ಈವಿಳಾಸದ ಮನೆಯ ಮೇಲೆ ಒಂದು ಕಣ್ಣಿಡು ಅಂತ ಸೂಚನೆ ಕೊಟ್ಟ.

ಧಾರಿಣಿ ಮುಂದೇನು ಮಾಡುವುದೆಂದು ಯೋಚಿಸುತ್ತಿದ್ದಾಳೆ ಮಧ್ಯಾನ್ಹ ಟಿಮ್ ಇಲ್ಲದ ಸಮಯ ಸಾಧಿಸಿ ತನ್ನ ರೂಮಿಗೆ ಚೈನೀಸ್ ನೂದಲ್ಸ್ ತುಂಬಿದ ತಟ್ಟೇ ತಂದಿತ್ತ ಶಶ್ ಅವಳಿಗೆ ಒಂದಿಷ್ಟು ಭರವಸೆ ತೋರಿದಂತೆ ಅನ್ನಿಸಿತ್ತು ಇವ್ನೇನೋ ಭಾರೀ ಬುದ್ದಿವಂತ ಅಂದುಕೊಂಡರೆ ನಿನ್ನ ಬಿಡುಗಡೆಗಾಗಿ ದೇವರನ್ನು ಪ್ರಾರ್ಥಿಸು ಅಂತ ಕುಂಕುಮದ ಪೊಟ್ಟಣ ತಂದು ಕೊಟ್ಟಿದ್ದಾನೆ ಅಂತ ಬೈದುಕೊಂಡಳು ಮಧ್ಯಾನ ನಡೆದ ಸಂಗತಿಯನ್ನು ಮತ್ತೆ ಮೆಲಕು ಹಾಕಿಕೊಂಡಳು ನೂಡಲ್ಸ್ ಮೇಲೆ ಟೊಮೇಟೋ ಸಾಸ್ ನಿಂದ I help U’ಅಂತ ಬರೆದು ಸಿ.ಸಿ ಕ್ಯಾಮೆರಾ ಅತ್ತಿಂದಿತ್ತ ಹರಿಯುವುದರೊಳಗಾಗಿ ಅದನ್ನು ನೂಡಲ್ಸ್ ನೊಂದಿಗೆ ಕಲೆಸಿ ಬಿಟ್ಟಿದ್ದ ಶಶ್.ಇವಳು ವಾವ್ ಅಂದುಕೊಂಡು ಆ ಸಾಸ್ ಮಯ ನೂಡಲ್ಸ್ ಅನ್ನು ಕಷ್ಟ ಪಟ್ಟು ತಿಂದು ಏನೋ ಸಹಾಯ ನಿರೀಕ್ಷಿಸುತ್ತಿದ್ದರೆ ದೇವಿ ವಿಗ್ರಹವನ್ನೂ ಕುಂಕುಮ ಪೊಟ್ಟಣವನ್ನೂ ತಂದು ಕೊಟ್ಟಿದ್ದನ್ನು ನೋಡಿ ಅವಳಿಗೆ ನಿರಾಸೆಯಾಗಿಬಿಟ್ಟಿತ್ತು ಮತ್ತೆ ಯೋಚಿಸಿದಳು ಶಶ್ ಇವುಗಳ ಮೂಲಕ ಏನೋ ಹೇಳಲು ಪ್ರಯತ್ನಿಸುತ್ತಿದ್ದಾನೆ ಅನ್ನಿಸಿತು ವಿಗ್ರಹವನ್ನೂ ಪೊಟ್ಟಣಗಳನ್ನೂ ಪರೀಕ್ಷಿಸಿದಳು. ಏನೂ ಹೊಳೆಯಲಿಲ್ಲ. ಲಲಿತಾ ಸಹಸ್ರ ನಾಮದ ಕಾಗದಗಳನ್ನು ತೆಗೆದುಕೊಂಡು ಓದಲಾರಂಭಿಸಿದಳು ಅದು ಅವಳು ಚಿಕ್ಕಂದಿನಲ್ಲಿ ಕಲಿತದ್ದೇ ಸ್ಕೂಲು ಹುಡುಗಿಯರಾಗಿದ್ದಾಗ ಶಾರದಮ್ಮನವರೊಂದಿಗೆ ಮನೆ ಕೆಲಸ ಮಾಡುತ್ತಾ ಅವಳೂ ಪ್ರವಲ್ಲಿಕಾಳೂ ಲಲಿತಾ ಸಹಸ್ರನಾಮ ಹೇಳಿಕೊಳ್ಳುತ್ತಿದ್ದರು ಮೊದಲ ಹತ್ತು ಶ್ಕ್ಲೋಕಗಳಾದ ಮೇಲೆ ಏನೋ ಬದಲಾವಣೆ ಅನ್ನಿಸಿತು ಹನ್ನೊಡನೇ ಶ್ಲ್ಕೋಕದಿಂದ ಪ್ರತಿಶ್ಲ್ಕೋಕದ ಪ್ರತಿ ಎರಡನೇ ಸಾಲಿನಲ್ಲಿ ಅವಳಿಗೆ ಬೇಕಾದ್ದು ಸಿಕ್ಕಿತು!ಅದು ಶಶ್ ಅವಳಿಗೆ ಕೊಟ್ಟಿದ್ದ ಸೂಚನೆ!!
***

