ಭೂಮಿಗೆ

www.theholidayspot.com

ಎದೆಯು ಬಿರಿದು ಪದವು ಕುಸಿಯೆ
ತಬ್ಬಿ ಹಿಡಿದ ತಾಯಿಯೆ
ಬೇರುಗಳಲಿ ಜೀವ ತುಂಬಿ
ಚಿಗುರ ಪೊರೆದ ಮಾಯೆಯೆ

ಹೂವು ಕೊಟ್ಟು ಹಣ್ಣು ಕೊಟ್ಟು
ಉಪಚರಿಸಿದ ಮಮತೆಯೆ
ಮುತ್ತು ರತ್ನ ವಜ್ರ ಖಚಿತ
ಖ್ಯಾತಿವೆತ್ತ ಘನತೆಯೆ

ಭೂರಮಣರೆಂದು ಮೆರೆದ ಸಾಮ್ರಾಟರ
ಹುಟ್ಟಗಿಸಿ ಹೊಟ್ಟೆಲಿಟ್ಟ ರಾಣಿಯೆ
ದೈತ್ಯ ವೃಕ್ಷ ಬಿಳಿಲುಗಳೇ
ನಿನ್ನ ಹರವಿಕೊಂಡ ವೇಣಿಯೆ?

ಕಾಡಿಬೇಡಿ ಬಂದವರಿಗೆ
ನೀಡಲೆಂದೇ ಅವತರಿಸಿದ ದಾನಿಯೆ
ಬೇಡಿದ್ದೆಲ್ಲ ಮೊಗೆದು ಕೊಟ್ಟು
ಬರಿಗೈಯಾದ ಮಾನಿಯೆ

ವಿಷದು ಉರಿಯ ಒಡಲೊಳಿಟ್ಟು
ಹಸಿರ ನಗುವ ಕರುಣೆಯೆ
ಕಣ್ಮನಗಳಿಗೆ ನಿತ್ಯ ಹಬ್ಬ ನಿನ್ನ ರೂಪ
ಹೂವಿನುಡುಗೆಯುಟ್ಟ ರಮ್ಯ ರಮಣಿಯೆ

ಕೋಟಿಕೋಟಿ ಬರಡು ಗ್ರಹದಿ
ಜೀವಧಾತೆ ನೀನೊಬ್ಬಳೇ ದೇವಿಯೇ
ಮೊಳಕೆ ತರಿಸಿ ಜೀವ ಪೊರೆಯೆ
ಇರುವುದೊಂದೇ ಭೂಮಿಯೇ!

2 thoughts on “ಭೂಮಿಗೆ”

  1. sunaath says:

    ತ್ರಿವೇಣಿ,
    ಕವನ ತುಂಬ ಸುಂದರವಾಗಿದೆ. ಕವನದ ಜೊತೆಗಿನ ಚಿತ್ರವಂತೂ ಅತ್ಯಂತ ಅರ್ಥಪೂರ್ಣವಾಗಿದೆ.

  2. sritri says:

    ಕಾಕಾ, ಧನ್ಯವಾದಗಳು.

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ರಾಮ ರಾಮ ಎಂಬೆರಡಕ್ಷರರಾಮ ರಾಮ ಎಂಬೆರಡಕ್ಷರ

ರಾಗ – ಧನ್ಯಾಸಿ ತಾಳ – ಆದಿ ರಾಮ ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ|| ಹಾಲಾಹಲವನು ಪಾನವ ಮಾಡಿದ| ಫಾಲಲೋಚನನೆ ಬಲ್ಲವನು || ಆಲಾಪಿಸುತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು ||೧|| ಅಂಜಿಕೆ ಇಲ್ಲದೆ ಗಿರಿ ಸಾರಿದ

ತೇಲಿದೆ ನೆನಪಿನ ದೋಣಿಯಲಿ…ತೇಲಿದೆ ನೆನಪಿನ ದೋಣಿಯಲಿ…

ಕೆಲಸಗಳ ನಡುವೆ ಸ್ವಲ್ಪ ವಿರಾಮ ದೊರೆತರೂ ಅಂತರ್ಜಾಲಕ್ಕೆ ಬಂದು ಅಮರಿಕೊಳ್ಳುವ ನಾನು ಈಚೆಗೆ ಕೆಲದಿನಗಳಿಂದ ಅಂತರ್ಜಾಲಕ್ಕೆ ಅಪರೂಪವಾಗಿ ಹೋಗಿದ್ದೆ.  ಅದಕ್ಕೆ ನನಗೆ ದೊರಕಿದ್ದ ಪುಸ್ತಕಗಳೇ ಕಾರಣ. ಎಷ್ಟೋ ದಿನಗಳಿಂದ ಓದಬೇಕೆಂದು ಇಟ್ಟುಕೊಂಡಿದ್ದ ಪುಸ್ತಕಗಳನ್ನು ಓದಿ ಮುಗಿಸಿದೆ. (ಅದರಲ್ಲಿ ಬಹುಪಾಲು ಕಡ ತಂದ ಪುಸ್ತಕಗಳಾದ್ದರಿಂದ