ಗಣೇಶ ಬಂದ!

ಗಣೇಶ ಬಂದ! ಕಾಯಿ ಕಡುಬು ತಿಂದ!

ನಮ್ಮ ಕೈತೋಟದಲ್ಲೇ ಬೆಳೆದ ಹೂವು,ಎಲೆಗಳಿಂದ ಪೂಜೆಗೊಂಡು ಪ್ರಸನ್ನನಾಗಿರುವ ಪರಿಸರಪ್ರಿಯ ಗಣೇಶ

“ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!”

ಅನುಪಮಾ-ನಿತಿನ್ ಮಂಗಳವೇಧೆ

ಅನುಪಮಾ-ನಿತಿನ್ ಮಂಗಳವೇಧೆ ಮನೆಯ ಗೌರಿ-ಗಣೇಶ

ಆಶಾ-ಗುರುದತ್

ಆಶಾ-ಗುರುದತ್ ಮನೆಯಲ್ಲಿ ಪೂಜೆಗೊಂಡ ಗಣೇಶ

11 thoughts on “ಗಣೇಶ ಬಂದ!”

  1. sunaath says:

    ತ್ರಿವೇಣಿ,
    ನಿಮಗೂ ಸಹ ಗಣೇಶನ ಹಬ್ಬದ ಶುಭಾಶಯಗಳು.

  2. ನಿಮ್ಮನೆ ಗಣಪತಿಯ ಜೊತೆಗೆ ಇನ್ನಿಬ್ಬರನ್ನೂ ತೋರಿದ್ದಕ್ಕೆ ಡಬಲ್ ಥ್ಯಾಂಕ್ಸ್.

  3. Bhargavi says:

    ತ್ರಿವೇಣಿ ಅಕ್ಕ ನಿಮಗೂ ಗಣೇಶ ಹಬ್ಬದ ಶುಭಾಶಯಗಳು.
    ಹೂವು ಎಲೆ ಎಲ್ಲಾ ತಾಜಾ ಸಿಕ್ಕಿದ್ದಕ್ಕೇ ಪ್ರಸನ್ನನಾಗಿರೋದು ಅಲ್ವಾ?

  4. sritri says:

    ಕಾಕಾ, ಜ್ಯೋತಿ, ಭಾರ್ಗವಿ, ಧನ್ಯವಾದಗಳು.
    ನಿಮ್ಮನೆಗಳಲ್ಲಿಯೂ ಹಬ್ಬ ಚೆನ್ನಾಗಿ ಆಗಿರಬಹುದು.

  5. Asha says:

    ತ್ರಿವೇಣಿ,
    ಗಣೇಶ-ಗೌರಿ ಹಬ್ಬದಲ್ಲಿ ನೀವು ಸಮಯ ಮಾಡಿಕೊಂಡು ಬಂದಿದ್ದು ತುಂಬಾ ಚೆನ್ನಾಗಿತ್ತು. ಫೋಟೋ ತೆಗೆದು ಇಲ್ಲಿ ಮತ್ತೇ ತೋರಿಸಿದ್ದಕೆ ಥ್ಯಾಂಕ್ಸ. ಮತ್ತೇ ಮಾತಾಡೋಣ.

  6. ಶ್ರೀವತ್ಸ ಜೋಶಿ says:

