ರಚನೆ : ವಾದಿರಾಜರು

ವಿದ್ಯಾಭೂಷಣರ ದನಿಯಲ್ಲಿ

ತಾಳುವಿಕೆಗಿಂತನ್ಯ ತಪವು ಇಲ್ಲ
ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ ||ಪಲ್ಲವಿ||

ದುಷ್ಟ ಮನುಜರು ಪೇಳ್ವ ನಿಷ್ಟುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೆ ತಾಳು
ನೆಟ್ಟಸಸಿ ಫಲಬರುವ ತನಕ ಶಾಂತಿಯ ತಾಳು
ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು ||೧||

ಹಳಿದು ಹಂಗಿಸುವಂಥ ಹಗೆಯ ಮಾತನು ತಾಳು
ಸುಳಿನುಡಿ ಕುಹಕ ಕುಮಂತ್ರವನು ತಾಳು
ಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳು
ಹಲಧರಾನುಜನನು ಹೃದಯದಲಿ ತಾಳು ||೨||

ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು
ಉಕ್ಕೋ ಹಾಲಿಗೆ ನೀರು ಇಕ್ಕುವಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು ||೩||

2 thoughts on “ತಾಳುವಿಕೆಗಿಂತ ತಪವು ಇಲ್ಲ”

  1. Hi,

    I had asked for hattavataara laali haadu some time back.
    Luckily I got it before my son was born.
    It’s written by Sri Paada Raajaru (Rangavittala ankita naama).

    It goes like

    Laali govinda laali
    Kousalaya baala sriraama laali
    laali munivandya laali
    jaanaki lola sri raama laali……

    Thanks
    Swarna

  2. ಸ್ವರ್ಣ, ನೀವು ಹುಡುಕುತ್ತಿದ್ದ ಹಾಡು ಸರಿಯಾದ ಸಮಯಕ್ಕೆ ದೊರಕಿದ್ದು ತಿಳಿದು ಸಂತೋಷವಾಯಿತು. ನಾನೀಗ ಭಾರತ ಪ್ರವಾಸದಲ್ಲಿರುವುದರಿಂದ ಉತ್ತರಿಸಲು ತಡವಾಯಿತು. ಮತ್ತೆ ಮಾತಾಡೋಣ.

Leave a Reply to Swarna Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.