ನಿನ್ನ ಕರುಣೆಗೆ – ಚೆನ್ನವೀರ ಕಣವಿ

ನಿನ್ನ ಕರುಣೆಗೆ ನಾನು ಕೇಂದ್ರವಾಗಿ
ನಿಂದಿರುವೆ ಮೌನದಲಿ ತಲೆಯ ಬಾಗಿ

ಮುಗಿಲಿಂದ, ಹಗಲಿಂದ, ಇರುಳಿಂದ ಬಂದು
ಮುಗಿಯದಾವುದೊ ಮಹಾದ್ಭುತವ ತಂದು,
ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು
ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು.

ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ
ಮಂಜು ಮುಗಿಬೀಳುವುದು ಭೂಮಿ ಬಾನೆಲ್ಲ:
ಹಿಂಜುವುದು ನೇಸರನ ನೂರಾರು ಕಿರಣ
ಜೇಡಬಲೆ ತುಂಬೆಲ್ಲ ಮುತ್ತಿನಾಭರಣ.

ಒಂದೊಂದು ಹೂವುಗಳ ಆಯುವುದು ಹೇಗೆ?
ಆ ಬಣ್ಣ, ಆ ನವುರು ಅದಕದರ ಸೋಗೆ.
ಸೃಷ್ಟಿಯಲಿ, ದೃಷ್ಟಿಯಲಿ ನಡೆದಿಹುದು ಪೂಜೆ
ಕಷ್ಟ-ಸುಖ-ಸಂಭ್ರಮದ ಸಂತೋಷದಾಚೆ.

* ಹೂವು ಹೊರಳುವವು ಸೂರ್ಯನ ಕಡೆಗೆ (ಆಯ್ದ ಭಾವಗೀತೆಗಳ ಸಂಗ್ರಹ)

1 thought on “ನಿನ್ನ ಕರುಣೆಗೆ – ಚೆನ್ನವೀರ ಕಣವಿ”

  1. sunaath says:

    ಕಣವಿಯವ ಚೆಲುವಾದ ಕವನ ಕೊಟ್ಟಿದ್ದೀರಿ. ಧನ್ಯವಾದಗಳು.

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

೪೭ರ ಸ್ವಾತಂತ್ರ್ಯ – ಸಿದ್ಧಲಿಂಗಯ್ಯ೪೭ರ ಸ್ವಾತಂತ್ರ್ಯ – ಸಿದ್ಧಲಿಂಗಯ್ಯ

ಕವಿ – ಸಿದ್ಧಲಿಂಗಯ್ಯ  ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು  ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವನ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ ಗೋಳಿನ ಕಡಲನು

ಒಂದು ಮುಂಜಾವು – ಚೆನ್ನವೀರ ಕಣವಿಒಂದು ಮುಂಜಾವು – ಚೆನ್ನವೀರ ಕಣವಿ

ಸಾಹಿತ್ಯ: ಚೆನ್ನವೀರ ಕಣವಿ ಸಂಗೀತ: ಸಿ. ಅಶ್ವಥ್ ಗಾಯಕಿ: ಬಿ.ಆರ್.ಛಾಯ ಆಲ್ಬಮ್ : ಭಾವಬಿಂದು ಹಾಡು ಕೇಳಿ ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ‘ಸೋ ‘ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ; ಅದಕೆ ಹಿಮ್ಮೇಳವೆನೆ ಸೋಸಿ ಬಹ ಸುಳಿಗಾಳಿ ತೆಂಗು

ದೈತ್ಯ ನರ್ತನ – ಸುಪ್ತದೀಪ್ತಿದೈತ್ಯ ನರ್ತನ – ಸುಪ್ತದೀಪ್ತಿ

ಕವನ – ದೈತ್ಯ ನರ್ತನ ಕವಯಿತ್ರಿ – ಸುಪ್ತದೀಪ್ತಿ (ಜ್ಯೋತಿ ಮಹಾದೇವ್) ದೈತ್ಯನ ವಿಕಾರ ಕನಸು ಸಾಕಾರಗೊಂಡ ನರಕ, ಭೂತ-ಭವಿಷ್ಯಗಳ ತಾಕಲಾಟ ಅಲ್ಲಿ ನರಳಿದ ವರ್ತಮಾನ, ಒಂದೊಂದೇ ದಿನ ಅಳಿದು ಕರಗಿದ ಕಬ್ಬಿಣದರಗಿನ ಕಿರೀಟ, ವೈರ-ಯಜ್ಞಕ್ಕೆ ನೇರ ಆಜ್ಯ ಧೂಳಿನ ಬೆವರು-ನೆತ್ತರು;