ಅಪ್ಪ, ಅಮ್ಮ ನೋಡಿ ಒಪ್ಪಿಕೊಂಡು ಬಂದಿದ್ದ ಹುಡುಗಿಯ ಭಾವಚಿತ್ರ ಈಗ ಮಗನೆದುರಲ್ಲಿತ್ತು. ಅವನು ಅದನ್ನು ಕೈಗೆತ್ತಿಕೊಂಡು ನೋಡಲೇ ಇಲ್ಲ. ಈಗಾಗಲೇ ಮನದಲ್ಲಿ ಮನೆ ಮಾಡಿ ನೆಲೆಸಿದ್ದ ಚೆಲುವೆಯ ನೆನಪನ್ನು ದೂರ ತಳ್ಳಿ ಹೇಳೇಬಿಟ್ಟ – ’ನೀವು ಒಪ್ಪಿದ್ದೀರಿ ತಾನೇ? ಸರಿ ಹಾಗಾದರೆ. ಮದುವೆ ನಿಶ್ಚಯವಾಗಲಿ’ – ಎಂದು ಎದ್ದು ಹೊರನಡೆದ. ಹೆತ್ತವರು ಹಿಗ್ಗಿ ಹೀರೆಕಾಯಾದರು. ನಮ್ಮ ಮಗ ಎಷ್ಟು ಒಳ್ಳೆಯವನು! ಪುಣ್ಯ ಮಾಡಿದ್ವಿ.
ತಮ್ಮ ಕಣ್ಮುಂದೆಯೇ ಮನೆ ಒಡೆಯುತ್ತಿದ್ದುದನ್ನು ಕಂಡು ಕಣ್ಣೀರು ಸುರಿಸುತ್ತಾ ಕುಳಿತಿದ್ದರು ಹೆತ್ತವರು. ಮೆತ್ತನೆಯ ಅಣ್ಣನಿಗೆ ಟೋಪಿ ಹಾಕಲು ಒಡಹುಟ್ಟಿದ ತಮ್ಮಂದಿರೇ ತಯಾರಾಗಿ ನಿಂತಿದ್ದರು. ಎಲ್ಲವೂ ಅವರೆಂದುಕೊಂಡತೆ ನಡೆಯಿತೆನ್ನುವಾಗಲೇ ವಿರೋಧ ಬಂದಿತ್ತು ಅತ್ತಿಗೆಯಿಂದ. ಅವರಿಗೆ ಇದು ನುಂಗಲಾರದ ತುತ್ತು! – ’ನಮ್ಮಣ್ಣ ಎಷ್ಟು ಒಳ್ಳೆಯವನು! ಈ ಗಯ್ಯಾಳಿ ಎಲ್ಲಿಂದ ಗಂಟು ಬಿದ್ದಳೋ ಅವನಿಗೆ’
ಕೇಳಿಕೇಳಿದಾಗೆಲ್ಲಾ ಲೆಕ್ಕ ಕೇಳದೆ ಎಣಿಸಿಕೊಡುತ್ತಿದ್ದ ಅಣ್ಣನ ಕೈಗೆ ಈಗ ಅತ್ತಿಗೆಯ ಕಡಿವಾಣ ಬಿದ್ದಿದ್ದು ಸಹಿಸುವುದು ಕಷ್ಟವಾದ ತಂಗಿಯ ಅಂತರಂಗ ಅಣ್ಣನಿಗಾಗಿ ಮರುಗುತ್ತಿದೆ – “ಅಣ್ಣಾ, ನೀನೆಷ್ಟು ಒಳ್ಳೆಯವನು. ಅತ್ತಿಗೆ ನಿನಗೆ ತಕ್ಕವಳಲ್ಲ!”
ಪಾಪ! ಎಂದು ಇರಲು ಬಿಟ್ಟುಕೊಟ್ಟಿದ್ದ ತಮ್ಮದೇ ಮನೆಯನ್ನು ತಮಗೆ ಬಿಟ್ಟು ಮಾಡಿಕೊಡಲು ಸತಾಯಿಸುತ್ತಿದ್ದ ಜನರಿಗೆ ಜೋರು ಮಾಡಿ ಬಿಡಿಸಿದ್ದಳು ಅವಳು. ಇಷ್ಟು ದಿನ ಬಾಡಿಗೆಯೇ ಇಲ್ಲದೆ ಹಾಯಾಗಿದ್ದ ಮನೆಯನ್ನು ಬಿಟ್ಟುಹೋಗಲು ಸಂಕಟವಾಗಿ ಗೊಣಗಿಕೊಂಡಿತು ಆ ಕುಟುಂಬ – “ಆ ಮನುಷ್ಯ ಧರ್ಮರಾಯನಂತೋನು. ಈ ಮಾರಾಯ್ತಿನ ಯಾಕೆ ಕಟ್ಟಿಕೊಂಡನೋ. ಎಂಥಾ ಗಂಡನಿಗೆ ಎಂಥಾ ಹೆಂಡತಿ!
