ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ

ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿಹಿತದಲಿ ಮನೋರಥವ ಕೊಡುವೆನೆಂದು ||ಪಲ್ಲವಿ||

ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ
ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ
ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧||

ಅತುಳ ಮಹಿಮನ ದಿನದಲ್ಲಿ, ದಿತಿಜ ವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ರೀತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗಳು
ಮನ್ಮಥಪಿತನೊಲಿಸಿದ ಜಿತ ತರುಣದಲಿ ||೨||

ಪ್ರಥಮ ಪ್ರಹ್ಮಾದ ವ್ಯಾಸಮುನಿಯೇ ಯತಿ ರಾಘವೇಂದ್ರ
ಪತಿತೋದ್ಧಾರಿಯೆ ಪಾವನಕಾರಿಯೆ ಕರಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ
ಪ್ರತಿ ಮಂತ್ರಾಲಯದೊಳು ಅತಿ ಮೆರೆವ ||೩||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ತಿಳಿಯದೋ ನಿನ್ನಾಟ, ತಿರುಪತಿಯ ವೆಂಕಟ!ತಿಳಿಯದೋ ನಿನ್ನಾಟ, ತಿರುಪತಿಯ ವೆಂಕಟ!

ರಚನೆ : ವ್ಯಾಸವಿಠಲ ಗಾಯಕ : ರಾಯಚೂರು ಶೇಷಗಿರಿದಾಸ್ ಹಾಡು ಕೇಳಿ ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ ||ಪಲ್ಲವಿ|| ಪೊಳೆವ ನೀರೊಳು ಗೆಲುವ ಮೋರೆಯ ನೆಲವ ನೋಡುವ ಸುಳಿವ ಕಂಬದಿ ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇಧಿಸಿ ಕೊಳಲ ಧ್ವನಿಗೆ ನಳಿನಮುಖಿಯರ

ಈಸಬೇಕು ಇದ್ದು ಜೈಸಬೇಕು!ಈಸಬೇಕು ಇದ್ದು ಜೈಸಬೇಕು!

ರಚನೆ – ಪುರಂದರದಾಸರು ವಿದ್ಯಾಭೂಷಣರ ದನಿಯಲ್ಲಿ ಹಾಡು ಕೇಳಿ:- ಈಸಬೇಕು-ಇದ್ದು ಜೈಸಬೇಕು| ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ||ಪ|| ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ ||೧|| ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ| ಮೀರಿ

ಪವನ ಸಂಭೂತ ಒಲಿದುಪವನ ಸಂಭೂತ ಒಲಿದು

ರಚನೆ – ಪ್ರಾಣೇಶ ವಿಠಲ ರಾಗ – ಆನಂದ ಭೈರವಿ, ತಾಳ – ಏಕ ಗಾಯಕ – ಪುತ್ತೂರು ನರಸಿಂಹ ನಾಯಕ್ ಹಾಡು ಕೇಳಿ ಪವನ ಸಂಭೂತ ಒಲಿದು ತವಕದಿ ಕಾಯಬೇಕು ಇವನಾರೋ ಎಂದು ಉದಾಸೀನ ಮಾಡದಲೆನ್ನ ||ಪಲ್ಲವಿ|| ಕಪಿಪ ಕಪಿ