ಉಯ್ಯಾಲೆ – ದೋಣಿಯೊಳಗೆ ನೀನು

ಚಿತ್ರ : ಉಯ್ಯಾಲೆ
ರಚನೆ : ಆರ್. ಎನ್. ಜಯಗೋಪಾಲ್
ಸಂಗೀತ : ವಿಜಯ ಭಾಸ್ಕರ್
ಗಾಯಕಿ : ಪಿ. ಸುಶೀಲ

ಹಾಡು ಕೇಳಿ:-

ದೋಣಿಯೊಳಗೆ ನೀನು ಕರೆಯ ಮೇಲೆ ನಾನು
ಈ ಮನದ ಕರೆಯು ನಿನಗೆ ಕೇಳದೇನು?

ಬೀಸುವ ತಂಗಾಳಿಯು ತಂಪೆರೆಯುವ ಬದಲು
ದೋಣಿಯ ಬಹುದೂರಕೆ ಕರೆದೊಯ್ಯುತಿರುವುದು
ಇರುಳಿನೊಲು ತೋರುತಿದೆ ಈ ನಡುಹಗಲು

ಕಾಮನಬಿಲ್ಲಿಹುದು ನೋಡ ದೂರ ಗಗನದೆ
ಕಣ್ಣಲಿ ಅದ ನೋಡಬಹುದು, ಹಿಡಿಯಲಾಗದು
ನನ್ನೆದೆಯ ಭಾವನೆಯು ಮುಗಿಯದ ಹಾಡು

ತುಟಿಗೂ ತುತ್ತಿಗೂ ನಡುವೆ ಎನಿತು ಅಂತರ
ನನಗೂ ನಿನಗೂ ನಡುವಿನಲ್ಲಿ ಕಡಲ ಅಂತರ
ನೆಮ್ಮದಿಯು ಈ ಮನಕೆ ಸಾವಿನಂತರ
******************

ಗೆಳತಿಯೊಬ್ಬಳ ಒತ್ತಾಯಪೂರ್ವಕ ಕೋರಿಕೆಯ ಮೇರೆಗೆ ಈ ಚಿತ್ರಗೀತೆ ಪ್ರಸಾರವಾಗುತ್ತಿದೆ – 🙂

(ಕೊಸರು : ಆರ್. ಎನ್. ಜಯಗೋಪಾಲ್ ಅವರ ಈ ಗೀತೆಯನ್ನು, ಚಿತ್ರದಲ್ಲಿ, ನಾಯಕ (ಡಾ.ರಾಜಕುಮಾರ್) ದ. ರಾ. ಬೇಂದ್ರೆಯವರ ಕವನ ಸಂಕಲನದಿಂದ (ಸಖಿಗೀತ) ಓದುವಂತೆ ತೋರಿಸಲಾಗಿದೆ.)

9 thoughts on “ಉಯ್ಯಾಲೆ – ದೋಣಿಯೊಳಗೆ ನೀನು”

 1. ಇಷ್ಟು ಸುಂದರವಾದ ‘ಕಾಡುವ ಗೀತೆ’ಯನ್ನು ಇಲ್ಲಿ ಪ್ರಕಟಿಸಿದ್ದಕ್ಕೆ ನಿನಗೂ ನಿನಗೆ ಒತ್ತಾಸೆಯಿತ್ತವರಿಗೂ ಹೃದಯ ತುಂಬಿದ ಧನ್ಯವಾದಗಳು.

 2. ಮೀರಾಕೃಷ್ಣ says:

  ಒಳ್ಳೇ ಹಾಡು, ವೇಣಿ ನಿಂಗೆ, ಅಲ್ಲಲ್ಲ ಶ್ರೀನಿವಾಸ್ ಅವರಿಗೆ ತುಂಬಾ ಇಷ್ಟವಾದ ಜೋಡಿ ಅಲ್ವಾ ಪಿ.ಸುಶೀಲಾ ಮತ್ತೆ ಕಲ್ಪನಾ:-P

  ಅದು ಇರುಳಿನೊಳು ತೋರುತಿದೆ ಈ ನಡು ಹಗಲು ಅಲ್ವಾ, ಇರುಳಿನೊಲು ಅಂದ್ರೆ ಏನು ಅಂತ ಅರ್ಥ ಆಗ್ಲಿಲ್ಲ.

 3. sunaath says:

  ತ್ರಿವೇಣಿ,
  ಸುಮಾರು ೪೦ ವರ್ಷಗಳ ಹಿಂದೆ,ಉಯ್ಯಾಲ ಚಿತ್ರವನ್ನು ನೋಡಿ ಸಂತೋಷಪಟ್ಟಿದ್ದೆ. ಈಗ ಹಾಡು ಕೇಳಿ, ಸಂತೋಷ ಮರುಕಳಿಸಿತು.
  ಥ್ಯಾಂಕ್ಸ್.
  -ಕಾಕಾ

 4. Shreeni says:

  ಅಯ್ಯೋ ಎಲ್ಲಾ ಬಿಟ್ಟು ಈ ಹಾಡು …. ಃ( ಮೂಗು ದನಿ ಕೇಳಲಾರೆ ಃ)

 5. ಶ್ರೀನಿ, ಮೂಗು ದನಿಗಾಗಿ ಬೇಡ, ಬರೀ ರಾಗಕ್ಕಾಗಿ, ಸಾಹಿತ್ಯಕ್ಕಾಗಿ ಕೇಳಿ. ಎಷ್ಟು ಚಂದ ಈ ಹಾಡು.