ಮೂರು ವರ್ಷದ ಪುಟ್ಟ ಮಗು ಅಮ್ಮನನ್ನು ಅಣಕಿಸುತ್ತಾ ಹೇಳಿತು – ’ಹೋಗಮ್ಮಾ, ನೀನು ಹೋಂವರ್ಕ್ ಮಾಡದಿದ್ದರೆ ಹೊಡೀತೀಯಾ. ಅಪ್ಪನೇ ನಿನಗಿಂತ ಒಳ್ಳೆಯವನು”
ಮನೆಯಲ್ಲಿ, ವಠಾರದಲ್ಲಿ, ಆಫೀಸಿನಲ್ಲಿ, ರೇಷನ್ ಅಂಗಡಿಯಲ್ಲಿ ಎಲ್ಲಾ ಕಡೆ ಅವನು ಒಳ್ಳೆಯವನೇ.
ಒಳ್ಳೆಯವರೆಂಬ ಈ ಇಮೇಜ್ ದೊರಕಿಸಿಕೊಳ್ಳುವುದು ಮಾತ್ರ ತುಂಬಾ ಕಷ್ಟ! ಅದಕ್ಕೆ ಬಹಳ ತ್ಯಾಗ ಮಾಡಬೇಕು!
(ಅಲ್ಲಿ-ಇಲ್ಲಿ ಸಿಕ್ಕುಬಿದ್ದ ಚಿತ್ರಗಳಿವು ; ನನ್ನ ಸ್ವಂತದ್ದಲ್ಲ)
ಇದರಲ್ಲಿ ಅರ್ಧ ಭಾಗ (“ಎಷ್ಟು ಒಳ್ಳೆಯವನು!) ನನ್ನ ಸ್ವಂತ ಚಿತ್ರದಂತೆಯೆ ಇದೆಯೆಲ್ಲ! ಉಳಿದರ್ಧ ಭಾಗ ಮಾತ್ರ(“ಗಯ್ಯಾಳಿ ಹೆಂಡತಿ”), ಛೇ!, ನಮ್ಮ ಮನೆಯವರಂತೆ ಇಲ್ಲ.
“ಇದರಲ್ಲಿ ಅರ್ಧ ಭಾಗ (“ಎಷ್ಟು ಒಳ್ಳೆಯವನು!) ನನ್ನ ಸ್ವಂತ ಚಿತ್ರದಂತೆಯೆ ಇದೆಯೆಲ್ಲ!”
– ಸುನಾಥರೇ, ಎಲ್ಲರಿಗೂ ಹಾಗೆ ಅನ್ನಿಸತ್ತೇನೋ 🙂
ನಮಸ್ಕಾರ. ಅತಿ ಸರ್ವತ್ರ ವರ್ಜಯೇತ್ ಎಂದು ಕವಿಮಹಾಶಯನೊಬ್ಬ ಹೇಳಿದ್ದಾನೆ. ಇದರಲ್ಲಿ ಕೆಟ್ಟದ್ದೂ ಬಂತು. ಒಳ್ಳೆಯದೂ ಬಂತು. ಅಲ್ಲಿ-ಇಲ್ಲಿ ಸಿಕ್ಕಿಬಿದ್ದಿದ್ದಾದರೂ ಉತ್ತಮವಾಗಿದೆ.
ತೇಜಸ್ವಿನಿಯವರೇ, ತುಳಸಿವನಕ್ಕೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮ ’ಮಾನಸ’ ಸರೋವರದಲ್ಲಿ ವಿಹರಿಸಿ ಬಂದೆ. ಕವನಗಳನ್ನು ಬಹಳ ಅಚ್ಚುಕಟ್ಟಾಗಿ ಪೋಣಿಸಿಟ್ಟಿದ್ದೀರಿ. ಸುಂದರ ಬ್ಲಾಗೊಂದನ್ನು ಪರಿಚಯಿಸಿಕೊಂಡ ಖುಷಿ ನನ್ನದಾಯಿತು. 🙂
ಧನ್ಯವಾದಗಳು..ಆದಾಗಲೆಲ್ಲಾ ಬರುತ್ತಿರಿ. ತಮ್ಮ ಸಲಹೆಗಳಿಗೆ ಸದಾ ಸ್ವಾಗತವಿದೆ.
