ಕೊಡು ಬೇಗ ದಿವ್ಯಮತಿ ಸರಸ್ವತಿ ||ಪಲ್ಲವಿ||
ಮೃಡ ಹರಿ ಹಯಮುಖರೊಡೆಯಳೆ ನಿನ್ನ
ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ||ಅನು ಪಲ್ಲವಿ||
ಇಂದಿರಾ ರಮಣನ ಹಿರಿಯ ಸೊಸೆಯು ನೀನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ||೧||
ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ||೨||
ಪತಿತ ಪಾವನೆ ನೀನೇ ಗತಿಯೆಂದು ನಂಬಿದೆ
ಸತತ ಪುರಂದರ ವಿಠಲನ ತೋರೆ||೩||
ಶರನ್ನವರಾತ್ರಿಯ ಅಧಿದೇವತೆ ಶಾರದೆಯ ಸ್ತುತಿಯು ಸಕಾಲಿಕವಾಗಿದೆ.
ದಾಸರು ಪ್ರಾರ್ಥಿಸಿದಂತೆ ಅವಳು ನಮಗೂ ದಿವ್ಯಮತಿಯನ್ನು ದಯಪಾಲಿಸಲಿ. ನವರಾತ್ರಿಯು ಶುಭಾಶಯಗಳು.
ಕಾಕಾ, ನಿಮ್ಮೆಲ್ಲರಿಗೂ ಕೂಡ ನವರಾತ್ರಿಯ ಶುಭಾಶಯಗಳು.
ತ್ರಿವೇಣಿ ಅಕ್ಕಾ…
ದುರ್ಗಾಷ್ಟಮಿ ಹೊತ್ತಿಗೆ ಸುಂದರ ಹಾಡು ಕೇಳಿಸಿದ್ದಕ್ಕೆ ಸುಮಾರಷ್ಟು ಥ್ಯಾಂಕ್ಸ್ ನಿಮಗೆ.
ಅಂದಂಗೆ ಇತ್ತೀಚೆಗೆ ಯಾಕೋ ಅಪರೂಪ ಆಗ್ತಿದ್ದೀರಿ.
ಪ್ರೀತಿಯಿಂದ,
-ಶಾಂತಲಾ
many thanks….
I haadina hinde tuMbaa nenapugaLive…
ಶಾಂತಲ, ದುರ್ಗಾಷ್ಟಮಿ ದಿನ ಬಿಡುವು ಮಾಡಿಕೊಂಡು, ತುಳಸಿವನಕ್ಕೆ ಬಂದು ಹಾಡು ಕೇಳಿದ್ದಕ್ಕೆ ನಿನಗೂ ಥ್ಯಾಂಕ್ಸ್.
ಮಾಲಾ, ನಿಮ್ಮ ನೆನಪುಗಳನ್ನು ನಮಗೂ ಹಂಚಬಹುದಲ್ಲ?