ಕಳೆದ ಭಾನುವಾರ ಯಾವುದೋ ಶಾಪಿಂಗ್ ಮಾಲಿನಲ್ಲಿದ್ದೆವು. ಇದ್ದಕ್ಕಿದ್ದಂತೆ ನಮ್ಮಿಂದ ಸ್ವಲ್ಪ ದೂರದಲ್ಲಿ ಸ್ಟ್ರೋಲರಿನಲ್ಲಿ ಮಲಗಿದ್ದ ಮಗುವೊಂದು ರಚ್ಚೆ ಹಿಡಿದು ಅಳತೊಡಗಿತು. ಅದರ ಜೊತೆಗೆ ಇದ್ದ ಹೆಂಗಸು ಅದನ್ನು ಸಮಾಧಾನಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಳು. ಆ ಮಗು ಅವಳ ಉಪಾಯಗಳೊಂದಕ್ಕೂ ಜಪ್ಪೆನ್ನದೆ ಉಸಿರುಗಟ್ಟಿಕೊಂಡು ಕಿರುಚಿ ಅಳುತ್ತಿತ್ತು. ಅತ್ತು ಕೆಂಪುಕೆಂಪಾಗಿದ್ದ ಆ ಮಗುವಿನ ಮುಖವನ್ನು ನೋಡಿದರೆ ಅದು ಹುಟ್ಟಿ ಕೆಲವೇ ದಿನಗಳಾಗಿರಬೇಕೆನಿಸಿತು. ಮಗುವಿನ ತಾಯಿಯೆಂದು ನಾನು ತಿಳಿದಿದ್ದ ಹೆಂಗಸು ಮಗುವನ್ನು ಅಲ್ಲೇ ಬಿಟ್ಟು ಯಾರನ್ನೋ ಹುಡುಕುವಂತೆ ಅಲ್ಲಿಂದ ಹೊರಟಳು. ಐಲ್‍ಗಳ (aisle) ನಡುವೆ ಮರೆಯಾದಳು. ತಿರುಗಿ ಬರುವಾಗ ಅವಳ ಜೊತೆಗೆ ಹದಿಮೂರೋ, ಹದಿನಾಲ್ಕೋ ಇರಬಹುದಾದ ವಯಸ್ಸಿನ ಹುಡುಗಿಯೊಬ್ಬಳಿದ್ದಳು. ಅವಳೇ ಆ ಮಗುವಿನ ತಾಯಿಯೆಂದು ನಂತರ ತಿಳಿಯಿತು. ಹದಿಹರಯದ ಆ ಬಾಲೆ ತಾನು ಹೆತ್ತ ಮಗುವಿನ ಹೊಣೆಯನ್ನು ಅಮ್ಮನಿಗೊಪ್ಪಿಸಿ ತನಗೆ ಬೇಕಾಗಿದ್ದ ಲಿಪ್‍ಸ್ಟಿಕ್ಕನ್ನೋ, ಶಾಂಪುವನ್ನೋ, ಮತ್ತಾವುದೋ ಮೇಕಪ್ ಸಾಮಗ್ರಿಯನ್ನೋ ಆಸೆಯಿಂದ ತನ್ನ ತಳ್ಳುಗಾಡಿಗೆ ತುಂಬಿಸಿಕೊಳ್ಳುತ್ತಿದ್ದಿರಬೇಕು.

ತಾಯಿ – ಅವಳಿಗೂ ಚಿಕ್ಕ ವಯಸ್ಸೇ – ಕೋಪದಿಂದ ಮಗಳಿಗೆ ಅಳುತ್ತಿರುವ ಮಗುವನ್ನು ತೋರಿಸಿ ಏನೋ ಬೈದಳು. ಎಲ್ಲರ ಗಮನವೂ ತಮ್ಮತ್ತ ಹರಿದಿದ್ದು ನೋಡಿ ಅವಳಿಗೂ ಮುಜುಗರವಾಗಿರಬೇಕು. ಬಹುಶ: ಮಗುವನ್ನು ಬಿಟ್ಟು ಅಲ್ಲಿ ಇಲ್ಲಿ ಹೋಗಬೇಡವೆಂದು ಬುದ್ಧಿ ಹೇಳಿದಳೆಂದು ನಾನು ಊಹಿಸಿಕೊಂಡೆ. ತಾಯಿಯ ಬುದ್ಧಿವಾದದತ್ತ ಹುಡುಗಿಯ ಗಮನವಿದ್ದರೆ ತಾನೇ? ಅವಳ ಚಂಚಲ ನೋಟ ಸುತ್ತಮುತ್ತ ತುಂಬಿದ್ದ ಕಣ್ಣು ಸೆಳೆಯುವ ಹಲವಾರು ವಸ್ತುಗಳತ್ತ ನೆಟ್ಟಿತ್ತು. ಇನ್ನೂ ಬಾಲ್ಯದ ಆಟ, ಹುಡುಗಾಟ ಮಾಯವಾಗಿರದ, ತಾನೇ ಮಗುವಾಗಿರುವ ಆ ಹುಡುಗಿಯ ಮಡಿಲು ತುಂಬಿರುವ ಮತ್ತೊಂದು ಮಗು! ಇದಕ್ಕೆ ಏನನ್ನೋಣ? ಆಧುನಿಕತೆಯ ಅಡ್ದ ಪರಿಣಾಮ? ನವ ನಾಗರೀಕತೆ ನಮಗಿತ್ತ ಶಾಪ?