ಧಾರಿಣಿ ನಿಧಾನವಾಗಿ ಯೋಚಿಸುತ್ತಾ ಸಿಸಿ ಕ್ಯಾಮೆರಾ ಅವಳತ್ತ ತಿರುಗಿದಾಗ ಕುಂಕುಮಾರ್ಚನೆ ಮಾಡುತ್ತಾ ಅತ್ತ ತಿರುಗಿದಾಗ ಸಹಸ್ರ ನಾಮದ ಜೊತೆಗಿದ್ದ ಖಾಲಿ ಹಾಳೆಯಲ್ಲಿ ಪೇಟೇಂಟ್ ಬಗೆಗಿನ data sheet ನಲ್ಲಿ ಬರೆಯ ಬೇಕಾದ ವಿವರಗಳನ್ನು ಬರೆದಳು ಕೊನೆಯಲ್ಲಿ ಒಲೀವಿಯಾಳಿಗೆ ತಾನು ಖುದ್ದಾಗಿ ಸಹಿ ಮಾಡಬೇಕಾದ ದಾಖಲೆ ಗಳಿಗೆ ಈಗಾಗಲೇ ಸಹಿ ಮಾಡಿ ಕಳಿಸಿರುವೆಂದೂ ಅದು ಒಲೀವಿಯಾಳಿಗೆ ಬೇಗನೇ ತಲುಪುವುದೆಂಬ ಸೂಚನೆಯನ್ನೂ ಬರೆದಳು. ಇನ್ನೊಂದು ತುಂಡು ಕಾಗದದಲ್ಲಿ ಒಲೀವಿಯಾಳ ಮೈಲ್ ಐಡಿಯನ್ನು ಬರೆದು ಈಯೆಲ್ಲ ವಿವರಗಳನ್ನೂ ಆದಷ್ಟೂ ಬೇಗ ಮೇಲ್ ಮಾಡಬೇಕೆಂದು ಶಶ್ ನಿ ಗೆ ಸೂಚಿಸಿದಳು.ಎಲ್ಲವನ್ನೂ ಕುಂಕುಮವಿದ್ದ ಸಣ್ಣ ಪ್ಲ್ಯಾಸ್ಟಿಕ್ ಪೊಟ್ಟಣದಲ್ಲಿ ಸಣ್ಣಗೆ ಮಡಿಸಿ ದೇವಿ ವಿಗ್ರಹದ ತಳದ ಮರದ ಪಟ್ಟಿ ಸರಿಸಿ ಅದರ ಟೊಳ್ಳಿನಲ್ಲಿ ಅದನ್ನು ಸೇರಿಸಿ ಬಿಟ್ಟಳು.

