ಕವಿ – ಎಚ್. ಎಸ್. ವೆಂಕಟೇಶಮೂರ್ತಿ
ಗಾಯಕಿ – ಪಲ್ಲವಿ ಅರುಣ್
ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ?
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿದೋಣಿಗೆ?
ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ?
ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?
***********
ತ್ರಿವೇಣಿ,
ಸುಂದರವಾದ ಕವನಕ್ಕಾಗಿ ಧನ್ಯವಾದಗಳು.
ಕಾಕಾ, ಒಳಿತನ್ನು ಗುರುತಿಸುವ, ಮೆಚ್ಚುವ ನಿಮ್ಮ ಸಹೃದಯತೆಗೂ ಧನ್ಯವಾದ. ನಿನ್ನೆ `ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಕೇಳಿದಾಗಿನಿಂದ ಈ ಹಾಡು ನನ್ನ ಹಿಡಿದುಬಿಟ್ಟಿದೆ.
ತುಳಸಿಯಮ್ಮ,
ತುಂಬಾ ಕಾಡುವ ಕವನ. ಧನ್ಯವಾದಗಳು.
ತೇಜಸ್ವಿನಿ, ನನ್ನ ಬ್ಲಾಗ್ ಮನೆಗೆ ಭೇಟಿ ಕೊಟ್ಟಿದ್ದಕ್ಕಾಗಿ ನಿಮಗೂ ಧನ್ಯವಾದಗಳು.
ನಮಸ್ಕಾರ ತುಳಸಿಯವರಿಗೇ…….
ನಿಮ್ಮ ಬ್ಲಾಗ ಹಾಗೂ ಅದರಲ್ಲಿನ ಕವನ ಎರಡೂ ತುಂಬಾ ಚೆನ್ನಾಗಿವೆ. ಆದರೇ ನನಗೇಕೋ ಕೇಳಲು ಆಗಲಿಲ್ಲ… ಮತ್ತೊಮ್ಮೆ ಪ್ರಯತ್ನಿಸಿ ನೋಡುವೆ.
ಶ್ಯಾಮಲ
ಶ್ಯಾಮಲ ಅವರೇ, ತುಳಸಿವನಕ್ಕೆ ಸ್ವಾಗತ. ಹಾಡು ಕೇಳಲು ಆಗಲಿಲ್ಲವೆಂದಿದ್ದೀರಿ. ನಿಮ್ಮ ಕಂಪ್ಯೂಟರಿನಲ್ಲಿ RealPlayer ಇದೆಯೇ?
ಧನ್ಯವಾದಗಳು ತುಳಸಿಯವರೇ…
ಈಗ ಹಾಡು ಕೇಳಿದೇ, ತುಂಬಾ ಚೆನ್ನಾಗಿದೆ. ನಾ ಕೇಳಿರಲಿಲ್ಲ. ಇನ್ನು ನಿಮ್ಮ ಬ್ಲಾಗ ಗೆ ನನ್ನ ಭೇಟಿ ನಿರಂತರ………. ನಿಮ್ಮ ಚಪಾತಿ ಪುರಾಣ ಓದಿ ನಕ್ಕು ಸುಸ್ತಾಯಿತು…….
ಶ್ಯಾಮಲ
ಶ್ಯಾಮಲ, ಖಂಡಿತ ಬರುತ್ತಿರಿ. ನನ್ನ ಹೆಸರು ತ್ರಿವೇಣಿ. ‘ತುಳಸಿ’ ಎಂದರೂ ಅಭ್ಯಂತರವೇನಿಲ್ಲ. 🙂
ಮೆದು ಚಪಾತಿ ಪುರಾಣದ್ದು …. ಮುಗಿಯದ ಕಥೆ ಬಿಡಿ….
ನಮಸ್ಕಾರ ತ್ರಿವೇಣಿಯವರೇ..
ನೀವು ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದಿರಲ್ಲ… ಆಗಿನಿಂದ ನಿಮ್ಮ ಬರಹ ನನಗೇ ಇಷ್ಟ. ತ್ರಿವೇಣಿ – ತುಳಸಿ ಎರಡೂ ನನಗೇ ಪ್ರಿಯವಾದ ಹೆಸರುಗಳೇ….
ಶ್ಯಾಮಲ
ಶ್ಯಾಮಲ, ನಿಮ್ಮ ಪ್ರೀತಿಗೆ ನಾ ಋಣಿ.
ತುಂಬ ಸುಂದರ ಕವನ
ಕೆಲವು ಸಂಬಂಧಗಳು ಅಂತರಗಳ ನಡುವೆ ಸಹಾ ನಿರಂತರ…
ಪಶ್ಚಿಮದಲ್ಲಿದ್ದೂ ನೀವು ಪೂರ್ವದ ತುಳಸಿವನದಲ್ಲಿ ನಮ್ಮನ್ನು ಸಂಧಿಸುವಂತೆ…. 🙂 🙂
Thank you @ RK 🙂
ಕೊನೆಗೂ ಬಂದೆ ನಿಮ್ಮ ಅಂಗಳಕ್ಕೆ… ಚೆನ್ನಾಗಿದೆ! ಗೀತ-ಮಾಧುರಿ ಕಾರ್ಯಕ್ರಮ ಕಣ್ಣ-ಮುಂದೆ ಬಂತು… ಧನ್ಯವಾದಗಳು!
Srilakshmi H, ಕೊನೆಗೂ ಬಂದಿದ್ದೀರಿ, ಆದರೆ ಇದೇ ಕೊನೆಯಲ್ಲ, ನೆನಪಿರಲಿ! 🙂 ಬರುತ್ತಿರಿ…