ಅಮಾಯಕತೆ ತುಂಬಿತುಳುಕುತ್ತಿದ್ದ ಆ ಎಳೆಯ ಕಣ್ಣುಗಳನ್ನು ನೋಡಿ ನನಗೇಕೋ ಬಹಳ ಸಂಕಟವಾಯಿತು.

20 thoughts on “ಮಗುವಿಗೊಂದು ಮಗು!”

 1. “ಆಧುನಿಕತೆಯ ಅಡ್ದ ಪರಿಣಾಮ? ನವ ನಾಗರೀಕತೆ ನಮಗಿತ್ತ ಶಾಪ?”–
  ಇವೆರಡರ ಜೊತೆಗೆ “ಸ್ತ್ರೀವಾದ”ದ ಭಂಡತನವೂ ಸೇರಿ ಇಂತಹ ಅನಾಹುತಗಳನ್ನು ನಮ್ಮ ಮುಂದೆ ಹಾಕುತ್ತಿವೆ. ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಹೆಜ್ಜೆ ಹಾಕುತ್ತಿರುವ ಭಾರತದಂಥ ಸುಸಂಸ್ಕೃತ ದೇಶದಲ್ಲೂ ಇದು ಸಮಸ್ಯೆಯ ಮಟ್ಟಕ್ಕೆ ಏರುತ್ತಿರುವುದು ವಿಷಾದದ ವಿಷಯ.

 2. “ಆಧುನಿಕತೆಯ ಅಡ್ದ ಪರಿಣಾಮ? ನವ ನಾಗರೀಕತೆ ನಮಗಿತ್ತ ಶಾಪ?”
  ಯೋಚಿಸುತ್ತಿದ್ದೇನೆ ಈ ವಾಕ್ಯದ ಬಗ್ಗೆ…
  ನಮ್ಮಜ್ಜಿಗೆ ನಮ್ಮ ದೊಡ್ಡ ಮಾವ ಹುಟ್ಟಿದಾಗ ಕೇವಲ ಹದಿನಾಲ್ಕು ವರ್ಷವಂತೆ….ನಮ್ಮೆಲ್ಲರ ಕುಟುಂಬದ ಹಳೆತಲೆಗಳು ಮುಕ್ಕಾಲು ಪಾಲು ಚಿಕ್ಕ ವಯಸ್ಸಿಗೇ ಮದುವೆ ಮಕ್ಕಳ ಜವಾಬ್ದಾರಿ ಹೊತ್ತವರು (ಬೇಕಾಗಿಯೋ ಬೇಡದೆಯೋ…) ನನ್ನಜ್ಜಿಯನ್ನೂ ಸೇರಿಸಿ ಅವರುಗಳೆಲ್ಲಾ ಹೇಗೆ ವರ್ತಿಸಿದ್ದಿರಬಹುದೂ… ಅಂತಾ…
  ಅಮ್ಮು (ಕೆಲವು ಸಲ ನನ್ನ ಕೈಲಾಗದೇ ಇದ್ದಾಗ) ಗೋಳು ಹೊಯ್ದು ಕೊಳ್ಳುವಾಗ ನಮ್ಮಜ್ಜಿ ನೆನಪಿಗೆ ಬರುತ್ತಾರೆ
  ನನ್ನಜ್ಜಿಯೂ ನೀವು ನೋಡಿದಂಥಾ ಅಮಾಯಕತೆ ತುಳುಕುವ ಹುಡುಗಿಯೇ ಆಗಿದ್ದಿರ ಬಹುದಲ್ಲವೇ…

 3. “ನಮ್ಮ ಅಜ್ಜಿಯರೂ ಸಹ…….”

  ಹಳೆಯ ಕಾಲದಲ್ಲಾದರೆ, ನಮ್ಮ ಜನಕ್ಕೆ ಬುದ್ಧಿ ಇಲ್ಲದ್ದಕ್ಕೆ, ಬಾಲ್ಯವಿವಾಹಗಳು ನಡೆಯುತ್ತವೆ ಅಂತ ಬೈಯುತ್ತಿದ್ದೆವು. ಆದರೆ, ಈಗಿನ ‘ಆಧುನಿಕ ನಾಗರಿಕತೆ’ಯಲ್ಲಿ ಯಾಕೆ ಈ ಥರಾ ನಡೆಯುತ್ತಿದೆ? ಮೊದಲನೆಯದಾಗಿ ಮಿತಿಯಿಲ್ಲದ ಸ್ವಾತಂತ್ರ್ಯ; ಎರಡನೆಯದಾಗಿ ಕಾಮದ ವಾಣಿಜ್ಯೀಕರಣ.
  ನಮ್ಮ ಅಜ್ಜಿಯರು ವಿವಾಹಪೂರ್ವ ಅಥವಾ ವಿವಾಹಬಾಹಿರ ಕಾಮದಲ್ಲಿ ತೊಡಗುತ್ತಿರಲಿಲ್ಲ ಅನ್ನುವದನ್ನು ಗಮನಿಸಬೇಕು.

