ಚಿತ್ರ – ಮಣ್ಣಿನದೋಣಿ – ೧೯೯೩
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕರು – ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ
ಮಳೆ ಮಳೆ ಮಳೆ ಮಳೆ
ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ
ಕನಸಿನ ಸುರಿಮಳೆ
ಮನ ಹರಯದ ನದಿಯಾಗಿದೆ
ತನು ಬದುಕಿನ ಕಡಲಾಗಿದೆ
ಮೊದಲನೆ ನೋಟ ಮದನ ಮಳೆ
ಮೊದಲನೆ ಸ್ವರ್ಶ ರತಿಯ ಮಳೆ
ಮೊದಲನೆ ಮಾತು ಕವನ ಮಳೆ
ಮೊದಲನೆ ನಗುವು ಹುಣ್ಣಿಮೆ ಮಳೆ
ತುಂತುರು ತುಂತುರು ಮಳೆಯಲಿ
ಮೊದಲನೆ ಮಿಲನ
ಮಳೆಯ ಮಣ್ಣಿನ ಮದುವೆಲಿ
ಬೆರೆತವು ನಯನ
ತೊಡಿಸಿದವು ಗುಡುಗುಗಳು
ಬೆಳಗಿದವು ಮಿಂಚುಗಳು
ಮಳೆಯ ಹಾಡ ಮರೆಯಬಲ್ಲವೇ?||೧||
ಆಲಿಂಗನಕೆ ಭರಣಿ ಮಳೆ
ಸಿಹಿ ಚುಂಬನಕೆ ಸ್ವಾತಿ ಮಳೆ
ಒಸಗೆಯ ಹಗಲು ಹಸ್ತ ಮಳೆ
ಬೆಸುಗೆಯ ರಾತ್ರಿ ಚಿತ್ತ ಮಳೆ
ಮಧುರ ಮಧುರ ಮೈತ್ರಿಯ
ಮಳೆಯಲಿ ಶಯನ
ಒಡಲ ಒಳಗೆ ಉರಿಯುವ
ಬಯಕೆಯ ಶಮನ
ಮುಂಗಾರು ಹಿಂಗಾರು
ಮಳೆ ನೀರೇ ಪನ್ನೀರು
ಮಳೆಯ ಹಾಡ ಮರೆಯಬಲ್ಲವೇ? ||೨||
* * * �
�
ee haadu tumba chennaagide. matte matte kelta ideeni.
ಈ ಹಾಡಂತೂ ಕೇಳಿದ ದಿನದಿಂದ ವೈರಾಗ್ಯ ಬಂದು ಬಿಟ್ಟಿದೆ, ಒಂದೇ ಥರದ ಇವರ ರತಿ ಮನ್ಮಥ ಸಾಹಿತ್ಯ ವಾಕರಿಕೆ ತರಿಸುತ್ತದೆ. ಇದೇ ಥರದ ಹಾಡುಗಳ ಪಟ್ಟಿ ಇದೆ ‘ಮುದ್ದಾಡೆಂದಿದೆ ಮಲ್ಲಿಗೆ ಹೂ’, ಸುರಿವ ಮಳೆಯಲೀ ಕೊರೆಯುವಾ ಛಳಿ ಛಳಿ’ , ಮುತ್ತಿನ ಮಾತಿನಲಿ ಮನೆಯ ಕಟ್ಟೋಣ’ , ‘ಯಮ್ಮೋ ಯಾಕೊ ಮೈಯ್ಯೇ ಉಸಾರಿಲ್ಲ’ ಇತ್ಯಾದಿ ಇತ್ಯಾದಿ ಇತ್ಯಾದಿ…… ಮುಕ್ಕಾಲು ಭಾಗ ರವಿಚಂದ್ರನ್ ಅವರಿಗಾಗಿ ರಚನೆಯಾಗಿರುವುದು. ಇದು ನನ್ನ ಅಭಿಪ್ರಾಯ ಅಷ್ಟೆ.
ಅನಾಮಿಕ ಮತ್ತು ಮೀರಾ, ಇಬ್ಬರ ಅಭಿಪ್ರಾಯಗಳಿಗೂ ಸ್ವಾಗತ ಮತ್ತು ಧನ್ಯವಾದಗಳು. 🙂
ಇದು ಯಾವ ರಾಗದಲ್ಲಿ
ಮೂಡಿ ಬಂದಿದೆ?