ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿಹಿತದಲಿ ಮನೋರಥವ ಕೊಡುವೆನೆಂದು ||ಪಲ್ಲವಿ||

ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ
ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ
ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧||

ಅತುಳ ಮಹಿಮನ ದಿನದಲ್ಲಿ, ದಿತಿಜ ವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ರೀತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗಳು
ಮನ್ಮಥಪಿತನೊಲಿಸಿದ ಜಿತ ತರುಣದಲಿ ||೨||

ಪ್ರಥಮ ಪ್ರಹ್ಮಾದ ವ್ಯಾಸಮುನಿಯೇ ಯತಿ ರಾಘವೇಂದ್ರ
ಪತಿತೋದ್ಧಾರಿಯೆ ಪಾವನಕಾರಿಯೆ ಕರಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ
ಪ್ರತಿ ಮಂತ್ರಾಲಯದೊಳು ಅತಿ ಮೆರೆವ ||೩||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.