 4. ಸುನಾಥ್, ಮಾಲಾ, ನಿಮ್ಮಿಬ್ಬರ ಮಾತೂ ಒಪ್ಪಿದೆ.

  ನಮ್ಮಜ್ಜಿಯರೂ ಎಳೆಯ ಬಾಲೆಯರಿದ್ದಾಗಲೇ ಮಾತೆಯರಾಗಿದ್ದು ನಿಜ. ಆದರೆ ಅವರ್ಯಾರೂ “ಸಿಂಗಲ್ ಮಾಮ್” ಅನ್ನುವ ಪಟ್ಟವನ್ನು ಹೊರಬೇಕಾಗಿರಲಿಲ್ಲ. ತಾನೊಬ್ಬಳೇ ಕಿರುಗುಟ್ಟಿ ಅಳುವ ಕಂದನನ್ನು ಸಮಾಧಾನಿಸಬೇಕಾದ ಇಕ್ಕಟ್ಟಿನ ಪ್ರಸಂಗ ಎದುರಿಸಬೇಕಾಗಿರಲಿಲ್ಲ. ಮನೆ ತುಂಬ ಜನ, ಸಹಾಯಕ್ಕೆ ಹಿರಿಯರು ಇದ್ದರು ಅನ್ನುವುದನ್ನು ಮರೆಯಬಾರದು. ತ್ರಿವೇಣಿ ಕಂಡ ಆ ಕೂಸು-ತಾಯಿಗೆ, ಅವಳಂಥ ಅನೇಕರಿಗೆ ನಮ್ಮ ಹಿರಿಯರಿಗಿದ್ದ ರೀತಿಯ ಸಹಾಯ ಪೂರ್ಣಪ್ರಮಾಣದಲ್ಲಿ ಲಭ್ಯವಿರಲಾರದು.

  ಜೊತೆಗೇ, ಇಂಥ ಪ್ರಮಾದಗಳು ಸಂಭವಿಸದಂತೆ ಜಾಗ್ರತಾ ಕ್ರಮಗಳು ಬೇಕಾದಷ್ಟು ಲಭ್ಯವಿವೆ. ಈ ದೇಶದಲ್ಲಂತೂ ಮಕ್ಕಳಿಗೆ ೭ ಯಾ ೮ನೇ ತರಗತಿಯಲ್ಲೇ ಇದರ ಪೂರ್ಣ ಮಾಹಿತಿ ನೀಡಲಾಗುತ್ತದೆ. ಶಾಲೆಯಲ್ಲೇ ನರ್ಸ್ ರೂಮಿನಲ್ಲಿ ಕಾಂಡೋಮ್ ಇಟ್ಟಿರುತ್ತಾರೆ. ಯಾವುದೇ ಡ್ರಗ್ ಅಂಗಡಿಯಲ್ಲಿ ಈ ಮಕ್ಕಳು ಮುಕ್ತವಾಗಿ ಅದನ್ನು ಖರೀದಿಸಬಹುದು. ಆದರೂ ಹೀಗೇಕೆ? ಕುತೂಹಲಕ್ಕೆ, ಒತ್ತಾಯಕ್ಕೆ ಕತ್ತು ತೂಗುವ ಕಿರಿಯರ ಪ್ರಮಾದಗಳ ಫಲ ಇವು. ಅದಕ್ಕೆ ಸುಲಭದಲ್ಲಿ ಪರಿಹಾರ ಇಲ್ಲ ಅನಿಸುತ್ತದೆ.

 5. teenage pregnancy is directly related to lack of education, lack of direction from parents or caretakers and poverty level.
  “aadhunikate” naagareekate” role is insignificant.
  any sociology/psychology/medical/related professional/expert will vouch for this.

 6. ಸುಷ್ಮಾ ಅವರೆ,
  ಸಾಕಷ್ಟು ಉತ್ತಮ ಶಿಕ್ಷಣ ಹಾಗು ಸಾಕಷ್ಟು ಶ್ರೀಮಂತಿಕೆ ಇರುವ ಅಮೇರಿಕದಲ್ಲಿಯೇ, ಈ ಸಮಸ್ಯೆ (teenage single mothers) ಇರುವದು ಯಾಕೆ?

