ಇನ್ನೇನಿನ್ನೇನು?

ರಾಗ: ಸೌರಾಷ್ಟ್ರ
ತಾಳ: ಝಂಪೆ

ಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು ||ಪ||

ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು ||ಅ.ಪ||

ಭಾವಿಸಿದ್ದೆಲ್ಲವು ಭೂಮಿಪಾಲಾದ ಮೇಲಿನ್ನೇನಿನ್ನೇನು
ಸೇವಿಸಿದ ಗಣಪ ಮಂಗನಾದ ಮೇಲಿನ್ನೇನಿನ್ನೇನು ||೧||

ಒತ್ತಿ ಹಿಡಿದ ಕಂಬ ವ್ಯರ್ಥವಾದ ಮೇಲಿನ್ನೇನಿನ್ನೇನು
ಜತ್ತಾದ ಜನರೆಲ್ಲ ಜರೆದು ಪೋದ ಮೇಲಿನ್ನೇನಿನ್ನೇನು ||೨||

ತೋಡಲು ಬಾವಿ ಬೇತಾಳ ಹೊರಟಿತು ಇನ್ನೇನಿನ್ನೇನು
ನಾಡ ಜನಕೆ ನಾಲ್ಕು ನಾಲಿಗುಂಟಾಯಿತು ಇನ್ನೇನಿನ್ನೇನು ||೩||

ಬರಹೋಗುವವರ ಮುಂದೆ ಮರಿಯಾದೆ ಹೋಯಿತು ಇನ್ನೇನಿನ್ನೇನು
ಸರಸ ಸಂಸಾರದ ಸವಿ ಹಾರಿಹೋಯಿತು ಇನ್ನೇನಿನ್ನೇನು ||೪||

ಕಯ್ಯಿಗೆ ಬಂದಪರಂಜಿ ಕಬ್ಬಿಣವಾಯಿತು ಇನ್ನೇನಿನ್ನೇನು
ಬಯಸಲೇತಕೆ ಪಡೆದ ಭಾಗ್ಯ ಬಯಲಾಯಿತು ಇನ್ನೇನಿನ್ನೇನು ||೫||

ಅರ್ಥಿಯ ಸಂಸಾರ ಅಡವಿಯ ಪಾಲಾದ ಮೇಲಿನ್ನೇನಿನ್ನೇನು
ಮಿತ್ರರಾದವರೆಲ್ಲ ಶತ್ರುಗಳಾದ ಮೇಲಿನ್ನೇನಿನ್ನೇನು ||೬||

ಗಂಡ(ಗಂಡು)ಮಕ್ಕಳು ಯಮಗಂಡರಾದ ಮೇಲಿನ್ನೇನಿನ್ನೇನು
ಪಂಡಿತ ಶ್ರೀ ಪುರಂದರವಿಠಲರಾಯ ಇನ್ನೇನಿನ್ನೇನು ||೭||

( ದಾಸಸಾಹಿತ್ಯ ಮಾಲಿಕೆ :೨ – ಪುರಂದರದಾಸರ ಹಾಡುಗಳು)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಗುರುಪದ ಹಾರಗುರುಪದ ಹಾರ

ಗುರುಪದ ಹಾರ ಧರೆಯೋದ್ಧಾರಕೆ ಮೆರೆವರು ಗುರುಗಳು ವರಮಂತ್ರಾಲಯದಲ್ಲಿ ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ |೧| ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ ಮೆರೆಸಿದ ವರಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ |೨| ಹರಿಮತ ಸಾರುವ ಹರಿಪದ ಹಾರವ ಪರಿ ಪರಿ

ಏಕೆನ್ನ ಈ ರಾಜ್ಯಕ್ಕೆಳೆತಂದೆ?ಏಕೆನ್ನ ಈ ರಾಜ್ಯಕ್ಕೆಳೆತಂದೆ?

ರಾಗ: ತೋಡಿ ತಾಳ: ದೀಪ್ ಚಂಡಿ ಏಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ ಸಾಕಲಾರದೆ ಎನ್ನ ಏಕೆ ಪುಟ್ಟಿಸಿದೆ ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ ಮನ್ನಿಸುವ ದೊರೆಯಿಲ್ಲ ಮನಕೆ ಹಿತವಿಲ್ಲ ಹೊನ್ನುಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ ಇನ್ನಿಲ್ಲಿ ತರವಲ್ಲ ಇಂದಿರೇಶನೆ ಬಲ್ಲ ದೇಶ ಪರಿಚಯವಿಲ್ಲ ದೇಹದೊಳು

ವಿಜಯ ಕವಚವಿಜಯ ಕವಚ

ರಚನೆ : ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ಪುತ್ತೂರು ನರಸಿಂಹ ನಾಯಕ್ ದನಿಯಲ್ಲಿ – ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ದಾಸರಾಯನ ದಯವ ಸೂಸಿ ಪಡೆದನಾ ದೋಷರಹಿತನಾ ಸಂತೋಷಭರಿತನಾ ||೧|| ಜ್ಞಾನವಂತನ ಬಲು ನಿಧಾನಿ