ಕವಿ – ಕುವೆಂಪು
ಗಾಯಕಿ – ರತ್ನಮಾಲಾ ಪ್ರಕಾಶ್
ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ
ಜಟಿಲ ಕುಟಿಲ ತಮ ಅಂತರಂಗ
ಬಹು ಭಾವ ವಿಪಿನ ಸಂಚಾರಿ
ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ
ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ
ರೂಪ ಅರೂಪ ವಿಹಾರಿ
ಕನ್ನಡಮ್ಮನ ದೇವಾಲಯ
ಕವಿ – ಕುವೆಂಪು
ಗಾಯಕಿ – ರತ್ನಮಾಲಾ ಪ್ರಕಾಶ್
ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ
ಜಟಿಲ ಕುಟಿಲ ತಮ ಅಂತರಂಗ
ಬಹು ಭಾವ ವಿಪಿನ ಸಂಚಾರಿ
ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ
ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ
ರೂಪ ಅರೂಪ ವಿಹಾರಿ
ಅಬ್ಬಬ್ಬಾ ಸಂಸ್ಕೃತವೇ ತುಂಬಿದೆ ಇದರಲ್ಲಿ. ಒಂದೇ ಒಂದು ಕನ್ನಡ ಪದ ನನ್ನ ಕಣ್ಣಿಗೆ ಬಿದ್ದದ್ದು…
ಒಂದಲ್ಲ, ಎರಡು.
ತ್ರಿವೇಣಿಯವರೇ….
ನಿಮ್ಮ ತಾಣದಿಂದ ನಾನು ಹಲವಾರು ಹಾಡುಗಳನ್ನು ಕಲಿತೆ. ಸಾಹಿತ್ಯದ ಜೊತೆ ನೀವು ಕೊಂಡಿಯನ್ನೂ ಕೊಡುವುದು ನನಗೆ ಹುಡುಕಾಟವನ್ನು ತಪ್ಪಿಸಿತು. ಹೀಗೇ ನಿಮಗೆ ಧನ್ಯವಾದಗಳನ್ನು ಹೇಳಲು ಈ ಸಂದೇಶ. ನಿಮ್ಮ ಆಸಕ್ತಿ ನನಗೆ ಅನುಕೂಲವಾಗಿದೆ. ತುಂಬಾ ಧನ್ಯವಾದಗಳು……
ಶ್ಯಾಮಲ
ಶ್ಯಾಮಲ, ನನ್ನ ಬ್ಲಾಗ್ ನಿಮಗೆ ಉಪಯುಕ್ತವೆನಿಸಿದ್ದು ತಿಳಿದು ಸಂತೋಷವಾಯಿತು. ನೀವು ಹಾಡುಗಾರ್ತಿಯೆಂದೂ ಗೊತ್ತು. ನಿಮ್ಮ ಹಾಡನ್ನು ನಮಗೂ ಕೇಳಿಸಿ. 🙂
ತ್ರಿವೇಣಿಯವರೇ….
ನನ್ನ ಹಾಡು ಕೇಳಿಸಲು ಹೇಳಿದ್ದೀರಿ…. ತುಂಬಾ ಖುಷಿಯಾಯಿತು. ಆದರೆ ಹೇಗೇ ಅಂತ ಗೊತ್ತಿಲ್ಲ… ನನಗೆ ಗಣಕ ತಂತ್ರಜ್ನಾನ ಗೊತ್ತಿಲ್ಲ… ನಿಮ್ಮ ಪ್ರೋತ್ಸಾಹಿಕ ನುಡಿಯೇ ನನ್ನ ಉತ್ಸಾಹವನ್ನು ಇಮ್ಮಡಿಸಿದೆ. ಮತ್ತೊಮ್ಮೆ ಧನ್ಯವಾದಗಳು……..
ಶ್ಯಾಮಲ
ಶ್ಯಾಮಲ, ಹಾಡನ್ನು ಅಂತರ್ಜಾಲಕ್ಕೇರಿಸಲು ಅಷ್ಟೇನೂ ತಂತ್ರಜ್ಞಾನದ ಅವಶ್ಯಕತೆಯಿಲ್ಲ. ಪ್ರಯತ್ನಿಸಿ. ಈ ವಿಷಯದಲ್ಲಿ ನಿಮಗೆ ನನ್ನಿಂದಾದ ಸಹಾಯ ಮಾಡಬಲ್ಲೆ.
ನಮಸ್ಕಾರ ತ್ರಿವೇಣಿಯವರಿಗೆ…
ನನಗೆ ಹಾಡು ಅಂತರ್ಜಾಲಕ್ಕೇರಿಸುವ ಬಗ್ಗೆ ಏನೂ ತಿಳಿಯದು. ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೇಗೆ ಮುಂದುವರಿಯುವುದೆಂದು ದಯವಿಟ್ಟು ತಿಳಿಸಿ. ನಿಮ್ಮ ಸಮಯ ನಷ್ಟ ಮಾಡುತ್ತಿದ್ದೇನೆಂದು ಬೇಸರಿಸಬೇಡಿ.
ಶ್ಯಾಮಲ
ಹಾಗೇನಿಲ್ಲ. ನಿಮಗೆ ಆ ಬಗ್ಗೆ ತಿಳಿಸಲು, ಸದ್ಯದಲ್ಲೆ ಒಂದು ಇಮೈಲ್ ಮಾಡಲಿದ್ದೇನೆ.