ಕೊಡು ಬೇಗ ದಿವ್ಯಮತಿ

ಹಾಡು ಕೇಳಿ

ಕೊಡು ಬೇಗ ದಿವ್ಯಮತಿ ಸರಸ್ವತಿ ||ಪಲ್ಲವಿ||

ಮೃಡ ಹರಿ ಹಯಮುಖರೊಡೆಯಳೆ ನಿನ್ನ
ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ||ಅನು ಪಲ್ಲವಿ||

ಇಂದಿರಾ ರಮಣನ ಹಿರಿಯ ಸೊಸೆಯು ನೀನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ||೧||

ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ||೨||

ಪತಿತ ಪಾವನೆ ನೀನೇ ಗತಿಯೆಂದು ನಂಬಿದೆ
ಸತತ ಪುರಂದರ ವಿಠಲನ ತೋರೆ||೩||

5 thoughts on “ಕೊಡು ಬೇಗ ದಿವ್ಯಮತಿ”

  1. sunaath says:

    ಶರನ್ನವರಾತ್ರಿಯ ಅಧಿದೇವತೆ ಶಾರದೆಯ ಸ್ತುತಿಯು ಸಕಾಲಿಕವಾಗಿದೆ.
    ದಾಸರು ಪ್ರಾರ್ಥಿಸಿದಂತೆ ಅವಳು ನಮಗೂ ದಿವ್ಯಮತಿಯನ್ನು ದಯಪಾಲಿಸಲಿ. ನವರಾತ್ರಿಯು ಶುಭಾಶಯಗಳು.

  2. sritri says:

    ಕಾಕಾ, ನಿಮ್ಮೆಲ್ಲರಿಗೂ ಕೂಡ ನವರಾತ್ರಿಯ ಶುಭಾಶಯಗಳು.

  3. ತ್ರಿವೇಣಿ ಅಕ್ಕಾ…

    ದುರ್ಗಾಷ್ಟಮಿ ಹೊತ್ತಿಗೆ ಸುಂದರ ಹಾಡು ಕೇಳಿಸಿದ್ದಕ್ಕೆ ಸುಮಾರಷ್ಟು ಥ್ಯಾಂಕ್ಸ್ ನಿಮಗೆ.
    ಅಂದಂಗೆ ಇತ್ತೀಚೆಗೆ ಯಾಕೋ ಅಪರೂಪ ಆಗ್ತಿದ್ದೀರಿ.

    ಪ್ರೀತಿಯಿಂದ,
    -ಶಾಂತಲಾ

  4. mala says:

    many thanks….
    I haadina hinde tuMbaa nenapugaLive…

  5. sritri says:

    ಶಾಂತಲ, ದುರ್ಗಾಷ್ಟಮಿ ದಿನ ಬಿಡುವು ಮಾಡಿಕೊಂಡು, ತುಳಸಿವನಕ್ಕೆ ಬಂದು ಹಾಡು ಕೇಳಿದ್ದಕ್ಕೆ ನಿನಗೂ ಥ್ಯಾಂಕ್ಸ್.

    ಮಾಲಾ, ನಿಮ್ಮ ನೆನಪುಗಳನ್ನು ನಮಗೂ ಹಂಚಬಹುದಲ್ಲ?

Leave a Reply to ಶಾಂತಲಾ ಭಂಡಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ನನ್ನ ಪುಟ್ಟ ಪುರಂದರ ವಿಠಲ!ನನ್ನ ಪುಟ್ಟ ಪುರಂದರ ವಿಠಲ!

ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ| ನಮಃ ಪುರಂದರಾರ್ಯಾಯ ವಿಜಯಾರ್ಯಾಯತೇ ನಮಃ || ನಮಿಪೆ ಶ್ರೀಪಾದರಾಯರಿಗೆ ನಮನ ವ್ಯಾಸ ಯೋಗಿಗೆ ಶ್ರೀ ಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆ ( ಕನ್ನಡಕ್ಕೆ : ನೀಲಾಂಜನ ) ದಾಸಸಾಹಿತ್ಯದಲ್ಲಿ ಪುರಂದರದಾಸರು ಅತ್ಯಂತ ಜನಪ್ರಿಯರು. ೧೩ನೆಯ ಶತಮಾನದಲ್ಲಿ

ಮಹಿಮೆ ಸಾಲದೇ?ಮಹಿಮೆ ಸಾಲದೇ?

ರಚನೆ – ವ್ಯಾಸರಾಜರು ಗಾಯಕ – ರಾಯಚೂರು ಶೇಷಗಿರಿ ದಾಸ್ ಸಂಗೀತ – ಪ್ರವೀಣ್ ಗೋಡ್ಕಿಂಡಿ ಹಾಡು ಕೇಳಿ – ಮಹಿಮೆ ಸಾಲದೇ ? ಇಷ್ಟೇ ಮಹಿಮೆ ಸಾಲದೇ? ||ಪಲ್ಲವಿ|| ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀಪಾದರಾಜರ ||ಅ.ಪ|| ಮುತ್ತಿನ ಕವಚ ಮೇಲ್ಕುಲಾವಿ

ಜಯ ಜಾನಕೀಕಾಂತಜಯ ಜಾನಕೀಕಾಂತ

ರಾಗ – ನಾಟ, ತಾಳ – ಜಂಪೆ ರಚನೆ – ಪುರಂದರದಾಸರು ಹಾಡು ಕೇಳಿ ವಿದ್ಯಾಭೂಷಣ ಡಾ. ಎಂ. ಎಲ್ ವಸಂತಕುಮಾರಿ ಡಾ. ಎಂ. ಬಾಲಮುರಳಿಕೃಷ್ಣ ಜಯ ಜಾನಕೀಕಾಂತ ಜಯ ಸಾಧು ಜನ ವಿನುತ ಜಯತು ಮಹಿಮಾನಂತ ಜಯ ಭಾಗ್ಯವಂತ ||ಪಲ್ಲವಿ||