 6. sritri says:

  ಜ್ಯೋತಿ, ೧೯೬೯ರಲ್ಲಿ ಬಂದಿರುವ ಈ ಚಿತ್ರಗೀತೆಯನ್ನು ೨೦೦೯ರಲ್ಲಿಯೂ ನಾವು ಕೇಳಿ ಖುಷಿಪಡುತ್ತಿದ್ದೇವೆಂದರೆ, ನೀನಂದಂತೆ, ನಿಜವಾಗಿ ಇದು ಕಾಡುವ ಹಾಡೇ! ”ಉಯ್ಯಾಲೆ’ ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲೊಂದು.

 7. sritri says:

  ಮೀರಾ, ಇರುಳಿನೊಳು, ಇರುಳಿನೊಲು ಬೇರೆಬೇರೆ ಅರ್ಥ ಕೊಡುವ ಪದಗಳು.

  ಇರುಳಿನೊಳು ಅಂದರೆ ಇರುಳೇ ಇದೆ ಅನ್ನುವ ಅರ್ಥ ಬರುತ್ತದೆ. ಆದರೆ ಈ ಹಾಡಿನ ಸಂದರ್ಭದಲ್ಲಿ ಇರುಳಿಲ್ಲ. ಮನಸ್ಸಿನಲ್ಲುಂಟಾಗಿರುವ ಭಾವನೆಗಳಿಂದ (ದುಃಖ, ನಿರಾಶೆ) ನಡುಹಗಲು ಕೂಡ ಇರುಳಿನಂತೆ ಅನಿಸುತ್ತಿದೆ.

  ಇನ್ನು, ಶ್ರೀನಿ + ಕಲ್ಪನಾ + ಪಿ.ಎಸ್. – ನಿನಗೇ ಗೊತ್ತಿದೆ! 🙂

 8. sritri says:

  ಕಾಕಾ,
  ನೀವು ಸಿನಿಮಾ ನೋಡ್ತಿದ್ದಿರಿ ಅಂತ ಗೊತ್ತಿದ್ದಿಲ್ಲ. ಇನ್ನು ಮುಂದೆ ಸಾಹಿತ್ಯದ ಜೊತೆಗೆ ಸಿನಿಮ ಮಾಹಿತಿಗೂ ನಿಮಗೇ ಗಂಟುಬೀಳುವಾಕಿ ಇದೀನಿ 🙂

 9. sritri says:

  “ಅಯ್ಯೋ ಎಲ್ಲಾ ಬಿಟ್ಟು ಈ ಹಾಡು…”

  ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ… 🙂

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ರಾಮನ ಅವತಾರ ರಘುಕುಲ ಸೋಮನ ಅವತಾರ!ರಾಮನ ಅವತಾರ ರಘುಕುಲ ಸೋಮನ ಅವತಾರ!

ಚಿತ್ರ :  ಭೂಕೈಲಾಸ (೧೯೫೮) ಸಾಹಿತ್ಯ : ಕು.ರಾ.ಸೀತಾರಾಮಶಾಸ್ತ್ರಿ ಸಂಗೀತ : ಆರ್. ಗೋವರ್ಧನ್, ಆರ್.ಸುದರ್ಶನಂ ಗಾಯಕ : ಶಿರ್ಕಾಳಿ ಗೋವಿಂದರಾಜನ್ ಹಾಡು ಕೇಳಿ ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ? ಜಾರತನ ಸದೆಬಡಿವ ಸಂಭ್ರಮದ ನೆಪವೋ? ರಾಮನ ಅವತಾರ ರಘುಕುಲ ಸೋಮನ

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ

ಚಿತ್ರ : ಶರಪಂಜರ ಗಾಯಕಿ – ಪಿ.ಸುಶೀಲ ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ ಸಂಗೀತ – ವಿಜಯ ಭಾಸ್ಕರ್ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ|| ಮುತ್ತುಗದ ಹೂವು ಮಲ್ಲಿಗೆಯೇ ? ಅತ್ತಿಯ ಹಣ್ಣು ಅಂಜೂರವೇ?

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

ಚಿತ್ರ : ಕಣ್ತೆರೆದು ನೋಡು ಸಾಹಿತ್ಯ : ಜಿ.ವಿ.ಅಯ್ಯರ್ ಸಂಗೀತ : ಜಿ.ಕೆ. ವೆಂಕಟೇಶ್ ಗಾಯಕ : ಜಿ.ಕೆ. ವೆಂಕಟೇಶ್ ಹಾಡು ಕೇಳಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದೆವೆನ್ನಿ ಗೆಳೆತನದ ವರದ ಹಸ್ತ ನೀಡಿಬನ್ನಿ ಮೊಳೆತಿರುವ ಭೇದಗಳ