 7. ಸುಷ್ಮಾ ಅವರು ಹೇಳಿರುವ ಕಾರಣಗಳು ನಿಜವಾದರೂ, ಈ ದೇಶಕ್ಕೆ – ಕೊನೆ ಪಕ್ಷ ನಾನು ನೋಡಿದ ಪರಿವಾರಕ್ಕಂತೂ ಅಷ್ಟೇನೂ (ಮೇಲ್ನೋಟಕ್ಕೆ ಅನಿಸಿದ್ದು) ಅನ್ವಯವಾಗಲಾರದು.

  ಅಂದಹಾಗೆ, ಈ ಸುದ್ದಿ ಈಗಾಗಲೇ ನಿಮ್ಮೆಲ್ಲರ ಗಮನಕ್ಕೂ ಬಂದಿರಬಹುದು.

 8. http://www.time.com/time/magazine/article/0,9171,1074861-1,00.html

  my statement was not a personal opinion and was on the basis of research, stats, facts and figures.
  I think here 1.you are mislabeling and misinterpreting cultural differences as “negative influence of aadhunikate and nagareekathe”which is not true. This issue has has more to do with socioeconomic factors 🙂
  2. applying Indian morals and values to average american population is illogical
  I rest my case:)

 9. I don’t think it is only about applying Indian Morals and values to average american population; this “Teen-Pregnancy and Teen-Mothers” have become a problem to “American” and “Americanised” societies as well. The high schools here try to prevent this problem as much as possible. Its not any one country’s morality at stake with this issues, the whole world’s population is going to face this pretty soon, if unchecked.

 10. ಪಾಶ್ಚಾತ್ಯ ದೇಶಗಳಲ್ಲಿಯೆ ಆಗಲಿ, ಭಾರತದಲ್ಲಿಯೇ ಆಗಲಿ,೧೯ನೆಯ ಶತಮಾನದವರೆಗೂ ಯಾಜಮಾನ್ಯ ಸಂಸ್ಕೃತಿ (feudal society) ಚಲಾವಣೆಯಲ್ಲಿತ್ತು. ಈ ಸಂಸ್ಕೃತಿಯ ಸಾಮಾಜಿಕ ಹಾಗು ನೈತಿಕ ಕಟ್ಟುಪಾಡುಗಳು ಕಠಿಣವಾಗಿದ್ದವು. ಯಾಜಮಾನ್ಯ ನಾಗರಿಕತೆಯ ಅಳಿವಿನೊಂದಿಗೆ, ಶೋಷಿತರ ಹಾಗು ಮಹಿಳೆಯರ ಸಂಕೋಲೆಗಳು ಕಳಚಿದವು. ಈ ಸಮಯದಲ್ಲಿ ಮಹಿಳೆ ಮನೆಯ ಹೊಸ್ತಿಲು ದಾಟಿ ಹೊರ ಬರುವದು ಆರ್ಥಿಕ ಅನಿವಾರ್ಯತೆಯೂ ಆಯಿತು. ಸಮಾಜದ ವಿಭಿನ್ನ ಸ್ತರಗಳಲ್ಲಿ ಆರ್ಥಿಕ ಪ್ರಸರಣ ಪ್ರಾರಂಭವಾಯಿತು. ಈ ಹೊಸ ಸ್ವಾತಂತ್ರ್ಯ, ಈ ನೈತಿಕ ಶೈಥಿಲ್ಯ ಹಾಗು ಈ ಹೊಸ affluenceದಿಂದಾಗಿ ಹುಟ್ಟಿದ ಕೂಸೇ permissive society. ಈ ವಾತಾವರಣದ ಲಾಭವನ್ನು ಪಡೆದುಕೊಳ್ಳುತ್ತಿರುವ ವಾಣಿಜ್ಯ ಸಂಸ್ಥೆಗಳು ಕಾಮದ ವಾಣೀಜ್ಯೀಕರಣವನ್ನು ಉತ್ತೇಜಿಸುತ್ತಿವೆ ಹಾಗು ಹೆಣ್ಣಿನ ಶೋಷಣೆಯನ್ನು ನಿರ್ದಾಕ್ಷಿಣ್ಯವಾಗಿ ಮಾಡುತ್ತಿವೆ. ಇದು ಆಧುನಿಕ ನಾಗರಿಕತೆಯ ಪರಿಣಾಮವಲ್ಲವೇ? ಇದು affluenceದ ಪರಿಣಾಮವಲ್ಲವೆ? ಬಡತನವು economic offenceಗಳಿಗೆ ಕಾರಣವಾದೀತೇ ಹೊರತು (ಉದಾಃ ಕಳ್ಳತನ, ವೇಶ್ಯಾವೃತ್ತಿ), ಸಮಾಜದ ನೈತಿಕ ದುರವಸ್ಥೆಗೆ ಕಾರಣವಾಗಿಲ್ಲ. Fuedal societಯ ಭಾಗವಾಗಿ ಬದಕುತ್ತಿದ್ದ ನಮ್ಮ ಪೂರ್ವಜರು ಎಂತಹ ಬಡತನದಲ್ಲಿಯೂ ಕೂಡ ಸಮಾಜದ ಕಟ್ಟುಪಾಡುಗಳನ್ನು ಮೀರುತ್ತಿರಲಿಲ್ಲ.
  ಸ್ವತಂತ್ರ ಭಾರತದ ಪ್ರಥಮ ಆರ್ಥಿಕ ಮಂತ್ರಿಯಾಗಿದ್ದ ದೇಶಮುಖ ಅವರು ಒಮ್ಮೆ ಗಾಂಧೀಜಿಗೆ, “ನೀವು ಭಾರತವನ್ನು ಬಡತನದತ್ತ ಕೊಂಡೊಯ್ಯುತ್ತಿದ್ದೀರಿ” ಎಂದು ದೂರಿದಾಗ, ಅದಕ್ಕೆ ಬಾಪು ಕೊಟ್ಟ ಮಾರುತ್ತರ ಹೀಗಿತ್ತುಃ “ಬಡತನದಲ್ಲೇನು ತಪ್ಪಿದೆ?”

