ಜಯ ಜಾನಕೀಕಾಂತ

ರಾಗ – ನಾಟ, ತಾಳ – ಜಂಪೆ
ರಚನೆ – ಪುರಂದರದಾಸರು

ಹಾಡು ಕೇಳಿ

ವಿದ್ಯಾಭೂಷಣ

ಡಾ. ಎಂ. ಎಲ್ ವಸಂತಕುಮಾರಿ

ಡಾ. ಎಂ. ಬಾಲಮುರಳಿಕೃಷ್ಣ

ಜಯ ಜಾನಕೀಕಾಂತ ಜಯ ಸಾಧು ಜನ ವಿನುತ
ಜಯತು ಮಹಿಮಾನಂತ ಜಯ ಭಾಗ್ಯವಂತ ||ಪಲ್ಲವಿ||

ದಶರಥಾತ್ಮಜ ವೀರ ದಶಕಂಠ ಸಂಹಾರ
ಪಶುಪತೀಶ್ವರ ಮಿತ್ರ ಪಾವನ ಚರಿತ್ರ
ಕುಸುಮಬಾಣ ಸ್ವರೂಪ ಕುಶಲ ಕೀರ್ತಿ ಕಲಾಪ
ಅಸಮ ಸಾಹಸ ಶಿಕ್ಷ ಅಂಬುಜದಳಾಕ್ಷ ||೧||

ಸಾಮಗಾನ ವಿಲೋಲ ಸಾಧುಜನ ಪರಿಪಾಲ
ಕಾಮಿತಾರ್ಥ ಪ್ರದಾತ ಕೀರ್ತಿ ಸಂಜಾತ
ಸೋಮ ಸೂರ್ಯ ಪ್ರಕಾಶ ಸಕಲ ಲೋಕಾಧೀಶ
ಶ್ರೀ ಮಹಾ ರಘುವೀರ ಸಿಂಧು ಗಂಭೀರ ||೨||

ಸಕಲ ಶಾಸ್ತ್ರ ವಿಚಾರ ಶರಣಜನ ಮಂದಾರ
ವಿಕಸಿತಾಂಬುಜ ವದನ ವಿಶ್ವಮಯ ಸದನ
ಸುಕೃತ ಮೋಕ್ಷಾಧೀಶ ಸಾಕೇತ ಪುರವಾಸ
ಭಕ್ತ ವತ್ಸಲ ರಾಮ ಪುರಂದರವಿಠಲ ||೩||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ನಿನ್ನ ದರುಶನಕೆ ಬಂದವನಲ್ಲವೊನಿನ್ನ ದರುಶನಕೆ ಬಂದವನಲ್ಲವೊ

ರಚನೆ : ವಿಜಯದಾಸರು ಮುಖಾರಿ ರಾಗ, ಝಂಪೆ ತಾಳ 1. ನಿನ್ನ ದರುಶನಕೆ ಬಂದವನಲ್ಲವೊ| ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ|| ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು | ಇಲ್ಲಿಗೇ ಬರುವ ಕಾರಣವಾವುದೋ | ಸೊಲ್ಲಿಗೇ ಸ್ತಂಭದಲಿ ತೋರಿದ ಮಹಾಮಹಿಮ

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ

ರಚನೆ : ಪುರಂದರದಾಸರು ವಿದ್ಯಾಭೂಷಣರ ದನಿಯಲ್ಲಿ ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ ||ಪಲ್ಲವಿ|| ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರ ||ಅನು|| ನಂದಿವಾಹನಾನಂದದಿ೦ದ ಮೂರ್ಜಗದಿ ಮೆರೆವನು ನೀನೆ ಅಂದು ಅಮೃತಘಟದಿಂದುದಿಸಿದ ವಿಷತ೦ದು ಭುಜಿಸಿದವ ನೀನೆ ಕಂದರ್ಪನ ಕ್ರೋಧದಿ೦ದ

ಬಾರಯ್ಯಾ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ!ಬಾರಯ್ಯಾ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ!

ರಚನೆ : ಗೋಪಾಲದಾಸರು ಹಾಡಿದವರು : ಮೈಸೂರು ರಾಮಚಂದ್ರ ಆಚಾರ್ಯ ವಾರಿಜಾಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜಮಿತ್ರ ಅಪಾರ ಪ್ರಭಾವನೆ ವಾರಿಜಜಾಂಡದ ಕಾರಣ ದೊರೆಯೆ ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ|| ಮಾರ ಜನಕ ಮುಕುತರೊಡೆಯ ದೇವೈಯ್ಯ