ಚೆನ್ನಾಗಿದೆ. ನೀವು ಹೇಳಿದ್ದು ನಿಜ. ಜೀವನದಲ್ಲಿ ನಡೆಯುತ್ತಲೇ ಇರುವಂತದು.ಅದು ಯಾವಾಗಲೂ ಹಾಗೆಯೇ. ಅಪ್ಪ ತ್ಯಾಗ ಮಾಡಿ ಒಳ್ಳೆಯವನಾದರೂ, ಹೀರೋ ಆದರೂ ಕೆಟ್ಟವಳೆನಿಸಿಕೊಂಡು ಬದುಕನ್ನು ಸುಲಭ ಮಾಡುವವಳು ಅಮ್ಮ. ಸ್ವಲ್ಪ ದಿನಗಳ ಹಿಂದೆ ಸುಶ್ರುತ ದೊಡ್ಡೇರಿಯವರು ತಮ್ಮ ಬ್ಲೋಗ್ನಲ್ಲಿ ಅಪ್ಪನನ್ನು ಹೀರೊ ಮಾಡಿ ಬರೆದಿದ್ದರು ನೋಡಿ, ‘ಸಿಡಿಯಲಿರುವ ಪಟಾಕಿ’ ಎಂದು. ನೀವೂ ಕೂಡ ಓದಿರಬಹುದು. ಅವರ ಕಥೆಯಲ್ಲಿಯೂ ಮುಂದಾಗುವುದನ್ನು ಊಹಿಸಿ ಕೆಟ್ಟವಳಾಗುವವಳು ಅಮ್ಮ. ಆದರೆ ತ್ಯಾಗ ಮಾಡಿ ಒಳ್ಳೆಯವನಾಗುವವನು ಅಪ್ಪ!
ನಮ್ಮ ಮನೆಯ ಕಥೆಯನ್ನೇ ಇಲ್ಲಿ ಬರೆದ ಹಾಗಿದೆ!?
ಯಾವಾಗಲೂ ಗಂಡಸು glorified ಆಗುತ್ತಾನೆ ಹಾಗು ಹೆಂಗಸು ಕೆಟ್ಟವಳಾಗುತ್ತಾಳೆ ಎನ್ನುವ ಸಾಧಾರಣೀಕರಣ ಸರಿಯಾದದ್ದಲ್ಲ. ಅಲ್ಲದೆ, ‘ಅಣ್ಣ ಹಾಗೆ, ಅತ್ತಿಗೆ ಹೀಗೆ’ ಎಂದು ಟೀಕೆ ಮಾಡುವವರು ತಂಗಿಯರೆ ಹೊರತು, ತಮ್ಮಂದಿರಲ್ಲ. ತ್ರಿವೇಣಿಯವರು ಬರೆದದ್ದು ಯಾವುದೊ ಒಂದು ಕುಟುಂಬದ ಕತೆ ಇರಬಹುದು
ಸುನಾಥರೇ, ಯಾವಾಗಲೂ ಗಂಡಸು glorified ಆಗುತ್ತಾನೆ ಹಾಗು ಹೆಂಗಸು ಕೆಟ್ಟವಳಾಗುತ್ತಾಳೆ ಎನ್ನುವ ಸಾಧಾರಣೀಕರಣ ಸರಿಯಾದದ್ದಲ್ಲ – ಒಪ್ಪುತ್ತೇನೆ. ಆದರೂ ಬಹಳಷ್ಟು ಸಂದರ್ಭಗಳಲ್ಲಿ ಗಂಡಸರು ಅನ್ಯಾಯ ಪ್ರತಿಭಟಿಸಿ, ತಮ್ಮ ಮನೆ,ಮನಸ್ಸನ್ನು ಬಗ್ಗಡಗೊಳಿಸಲು ಇಷ್ಟಪಡುವುದಿಲ್ಲ. ’ ಇರಲಿ ಬಿಡು, ಹೋಗಲಿ ಬಿಡು’ ಎಂದು ಸಾವರಿಸಿಕೊಂಡು ಸುಮ್ಮನಾಗುವವರೇ ಹೆಚ್ಚು. ಹೆಂಗಸರಿಗೆ ಹಾಗೆ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಅವರು ಮಾತಾಡಿ ಕೆಟ್ಟವರಾಗಲು ಹಿಂಜರಿಯುವುದಿಲ್ಲ.
ಈ ಮಾತಿಗೆ ನೀವು ಹೊರತಾಗಿದ್ದರೆ ಕ್ಷಮಿಸಿ. ಈ ಬಗ್ಗೆ ನಿಮಗಿಂತ, ನಿಮ್ಮ ಶ್ರೀಮತಿಯವರನ್ನು ವಿಚಾರಿಸಿದರೆ ನಿಜ ಹೊರಬರುತ್ತದೆ 🙂
“ನಮ್ಮ ಮನೆಯ ಕಥೆಯನ್ನೇ ಇಲ್ಲಿ ಬರೆದ ಹಾಗಿದೆ!?”
