ರಾಮ ರಾಮ ಎಂಬೆರಡಕ್ಷರ

ರಾಗ – ಧನ್ಯಾಸಿ
ತಾಳ – ಆದಿ

ರಾಮ ರಾಮ ಎಂಬೆರಡಕ್ಷರ
ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ||

ಹಾಲಾಹಲವನು ಪಾನವ ಮಾಡಿದ|
ಫಾಲಲೋಚನನೆ ಬಲ್ಲವನು ||
ಆಲಾಪಿಸುತ ಶಿಲೆಯಾಗಿದ್ದ |
ಬಾಲೆ ಅಹಲ್ಯೆಯ ಕೇಳೇನು ||೧||

ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ|
ಕುಂಜರ ರವಿಸುತ ಬಲ್ಲವನು ||
ಎಂಜಲ ಫಲಗಳ ಹರಿಗರ್ಪಿಸಿದ |
ಕಂಜಲೋಚನೆಯ ಕೇಳೇನು ||೨||

ಕಾಲವನರಿತು ಸೇವೆಯ ಮಾಡಿದ |
ಲೋಲ ಲಕ್ಷ್ಮಣನೆ ಬಲ್ಲವನು ||
ವ್ಯಾಳ ಶಯನ ಶ್ರೀ ವಿಜಯವಿಠಲನ |
ಲೀಲೆ ಶರಧಿಯ ಕೇಳೇನು ||೩||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ರಾಗದಲ್ಲಿ ಕನ್ನಡಕ್ಕೂ ಜಾಗರಾಗದಲ್ಲಿ ಕನ್ನಡಕ್ಕೂ ಜಾಗ

ಇಷ್ಟು ವರ್ಷ ಕನ್ನಡ ಬಿಟ್ಟು ಹಿಂದಿಯ ಜೊತೆಗೆ ದಕ್ಷಿಣದ ಉಳಿದೆಲ್ಲಾ ಭಾಷೆಗಳ ಹಾಡುಗಳಿಗೂ ಆತಿಥ್ಯ ನೀಡುತ್ತಿದ್ದ ರಾಗ ಸಂಗೀತ ತಾಣದಲ್ಲಿ ಕೊನೆಗೂ ಕನ್ನಡಕ್ಕೆ ಜಾಗ ಸಿಕ್ಕಿದೆ. ಇದು ಯಾವಾಗಿನಿಂದ ಇದೆಯೋ ಗೊತ್ತಿಲ್ಲ. ನಾನು ನೋಡಿದ್ದು ಇಂದೇ. ತುಂಬಾ ಸಂತೋಷವಾಗುತ್ತಿದೆ. ಕನ್ನಡ ಹಾಡುಗಳಿಗೆ

ಆಹಾ! ಈ ಬೇಸಿಗೆ! ಇನ್ನೆಷ್ಟು ದಿನ?ಆಹಾ! ಈ ಬೇಸಿಗೆ! ಇನ್ನೆಷ್ಟು ದಿನ?

ಅಂದೇ ಹೊಲದಿಂದ ಬಿಡಿಸಿತಂದ ಮುಸುಕಿನ ಜೋಳದ ತೆನೆಗಳು ಗ್ರಿಲ್ಲಿನಲ್ಲಿ ಸಿಜ಼ಿಗುಡುತ್ತಿರುವುದನ್ನು ನೋಡುತ್ತಾ ಕುಳಿತಿದ್ದೆವು. ಗೆಳತಿಯೊಬ್ಬಳು “ಅಯ್ಯೋ.. ಆಗಸ್ಟ್ ಕೂಡ ಮುಗಿಯುತ್ತಾ ಬಂತಲ್ಲಾ….” ಎಂದಳು ಆರ್ತ ದನಿಯಲ್ಲಿ. ‘ಅದಕ್ಕೇನೀಗ?’ ಎನ್ನುವಂತೆ ಅವಳತ್ತ ಎಲ್ಲರ ನೋಟ ಹರಿಯಿತು. ಅವಳು ಹೇಳದೆಯೇ ಆ ಕಣ್ಣುಗಳ ಭಾವ