ಹೇ ಆತ್ಮ ತಮೋಹಾರಿ !

ಕವಿ – ಕುವೆಂಪು
ಗಾಯಕಿ – ರತ್ನಮಾಲಾ ಪ್ರಕಾಶ್

ಹಾಡು ಕೇಳಿ:-

ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ

ಜಟಿಲ ಕುಟಿಲ ತಮ ಅಂತರಂಗ
ಬಹು ಭಾವ ವಿಪಿನ ಸಂಚಾರಿ

ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ

ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ
ರೂಪ ಅರೂಪ ವಿಹಾರಿ

8 thoughts on “ಹೇ ಆತ್ಮ ತಮೋಹಾರಿ !”

  1. ಅಬ್ಬಬ್ಬಾ ಸಂಸ್ಕೃತವೇ ತುಂಬಿದೆ ಇದರಲ್ಲಿ. ಒಂದೇ ಒಂದು ಕನ್ನಡ ಪದ ನನ್ನ ಕಣ್ಣಿಗೆ ಬಿದ್ದದ್ದು…

  2. sritri says:

    ಒಂದಲ್ಲ, ಎರಡು.

  3. ತ್ರಿವೇಣಿಯವರೇ….
    ನಿಮ್ಮ ತಾಣದಿಂದ ನಾನು ಹಲವಾರು ಹಾಡುಗಳನ್ನು ಕಲಿತೆ. ಸಾಹಿತ್ಯದ ಜೊತೆ ನೀವು ಕೊಂಡಿಯನ್ನೂ ಕೊಡುವುದು ನನಗೆ ಹುಡುಕಾಟವನ್ನು ತಪ್ಪಿಸಿತು. ಹೀಗೇ ನಿಮಗೆ ಧನ್ಯವಾದಗಳನ್ನು ಹೇಳಲು ಈ ಸಂದೇಶ. ನಿಮ್ಮ ಆಸಕ್ತಿ ನನಗೆ ಅನುಕೂಲವಾಗಿದೆ. ತುಂಬಾ ಧನ್ಯವಾದಗಳು……

    ಶ್ಯಾಮಲ

  4. sritri says:

    ಶ್ಯಾಮಲ, ನನ್ನ ಬ್ಲಾಗ್ ನಿಮಗೆ ಉಪಯುಕ್ತವೆನಿಸಿದ್ದು ತಿಳಿದು ಸಂತೋಷವಾಯಿತು. ನೀವು ಹಾಡುಗಾರ್ತಿಯೆಂದೂ ಗೊತ್ತು. ನಿಮ್ಮ ಹಾಡನ್ನು ನಮಗೂ ಕೇಳಿಸಿ. 🙂

  5. ತ್ರಿವೇಣಿಯವರೇ….

    ನನ್ನ ಹಾಡು ಕೇಳಿಸಲು ಹೇಳಿದ್ದೀರಿ…. ತುಂಬಾ ಖುಷಿಯಾಯಿತು. ಆದರೆ ಹೇಗೇ ಅಂತ ಗೊತ್ತಿಲ್ಲ… ನನಗೆ ಗಣಕ ತಂತ್ರಜ್ನಾನ ಗೊತ್ತಿಲ್ಲ… ನಿಮ್ಮ ಪ್ರೋತ್ಸಾಹಿಕ ನುಡಿಯೇ ನನ್ನ ಉತ್ಸಾಹವನ್ನು ಇಮ್ಮಡಿಸಿದೆ. ಮತ್ತೊಮ್ಮೆ ಧನ್ಯವಾದಗಳು……..

    ಶ್ಯಾಮಲ

  6. sritri says:

    ಶ್ಯಾಮಲ, ಹಾಡನ್ನು ಅಂತರ್ಜಾಲಕ್ಕೇರಿಸಲು ಅಷ್ಟೇನೂ ತಂತ್ರಜ್ಞಾನದ ಅವಶ್ಯಕತೆಯಿಲ್ಲ. ಪ್ರಯತ್ನಿಸಿ. ಈ ವಿಷಯದಲ್ಲಿ ನಿಮಗೆ ನನ್ನಿಂದಾದ ಸಹಾಯ ಮಾಡಬಲ್ಲೆ.