***

ಜವಾನನೊಬ್ಬ ಬಂದು ಟಿಮ್ ನಿಗೆ ಆ ಹುಡುಗಿ ಪೂಜೆ ಮಾಡಿದ ನಂತರ ನೀರಿನಲ್ಲಿ ವಿಸರ್ಜನೆ ಮಾಡಬೇಕಂತೆ ಅಂದಾಗ `ದಿಸ್ ಈಸ್ ಟೂ ಮಚ್’ಅಂತ ಟಿಮ್ ಕೂಗಾಡಿದ ಆಗ ಅಲ್ಲೇ ಇದ್ದ ಶಶ್ ಅವಳ ಅಕ್ಕ ಅಶೋಕಾಕ್ಕೆ ಬಂದಿದ್ದಳೋ ಏನೋ ಅಥವಾ ನಿನ್ನನ್ನು ಹೇಗೆ ಸೆಕ್ಯೂರಿಟಿಯವರು ಬಿಡಲಿಲ್ಲವೋ ಹಾಗೇ ಅವಳನ್ನೂ ಬಿಡಲಿಲ್ಲವೋ ಏನೋ ಅದಕ್ಕೆ ಅವಳ ಮೇಲಿನ ಕೋಪ ಇವಳ ಮೇಲ್ಯಾಕೆ ತೀರಿಸುತ್ತೀ…ವಿಸರ್ಜನೆ ಹಿಂದೂ ಗಳ ಪೂಜಾ ವಿಧಾನ ನೀನು ನಮ್ಮಗಣಪತಿ ಅದೇ ಎಲಿಫೆಂಟ್ ಗಾಡ್ ಅನ್ನು ಅಮೇರಿಕಾ ದಲ್ಲೂ ನಾವುಗಳು ಸಮುದ್ರದಲ್ಲಿ ಕೊಂಡು ಹೋಗಿ ವಿಸರ್ಜಿಸುವುದು ನೋಡಿಲ್ಲವೇ…? ಈ ರೆಸಾರ್ಟ್ ನ ಮೂಲಕ ವಾಗಿ ಹರಿವ ಸ್ಟ್ರೀಮ್ ಇದೆಯಲ್ಲಾ…ಅಲ್ಲಿ ಹೋಗಿ ಹಾಕುತ್ತಾಳೆ ಬಿಡು… ಬೇಕಾದ್ರೆ ಗಿರಿ ಅವಳೊಂದಿಗೆ ಹೋಗಿಬರಲಿ…ಅಂತ ಟಿಮ್ ನನ್ನು ಸಮಾಧಾನ ಮಾಡಿದ. ಗಿರಿ ಎಲ್ಲೋ ಹೊರಗೆ ಹೋಗಿದ್ದರಿಂದ ಆ ಜವಾನನೊಂದಿಗೆ ಧಾರಿಣಿ ಅಲ್ಲಿಂದ ಕಣ್ಣಳತೆ ದೂರದಲ್ಲಿದ್ದ ತೊರೆಯಲ್ಲಿ ವಿಗ್ರಹವನ್ನು ಬೊಗಸೆ ಕುಂಕುಮದೊಂದಿಗೆ ಶಶ್ ನ ಸೂಚನೆಯಂತೆ ಒಂದು ಕೆಂಪು ಪ್ಲ್ಯಾಸ್ಟಿಕ್ ಕವರಿನಲ್ಲಿ ಹಾಕಿ ನೀರಿನಲ್ಲಿ ಬಿಟ್ಟಳು ರೆಸಾರ್ಟ್ ನಿಂದ ಹತ್ತು ಮಾರುಗಳಷ್ಟು ದೂರದಲ್ಲಿ ಅವಳು ನಿಂತಿರುವುದೂ ಅವಳ ಮೇಲೆ ಟೀಮ್ ಕಣ್ಣಿಟ್ಟಿರುವುದೂ ಅವಳಿಗೆ ಗೊತ್ತಾದ್ದರಿಂದ ಮನಸ್ಸಿನಲ್ಲೇ ನಗುತ್ತಾ ಎರಡು ನಿಮಿಶ ಕೈಮುಗಿದುಕೊಂಡು ನಿಂತಿದ್ದು ವಾಪಸು ಬಂದು ಬಿಟ್ಟಳು.

ಅಲ್ಲಿಂದ ತೊರೆ ಹರಿಯುತ್ತಾ ಆಚೆ ಹೋದ ಮೇಲೆ ದಾರಿಯಲ್ಲಿ ಶಶ್ ನೇಮಿಸಿದ ವ್ಯಕ್ತಿ ತನ್ನ ತರಬೇತಿ ಹೊಂದಿದ ನಾಯಿಯೊಂದಿಗೆ ಈ ಕೆಂಪು ಪ್ಯಾಕೆಟ್ ಹಿಡಿಯಲು ಕಾಯುತ್ತಿರುತ್ತಾನೆ ಮತ್ತು ಅವನು ಧಾರಿಣಿ ಸೂಚನೆಗಳನ್ನು ಅನುಸರಿಸಿ ಅವಶ್ಯವಾದ್ದನ್ನು ಮಾಡುತ್ತಾನೆ ಎಂದು ಅವಳಿಗೆ ಗೊತ್ತು ಶಶ್ ನನ್ನು ತಾನು ಹೇಗೆ ನಂಬಿದೆ ಅಂತ ಅವಳಿಗೇ ಆಶ್ಚರ್ಯವಾಗುತ್ತಿದೆ. ದೇವಿ ವಿಗ್ರಹವನ್ನು ನಾಯಿ ಹಿಡಿಯುವುದು ದೇವರಲ್ಲಿ ನಂಬಿಕೆ ಕಳೆದುಕೊಂಡ ಧಾರಿಣಿಗೆ ಕೂಡಾ ಕಸಿವಿಸಿಯ ವಿಶಯವೇ…ನಮ್ಮಪ್ಪನಿಗೆ ಈವಿಶ್ಯ ತಿಳಿದರೆ ಎಷ್ಟು ನೊಂದು ಕೊಳ್ಳುತ್ತಾರೋ…ಎಂದು ಕೊಂಡಳು ಮತ್ತೆ ರೆಸಾರ್ಟ್ ಪ್ರವೇಶಿಸಿದಾಗ ಎಂಥದೋ ಒಂದು ಸಮಾಧಾನದ ಸಣ್ಣ ನಗೆ ಅವಳ ಮುಖದ ಮೇಲೆ ಕಾಣುತ್ತಿತ್ತು ಆದರೆ ಆನಗೆ ತುಂಬಾಹೊತ್ತು ಇರಲು ಸಾದ್ಯವಿಲ್ಲ ಅದಕ್ಕೆ ಕಾರಣ ಗಿರಿ!