 11. just like any deeprooted multifaceted issue, we cannot pinpoint a single solution or cause, that wasnt my point.
  jyothi avare..
  neevu hELidri, namma ajjiyaru single mom ansikoLLabekirlilla. nija aadre… Just because they were married doesnt mean they didnt suffer from physical distress, damage pregnancy can cause on a young body and mind. That should be the concern more than she is married or not..alva?. research shows that many pregnant kids here get married too, but that doesnt mean they are ready for it.
  and imo, not just kids who are curious to explore opposite sex and sexuality are involved here, there are neglected, abused children from deprived neighbourhoods and dysfunctional families(50% of black female teenagers end up being teenage mothers, likelihood of their female offspring becoming one is exteremly high) and then there are children who misconstrue a boy’s attention to a girl which is hormonal as love and then there are kids who are just bored and wanting change in life, thats called being young and stupid including celebrities like Jamie lynn spears or her sister which has nothing to do with economic status.
  hope I make sense:)
  sunaath ..premarital sex is a norm in western society and it’ll remain that way. people can only work around that and try to find solutions.
  innu neevu heNNige swaatantrya jaasti aaitu anta hELta ideera?. haagiddalli vaada beLeso aase nangilla:)

  Unfortunately, it is unreal to expect certain strata of american society to provide the level of parents involvement and setting priorities in kids lives like in Indian american society.

 12. ಸುಷ್ಮಾ, ನಿಮ್ಮ ಉದ್ದುದ್ದನೆಯ ಪೋಸ್ಟ್^‍ಗಳಿಗೆ ನನ್ನ ಅಭ್ಯಂತರವೇನಿಲ್ಲ. ವಿಚಾರ ವಿನಿಮಯವೇ ಬ್ಲಾಗ್ ಉದ್ದೇಶ ತಾನೇ? ಮುಂದುವರೆಸಿ 🙂

  ಯಾವುದೇ ವಿಷಯಗಳ ಬಗ್ಗೆ ಮಾಹಿತಿ, ಚರ್ಚೆಗಳು ಇಂಗ್ಲಿಷಿನಲ್ಲಿ ಧಾರಾಳವಾಗಿ ಸಿಗುತ್ತವೆ. ಯಾರಾದರೂ ಅಂತರ್ಜಾಲದಲ್ಲಿ ಮಾಹಿತಿಗಾಗಿ ತಡಕಾಡುವಾಗ, ಇಂಥಹ ವಿಚಾರಪೂರ್ಣ ಚರ್ಚೆಗಳು ಕನ್ನಡದಲ್ಲಿಯೂ ದೊರಕಲಿ ಎಂಬ ಏಕೈಕ ಉದ್ದೇಶದಿಂದ ಚರ್ಚೆ ಕನ್ನಡದಲ್ಲಿ ನಡೆಯಲೆಂದು ಆಸೆಪಡುತ್ತೇನೆ. ಸಾಧ್ಯವಿಲ್ಲವಾದಲ್ಲಿ ಇಂಗ್ಲಿಷಿಗೆ ಖಂಡಿತಾ ಸ್ವಾಗತವಿದೆ. 🙂

 13. “ಪಾಶ್ಚಾತ್ಯ ದೇಶಗಳಲ್ಲಿಯೆ ಆಗಲಿ, ಭಾರತದಲ್ಲಿಯೇ ಆಗಲಿ,೧೯ನೆಯ ಶತಮಾನದವರೆಗೂ ಯಾಜಮಾನ್ಯ ಸಂಸ್ಕೃತಿ (feudal society) ಚಲಾವಣೆಯಲ್ಲಿತ್ತು. ಈ ಸಂಸ್ಕೃತಿಯ ಸಾಮಾಜಿಕ ಹಾಗು ನೈತಿಕ ಕಟ್ಟುಪಾಡುಗಳು ಕಠಿಣವಾಗಿದ್ದವು.”

