ನಮ್ಮ ಕೈತೋಟದಲ್ಲೇ ಬೆಳೆದ ಹೂವು,ಎಲೆಗಳಿಂದ ಪೂಜೆಗೊಂಡು ಪ್ರಸನ್ನನಾಗಿರುವ ಪರಿಸರಪ್ರಿಯ ಗಣೇಶ
“ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!”
ಅನುಪಮಾ-ನಿತಿನ್ ಮಂಗಳವೇಧೆ ಮನೆಯ ಗೌರಿ-ಗಣೇಶ
ಆಶಾ-ಗುರುದತ್ ಮನೆಯಲ್ಲಿ ಪೂಜೆಗೊಂಡ ಗಣೇಶ
ಕನ್ನಡಮ್ಮನ ದೇವಾಲಯ
ನಮ್ಮ ಕೈತೋಟದಲ್ಲೇ ಬೆಳೆದ ಹೂವು,ಎಲೆಗಳಿಂದ ಪೂಜೆಗೊಂಡು ಪ್ರಸನ್ನನಾಗಿರುವ ಪರಿಸರಪ್ರಿಯ ಗಣೇಶ
“ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!”
ಅನುಪಮಾ-ನಿತಿನ್ ಮಂಗಳವೇಧೆ ಮನೆಯ ಗೌರಿ-ಗಣೇಶ
ಆಶಾ-ಗುರುದತ್ ಮನೆಯಲ್ಲಿ ಪೂಜೆಗೊಂಡ ಗಣೇಶ
ತ್ರಿವೇಣಿ,
ನಿಮಗೂ ಸಹ ಗಣೇಶನ ಹಬ್ಬದ ಶುಭಾಶಯಗಳು.
ನಿಮ್ಮನೆ ಗಣಪತಿಯ ಜೊತೆಗೆ ಇನ್ನಿಬ್ಬರನ್ನೂ ತೋರಿದ್ದಕ್ಕೆ ಡಬಲ್ ಥ್ಯಾಂಕ್ಸ್.
ತ್ರಿವೇಣಿ ಅಕ್ಕ ನಿಮಗೂ ಗಣೇಶ ಹಬ್ಬದ ಶುಭಾಶಯಗಳು.
ಹೂವು ಎಲೆ ಎಲ್ಲಾ ತಾಜಾ ಸಿಕ್ಕಿದ್ದಕ್ಕೇ ಪ್ರಸನ್ನನಾಗಿರೋದು ಅಲ್ವಾ?
ಕಾಕಾ, ಜ್ಯೋತಿ, ಭಾರ್ಗವಿ, ಧನ್ಯವಾದಗಳು.
ನಿಮ್ಮನೆಗಳಲ್ಲಿಯೂ ಹಬ್ಬ ಚೆನ್ನಾಗಿ ಆಗಿರಬಹುದು.
ತ್ರಿವೇಣಿ,
ಗಣೇಶ-ಗೌರಿ ಹಬ್ಬದಲ್ಲಿ ನೀವು ಸಮಯ ಮಾಡಿಕೊಂಡು ಬಂದಿದ್ದು ತುಂಬಾ ಚೆನ್ನಾಗಿತ್ತು. ಫೋಟೋ ತೆಗೆದು ಇಲ್ಲಿ ಮತ್ತೇ ತೋರಿಸಿದ್ದಕೆ ಥ್ಯಾಂಕ್ಸ. ಮತ್ತೇ ಮಾತಾಡೋಣ.
ತ್ರಿವೇಣಿಯವರಿಗೆ ನಮಸ್ಕಾರ. ಹೇಗಿದ್ದೀರಿ?
