ಪ್ರತಾಪ್ – ೧೯೯೦
ಸಾಹಿತ್ಯ, ಸಂಗೀತ – ಹಂಸಲೇಖ
ಗಾಯಕರು – ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಚಂದ್ರಿಕಾ ಗುರುರಾಜ್
ಪ್ರೇಮ ಬರಹ …. ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮಾ…. ದಿನ ನೂತನವೀ ಪ್ರೇಮ
ಪ್ರತಿ ಜನುಮದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮ
ದಿನ ನಗುವುದೇ ಪ್ರೇಮ ||
ಯಾರೋ ನೀನ್ಯಾರೊ
ಯಾರೋ ನಾನ್ಯಾರೋ
ನಾವೀಗ ಸೇರಿರಲು
ಪ್ರೇಮದ ಸೆಳೆತವೇ ಕಾರಣವು |
ಸಾವೇ ಹೂವಾಗಿ
ನೋವೇ ಜೇನಾಗಿ
ನಾವೀಗ ಸವಿದಿರಲು
ಪ್ರೇಮದ ಸತ್ಯವೇ ಪ್ರೇರಣವು|
ಪ್ರೀತಿ ಮಾಡುವವರು
ಲೋಕದಲಿ ಪುಣ್ಯ ಮಾಡಿದವರು
ಪ್ರೇಮಾ… ಬಲು ಸುಖಮಯವೀ ಪ್ರೇಮ
ಈ ಭೂಮಿಯಲಿ….ಈ ಬಾಳಿನಲಿ
ನೆನಪಿಡುವುದೇ ಪ್ರೇಮ
ಹೆಸರುಳಿವುದೇ ಪ್ರೇಮ ||೧||
ನಾನೇ ನೀನಾದೆ ನೀನೇ ನಾನಾದೆ
ಬೇರಾಗೋ ಸುಳ್ಳುಗಳ
ಪ್ರೇಮದ ಬಾಣವು ಓಡಿಸಿದೆ|
ಆಸೆ ಮುಗಿಲಾಯ್ತು
ರಾತ್ರಿ ಹಗಲಾಯ್ತು
ದೂರಾಗೋ ಚಿಂತೆಗಳ
ಪ್ರೇಮದ ಹಾಸಿಗೆ ಮರೆಸುತಿದೆ|
ಪ್ರೀತಿ ಮಾಡಿದವರು
ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮಾ… ಬಲು ನಶೆಮಯವೀ ಪ್ರೇಮ
ಪ್ರತಿ ಘಳಿಗೆಯಲೂ
ಕಣ ಕಣಗಳಲೂ
ಫಲ ಕೊಡುವುದೇ ಪ್ರೇಮ
ಸುಖ ಕೊಡುವುದೇ ಪ್ರೇಮ||೨||
_________________________