  “innu neevu heNNige swaatantrya jaasti aaitu anta hELta ideera?”

  – ಹದಿಹರಯದ ಹೆಣ್ಣುಮಕ್ಕಳು ತಾಯಿಯರಾಗುವ ಸಮಸ್ಯೆಯನ್ನು ತಪ್ಪಿಸಲು ಮತ್ತೆ feudal society ಜಾರಿಗೆ ಬರಬೇಕೆನ್ನುವುದು ಸುನಾಥರ ಅಭಿಪ್ರಾಯವಿರಲಾರದು. 🙂 ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ ನಡುವಿನ ವ್ಯತ್ಯಾಸ ಗುರುತಿಸಿಕೊಳ್ಳುವಲ್ಲಿ ಎಲ್ಲೋ ತಪ್ಪಾಗಿದೆ ಎಂದಿರಬಹುದು.

 14. ಸುಷ್ಮಾ,
  ನಿಮ್ಮ ವಾದ ಒಪ್ಪತಕ್ಕದ್ದು. ನಮ್ಮ ಅಜ್ಜಿಯರು ಬಾಲ ವಿವಾಹಕ್ಕೆ ಒಳಗಾಗಿ, ಬಾಲೆಯರಿದ್ದಾಗಲೇ ಮಾತೆಯರಾಗಿದ್ದು ಅವರ ಮೇಲೆ ದೈಹಿಕ, ಮಾನಸಿಕ ಒತ್ತಡ ತಂದಿರುವ ಸಾಧ್ಯತೆಗಳಿವೆ. ನಾನು ಒತ್ತು ಕೊಡುತ್ತಿರುವುದು- ಪ್ರಸ್ತುತ ಸಾಮಾಜಿಕ ಮತ್ತು ವೈಯಕ್ತಿಕ ನೆಲೆಯಲ್ಲಿ ತೊಡಕಾಗಿ ಬೆಳೆಯುತ್ತಿರುವ ಬಾಲ-ಮಾತೆಯರ ಲೆಕ್ಕದ ಬಗ್ಗೆ. ಇಲ್ಲಿ ಆ ಮಾತೆಯ ಮೇಲೆ ಆಗುತ್ತಿರುವ ದೈಹಿಕ ಮಾನಸಿಕ ಒತ್ತಡಗಳನ್ನೂ ಮೀರಿದ ಸಾಮಾಜಿಕ ಅಡ್ಡ ಪರಿಣಾಮಗಳೂ ಬೆಳೆಯುತ್ತಿವೆ. ಅದಕ್ಕೆ ಕಾರಣಗಳು ಹಲವಾರು. ಬಡತನ, ಅವಿದ್ಯೆ ಮಾತ್ರವಲ್ಲ ಅನ್ನುವುದು ನನ್ನ ಅಭಿಪ್ರಾಯ. ಅದೇ ಸುನಾಥರದ್ದೂ ಇರಬಹುದು. ಈಗಿನ ಸಮಾಜದಲ್ಲಿ ಹೆಚ್ಚುತ್ತಿರುವ ಈ ಹೊಸ ಸಮಸ್ಯೆಗೆ ಬಡತನ, ಅವಿದ್ಯೆಗಳಿಗಿಂತಲೂ ಹದ್ದು ಮೀರಿದ ಸ್ತ್ರೀ-ಸ್ವಾತಂತ್ರ್ಯ ಮೊದಲ ಕಾರಣ ಹೌದು. ಕುತೂಹಲ, ನಿರ್ಭಿಡೆ, ಭಂಡತನ ಮುಂತಾದವು ಜೊತೆಗೂಡುತ್ತವೆ. ಇವುಗಳ ಜೊತೆಗೆ ಬಡತನವೂ ಇದ್ದರೆ, ಅವಿದ್ಯೆಯೂ ಕೂಡಿದರೆ, ತೊಡಕು ಜಟಿಲವಾಗುತ್ತದೆ (ಇವೆರಡೇ ಮೂಲ ಕಾರಣಗಳಲ್ಲ). ಇಂಥ ಸಮಸ್ಯೆಯನ್ನು ಸಂಭಾಳಿಸುವಲ್ಲಿ ಅಮೆರಿಕ, ಇಂಗ್ಲೆಂಡ್, ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಒದ್ದಾಡುತ್ತಿವೆ. ಈ ದೇಶಗಳಲ್ಲಿ ನಿರ್ಭಿಡೆ (care-free nature) ಮತ್ತು ಹದ್ದು ಮೀರಿದ ಸ್ತ್ರೀ-ಸ್ವಾತಂತ್ರ್ಯ (ಸ್ವೇಚ್ಛಾಚಾರ)ಗಳೇ ಮುಖ್ಯ ಕಾರಣಗಳು ಎಂದರೆ ತಪ್ಪಾಗಲಾರವು.

