ಆನಂದ ಆನಂದ ಮತ್ತೆ ಪರಮಾನಂದ

ಆನಂದ ಆನಂದ ಮತ್ತೆ ಪರಮಾನಂದ
ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ||

ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧||

ಜಲ ಕಾಷ್ಟ ಶೈಲ ಗಗನ ನೆಲ ಪಾವಕ
ತರು ಫಲ ಪುಷ್ಪಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ ||೨||

ಪೋಪುದು, ಬರುತಿಪ್ಪುದು, ಕೋಪ ಶಾಂತಿ ಮಾಡುವುದು
ರೂಪ ಲಾವಣ್ಯವು ಹರಿಯ ವ್ಯಾಪಾರವೆಂದರಿತವರಿಗೆ ||೩||

ಮಧ್ವ ಶಾಸ್ತ್ರ ಪ್ರವಚನ ಮುದ್ದು ಕೃಷ್ಣ ದರುಶನ
ಶುದ್ಧ ವಿಜಯವಿಠಲನ ಪೊಂದಿ ಕೊಂಡಾಡುವವರಿಗೆ ||೪||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಬಲು ರಮ್ಯವಾಗಿದೆ ಶ್ರೀಹರಿಯ ಮಂಚಬಲು ರಮ್ಯವಾಗಿದೆ ಶ್ರೀಹರಿಯ ಮಂಚ

ರಚನೆ : ಜಗನ್ನಾಥದಾಸರು ರೂಪಾ ಮತ್ತು ದೀಪಾ ದನಿಯಲ್ಲಿ ಬಲು ರಮ್ಯವಾಗಿದೆ ಶ್ರೀಹರಿಯ ಮಂಚ ||ಪ|| ಎಲರುಣಿ ಕುಲರಾಜ ರಾಜೇಶ್ವರನ ಮಂಚ ||ಅನುಪಲ್ಲವಿ|| ಪವನತನಯ ಮಂಚ ಪಾವನತರ ಮಂಚ ಭುವನತ್ರಯವ ಪೊತ್ತ ಭಾರಿ ಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ

ಸೀತೆಯ ಭೂಮಿಜಾತೆಯ – Seeteya Bhoomi Jaateyaಸೀತೆಯ ಭೂಮಿಜಾತೆಯ – Seeteya Bhoomi Jaateya

ವಿಜಯದಾಸರ ರಚನೆ ಸೀತೆಯ ಭೂಮಿಜಾತೆಯ ಜಗ-|ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಪಲ್ಲವಿ|| ಕ್ಷೀರ ವಾರಿಧಿಯ ಕುಮಾರಿಯ ತನ್ನ |ಸೇರಿದವರ ಭಯಹಾರಿಯ ||ತೋರುವಳು ಮುಕ್ತಿದಾರಿಯ ಸರ್ವ |ಸಾರ ಸುಂದರ ಶ್ರೀನಾರಿಯ ||1|| ಈಶಕೋಟಿಯೊಳು ಗಣನೆಯ ಸ್ವಪ್ರ-|ಕಾಶವಾದ ಗುಣಶ್ರೇಣಿಯ ||ಈಶಾದ್ಯರ ಪೆತ್ತ ಕರುಣಿಯ ನಿ-|ರ್ದೋಷ ವಾರಿಧಿಕಲ್ಯಾಣಿಯ||2||

ಅಕ್ಕಾ, ಅಕ್ರೂರ ಬಂದನಂತೆ!ಅಕ್ಕಾ, ಅಕ್ರೂರ ಬಂದನಂತೆ!

ರಚನೆ : ಪುರಂದರದಾಸರು ವಿದ್ಯಾಭೂಷಣ ಅಕ್ಕಾ, ನಂದಗೋಪನ ಅರಮನೆಯ ಒಳಗೊಬ್ಬ ಅಕ್ರೂರ ಬಂದನಂತೆ ಹೊಕ್ಕು ಬಳಸುವಳಲ್ಲ, ಹುಸಿಯನಾಡುವಳಲ್ಲ ಇಕ್ಕೋ, ಬಾಗಿಲ ಮುಂದೆ ಈಗ ರಥವ ಕಂಡೆ | ಮಥುರಾ ಪಟ್ಟಣವಂತೆ, ಮಾವ ಕಂಸನಂತೆ ನದಿಯ ದಾಟಲುಬೇಕಂತೆ, ಬದಲು ಮಾತಿಲ್ಲವಂತೆ, ಏನೆಂಬೆ ಏಣಾಕ್ಷಿ