ಗಮಗಮಾ ಗಮಾಡಸ್ತಾsವ ಮಲ್ಲಿಗಿ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ
ಕವನ ಸಂಕಲನ – ಗಂಗಾವತರಣ
ಗಾಯಕರು – ವಿಶ್ವೇಶ್, ಅಶ್ವಿನಿ
ಆಲ್ಬಮ್ – ಘಮಘಮ

ಹಾಡು ಕೇಳಿ

ಗಮಗಮಾ ಗಮಾಡಸ್ತಾsವs ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗಿ?
ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ||
ನೀ ಹೊರಟಿದ್ದೀಗ ಎಲ್ಲಿಗಿ ?

ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡೀ ಹರಳ
ಮನಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗಿ ?

ಗಾಳಿ ತಬ್ಬತಾವ ಹೂಗಂಪ
ಚಂದ್ರನ ತೆಕ್ಕಿಗಿದೆ ತಂಪ
ನಿನ ಕಂಡರ ಕವದಾವ ಜೊಂಪ ||
ನೀ ಹೊರಟಿದ್ದೀಗ ಎಲ್ಲಿಗಿ ?

ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡsಕ
ಹೀಂಗ ಬಿಟ್ಟು ಇಲ್ಲಿ ನನ್ನ ನಡsಕ ||
ನೀ ಹೊರಟಿದ್ದೀಗ ಎಲ್ಲಿಗಿ ?

ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ ||
ನೀ ಹೊರಟಿದ್ದೀಗ ಎಲ್ಲಿಗಿ ?

ನಾವು ಬಂದೆವಲ್ಲಿದಿಲ್ಲಿಗಿ
ಬಾಯಿ ಬಿಟ್ಟಾವಲ್ಲ ಮಲ್ಲಿಗಿ
ನೀರೊಡೆದಿತಲ್ಲ ಕಲ್ಲಿಗಿ ||
ನೀ ಹೊರಟಿದ್ದೀಗ ಎಲ್ಲಿಗಿ ?

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯಾ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗಿ ?

2 thoughts on “ಗಮಗಮಾ ಗಮಾಡಸ್ತಾsವ ಮಲ್ಲಿಗಿ – ಅಂಬಿಕಾತನಯದತ್ತ”

  1. sritri says:

    ಸುನಾಥರೇ, ಈ ಕವನದ ಶೀರ್ಷಿಕೆ ಏನು? ನಿಮ್ಮಿಂದಾಗಿ ತುಳಸೀವನದಲ್ಲಿ ಬೇಂದ್ರೆ ಹಬ್ಬ. ಧನ್ಯವಾದಗಳು ನಿಮಗೆ.

    ಯು.ಆರ್.ಎ ಕಥೆಯೊಂದರಲ್ಲಿ ’ಗಮಗಮಾ ಗಮಾಡಸ್ತಾವ ಮುಳಕ’ ಎಂದು ಓದಿದ್ದು ನೆನಪಾತು. 🙂

  2. sunaath says:

    ಈ ಕವನದ ಶೀರ್ಷಿಕೆಃ “ಗಮಗಮಾ ಗಮಾಡಸ್ತಾsವ ಮಲ್ಲಿಗಿ”.
    ನಾನು ಕೇಳಿದ್ದು ಬಹುಶಹ ಸಂಗೀತಾ ಕಟ್ಟಿಯವರ ಧ್ವನಿಮುದ್ರಿಕೆ ಇರಬಹುದು.
    —-
    ಬೇಂದ್ರೆ ಹಬ್ಬವನ್ನು ನಡೆಸುತ್ತಿರುವ ನಿಮಗೇ ನಾವೆಲ್ಲರೂ ಧನ್ಯವಾದಗಳನ್ನು ಅರ್ಪಿಸಬೇಕು!
    (ಇದಕ್ಕೆಲ್ಲ ಮೂಲಭೂತವಾದಿ ಕಾರಣ ಜಗಲಿ ಭಾಗವತರಲ್ವೇ!)

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ತೂಗು ಮಂಚ – ಎಚ್.ಎಸ್.ವೆಂಕಟೇಶ್ ಮೂರ್ತಿತೂಗು ಮಂಚ – ಎಚ್.ಎಸ್.ವೆಂಕಟೇಶ್ ಮೂರ್ತಿ

ಕವಿ – ಎಚ್.ಎಸ್.ವೆಂಕಟೇಶ್ ಮೂರ್ತಿ ಸಂಗೀತ – ಸಿ. ಅಶ್ವಥ್ ಗಾಯಕಿ – ರತ್ನಮಾಲಾ ಪ್ರಕಾಶ್ ಆಲ್ಬಂ – “ತೂಗು ಮಂಚ”  ಹಾಡು ಕೇಳಿ  ತೂಗು ಮಂಚದಲ್ಲಿ ಕೂತು ಮೇಘಶಾಮ ರಾಧೆಗಾತು ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು ಸೆರಗ ಬೆರಳಿನಲ್ಲಿ

ಹಸುರು – ಕುವೆಂಪುಹಸುರು – ಕುವೆಂಪು

ಕವನ – ಹಸುರು ಕವಿ   – ಕುವೆಂಪು ನವರಾತ್ರಿಯ ನವಧಾತ್ರಿಯ ಈ ಶ್ಯಾಮಲ ವನಧಿಯಲಿ ಹಸುರಾದುದೊ ಕವಿಯಾತ್ಮಂ ರಸಪಾನ ಸ್ನಾನದಲಿ ! ಹಸುರಾಗಸ, ಹಸುರು ಮುಗಿಲು ; ಹಸುರು ಗದ್ದೆಯಾ ಬಯಲು  ; ಹಸುರಿನ ಮಲೆ ; ಹಸುರು ಕಣಿವೆ ;

ಮರೆತೇನೆಂದರ ಮರೆಯಲಿ ಹ್ಯಾಂಗ? ಮಾವೋ-ತ್ಸೆ-ತುಂಗಮರೆತೇನೆಂದರ ಮರೆಯಲಿ ಹ್ಯಾಂಗ? ಮಾವೋ-ತ್ಸೆ-ತುಂಗ

ಸಾಹಿತ್ಯ, ಸಂಗೀತ : ಡಾ. ಚಂದ್ರಶೇಖರ ಕಂಬಾರ ಕಂಬಾರರ ದನಿಯಲ್ಲಿ ಹಾಡು ಕೇಳಿ ಮರೆತೇನೆಂದರ ಮರೆಯಲಿ ಹ್ಯಾಂಗ ಮಾವೋ-ತ್ಸೆ-ತುಂಗ ಮರೆತೇನೆಂದಾರ ಮರೆಯಲಿ ಹ್ಯಾಂಗ…. ಹಾ ಪಂಚಭೂತದಾಗ ವಂಚನೆ ಕಂಡಿ ಕಣ್ಣಿನಂಚಿನಾಗ ಹೊಸ ಜಗ ಕಂಡಿ ಸೊನ್ನಿಗೆ ಆಕಾರ ಬರೆದೇನೆಂದಿ ಬಯಲಿಗೆ ಗೋಡೆ