ನನ್ನದೊಂದು ತರಲೆಪ್ರಶ್ನೆ ಇದೆ, ಹೀಗೆ-
ನಿಮ್ಮ ಕೈತೋಟದಲ್ಲಿ ಬೆಳೆದ ಹೂವು-ಎಲೆಗಳಿಂದ ಪೂಜೆಗೊಂಡು ಪ್ರಸನ್ನನಾಗುವ ಮೊದಲು ಗಣೇಶ ಹೇಗಿದ್ದ? ಆ ಫೊಟೊ ಸಹ ಹಾಕ್ತೀರಾ? Before-and-After ಅಂತ ಡಯಟ್ ಜಾಹೀರಾತುಗಳಲ್ಲಿ, ಕೇಶವರ್ಧಿನಿ ತೈಲದ ಜಾಹೀರಾತಿನಲ್ಲೆಲ್ಲ ಹಾಕ್ತಾರಲ್ಲ, ಆ ಥರ “non-ಪ್ರಸನ್ನ ಗಣೇಶ” v/s “ಪ್ರಸನ್ನ ಗಣೇಶ” ಅಂತ ಅಕ್ಕಪಕ್ಕದಲ್ಲಿ ಎರಡು ಫೊಟೊ ಹಾಕಿದ್ರೆ ಬಹಳ ಚೆನ್ನಾಗಿರುತ್ತಿತ್ತು. ನಿಮ್ಮ ಕೈತೋಟದಲ್ಲಿ ಬೆಳೆದ ಹೂವು-ಎಲೆಗಳಿಗೆ ಗಣೇಶನನ್ನು ಪ್ರಸನ್ನನಾಗಿಸುವ ಶಕ್ತಿ ಎಷ್ಟಿದೆ ಎಂದು ನಿಮ್ಮ ಬ್ಲಾಗ್ವೀಕ್ಷಕರಿಗೂ ಗೊತ್ತಾಗುತ್ತಿತ್ತು. 🙂
ಆಶಾ, ತುಳಸಿವನಕ್ಕೆ ಸ್ವಾಗತ. ಹೀಗೇ ಆಗಾಗ ನನ್ನ ಬ್ಲಾಗ್ ಮನೆಗೆ ಬರುತ್ತಿರಿ. 🙂
ಜೋಶಿಯವರೆ, ಗಣೇಶನ ಪೂಜೆಗೆ ಮುನ್ನ ಮತ್ತು ನಂತರದ ಫೋಟೊ ತೆಗೆದು ನಿಮ್ಮೆಲ್ಲರಿಗೂ ತೋರಿಸಬೇಕೆಂಬ ಆಸೆ ನನಗೂ ಇತ್ತು. ಆದರೆ, “non-ಪ್ರಸನ್ನ ಗಣೇಶ” ನ ಮುಂದೆ ಕ್ಯಾಮೆರಾ ಹಿಡಿದು ಪೋಸ್ ಕೇಳುವುದು ತಾನೇ ಹೇಗೆ? ನನಗೂ ಗಣಪನ ಕೋಪದ, ಶಾಪದ ಭಯವಿರುವುದಿಲ್ಲವೇ? ಹಾಗಾಗಿ, ಪ್ರಸನ್ನ ಗಣಪನ ಫೋಟೊ ಮಾತ್ರ ಇಲ್ಲಿ ಲಭ್ಯವಿದೆ . 🙂
ತ್ರಿವೇಣಿಯವರೇ,
ಹೇಗಿದ್ದೀರಾ?
ಗಣಪತಿ ಹಬ್ಬದ belated ಶುಭಾಶಯಗಳು !
eco-friendly ಗಣೇಶ ಸೊಗಸಾಗಿದ್ದಾನೆ ..
ತ್ರಿವೇಣಿ,
ಜೋಶಿಯವರು ಪ್ರಶ್ನೆ ask ಮಾಡಿದ್ದು + ನಿಮ್ಮ ಮರು ಉತ್ತರ ಸರಿಯಾಗಿದೆ! ಸೈ 🙂
ಶಿವು, ತುಂಬಾ ದಿನಗಳ ನಂತರ ನಿಮ್ಮ ಭೇಟಿ . ನಿಮಗೂ ಹಬ್ಬದ ಶುಭಾಶಯಗಳು. ನಿಮ್ಮ ಮನೆಯಲ್ಲಿ ಹಬ್ಬ ಹೇಗಾಯಿತು?
ಆಶಾ, ತರಲೆ ಉತ್ತರ ಸರಿ ಎಂದು ಪಾಸ್ ಮಾಡಿದ್ದಕ್ಕೆ Thanks 🙂