***

ಗಿರಿ ವಿಜಯದ ನಗು ಬೀರುತ್ತಾ ಟಿಮ್ ನಪಕ್ಕ ನಿಂತಿದ್ದ ಶಶ್ ಗಂಭಿರವಾಗಿದ್ದ ಓ…ಮಿಸ್ ಶ್ಯಾಸ್ತ್ರೀ…ಪ್ಲೀಸ್ ಕಮ್…ಎಂದು ವ್ಯಂಗ್ಯ ನಗು ಬೀರುತ್ತಾ ಹೇಳಿದ ಟಿಮ್ ಅವನ ಕೈಲಿದ್ದ ಲಕ್ಕೋಟೆ ನೋಡಿ ಧಾರಿಣಿಯ ಮನ ಧಸಕ್ಕೆಂದಿತು!ಅದು ಅವಳು ಪ್ರವಲ್ಲಿಕಾ ಗೆ ಒಲೀವಿಯಾಳ ವಿಳಾಸಕ್ಕೆ ಪೋಸ್ಟ್ ಮಾಡಲು ಕೊಟ್ಟಿದ್ದು.ಧಾರಿಣಿ ಯಾವತ್ತೂ ಹುಷಾರಿ ಹುಡುಗಿ ಎಲ್ಲಾ ವಿವರಗಳನ್ನೂ ಪೋಸ್ಟ್ ನಲ್ಲಿ ಅಥವಾ ಮೈಲ್ ಒಂದರಲ್ಲೇ ಕಳಿಸಿದರೆ ಅದು ಹೇಗಾದರೂ ಲೀಕ್ ಆಗುವ ಸಂಭವ ಇದೆಯೆಂದು ಕೆಲವು ವಿವರಗಳನ್ನು ಸಹಿ ಮಾಡಬೇಕಾದ್ದನ್ನೂ ಮೊದಲು ಪೋಸ್ಟ್ ನಲ್ಲಿ ಕಳಿಸಿ ಇನ್ನುಳಿದದ್ದನ್ನು ಮೇಲ್ ಮಾಡೋಣವೆಂದು ಕೊಂಡಿದ್ದಳು ಈಗ ಶಶ್ ನೇಮಿಸಿದ ವ್ಯಕ್ತಿ ಒಲೀವಿಯಾಗೆ ಮೇಲ್ ಮಾಡುತ್ತಾನೆಂದು ನಿರಾಳವಾಗಿದ್ದರೆ ಹೊಸ ಆಪತ್ತು ಬಂದಿತಲ್ಲಾ ಎಂದು ಕಂಗೆಟ್ಟಳು ಗಿರಿ ತಾನು ಹೇಗೆ ಕೇಶವನ ಏರಿಯಾದ ಪೋಸ್ಟ್ ಆಫೀಸಿನಲ್ಲಿ ಜನ ಹಿಡಿದು ಈಮನೆಯವರ ಎಲ್ಲಾ ಪತ್ರಗಳನ್ನೂ ನನಗೇ ತಂದು ಕೊಡಿ ಅಂತ ಈ ಕಾಗದ ಸಂಪಾದಿಸಿದೆ ಅಂತ ಟಿಮ್ ನ ಬಳಿ ಜಂಭ ಕೊಚ್ಚುತ್ತಿದ್ದ ಟಿಮ್ ನೋದು ನಿಮ್ಮಕ್ಕ

ತಾನೊಬ್ಬಳೇ ಜಾಣೆ ಅಂದು ಕೊಂಡಿದ್ದಾಳೆ…ಅವಳಿಗೆ ಹೇಗೆ ಮಾಡಿದೆವು..’ಅನ್ನು ನೋಟದಿಂದ ಧಾರಿಣಿಯೆಡೆ ನೋಡಿದ.
***

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.