  ಆಫ್ರಿಕಾ ದೇಶಗಳಲ್ಲಿ ಬಡತನ, ಅವಿದ್ಯೆಯ ಜೊತೆಗೆ ಏಡ್ಸ್ ಸೇರಿ ಈ ಸಮಸ್ಯೆಯನ್ನು ಇನ್ನೂ ಗಂಭೀರವಾಗಿಸಿದ್ದು ಸುಳ್ಳಲ್ಲ. ಆ ನೆಲೆಯಲ್ಲಿ ಇದು ಆ ದೇಶದ ಸಮಸ್ಯೆ ಮಾತ್ರವಲ್ಲ, ಪ್ರಪಂಚಕ್ಕೇ ಸವಾಲಾಗಿದೆ.

  ಇದು ಜಾಗತಿಕ ಸಮಸ್ಯೆ… ಯಾವುದೇ ಒಂದು ದೇಶದ, ಒಂದು ಪ್ರದೇಶದ, ಒಂದೇ ಕಾರಣಮೂಲದ ಸಮಸ್ಯೆ ಅಲ್ಲ, ಅಂತ ನನ್ನ ಅಭಿಪ್ರಾಯ; ಅದನ್ನು ಸ್ಪಷ್ಟ ಪಡಿಸುವಲ್ಲಿ ನಾನು ತಪ್ಪಿರಬಹುದು. ಕ್ಷಮಿಸಿ.

 15. ವೇಣಿ,
  ನಿನ್ನ ವೈಯಕ್ತಿಕ ತಾಣವನ್ನು ಒಂದು ಸುದೀರ್ಘ ಚರ್ಚಾವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದೇವೆ. ಕ್ಷಮಿಸು.

 16. carefree nature, swechachara..sari.
  apparently in 1960’s some women stopped wearing bras here in the name of feminism:)..similarly concept of freelove, drug indulgence.. mankind has overcome some pretty dumb things in the past.

  bottomline: aadhunikate, naagareekate in this issue is overgeneralizing..resulting in overdrawn arguments:)

  sorry for my english posts.

 17. ಜ್ಯೋತಿಯವರು ಸಮಸ್ಯೆಯ ಸಮಸ್ತ ಮುಖಗಳನ್ನು ತೋರಿಸಿದ್ದಾರೆ. ಅವರಿಗೆ ಧನ್ಯವಾದಗಳು. ನನಗೆ ಅನಿಸುವದೆಂದರೆ ನಾವೆಲ್ಲರೂ ಒಂದೇ ಅಭಿಪ್ರಾಯವನ್ನು ಹೇಳುತ್ತಿದ್ದೇವೆ, ಆದರೆ ಬೇರೆ ಬೇರೆ ರೀತಿಗಳಲ್ಲಿ.
  ಹಳೆಯ ಸಮಾಜದಲ್ಲಿ ಕ್ರೂರ ಕಟ್ಟುಪಾಡುಗಳ ಹೇರಿಕೆಯಿಂದಾಗಿ ಮಹಿಳೆ ಶೋಷಿತಳಾಗಿದ್ದಳು. ಆಧುನಿಕ ಸಮಾಜದಲ್ಲಿ ಅವಳಿಗೆ ಯಾವ ಬಂಧನವೂ (apparently) ಇಲ್ಲ. ಆದರೂ ಅವಳು ಪುರುಷ-ಶೋಷಿತಳೇ. ಇದಕ್ಕೆ ಒಂದು ಕಾರಣವೆಂದರೆ, ಆಧುನಿಕ ಸಮಾಜವು ಅವಳ ಮೇಲೆ ಹೇರುತ್ತಿರುವ female-image. This image is a gold-painted cage made by man for the woman. ತಾನಿರುವದು ತನ್ನ ವ್ಯಕ್ತಿಗತ ಬೆಳವಣಿಗೆಗಾಗಿ ಎನ್ನುವದು ಮಹಿಳೆಗೆ ಭಾಸವಾಗಬೇಕು. ಇಲ್ಲವಾದರೆ, she will succumb to her boyfriends, to her husband and as a subordinate person in the social structure. ಆಧುನಿಕ ನಾಗರಿಕತೆಗೆ ಸ್ತ್ರೀಯ ವ್ಯಕ್ತಿಗತ (in general) ಬೆಳವಣಿಗೆ ಬೇಕಾಗಿಲ್ಲ. ಈ ಮಾತು ಹಳೆಯ ಸಮಾಜಕ್ಕೂ ಅನ್ವಯಿಸುತ್ತದೆ.
  ಸುಷ್ಮಾ ಅವರೆ, ನಾನು ಸ್ತ್ರೀಸ್ವಾತಂತ್ರ್ಯವಿರೋಧಿ ಅಲ್ಲ.

 18. ಸುನಾಥರೆ, ನಿಮ್ಮ ಧನ್ಯವಾದಗಳಿಗೆ ವಂದನೆಗಳು.

