ಬಂದಿದೆ ದೂರು ಬರಿದೆ ಪಾಂಡವರಿಗೆ

ರಚನೆ : ಕನಕದಾಸರು

ಬಂದಿದೆ ದೂರು ಬರಿದೆ ಪಾಂಡವರಿಗೆ
ಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ||

ಮುನ್ನಿನ ವೈರದಿ ಕಡುಸ್ನೇಹವ ಮಾಡಿ
ಉನ್ನಂತಲೆತ್ತ ಪಗಡೆಯಾಡಿಸಿ
ತನ್ನ ಕುಹಕದಿಂದ ಕುರುಬಲವನು ಕೊಂದ
ಘನ್ನಘಾತುಕ ಶಕುನಿಯೋ? ಪಾಂಡವರೋ? ||೧||

ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನು
ಧುರದಲಿ ಷಂಡನ ನೆಪದಿಂದಲಿ
ಸರಳ ಮಂಚದ ಮೇಲೆ ಮಲಗಿ ಮೊಮ್ಮಗನನ್ನು
ಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||೨||

ಮಗನ ನೆವದಿ ಕಾಳಗವ ಬಿಸುಟು ಸುರ
ನಗರಿಗೆ ನಡೆದು ವೈರಾಗ್ಯದಿಂದ
ಜಗವರಿಯಲು ಕುರುವಂಶಕೆ ಕೇಡನು
ಬಗೆದು ಕೊಂದವ ದ್ರೋಣನೋ? ಪಾಂಡವರೋ? ||೩||

ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ
ಕೊಟ್ಟ ಭಾಷೆಗೆ ನಾಲ್ವರ ಕೊಲ್ಲದೆ
ನೆಟ್ಟನೆ ರಣಮುಖದಲಿ ತನ್ನ ಪ್ರಾಣವ
ಬಿಟ್ಟು ಕೊಂದವ ಕರ್ಣನೋ? ಪಾಂಡವರೋ? ||೪||

ಮಥಿನಿಸಿ ಸೂತತನವ ಮಾಡಿ ರಣದೊಳಗೆ
ಅತಿ ಹೀನಗಳೆಯುತ ರವಿಸುತನ
ರಥದಿಂದಿಳಿದು ಪೋಗಿ ಕೌರವರ ಬಲವನು
ಹತ ಮಾಡಿದವ ಶಲ್ಯನೋ? ಪಾಂಡವರೋ ? ||೫||

ಜಲದೊಳು ಮುಳುಗಿ ತಪವ ಮಾಡಿ ಬಲವನು
ಛಲದಿಂದೆಬ್ಬಿಸಿ ಕಾದುವೆನೆಂದವ
ಕಲಿ ಭೀಮಸೇನನ ನುಡಿ ಕೇಳಿ ಹೊರಹೊರಟು
ಕುಲವ ಕೊಂದವ ಕೌರವನೋ? ಪಾಂಡವರೋ? ||೫||

ಕೌರವ ಪಾಂಡವರಿಗೆ ಭೇದವ ಪುಟ್ಟಿಸಿ
ಗೌಜೊಡ್ಡಿ ಕುರುಕ್ಷೇತ್ರದಿ ಕಾದಿಸಿ
ಸಂಶಯವಿಲ್ಲದೆ ಕುರುಬಲವನು ಕೊಂದ
ಹಿಂಸಕನು ಆದಿಕೇಶವನೋ? ಪಾಂಡವರೋ ||೬||

*****************************

4 thoughts on “ಬಂದಿದೆ ದೂರು ಬರಿದೆ ಪಾಂಡವರಿಗೆ”

  1. ತ್ರಿವೇಣಿಯವರಿಗೆ ನಮಸ್ಕಾರಗಳು,

    ಎಷ್ಟೊಂದು ಅರ್ಥಗರ್ಭಿತವಾಗಿದೆ ಕನಕದಾಸರ ಈ ಪದ್ಯ. ಮೇಲ್ನೋಟಕ್ಕೆ ಕೌರವರ ನಿರ್ನಾಮ ಮಾಡಿದ್ದು ಪಾಂಡವರೆನಿಸಿದರು ಪರೋಕ್ಷ ಕೈಗಳು ಎಷ್ಟಿವೆ ನೋಡಿ.

    ಸಕಾರಣವೊ, ಅಕಾರಣವೊ ನೀವು ಇಂಥ ರಚನೆಗಳನ್ನು ಓದಲು ಕೊಡುತ್ತಿದ್ದೀರಿ. ದಯವಿಟ್ಟು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ

    -ಧನ್ಯವಾದಗಳೊಂದಿಗೆ,
    ಬಸವರಾಜು

  2. Guru says:

    ಕನ್ನಡದ ಬ್ಲಾಗುಗಳನ್ನು ಹುಡುಕುತ್ತಿರಬೇಕಾದರೇ,,, ನಿಮ್ಮ ಈ ತುಲಸಿವನಕ್ಕೆ ಅಗಮಿಸಿದೇ.. ತುಂಬಾ ಚೆನ್ನಾಗಿದೆ ನಿಮ್ಮ ಬ್ಲಾಗ್.
    ಕನಕದಾಸರ ಈ ಕೀರ್ತನೆ ತುಂಬ ಚೆನ್ನಾಗಿ ಇದೆ… ನಿಮ್ಮ ಬ್ಲಾಗ್ ತುಂಬ ಇಷ್ಟ ಆಯಿತು,,, ಅಲ್ಲಿ ಎಲ್ಲಿಂದನೋ ಇಲ್ಲಿಯ ನಿಮ್ಮ ಮನೆಗೆ (ತುಳಸಿವನಕ್ಕೆ) ಕರೆತರುವ ಕ್ರಿಯೇಟಿವಿಟಿ ಚೆನ್ನಾಗಿ ಇದೆ….