ಹೌದಾ! ಜ್ಯೋತಿ, ಇದೇ ರೀತಿ ಇನ್ನೂ ಕೆಲವರಿಗೆ ಅನಿಸಿತಂತೆ. ಹಾಗಿದ್ದರೆ ಇದು ಮನೆಮನೆ ಕಥೆ! 🙂
“ಈ ಮಾತಿಗೆ ನೀವು ಹೊರತಾಗಿದ್ದರೆ…………ನಿಜ ಹೊರ ಬರುತ್ತದೆ.”
*
*
ನಿಮ್ಮ ಕೈಯಲ್ಲಿ ಸಿಕ್ಕಿಹಾಕಿಕೊಂಡ ಹಾಗಾಯಿತು! ನಿಮ್ಮ ಕತೆ ನಮ್ಮ ಮನೆಗೂ apply ಆಗುತ್ತದೆ ಎಂದು ನನ್ನ ಅರ್ಧಾಂಗಿ ಪ್ರಮಾಣ ಮಾಡುತ್ತಾಳೆ. ಆದರೂ, ಸಾಧಾರಣೀಕರಣ ಸಾಮಾನ್ಯವಾಗಿ ಸರಿಯಾದದ್ದಲ್ಲ ಎಂದು ನೀವು ಒಪ್ಪಿಕೊಂಡದ್ದಕ್ಕೆ thanks!
“ನಮ್ಮ ಮನೆಯ ಕಥೆಯನ್ನೇ ಇಲ್ಲಿ ಬರೆದ ಹಾಗಿದೆ!?”
ಹಹಹ! ನಮ್ಮ ಮನೆಯಲ್ಲೂ ಇದೇ ಕಥೇನೇ.
ಮೈನಾ, ತುಳಸಿವನದ ಭೇಟಿಗೆ ಧನ್ಯವಾದಗಳು.
ನನ್ನ ಅಪ್ಪ ಅಮ್ಮಂದೂ ಇದೇ ಕಥೆ. ನಂದು ಮಾತ್ರ ಉಲ್ಟಾ. ನಾನು ಒಳ್ಳೆಯವಳು?? … ಇವರು….. ಃ-(
“ನನ್ನ ಅಪ್ಪ ಅಮ್ಮಂದೂ ಇದೇ ಕಥೆ.”
– ಎಲ್ಲಾ ಅಪ್ಪ – ಅಮ್ಮಂದಿರದೂ ಅದೇ ಕಥೆ ಇರಬೇಕು.
ನಾನು ಒಳ್ಳೆಯವಳು?? … ಇವರು….. ಃ-(
– ನೀವು ಒಳ್ಳೆಯವರು. ಅವರೂ ಒಳ್ಳೆಯವರೇ. ಅನುಮಾನವೇಕೇ? 🙂
ಇದು ಯಾವುದೋ ಉದಯ ಟಿವಿ ಧಾರಾವಾಹಿ ತರ ಇದೆ ಅಲ್ಲಾರೀ 🙂
ಓಹೋ! ಶಿವು! ಬರಬೇಕು, ಬರಬೇಕು!
ಮದುವೆಯಾದ ಮೇಲೆ ಎಲ್ಲಿ ಮಾಯವಾಗಿಹೋದಿರೋ ಅಂತ ನಾವೆಲ್ಲಾ ಪತ್ತೇದಾರರನ್ನಟ್ಟಿ ಹುಡುಕಿಸಿದ ಮೇಲೆ ಕೊನೆಗೂ ಕ್ಯಾಲಿಫೋರ್ನಿಯಾದಲ್ಲಿ ಸಿಕ್ಕಿಬಿದ್ದಿದ್ದೀರಂತೆ! 🙂
“ಇದು ಯಾವುದೋ ಉದಯ ಟಿವಿ ಧಾರಾವಾಹಿ ತರ ಇದೆ ಅಲ್ಲಾರೀ .”
ಛೇ!! ಖಂಡಿತಾ ಇಲ್ಲ. ನಾನು ಬರೆದಿರುವವರು ಹೆಣ್ಣುಗಳಲ್ಲಿ ಯಾರೂ ಉದಯ ಟಿವಿ ಧಾರಾವಾಹಿಗಳಲ್ಲಿ ಬರುವ ಹೆಂಗಸರಷ್ಟು ಕೆಟ್ಟವರಲ್ಲ!
ತ್ಯಾಗ ಪ್ರೀತಿನೇ
ತಾನು ಒಳ್ಳೆಯವನು ಆಗವ ಸಲುವಾಗಿ
ಮನಸಿಗೇ ಮೋಸ ಮಾಡೋದು ಸರಿನೇ