  ನಿಮ್ಮ ವಾದದಲ್ಲಿ ಒಂದು ಮಾತಿನ ಮೇಲೆ ನನಗೆ ಭಿನ್ನಾಭಿಪ್ರಾಯವಿದೆ.
  “ಪುರುಷ ನಿರ್ಮಿತ ಬಂಗಾರದ ಪಂಜರ” ಎಂದಿದ್ದೀರಿ, ಆ ಪಂಜರದ ನಿರ್ಮಾಣದಲ್ಲಿ ಮಹಿಳೆಯದೂ ಪಾಲಿದೆ ಅಂತ ನನ್ನ ಅಂಬೋಣ.
  ತನಗೇನು ಬೇಕು ಅನ್ನುವುದನ್ನು ಅರಿಯುವ ಕಡೆ ಗಮನ ಕೊಡುವ ಮೊದಲೇ ಮಹಿಳೆ ತನಗೇನು ಬೇಡ ಅನ್ನುವುದನ್ನು ನಿರ್ಧರಿಸಿ, ಆಧುನಿಕತೆಯ ಹೆಸರಲ್ಲಿ “ಕಟ್ಟುಪಾಡು”ಗಳನ್ನು ಕಿತ್ತೊಗೆಯುತ್ತಾ ಬಂದಳು. ನಿಜವಾಗಿ ನಡೆಯಬೇಕಾದ ಹಾದಿಯನ್ನು ಕಂಡುಕೊಳ್ಳದೆ ಹೊಸದೆಂಬ ಭ್ರಮೆಯಲ್ಲಿ ಹಳೆಯ ಜಾಡಿನಲ್ಲೇ ನಡೆಯುತ್ತಿದ್ದಾಳೆ, ಅದರ ಅರಿವು ಮಾತ್ರ ಆಕೆಗಿಲ್ಲ. ಹಳೆಯ ಸಮಾಜದಲ್ಲಿ ಪುರುಷ ವ್ಯಾಘ್ರನಾಗಿ ಚಿತ್ರಿತವಾಗಿದ್ದರೆ, ಹೊಸ ಸಮಾಜದಲ್ಲಿ ಆತನನ್ನು ಗೋಮುಖ ವ್ಯಾಘ್ರನಾಗಿಸಿದ್ದಾಳೆ “ಮುಂದುವರಿದ” ಮಹಿಳೆ. ಇವೆರಡೂ ತಪ್ಪು. ತನ್ನತನದ ಅರಿವು ಮೂಡುವ ತನಕ ಮಹಿಳೆ ಪುರುಷನನ್ನು ದೂರುತ್ತಲೇ ಇರುತ್ತಾಳೆ.

  ಇಂದಿನ ಮಹಿಳೆಯರನೇಕರ “ಬಂಧಿತ” ಭಾವಕ್ಕೆ, ಸ್ಥಿತಿಗೆ ಅವರವರೇ ಹೇರಿಕೊಂಡ ನಿಬಂಧನೆಗಳು ಕಾರಣ. ಆಕೆ ಅತ್ಯುತ್ತಮ ಮಡದಿಯೂ ಆಗಿದ್ದುಕೊಂಡು, ತಾಯಿಯೂ ಆಗಿದ್ದುಕೊಂಡು, ಸೊಸೆ, ಮಗಳು, ಅತ್ತಿಗೆ, ನಾದಿನಿ, ಅಕ್ಕ, ತಂಗಿ… ಎಲ್ಲವೂ ಆಗಿರುತ್ತಲೇ, ಎಲ್ಲೆಲ್ಲೂ ಅತ್ಯುತ್ತಮಳೂ ಆಗಿದ್ದುಕೊಂಡು, ಪುರುಷನ ಸಮಾನ “bread winner” ಆಗಿಯೂ ಕಾರ್ಯನಿರ್ವಹಿಸುವ ಒತ್ತಡ ಅವಳ ಮೇಲೆ ಪುರುಷನೊಬ್ಬನೇ ಹೇರಿಲ್ಲ ಅನ್ನುವುದು ನನ್ನ ಧೃಡ ನಂಬಿಕೆ. ಇದರಲ್ಲಿ ಅವಳ ಪಾಲೂ ಇದೆ, ಒಪ್ಪಿಕೊಳ್ಳಲಾರಳು, ಅಷ್ಟೇ. ಯಾಕೆಂದರೆ, ತನಗೆ ನಿಜವಾಗಲೂ ಏನು ಬೇಕು ಅನ್ನುವುದು ಮಹಿಳೆಗೆ (ಸಾರ್ವತ್ರಿಕವಾಗಿ- ಮಾನವನಿಗೆ) ಅರಿವಾಗಿಲ್ಲ. ಆ ಅರಿವು ಮೂಡಿದಾಗ ಇವೆಲ್ಲ ವಾದ-ವಿವಾದಗಳೇ ಇರುವುದಿಲ್ಲ.

 19. Hats off, ಜ್ಯೋತಿಯವರೆ!
  ನಿಮ್ಮ ವಿಶ್ಲೇಷಣೆಯನ್ನು ಮನಹಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.