    ಗುರು

  3. sritri says:

    “ಮೇಲ್ನೋಟಕ್ಕೆ ಕೌರವರ ನಿರ್ನಾಮ ಮಾಡಿದ್ದು ಪಾಂಡವರೆನಿಸಿದರು ಪರೋಕ್ಷ ಕೈಗಳು ಎಷ್ಟಿವೆ!” ಬಸವರಾಜು, ಸರಿಯಾಗಿ ಹೇಳಿದ್ದೀರಿ. ಈ ಹಾಡಿನಲ್ಲಿ ಇಡೀ ಮಹಾಭಾರತವೇ ಅಡಗಿದೆ. ಮಹಾಭಾರತ ತಿಳಿಯದವರಿಗೆ ಅರ್ಥವಾಗುವುದು ಕಷ್ಟ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  4. sritri says:

    ಗುರು, ಅಲ್ಲಿ, ಎಲ್ಲಿಂದಲೋ ದಾರಿ ತಪ್ಪದೆ ಇಲ್ಲಿಗೇ ಬಂದು ತಲುಪಿದ್ದಕ್ಕೆ ಅಭಿನಂದನೆಗಳು. 🙂 ಈಗ ನಮ್ಮನೆಗೆ ಬರುವ ಸರಿದಾರಿ ಗೊತ್ತಾಗಿದೆಯಲ್ಲ, ಆಗಾಗ ಬರುತ್ತಿರಿ.

Leave a Reply to ಬಸವರಾಜು Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಸೀತೆಯ ಭೂಮಿಜಾತೆಯ – Seeteya Bhoomi Jaateyaಸೀತೆಯ ಭೂಮಿಜಾತೆಯ – Seeteya Bhoomi Jaateya

ವಿಜಯದಾಸರ ರಚನೆ ಸೀತೆಯ ಭೂಮಿಜಾತೆಯ ಜಗ-|ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಪಲ್ಲವಿ|| ಕ್ಷೀರ ವಾರಿಧಿಯ ಕುಮಾರಿಯ ತನ್ನ |ಸೇರಿದವರ ಭಯಹಾರಿಯ ||ತೋರುವಳು ಮುಕ್ತಿದಾರಿಯ ಸರ್ವ |ಸಾರ ಸುಂದರ ಶ್ರೀನಾರಿಯ ||1|| ಈಶಕೋಟಿಯೊಳು ಗಣನೆಯ ಸ್ವಪ್ರ-|ಕಾಶವಾದ ಗುಣಶ್ರೇಣಿಯ ||ಈಶಾದ್ಯರ ಪೆತ್ತ ಕರುಣಿಯ ನಿ-|ರ್ದೋಷ ವಾರಿಧಿಕಲ್ಯಾಣಿಯ||2||

ಧನ್ವಂತರಿ ಸುಳಾದಿ – Dhanvantari Sulaadiಧನ್ವಂತರಿ ಸುಳಾದಿ – Dhanvantari Sulaadi

ರಚನೆ – ವಿಜಯದಾಸರು ಧ್ರುವ ತಾಳ ಆಯುವೃದ್ದಿಯಾಗುವುದು ಶ್ರೇಯಸ್ಸು ಬರುವುದು ಕಾರ್ಯನಿರ್ಮಲಿನ ಕಾರಣವಾಗುವುದು. ಮಾಯಾ ಹಿಂದಾಗುವುದು ನಾನಾ ರೋಗದ ಬೀಜ ಬೇಯಿಸಿ ಕಳೆವುದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನಿ- ಕಾಯವಾಯಿತು ದುಷ್ಕರ್ಮದಿಂದ ಕ್ರಿಯಾಮಾಣಸಂಚಿತ ಭರಿತವಾಗಿದ್ದ ದುಃಖ ಹೇಯಸಾಗರದೊಳು ಬಿದ್ದು

ರಮಾ ಸಮುದ್ರನ ಕುಮಾರಿರಮಾ ಸಮುದ್ರನ ಕುಮಾರಿ

ರಚನೆ : ಕಮಲೇಶ ವಿಠಲ (ರಾಜಾ ಎಸ್. ಗುರುರಾಜಾಚಾರ್) ಗಾಯಕ : ವಿದ್ಯಾಭೂಷಣ ಹಾಡು ಕೇಳಿ:- ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರಾರಮ್ಮ||ಪಲ್ಲವಿ|| ಸುಮಾಸ್ತ್ರನಯ್ಯನ ಎದೆಯಲಿ ಸತತವೂ ಅಭಿಮಾನದಲಿ ಮೆರೆವ ಮಹಾಮಹಿಮಳೇ ||ಅನು|| ಕನಕ ಮುಕುಟ ಮಂಡಿತ ಕುಟಿಲಾಳಕಜಾಲೇ | ಶ್ರೀ