ಪವನ ಸಂಭೂತ ಒಲಿದು

ರಚನೆ – ಪ್ರಾಣೇಶ ವಿಠಲ
ರಾಗ – ಆನಂದ ಭೈರವಿ, ತಾಳ – ಏಕ
ಗಾಯಕ – ಪುತ್ತೂರು ನರಸಿಂಹ ನಾಯಕ್

ಹಾಡು ಕೇಳಿ

ಪವನ ಸಂಭೂತ ಒಲಿದು ತವಕದಿ ಕಾಯಬೇಕು
ಇವನಾರೋ ಎಂದು ಉದಾಸೀನ ಮಾಡದಲೆನ್ನ ||ಪಲ್ಲವಿ||

ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧||

ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ
ಹರಿಯಂತೆ ಒದಗುವೆಯೊ ನೀನು ಹರಿದಾಸನು ನಾನು ||೨||

ಅಜಸುತನ ಶಾಪದಿಂದ ಅಜಗರನಾದವನ ಪಾದ|
ರಜದಿ ಪುನೀತನ ಮಾಡಿದನೇ, ಅಜ ಪದವಿಗೆ ಬಹನೇ ||೩||

ಕಲಿಯುಗದಿ ಕವಿಗಳೆಲ್ಲ ಕಲಿಬಾಧೆಯಿಂದ ಬಳಲೆ|
ಕಲಿವೈರಿಮುನಿಯೆಂದೆನಿಸಿದಿ, ಕಲಿಮಲವ ಕಳೆದಿ ||೪||

ಗುರು ಪ್ರಾಣೇಶ ವಿಠಲ ಹರಿ ಪರನೆಂಬೊಜ್ಞಾನ
ಗುರುಮಧ್ವರಾಯ ಕರುಣಿಸೊ ದುರ್ಮತಿಗಳ ಬಿಡಿಸೊ ||೫||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಹರಿಕಥಾಮೃತಸಾರ -01- ಮಂಗಳಾಚರಣ ಸಂಧಿಹರಿಕಥಾಮೃತಸಾರ -01- ಮಂಗಳಾಚರಣ ಸಂಧಿ

ಹರಿಕಥಾಮೃತಸಾರ – ಮಂಗಳಾಚರಣ ಸಂಧಿ ರಚನೆ : ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ| ಕರುಣದಿಂದಾಪನಿತು ಪೇಳುವೆ| ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ|| ಶ್ರೀರಮಣಿಕರಕಮಲಪೂಜಿತ | ಚಾರುಚರಣಸರೋಜ ಬ್ರಹ್ಮಸ | ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ || ನೀರಜಭವಾಂಡೋದಯಸ್ಥಿತಿ | ಕಾರಣನೆ ಕೈವಲ್ಯದಾಯಕ |

ಪೋಗಬೇಡವೊ ನಿಗಮನುತ – Pogabedavo Nigamanuta madhuregeಪೋಗಬೇಡವೊ ನಿಗಮನುತ – Pogabedavo Nigamanuta madhurege

ಪೋಗಬೇಡವೊ ನಿಗಮನುತ ಮಧುರೆಗೆ ಪೋಗಬೇಡವೊ ಹರಿಯೆ||ಪಲ್ಲವಿ|| ಪೋಗುವಿ ನೀ ಪುನಾರಾಗಮ ಎಂದಿಗೆ ಹೇಗೆ ತಾಳುವೆವೊ ನಾಗಮರ್ದನ ಕೃಷ್ಣ||ಅನು|| ಬಾಲತನದಿ ಬಹುಲೀಲೆಗಳಿಂದಲಿ ಗೋಪಾಲಕರೊಡಗೂಡಿಬಾಳಪ್ರೇಮದಿ ನಮ್ಮಾಲಯವನು ಪೊಕ್ಕು ಪಾಲು ಮೊಸರು ಬೇಡಿಶೀಲಮೂರುತಿ ನಿಮ್ಮೊಲುಮೆಗೆ ಸಿಲುಕಿದಬಾಲೆಯರ ಸ್ಮರಣಂಬಿಗೆ ಗುರಿಮಾಡಿ ||-೧-|| ಹುಟ್ಟಿದ್ದು ಮಧುರೆ ತಂದಿಟ್ಟದ್ದು ಗೋಕುಲ

ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ

ರಚನೆ : ಶೇಷ ವಿಠಲ ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ ||ಪ|| ಹಿಂದುಮು೦ದಿಲ್ಲೆನಗೆ ನೀ ಗತಿ ಎ೦ದು ನ೦ಬಿದೆ ನಿನ್ನ ಪಾದವ ಬ೦ಧನವ ಬಿಡಿಸೆನ್ನ ಕರಪಿಡಿ ನ೦ದಕ೦ದ ಮುಕು೦ದ ಬ೦ಧೊ |ಅ.ಪ| ಸೇವಕನೆಲೊ ನಾನು