    ತ್ರಿವೇಣಿಯವರಿಗೆ ನಮಸ್ಕಾರ. ಹೇಗಿದ್ದೀರಿ?
    ನನ್ನದೊಂದು ತರಲೆಪ್ರಶ್ನೆ ಇದೆ, ಹೀಗೆ-
    ನಿಮ್ಮ ಕೈತೋಟದಲ್ಲಿ ಬೆಳೆದ ಹೂವು-ಎಲೆಗಳಿಂದ ಪೂಜೆಗೊಂಡು ಪ್ರಸನ್ನನಾಗುವ ಮೊದಲು ಗಣೇಶ ಹೇಗಿದ್ದ? ಆ ಫೊಟೊ ಸಹ ಹಾಕ್ತೀರಾ? Before-and-After ಅಂತ ಡಯಟ್ ಜಾಹೀರಾತುಗಳಲ್ಲಿ, ಕೇಶವರ್ಧಿನಿ ತೈಲದ ಜಾಹೀರಾತಿನಲ್ಲೆಲ್ಲ ಹಾಕ್ತಾರಲ್ಲ, ಆ ಥರ “non-ಪ್ರಸನ್ನ ಗಣೇಶ” v/s “ಪ್ರಸನ್ನ ಗಣೇಶ” ಅಂತ ಅಕ್ಕಪಕ್ಕದಲ್ಲಿ ಎರಡು ಫೊಟೊ ಹಾಕಿದ್ರೆ ಬಹಳ ಚೆನ್ನಾಗಿರುತ್ತಿತ್ತು. ನಿಮ್ಮ ಕೈತೋಟದಲ್ಲಿ ಬೆಳೆದ ಹೂವು-ಎಲೆಗಳಿಗೆ ಗಣೇಶನನ್ನು ಪ್ರಸನ್ನನಾಗಿಸುವ ಶಕ್ತಿ ಎಷ್ಟಿದೆ ಎಂದು ನಿಮ್ಮ ಬ್ಲಾಗ್‌ವೀಕ್ಷಕರಿಗೂ ಗೊತ್ತಾಗುತ್ತಿತ್ತು. 🙂

  7. sritri says:

    ಆಶಾ, ತುಳಸಿವನಕ್ಕೆ ಸ್ವಾಗತ. ಹೀಗೇ ಆಗಾಗ ನನ್ನ ಬ್ಲಾಗ್ ಮನೆಗೆ ಬರುತ್ತಿರಿ. 🙂

  8. sritri says:

    ಜೋಶಿಯವರೆ, ಗಣೇಶನ ಪೂಜೆಗೆ ಮುನ್ನ ಮತ್ತು ನಂತರದ ಫೋಟೊ ತೆಗೆದು ನಿಮ್ಮೆಲ್ಲರಿಗೂ ತೋರಿಸಬೇಕೆಂಬ ಆಸೆ ನನಗೂ ಇತ್ತು. ಆದರೆ, “non-ಪ್ರಸನ್ನ ಗಣೇಶ” ನ ಮುಂದೆ ಕ್ಯಾಮೆರಾ ಹಿಡಿದು ಪೋಸ್ ಕೇಳುವುದು ತಾನೇ ಹೇಗೆ? ನನಗೂ ಗಣಪನ ಕೋಪದ, ಶಾಪದ ಭಯವಿರುವುದಿಲ್ಲವೇ? ಹಾಗಾಗಿ, ಪ್ರಸನ್ನ ಗಣಪನ ಫೋಟೊ ಮಾತ್ರ ಇಲ್ಲಿ ಲಭ್ಯವಿದೆ . 🙂

  9. Shiv says:

    ತ್ರಿವೇಣಿಯವರೇ,

    ಹೇಗಿದ್ದೀರಾ?
    ಗಣಪತಿ ಹಬ್ಬದ belated ಶುಭಾಶಯಗಳು !

    eco-friendly ಗಣೇಶ ಸೊಗಸಾಗಿದ್ದಾನೆ ..

  10. Asha says:

    ತ್ರಿವೇಣಿ,
    ಜೋಶಿಯವರು ಪ್ರಶ್ನೆ ask ಮಾಡಿದ್ದು + ನಿಮ್ಮ ಮರು ಉತ್ತರ ಸರಿಯಾಗಿದೆ! ಸೈ 🙂

  11. sritri says:

    ಶಿವು, ತುಂಬಾ ದಿನಗಳ ನಂತರ ನಿಮ್ಮ ಭೇಟಿ . ನಿಮಗೂ ಹಬ್ಬದ ಶುಭಾಶಯಗಳು. ನಿಮ್ಮ ಮನೆಯಲ್ಲಿ ಹಬ್ಬ ಹೇಗಾಯಿತು?