  7. ನಮಸ್ಕಾರ ತ್ರಿವೇಣಿಯವರಿಗೆ…
    ನನಗೆ ಹಾಡು ಅಂತರ್ಜಾಲಕ್ಕೇರಿಸುವ ಬಗ್ಗೆ ಏನೂ ತಿಳಿಯದು. ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೇಗೆ ಮುಂದುವರಿಯುವುದೆಂದು ದಯವಿಟ್ಟು ತಿಳಿಸಿ. ನಿಮ್ಮ ಸಮಯ ನಷ್ಟ ಮಾಡುತ್ತಿದ್ದೇನೆಂದು ಬೇಸರಿಸಬೇಡಿ.

    ಶ್ಯಾಮಲ

  8. sritri says:

    ಹಾಗೇನಿಲ್ಲ. ನಿಮಗೆ ಆ ಬಗ್ಗೆ ತಿಳಿಸಲು, ಸದ್ಯದಲ್ಲೆ ಒಂದು ಇಮೈಲ್ ಮಾಡಲಿದ್ದೇನೆ.

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಬಾ ಸವಿತಾ! – ಮಾಸ್ತಿ ವೆಂಕಟೇಶ ಅಯ್ಯಂಗಾರ್ಬಾ ಸವಿತಾ! – ಮಾಸ್ತಿ ವೆಂಕಟೇಶ ಅಯ್ಯಂಗಾರ್

ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ) ಬಾ ಸವಿತಾ ಬಾ ಸವಿತಾ ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ ಒಳಿತಲ್ಲದುದೆ ಒಳಿತೆಂಬುದರ ಚಳಕವೆಲ್ಲಕೆ ವಿನಾಶವ ತಾ ಬಾ ಸವಿತಾ ಬಾ ಸವಿತಾ ಬಾ ಸವಿತಾ ನೆಲೆಯಿಂದ ಹೊರಟು ಅಲೆ

ದೈತ್ಯ ನರ್ತನ – ಸುಪ್ತದೀಪ್ತಿದೈತ್ಯ ನರ್ತನ – ಸುಪ್ತದೀಪ್ತಿ

ಕವನ – ದೈತ್ಯ ನರ್ತನ ಕವಯಿತ್ರಿ – ಸುಪ್ತದೀಪ್ತಿ (ಜ್ಯೋತಿ ಮಹಾದೇವ್) ದೈತ್ಯನ ವಿಕಾರ ಕನಸು ಸಾಕಾರಗೊಂಡ ನರಕ, ಭೂತ-ಭವಿಷ್ಯಗಳ ತಾಕಲಾಟ ಅಲ್ಲಿ ನರಳಿದ ವರ್ತಮಾನ, ಒಂದೊಂದೇ ದಿನ ಅಳಿದು ಕರಗಿದ ಕಬ್ಬಿಣದರಗಿನ ಕಿರೀಟ, ವೈರ-ಯಜ್ಞಕ್ಕೆ ನೇರ ಆಜ್ಯ ಧೂಳಿನ ಬೆವರು-ನೆತ್ತರು;

ಬೆಣ್ಣಿಯಾಕಿ – ಆನಂದಕಂದಬೆಣ್ಣಿಯಾಕಿ – ಆನಂದಕಂದ

ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ) ಕವನ ಸಂಕಲನ : ನಲ್ವಾಡುಗಳು -ಪಲ್ಲವಿ- ನಾ ಸಂತಿಗೆ ಹೋಗಿನ್ನಿ- ಆಕಿ ತಂದಿದ್ದಳೋ ಬೆಣ್ಣಿ; ಹಿಂಡುಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ! ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ! ೧ ತೆನಿ ತಿರಿವಿದ