ಎದೆಯು ಮರಳಿ ತೊಳಲುತಿದೆ – ಎಂ. ಗೋಪಾಲಕೃಷ್ಣ ಅಡಿಗ

ಕವಿ : ಎಂ. ಗೋಪಾಲಕೃಷ್ಣ ಅಡಿಗ
ಸಂಗೀತ : ಮೈಸೂರು ಅನಂತಸ್ವಾಮಿ
ಗಾಯಕಿ : ರತ್ನಮಾಲಾ ಪ್ರಕಾಶ್

ಹಾಡು ಕೇಳಿ

ಎದೆಯು ಮರಳಿ ತೊಳಲುತಿದೆ
ದೊರೆಯದುದನೆ ಹುಡುಕುತಿದೆ
ಅತ್ತ ಇತ್ತ ದಿಕ್ಕುಗೆಟ್ಟು
ಬಳ್ಳಿ ಬಾಳು ಚಾಚುತಿದೆ
ತನ್ನ ಕುಡಿಯನು

ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡುಕಲೆಳಸುತಿದೆ
ತನ್ನ ಗಡಿಯನು

ಎದೆಯು ಮರಳಿ ತೊಳಲುತಿದೆ….

ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೆ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟುತಲಿದೆ ಮನದಲಿ

ಎದೆಯು ಮರಳಿ ತೊಳಲುತಿದೆ….

ನೀರದಗಳ ದೂರತೀರ
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯಭಾರ
ತಾಳಲೆಂತು ನಾ ?

ಯಾವ ಬಲವು ಯಾವ ಒಲವು
ಕಾಯಬೇಕು ಅದರ ಹೊಳವು
ಕಾಣದೆ ದಳ್ಳಿಸಲು ಮನವು
ಬಾಳಲೆಂತು ನಾ ?

ಎದೆಯು ಮರಳಿ ತೊಳಲುತಿದೆ….

2 thoughts on “ಎದೆಯು ಮರಳಿ ತೊಳಲುತಿದೆ – ಎಂ. ಗೋಪಾಲಕೃಷ್ಣ ಅಡಿಗ”

  1. Shiv says:

    ನಮಸ್ಕಾರ ತ್ರಿವೇಣಿಯವರಿಗೆ ,

    ಒಳ್ಳೆ ಕವನ ಆಯ್ಕೆ ಮಾಡಿದೀರಾ..

    >>ಹಿಂದೆಗೆಯುವ ವೀಚಿ ವೀಚಿ
    ಮುರುಟುತಲಿದೆ ಮನದಲಿ

    ವೀಚಿ ವೀಚಿ ಅಂದ್ರೇನು?

  2. sritri says:

    ೧. ವೀಚಿ (ಸಂ) (ನಾ) ಸಣ್ಣಅಲೆ, ತರಂಗ

Leave a Reply to Shiv Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಕೊಳದ ಪಕ್ಕದ ಹೊಲದ – ಕೆ.ಎಸ್.ನರಸಿಂಹಸ್ವಾಮಿಕೊಳದ ಪಕ್ಕದ ಹೊಲದ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ – ಪ್ರವೀಣ್ ಗೋಡ್ಕಿಂಡಿ ಗಾಯಕಿ – ಎಂ.ಎಸ್.ಶೀಲಾ ಹಾಡು ಕೇಳಿ ಕೊಳದ ಪಕ್ಕದ ಹೊಲದ ಮೈತುಂಬಾ ನಾ ಕಂಡೆ ಬಿಳಿ ಹಳದಿ ಹೂಗಳನು ಸೇವಂತಿಗೆ ನೀರ ಮೇಗಣ ಗಾಳಿ ಬೀಸಿತೋ ನನ ಮೇಲೆ ಅದರ

ಒಂದು ಮುಂಜಾವು – ಚೆನ್ನವೀರ ಕಣವಿಒಂದು ಮುಂಜಾವು – ಚೆನ್ನವೀರ ಕಣವಿ

ಸಾಹಿತ್ಯ: ಚೆನ್ನವೀರ ಕಣವಿ ಸಂಗೀತ: ಸಿ. ಅಶ್ವಥ್ ಗಾಯಕಿ: ಬಿ.ಆರ್.ಛಾಯ ಆಲ್ಬಮ್ : ಭಾವಬಿಂದು ಹಾಡು ಕೇಳಿ ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ‘ಸೋ ‘ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ; ಅದಕೆ ಹಿಮ್ಮೇಳವೆನೆ ಸೋಸಿ ಬಹ ಸುಳಿಗಾಳಿ ತೆಂಗು

ಶಬರಿಶಬರಿ

ಕವನ – ಶಬರಿ ಕವಿ – ವಿ.ಸೀತಾರಾಮಯ್ಯ ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು| ವನವನವ ಸುತ್ತಿ ಸುಳಿದು ತರುತರುವ ನಲೆದು ತಿರಿದು ಬಿರಿ ಹೂಗಳಾಯ್ದು ತಂದು ತನಿವಣ್ಗಣಾಯ್ದು ತಂದು | ಕೊಳದಲ್ಲಿ ಮುಳುಗಿ ಮಿಂದು ಬಿಳಿನಾರು ಮಡಿಯನುಟ್ಟು ತಲೆವಾಗಿಲಿಂಗೆ