    ಆಶಾ, ತರಲೆ ಉತ್ತರ ಸರಿ ಎಂದು ಪಾಸ್ ಮಾಡಿದ್ದಕ್ಕೆ Thanks 🙂

Leave a Reply to Shiv Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಶೆಟ್ಟಿ ಶಗಣಿ ತಿಂದ ಹಾಗೆ….ಶೆಟ್ಟಿ ಶಗಣಿ ತಿಂದ ಹಾಗೆ….

‘ಶೆಟ್ಟಿ ಶಗಣಿ ತಿಂದ ಹಾಗೆ’ – ಇದು ನಮ್ಮ ಸಂಬಂಧಿಗಳ, ತೀರಾ ಆಪ್ತ ಸ್ನೇಹಿತರ ವಲಯದಲ್ಲಿ ಪ್ರಚಲಿತವಾಗಿರುವ ಒಂದು ತಮಾಷೆಯ ನುಡಿಗಟ್ಟು. , ‘ಬೇಡ ನೋಡು, ಕೊನೆಗೆ ಶೆಟ್ಟಿ ಆಗುತ್ತೀಯಾ…” , ‘ಅಯ್ಯೋ ಎಷ್ಟು ಹೇಳಿದರೂ ಕೇಳಲಿಲ್ಲ, ಕೊನೆಗೆ ನೋಡು, ಶೆಟ್ಟಿ

ಕಪ್ಪೇ ಚಿಪ್ಪು – ಚಿಪ್ಪೇ ಕಪ್ಪುಕಪ್ಪೇ ಚಿಪ್ಪು – ಚಿಪ್ಪೇ ಕಪ್ಪು

ನಮ್ಮೂರ ಕಡೆಗಿನ ಆಡುಭಾಷೆಯಲ್ಲಿ ಚಲಾವಣೆಯಲ್ಲಿ ಇರುವ ಒಂದು ಪದವಿದು.  “ಏನೂ ಸಿಗಲಿಲ್ಲ”,  ಪಟ್ಟ ಶ್ರಮವೆಲ್ಲಾ ವ್ಯರ್ಥವಾಯಿತು, ನಿಷ್ಫಲವಾಯಿತು… ಎಂಬುದನ್ನು ವ್ಯಂಗ್ಯವಾಗಿ ಸೂಚಿಸಲು “ನನಗೆ ಚಿಪ್ಪು ಸಿಕ್ಕಿತು”,  ” ಅವನನ್ನು ನಂಬಿಕೊಂಡರೆ ನಿನಗೆ ಚಿಪ್ಪೇ ಗತಿ” –  ಎನ್ನುವುದುಂಟು. “ಚಿಪ್ಪು” ಎಂದರೆ, ಎಲ್ಲರಿಗೂ ಗೊತ್ತಿರುವಂತೆ,

ಬೆಂಕಿಬಿದ್ದ ಕಾವೇರಿಯ ನೆನಪಲ್ಲಿಬೆಂಕಿಬಿದ್ದ ಕಾವೇರಿಯ ನೆನಪಲ್ಲಿ

ಪ್ರತಿಬಾರಿ ಭಾರತ ಪ್ರವಾಸಕ್ಕೆ ಮುನ್ನ ನಾನೊಂದು To do ಪಟ್ಟಿ ತಯಾರಿಸುತ್ತೇನೆ – ಬಹುಶಃ ಬಹುಪಾಲು ಅನಿವಾಸಿಗಳು ಮಾಡುವ ಹಾಗೇ. ಅಲ್ಲಿಂದ ಈ ಬಾರಿ ತರಬೇಕಾದ್ದೇನು? ಈ ಬಾರಿ ಯಾರನ್ನು ತಪ್ಪದೆ ಭೇಟಿ ಮಾಡಬೇಕು? ಯಾವೆಲ್ಲಾ ಊರುಗಳನ್ನು ಸುತ್ತಬೇಕು? ಆಪತ್ತು ಎದುರಾದಾಗ